ವಿಷಯಕ್ಕೆ ಹೋಗು

ರುಜು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಹಿ ಇಂದ ಪುನರ್ನಿರ್ದೇಶಿತ)
ಬೆಂಜಮಿನ್ ಫ್ರ್ಯಾಂಕ್ಲಿನ್‍ರ ರುಜು
ಬೆಂಜಮಿನ್ ಫ್ರ್ಯಾಂಕ್ಲಿನ್‍ರ ರುಜು

ರುಜು ಒಬ್ಬರ ಹೆಸರು, ಅಡ್ಡಹೆಸರು ಅಥವಾ ಒಬ್ಬ ವ್ಯಕ್ತಿಯು ದಸ್ತಾವೇಜುಗಳ ಮೇಲೆ ಗುರುತು ಹಾಗೂ ಉದ್ದೇಶದ ಸಾಕ್ಷಿಯಾಗಿ ಬರೆಯುವ ಇತರ ಗುರುತಿನ ಒಂದು ಕೈಬರಹದ (ಮತ್ತು ಹಲವುವೇಳೆ ಶೈಲೀಕೃತ) ಚಿತ್ರಣ. ರುಜುವಿನ ಬರಹಗಾರನು ರುಜುದಾರ. ರುಜುವನ್ನು ಒಂದು ಆಟೋಗ್ರಾಫ್ ಎಂದು ತಪ್ಪುತಿಳಿಯಬಹುದು, ಆದರೆ ಆಟೋಗ್ರಾಫ್ ಮುಖ್ಯವಾಗಿ ಒಂದು ಕಲಾತ್ಮಕ ರುಜು.

ರುಜುವಿನ ಸಾಂಪ್ರದಾಯಿಕ ಕಾರ್ಯ ಒಂದು ದಸ್ತಾವೇಜಿನ ಮೂಲದ ಪುರಾವೆ ಕೊಡುವುದು ಮತ್ತು ಆ ದಸ್ತಾವೇಜಿಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯ ಉದ್ದೇಶ ಹೇಳುವುದು. ಉದಾಹರಣೆಗೆ, ಅನೇಕ ಗ್ರಾಹಕ ಒಪ್ಪಂದಗಳಲ್ಲಿ ಒಂದು ರುಜುವಿನ ಪಾತ್ರ ಕೇವಲ ಕರಾರು ಮಾಡಿಕೊಂಡ ಪಕ್ಷಗಳ ಗುರುತಿನ ಸಾಕ್ಷಿ ಒದಗಿಸುವುದಷ್ಟೇ ಅಲ್ಲ, ಜೊತೆಗೆ ವಿವೇಚನೆ ಮತ್ತು ತಿಳುವಳಿಕೆಯುಳ್ಳ ಸಮ್ಮತಿಯ ಸಾಕ್ಷಿ ಒದಗಿಸುವುದು ಕೂಡ. ಅನೇಕ ದೇಶಗಳಲ್ಲಿ, ಹೆಚ್ಚುವರಿ ಕಾನೂನು ಬಲ ನೀಡಲು ರುಜುಗಳನ್ನು ದಸ್ತಾವೇಜು ಪ್ರಮಾಣಾಧಿಕಾರಿಯ ಉಪಸ್ಥಿತಿಯಲ್ಲಿ ಸಾಕ್ಷಿಯಾಗಿಸಿ ದಾಖಲಿಸಬಹುದು. ಕೆಲವು ದೇಶಗಳಲ್ಲಿ, ಕಾನೂನು ದಸ್ತಾವೇಜುಗಳ ಮೇಲೆ ಅನಕ್ಷರಸ್ಥ ಜನ ರುಜುವಿನ ಬದಲಾಗಿ ಹೆಬ್ಬಟ್ಟಿನ ಗುರುತು ಇಡುತ್ತಾರೆ.

"https://kn.wikipedia.org/w/index.php?title=ರುಜು&oldid=862567" ಇಂದ ಪಡೆಯಲ್ಪಟ್ಟಿದೆ