ವಿಷಯಕ್ಕೆ ಹೋಗು

ಸೂಚ್ಯಂಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸೂಚ್ಯ೦ಕ ಇಂದ ಪುನರ್ನಿರ್ದೇಶಿತ)

ನಮ್ಮ ಹಿರಿಯರು ೧೯೫೦ ರಲ್ಲಿ ನಾಲ್ಕಾಣೆಗೆ ಹತ್ತರಂತೆ ಅಂಬಟೆಕಾಯಿ ಖರೀದಿಸುತ್ತಿ ದ್ದುದನ್ನು ನೀವೆಲ್ಲರೂ ಬಲ್ಲಿರಿ. ಅಂದರೆ ೧ ಅಂಬಟೆಕಾಯಿಗೆ ಎರಡೂವರೆ ಪೈಸೆ. ಅದೇ ಈಗ ಒಂದು ಅಂಬಟೆಕಾಯಿಗೆ ಎರಡು ರೂಪಾಯಿ ಆಗಿದೆ. ಅಂದರೆ ಇನ್ನೂರು ಪೈಸೆ! ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳಬಹುದು. ೧೯೫೦ರಲ್ಲಿ ಅಂಬಟೆಕಾಯಿಗೆ ೧೦೦ ಅಂಕ (ಸೂಚ್ಯಂಕ)ಗಳಿದ್ದಲ್ಲಿ ಇಂದು ೨೦೧೪ರಲ್ಲಿ ಅದಕ್ಕೆ ೨೦೦/೨.೫*೧೦೦ ಅಂಕಗಳು ಅಂದರೆ ೮೦೦೦ ಅಂಕ (ಸೂಚ್ಯಂಕ)ಗಳು. ಹಾಗೆಯೇ ನಮ್ಮ ಅಜ್ಜನಿಗೆ ೧೯೫೦ರಲ್ಲಿ ತಲೆ ತುಂಬಾ ಕೂದಲು! ಸುಮಾರು ೫ ಲಕ್ಷ ಇರಬಹುದು! ಅದೇ ಈಗ ನೋಡಿದರೆ ನಿಮಗೆ ಕೂಡಲೇ ತಿಳಿಯುತ್ತದೆ, ತಲೆಯ ಎಡದಲ್ಲಿಷ್ಟು, ಬಲದಲ್ಲಿಷ್ಟು... ಸುಮಾರು ೫೦೦ ಇರಬಹುದೇನೋ? ಹಾಗಾಗಿ ಇಂದಿನ ತಾರೀಖೀನಲ್ಲಿ ಅಜ್ಜನ ತಲೆಕೂದಲಿನ ಇಂಡೆಕ್ಸ್‌ ಅಥವಾ ಸೂಚ್ಯಂಕ ೫೦೦/೫೦೦೦೦೦x೧೦೦= ಬರೇ ೦.೧ !!

ಅವತ್ತು ಒಂದು ದಿನ ಇದ್ದ ಅಂಕಿಯನ್ನು ೧೦೦ ಎಂದು ತೆಗೆದುಕೊಂಡರೆ ಇವತ್ತಿನ ಅಂಕಿ ಎಷ್ಟಾಗುತ್ತದೆ ಎಂದು ಲೆಕ್ಕ ಹಾಕಿ ಹೇಳುವ ಸೂತ್ರವೇ ಈ ಇಂಡೆಕ್ಸ್‌! ಒಂದು ರೀತಿಯಲ್ಲಿ ಶೇಕಡಾವಾರು ಲೆಕ್ಕದ ತರ. ಈ ರೀತಿ ಸೂಚ್ಯಂಕವನ್ನು ಉಪಯೋಗಿಸಿದರೆ ಬೇಕಾದಂತೆ ಸಂದರ್ಭಾನುಸಾರ ಲೆಕ್ಕಾಚಾರದಲ್ಲಿ ಅದನ್ನು ಬಳಸಿಕೊಳ್ಳಬಹುದಾಗಿದೆ. ಕೆಳಗಿನ ಕೆಲವು ವಾಸ್ತವಿಕ ಬಳಕೆಗಳನ್ನು ಗಮನಿಸಿ:

