ಸುಲ್ತಾನ್ ಬತ್ತೇರಿ, ಮಂಗಳೂರು
ಮಂಗಳೂರು ನಗರದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಬೋಳೂರಿನಲ್ಲಿ ಸುಲ್ತಾನ್ ಬತ್ತೇರಿ ಇದೆ. ಟಿಪ್ಪುವಿನ ಕಾಲದಲ್ಲಿ ನಿರ್ಮಿಸಿದ ವೀಕ್ಷಣಾ ಗೋಪುರ ಇದು ಇಲ್ಲಿನ ಪ್ರಮುಖ ಆಕರ್ಷಣೆ. ಸುತ್ತಲಿನ ಪ್ರಕೃತಿ ಸೌಂದರ್ಯ ವೀಕ್ಷಿಸಲು ಇದು ಪ್ರಶಸ್ತ ಜಾಗ. ತನ್ನ ಸಾವಿಗೆ 15 ವರ್ಷ ಮುನ್ನ ಅಂದರೆ 1748 ರಲ್ಲಿ ಟಿಪ್ಪು ಈ ಗೋಪುರ ನಿರ್ಮಿಸಿದ್ದಾನೆ ಎನ್ನಲಾಗುತ್ತದೆ. ಇದರಿಂದಾಗಿಯೇ ಈ ಪ್ರದೇಶ ಸುಲ್ತಾನ್ ಬಟ್ಟೇರಿ ಅಂತ ಕರೆಸಿಕೊಂಡಿತು. ಬಟ್ಟೇರಿ ಅಂದರೆ ತೋಪುಗಳನ್ನು ಸಿಡಿಸುವ ತಾಣ ಎಂದಾಗುತ್ತದೆ. ನಂತರ ಈ ಹೆಸರು ಬತ್ತೇರಿ ಎಂದು ಬದಲಾಯಿತು. ಈ ತಾಣವು ಕಪ್ಪು ಕಲ್ಲಿನಿಂದ ನಿರ್ಮಾಣಗೊಂಡಿದೆ. ಟಿಪ್ಪು ಇದನ್ನು ನಿರ್ಮಿಸಿದ ಕಾರಣ ಬ್ರಿಟೀಷರ ಯುದ್ಧ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು. ನದಿ ಮಾರ್ಗವಾಗಿ ಹಾದು ಬರುವ ಹಡಗು, ದೋಣಿಯನ್ನು ಗುರುತಿಸಲು ಆತ ಇದನ್ನು ನಿರ್ಮಿಸಿದ್ದ. ಹೀಗಾಗಿ ಇದು ಯುದ್ಧ ಸಂಬಂಧಿ ಕಾರ್ಯಕ್ಕೆ ಬಳಕೆಯಾಗುತ್ತಿತ್ತು ಎಂದು ಹೇಳಲಾಗುತ್ತದೆ.[೧] ಇದು ಈಗ ಬೆಟ್ಟ ಗುಡ್ಡಗಳನ್ನು, ಪ್ರಕೃತಿ ಸೌಂದರ್ಯ ಹಾಗೂ ನಗರವನ್ನು ಎತ್ತರವಾದ ತಾಣದಿಂದ ವೀಕ್ಷಿಸಲು ಬಳಕೆ ಆಗುತ್ತಿದೆ. ಈ ಗೋಪುರದ ಕೆಳಗೆ ನೆಲಮಾಳಿಗೆ ಇದ್ದು, ಇಲ್ಲೊಂದು ಸಂಗ್ರಹಾಲಯವಿದೆ. ಇದನ್ನು ಗನ್ ಪೌಡರ್ ಶೇಖರಿಸಿ ಇಡಲು ಅಂದು ಬಳಸಲಾಗುತ್ತಿತ್ತು. ಇಲ್ಲಿ ಪ್ರಮುಖ ವಸ್ತುಗಳು ಹಾಗೂ ಅಗತ್ಯ ಸಾಮಗ್ರಿಯನ್ನು ಗುಪ್ತವಾಗಿ ಇರಿಸುವ ಕಾರ್ಯ ಆಡಳಿತ ನಡೆಸುವ ರಾಜರಿಂದ ಆಗುತ್ತಿತ್ತು. ಇದೊಂದು ಮಾದರಿ ತಾಣವಾಗಿದ್ದು, ಇದಕ್ಕೆ ದೊಡ್ಡ ಐತಿಹಾಸಿಕ ಹಿನ್ನೆಲೆಯೂ ಸೇರಿಕೊಂಡಿದೆ. ಇದು ಯುದ್ಧ ಸಂದರ್ಭದಲ್ಲಿ ಎದುರಾಳಿ ದಾಳಿ ಹಿಮ್ಮೆಟ್ಟಿಸಲು ಕೂಡ ಪ್ರಮುಖವಾಗಿ ಬಳಕೆ ಆಗುತ್ತಿತ್ತು. ವೀಕ್ಷಣಾ ಗೋಪುರದ ಮೇಲೆ ತೆರಳಲು ಮೆಟ್ಟಿಲುಗಳಿವೆ. ಇಲ್ಲಿ ತಲುಪಿ ನೋಡಿದರೆ ಅರೇಬಿಯನ್ ಸಮುದ್ರ ಹಾಗೂ ಸುತ್ತಲಿನ ನಿಸರ್ಗದತ್ತ ಸೌಂದರ್ಯವನ್ನು ಒಟ್ಟಾಗಿ ಸವಿಯುವ ಅವಕಾಶ ಒದಗಿ ಬರುತ್ತದೆ. ನೈಸರ್ಗಿಕ ಸೌಂದರ್ಯ ಅಪಾರವಾಗಿ ಕಾಣಬಯಸುವವರು ಇಲ್ಲಿಗೆ ಬರಬೇಕು. ಸದ್ಯ ಇದು ನಿರ್ಜನ ತಾಣವಾಗಿದ್ದು, ವರ್ಷದ ಬಹುತೇಕ ದಿನ ಪ್ರವಾಸಿಗರಿಂದ ತುಂಬಿರುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2011-11-03. Retrieved 2016-08-21.