ಹೆಬ್ಬಲಸು
ಹೆಬ್ಬಲಸು | |
---|---|
The bark of A.hirsutus | |
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಪಂಗಡ: | |
ಕುಲ: | |
ಪ್ರಜಾತಿ: | A. hirsutus
|
Binomial name | |
Artocarpus hirsutus |
ಹೆಬ್ಬಲಸು ಇದು ದೊಡ್ಡ ಪ್ರಮಾಣದ ಎತ್ತರವಾದ,ನೇರ ಕಾಂಡದ ಮರ.ಕರ್ನಾಟಕದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ವಿಶೇಷವಾಗಿ ಕಂಡು ಬರುವುದು.ಇದು ಹಲಸಿನ ಒಳಜಾತಿಗಳಲ್ಲಿ ಒಂದು.
ಸಸ್ಯಶಾಸ್ತ್ರೀಯ ವರ್ಗೀಕರಣ
[ಬದಲಾಯಿಸಿ]ಅರ್ಟೋಕಾರ್ಪಸ್ ಹಿರ್ಸೂಟ(Artocarpus hirsuta)ಎಂಬ ಸಸ್ಯಶಾಸ್ತ್ರೀಯ ಹೆಸರುಳ್ಳ ಇದು ಮೊರಾಸಿ (Moraceae)ಕುಟುಂಬಕ್ಕೆ ಸೇರಿದೆ.ಇದಕ್ಕೆ 'ಕಾಡುಹಲಸು','ಕಬ್ಬಲಸು'ಎಂದೂ ಕರೆಯುತ್ತಾರೆ.ತುಳುಬಾಷೆಯಲ್ಲಿ 'ಪಿಜಕಾಯಿ, ಪೆಜಕಾಯಿ'ಎಂದು ಹೆಸರು.
ಸಸ್ಯದ ಗುಣಲಕ್ಷಣಗಳು
[ಬದಲಾಯಿಸಿ]ಇದರೆ ಎಳೆ ಸಸಿಗಳ ಎಲೆಗಳು ಸೀಳಾಗಿರುತ್ತವೆ.ಬೆಳೆದಂತೆ ಸಮ ಅಂಚಿನ ಅಂಡಾಕಾರದ ಎಲೆಗಳನ್ನು ಕಾಣಬಹುದು.ಉತ್ತಮ ಚೌಬೀನೆ ಜಾತಿಯ ಮರ.ಇದರ ದಾರುವು ಹಳದಿ ಕಂದು ಛಾಯೆ ಹೊಂದಿ ಸಾಧಾರಣ ಗಡಸುತನವನ್ನು ಹೊಂದಿದೆ.ಸಾಧಾರಣ ಹೊಳಪು ಬರುತ್ತದೆ.ತೇವಾಂಶ ಕಡಿಮೆಯಾದಂತೆ ಕಡುಕಂದು ಬಣ್ಣಕ್ಕೆ ತಿರುಗುತ್ತದೆ.
ಉಪಯೋಗಗಳು
[ಬದಲಾಯಿಸಿ]ಇದು ಒಂದು ಉತ್ತಮ ಜಾತಿಯ ಚೌಬೀನೆ ಮರ.ದೋಣಿಗಳ ನಿರ್ಮಾಣ,ಪಿಠೋಪಕರಣಗಳ ತಯಾರಿಯಲ್ಲಿ,ಗೃಹನಿರ್ಮಾಣದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.ಉತ್ತಮ ದರ್ಜೆಯ ಪದರಹಲಗೆಗಳ ತಯಾರಿಯಲ್ಲಿ ಬಳಕೆಯಲ್ಲಿದೆ.
ಅಧಾರ ಗ್ರಂಥಗಳು
[ಬದಲಾಯಿಸಿ]೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ ೨.ಹಸಿರು ಹೊನ್ನು.ಬಿ.ಜಿ.ಎಲ್.ಸ್ವಾಮಿ
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Thinned saplings Archived 2011-08-18 ವೇಬ್ಯಾಕ್ ಮೆಷಿನ್ ನಲ್ಲಿ.
- Fruit with foliage
- A blog on "Anjili tree of many uses"
ಉಲ್ಲೇಖಗಳು
[ಬದಲಾಯಿಸಿ]- ↑ Encycl. 3(1): 211. 1789 [19 Oct 1789] "Plant Name Details for Artocarpus hirsutus". IPNI. Retrieved January 27, 2010.