ಶೇರುಕಟ್ಟೆಯ ಸೆನ್ಸಿಟಿವ್‌ ಇಂಡೆಕ್ಸ್‌

೧೯೮೬ರಲ್ಲಿ ೧೦೦ ಆಯ್ದ ಶೇರುಗಳ ಸರಾಸರಿ ಬೆಲೆಯನ್ನು ೧೦೦ ಎಂದು ಇಟ್ಟುಕೊಂಡು ಪ್ರತಿದಿನ ಪ್ರತಿಕ್ಷಣ ಈಗಿನ ಸರಾಸರಿ ಬೆಲೆಯನ್ನು ಬಾಂಬೆ ಸೆನ್ಸಿಟಿವ್‌ ಇಂಡೆಕ್ಸ್‌/ಸೂಚ್ಯಂಕವಾಗಿ ಪ್ರಕಟಿಸಲಾಗುತ್ತದೆ. ನಾವೆಲ್ಲರೂ ಈ ಅಂಕಿಯನ್ನು ಟಿ.ವಿಯ ಕೆಳಗೆ ಒಂದು ನೀಲಿ ಅಥವಾ ಕೆಂಪು ಬಾಣದೊಡನೆ ಗುರುತಿಸುತ್ತೇವೆ. ಇದೇ ರೀತಿ NSE-100 ೧೯೮೩-೮೪ರಲ್ಲಿ ೧೦೦ ಶೇರುಗಳ ಬೆಲೆಯನ್ನು ಆಧರಿಸಿ ೧೯೮೯ರಲ್ಲಿ ಆರಂಭಗೊಂಡಿತು. ೧೯೯೪ರಲ್ಲಿ ಇದೇ ರೀತಿ BSE-200 ಮತ್ತು Dolex-200 ಆರಂಭಗೊಂಡಿತು. ಇದೇ ರೀತಿ ನಿಫ್ಟಿ, ನಿಫ್ಟಿ ಜೂನಿಯರ್‌ ಹಾಗೂ ಪ್ರತಿಯೊಂದು ಸೆಕ್ಟರ್‌ಗಳಿಗೂ ಅನ್ವುಸುವಂತೆ ಬ್ಯಾಂಕ್‌ ನಿಫ್ಟಿ, ನಿಫ್ಟಿ ಮಿಡಾRಪ್‌ ಇತ್ಯಾದಿ ಹಲವಾರು ಸೂಚ್ಯ೦ಕ(ಇಂಡೆಕ್ಸ್‌)ಗಳು ಚಾಲ್ತಿಯಲ್ಲಿವೆ. ಇವೆಲ್ಲವೂ ಪ್ರತಿ ನಿಮಿಷ ಶೇರುಗಳ ಬೆಲೆಯಲ್ಲಿ ಏರಿಳಿತವನ್ನು ಅರ್ಥೈಸಿಕೊಳ್ಳಲು ಸಹಾಯಕವಾಗುತ್ತದೆ.

ಇಂಡೆಕ್ಸ್‌ ಫಂಡುಗಳು

ಯಾವುದೇ ಒಂದು ಶೇರು ಮಾರುಕಟ್ಟೆಯ ಸೂಚ್ಯಂಕದ ನಕಲು ಹೂಡಿಕೆಯೇ ಇಂಡೆಕ್ಸ್‌ ಫಂಡು. ಒಂದು ಮ್ಯೂಚುವಲ್‌ ಫಂಡು ಸಾರ್ವಜನಿಕರ ದುಡ್ಡನ್ನು ಒಟ್ಟುಗೂಡಿಸಿ ಒಂದು ಮಾರುಕಟ್ಟೆಯ ಇಂಡೆಕ್ಸಿನಲ್ಲಿರುವ (ಉದಾ: ಸೆನ್ಸೆಕ್ಸ್‌, ನಿಫ್ಟಿ) ಎಲ್ಲಾ ಶೇರುಗಳಲ್ಲೂ ಅದು ಇರುವ ನೈಜ ಅನುಪಾತದಲ್ಲಿಯೇ ಹೂಡಿಕೆ ಮಾಡುವ ಫಂಡುಗಳು ಇಂಡೆಕ್ಸ್‌ ಫಂಡುಗಳು. ಇಲ್ಲಿ ಫಂಡುಗಳ ನಿರ್ವಹಣೆ ಏನೇನೂ ಇರುವುದಿಲ್ಲ. ಹೂಡಿಕೆಯ ಶೇರುಕಟ್ಟೆಯ ಇಂಡೆಕ್ಸಿನ ನೈಜ ಅನುಪಾತದಲ್ಲಿಯೇ ಇರಬೇಕಾದ ಕಾರಣ ಶೇರುಗಳನ್ನು ಮಾರುತ್ತಾ ಕೊಳ್ಳುತ್ತಾ ಇರಲಾಗುವುದಿಲ್ಲ. ಹಾಗಾಗಿ ಇವುಗಳು ಪ್ಯಾಸ್ಸಿವ್‌ ಫಂಡ್ಸ್‌ ಮತ್ತು ಇವುಗಳ ನಿರ್ವಹಣಾ ವೆಚ್ಚವೂ ಕಡಿಮೆ. ಇಂಡೆಕ್ಸಿನಲ್ಲಿರುವ ಎಲ್ಲಾ ಶೇರುಗಳನ್ನು ನೇರವಾಗಿ ಕೊಳ್ಳಲಾಗದವರು ಈ ಇಂಡೆಕ್ಸ್‌ ಫಂಡುಗಳ ಮೂಲಕ ಅವುಗಳನ್ನು ಕೊಳ್ಳಬಹುದು.

ಬೆಲೆಯೇರಿಕೆ ಸೂಚ್ಯಂಕ

ಒಬ್ಬ ಸಾಮಾನ್ಯ ವ್ಯಕ್ತಿ ಜೀವನಾವಶ್ಯಕ ಆಹಾರ, ಇಂಧನ ಹಾಗೂ ತಯಾರಾದ ಸರಕುಗಳನ್ನು ಒಂದು ನೈಜ ಪ್ರಮಾಣದಲ್ಲಿ ಖರೀದಿಸಲು ಬೇಕಾಗುವ ವೆಚ್ಚವನ್ನು ಇಟ್ಟುಕೊಂಡು ಬೆಲೆಯೇರಿಕೆ ಸೂಚ್ಯಂಕವನ್ನು ಪ್ರಕಟಿಸುತ್ತದೆ. ಈಗ ಚಾಲ್ತಿಯಲ್ಲಿರುವ ಪದ್ಧತಿಯ ಪ್ರಕಾರ ೬೭೬ಅಂತಹ ವಸ್ತುಗಳ ವೆಚ್ಚವನ್ನು, ೨೦೦೪-೦೫ ಇಸವಿಯ ವೆಚ್ಚವನ್ನು ೧೦೦ ಅಂಕ ಎಂದು ತಳಹದಿಯಾಗಿ ಇಟ್ಟುಕೊಂಡು ಪ್ರತಿ ತಿಂಗಳು/ವಾರ ಲೆಕ್ಕ ಹಾಕಿ ಸರಕಾರವು, ಸಗಟು ಬೆಲೆಯೇರಿಕೆಯ ಸೂಚ್ಯಂಕ (Wholesale price) ಅನ್ನು ಘೋಷಿಸುತ್ತದೆ. ಇದೇ ರೀತಿ ಪ್ರತಿ ತಿಂಗಳೂ ಗ್ರಾಹಕರ ಬೆಲೆಯೇರಿಕೆಯ ಸೂಚ್ಯಂಕವನ್ನೂ (Consumer price Index) ಪ್ರಕಟಿಸುತ್ತದೆ. ಬೆಲೆಯೇರಿಕೆಯಲ್ಲಿ ಬದಲಾವಣೆಗಳನ್ನು ಇವುಗಳ ಮೂಲಕ ಅರ್ಥೈಸಿಚಕೊಲ್ಹಬಹುದು. ಅಲ್ಲದೆ ಸರಕಾರವು ತನ್ನ ನೌಕರರಿಗೆ ಭತ್ತೆಯನ್ನು (D.A.) ಈ ಅಂಕಿಗಳ ಆಧಾರದ ಮೇಲೆಯೇ ನಿರ್ಧರಿಸುತ್ತದೆ. ಇಂಡೆಕ್ಸ್‌ ಆಧಾರಿತ ಕಾಪಿಟಲ್‌ ಗೆನ್ಸ್ ಟಾಕ್ಸ್‌: ಯಾವುದೇ ಕಾಪಿಟಲ್‌ ಕಾಲಕ್ರಮೇಣ ಬೆಳೆದು ಕೊನೆಗೊಂದು ದಿನ ಮಾರಿದಾಗ ಅದರ ಮೇಲೆ ಲಾಭ ಉಂಟಾದರೆ ಕಾಪಿಟಲ್‌ ಗೈನ್ಸ್‌ ಎಂದೂ ನಷ್ಟವಾದರೆ ಕಾಪಿಟಲ್‌ ಲಾಸ್‌ ಎಂದೂ ಪರಿಗಣಿಸಲಾಗುತ್ತದೆ. ಈ ಆಧಾರದ ಮೇಲೆ ಆದಾಯ ಕರ ನೀತಿಯಲ್ಲಿ ಕಾಪಿಟಲ್‌ ಗೈನ್ಸ್‌ ಟಾಕ್ಸ್‌ ಕಾನೂನು ಅನ್ವಯವಾಗುತ್ತದೆ.

ಆದರೆ ಕಾಪಿಟಲ್‌ ಗೈನ್ಸ್‌ ಬೆಲೆಯೇರಿಕೆಯ ಕಾರಣದಿಂದಲೂ ಉಂಟಾಗುತ್ತದೆ ಅಲ್ಲವೆ? ಒಂದು ಕಾಪಿಟಲ್‌ ಎಸೆಟ್‌ ಅನ್ನು ಖರೀದಿಸಿ ಇಟ್ಟಲ್ಲಿ ದೇಶದಲ್ಲಿ ತಾಂಡವವಾಡುತ್ತಿರುವ ಹಣದುಬ್ಬರದ ಕಾರಣದಿಂದಲೇ ಅದು ಸಾಕಷ್ಟು ಬೆಲೆಯೇರಿಸಿಕೊಳ್ಳುತ್ತದೆ. ಅದ್ದರಿಂದ ಯಾವುದೇ ನೈಜವಾದ ಲಾಭ ಇಲ್ಲದೆ ಆ ಅಸ್ತಿಯನ್ನು ಮಾರುವಾಗ ಅನ್ಯಾಯವಾಗಿ ನಾವು ಹಣದುಬ್ಬರದ ಮೇಲೆ ಟಾಕ್ಸ್‌ ನೀಡಿದಂತಾಗುತ್ತದೆ. ಅಲ್ಲವೇ?

ಈ ಸಮಸ್ಯೆ ನಿವಾರಿಸಲು ಸರಕಾರವು ೧೯೯೨ರಿಂದ ಆರಂಭಿಸಿ ಕಾಪಿಟಲ್‌ ಗೈನ್ಸ್‌ನಲ್ಲಿ ಬೆಲೆಯೇರಿಕೆಯ ಪ್ರಭಾವ ತೆಗೆದು ಹಾಕಿ ನೈಜವಾದ ಲಾಭಾಂಶದ ಮೇಲೆ ಮಾತ್ರ ಕರ ಬೀಳುವಂತಹ ಒಂದ್‌ ಇಂಡೆಕ್ಸ್‌ ಪದ್ಧತಿ ಆರಂಭಿಸಿತು. ಈ ಪದ್ಧತಿಯಲ್ಲಿ ಒಂದು ಅಸೆಟ್‌ ಅನ್ನು ಖರೀದಿಸಿ ಅಭಿವೃದ್ಧಿ ಪಡಿಸಿದ ವೆಚ್ಚಕ್ಕೆ ಅಂತಹ ಸಮಯದಿಂದ ಮಾರಾಟ ಮಾಡಿದ ಸಮಯದವರೆಗಿನ ಹಣದುಬ್ಬರದ ಪ್ರಮಾಣವನ್ನು ಒಂದು ಇಂಡೆಕ್ಸ್‌ ಅಥವಾ ಮಾಪನ‌ದ ಅನುಸಾರ ಸೇರಿಸಲಾಗುತ್ತದೆ. ಕೊನೆಗೆ ಮಾರಿದ ಬೆಲೆಯಿಂದ ಅಂತಹ ಇಂಡೆಕ್ಸಿನಿಂದ ವೆಚ್ಚವನ್ನು ಕಳೆಯಲಾಗುತ್ತದೆ. ಇದರಿಂದ ಬೆಲೆಯೇರಿಕೆಯ ಅಂಶ ಹೋಗಿ ಬರೇ ನೈಜ ಲಾಭಾಂಶದ ಮೇಲೆ ಮಾತ್ರ ಕರ ನೀಡಿದಂತಾಗುತ್ತದೆ.

ಕಾಪಿಟಲ್‌ ಗೈನ್ಸ್‌ ಟಾಕ್ಸ್‌ಗಾಗಿಯೇ ೧೯೮೨-೮೩ರಿಂದ ಆರಂಭಿಸಿ ಸರಕಾರ ಅಂತಹ ಒಂದು Cost Infation Index ಅನ್ನು ಪ್ರಕಟಿಸಿದೆ, ಹಾಗೂ ಪ್ರತೀ ವರ್ಷ ಅದನ್ನು ನವೀಕರಿಸುತ್ತಾ ಬಂದಿದೆ.

ಈ ಟೇಬಲ್‌ ಬಳಸಿ ಕಾಪಿಟಲ್‌ ಗೆ„ನ್ಸ್‌ ಟಾಕ್ಸ್‌ ಯಾವ ರೀತಿ ಲೆಕ್ಕ ಹಾಕಲಾಗುತ್ತದೆ? ಒಂದು ಉದಾಹರಣೆ ತಗೊಳ್ಳಿ:

ನವಂಬರ್‌ ೧೯೯೭ ರಲ್ಲಿ ಒಂದು ಲಕ್ಷಕ್ಕೆ ಕೊಂಡ ಭೂಮಿಯನ್ನು ಡಿಸೆಂಬರ್‌ ೨೦೦೮ ರಲ್ಲಿ ೩ ಲಕ್ಷಕ್ಕೆ ಮಾರಲಾಗಿದೆ.

೧೯೯೭ರಲ್ಲಿ ೧ ಲಕ್ಷ ವೆಚ್ಚಕ್ಕೆ ತೆಗೆದುಕೊಂಡ ಭೂಮಿಯನ್ನು ಇಂಡೆಕ್ಸ್‌ ಆಧಾರಿತ ರೀತಿಯಲ್ಲಿ ನೋಡಿದರೆ, ವೆಚ್ಚ ೨೦೦೮-೦೯ ರ ಇಂಡೆಕ್ಸ್‌/೧೯೯೭-೯೮ ರ ಇಂಡೆಕ್ಸ್‌= ೧೦೦೦೦೦ಗಿ೫೮೨/೩೩೧= ೧,೭೫,೮೩೦ಆಗುತ್ತದೆ.

ಈ ರೀತಿ ೧೯೯೭ರಲ್ಲಿ ಕೊಂಡ ರೂ ೧,೦೦,೦೦೦ ವೆಚ್ಚವನ್ನು ಬೆಲೆಯೇರಿಕೆಯ ನಿಮಿತ್ತ ರೂ ೧,೭೫,೮೩೦ ಕ್ಕೆ ಹೆಚ್ಚಿಸಲಾಗಿದೆ. ಕೊನೆಗೊಮ್ಮೆ ಡಿಸೆಂಬರ್‌ ೨೦೦೮ರಲ್ಲಿ ಆ ಭೂಮಿಯನ್ನು ರೂ ೩ ಲಕ್ಷಕ್ಕೆ ಮಾರಿದಾಗ ಲಾಭ ೩,೦೦,೦೦೦-೧,೦೦,೦೦೦= ರೂ ೨೦೦೦೦೦ ಎಂದು ಸುಲಭವಾಗಿ ಹೇಳಬಹುದಾದರೂ ಇಂಡೆಕ್ಸ್‌ ಆಧಾರಿತ ಲಾಭ ಬರೇ ೩,೦೦,೦-೧,೭೫,೮೩೦= ೧,೨೪,೧೭೦ ರೂಪಾಯಿಗಳು!! ಈಗ ಕಾಪಿಟಲ್‌ ಗೆ„ನ್ಸ್‌ ಟಾಕ್ಸ್‌ ಬರೇ ೧,೨೪,೧೭೦ ರ ಮೇಲೆ ಶೇ. 20 ದರದಲ್ಲಿ ಕೊಟ್ಟರೆ ಆಯಿತು.

ಈ ರೀತಿ ಕಾಪಿಟಲ್‌ ಗೈನ್ಸ್‌ ಟಾಕ್ಸ್‌ನಲ್ಲಿ, ಬೆಲೆಯೇರಿಕೆಯ ಸೂಚ್ಯ೦ಕ(ಇಂಡೆಕ್ಸ್‌) ಅನುಸರಿಸಿ ಅದರ ಲಾಭವನ್ನು ಪಡೆಯಬಹುದಾಗಿದೆ.

"https://kn.wikipedia.org/w/index.php?title=ಸೂಚ್ಯಂಕ&oldid=993985" ಇಂದ ಪಡೆಯಲ್ಪಟ್ಟಿದೆ