ಸರ್ಜುಬಾಲ ದೇವಿ
ಪರಿಚಯ
[ಬದಲಾಯಿಸಿ]ಸರ್ಜುಬಾಲಾ ದೇವಿ ಭಾರತೀಯ ಮಹಿಳಾ ಬಾಕ್ಸರ್. ಮಣಿಪುರದವರಾದ ಇವರು 2016 ರ ರಿಯೊ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಟರ್ಕಿಯಲ್ಲಿ ಆಯೋಜಿಸಲಾದ ಯೂತ್ ವರ್ಲ್ಡ್ ವುಮೆನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಅತ್ಯುತ್ತಮ ಬಾಕ್ಸರ್ ಪ್ರಶಸ್ತಿ ಪಡೆದಿದ್ದಾರೆ.ಇವರನ್ನು ಮುಂದಿನ ಮೇರಿ ಕೋಮ್ ಎಂದು ಕರೆಯಲಾಗಿದೆ.
- ಜನನ: 1 ಜೂನ್ 1993, ಮಣಿಪುರ, ಭಾರತ.
- ರಾಷ್ಟ್ರೀಯತೆ: ಭಾರತೀಯ
- ಪೌರತ್ವ: ಭಾರತೀಯ
- ಉದ್ಯೋಗ: ಬಾಕ್ಸರ್ ಮಹಿಳೆ 48 ಕೆ.ಜಿ. ವಿಭಾಗ
ವೈಯಕ್ತಿಕ ಜೀವನ
[ಬದಲಾಯಿಸಿ]ಜೀವನ ಮತ್ತು ವೃತ್ತಿ: ಸರ್ಜುಬಾಲಾ ದೇವಿ ರಾಜೇನ್ ಸಿಂಗ್ ಮತ್ತು ಥೋಯಿಬಿ ದೇವಿ ದಂಪತಿಯ ರೈತರ ಕುಟುಂಬದಲ್ಲಿ ಜನಿಸಿದರು.[೧] ಮೇರಿಕೋಮ್ ಅವರ ಯಶಸ್ಸಿನ ಕಥೆಗಳಿಂದ ಪ್ರೇರಿತರಾದ ಅವರು 2005 ರಲ್ಲಿ ಬಾಕ್ಸಿಂಗ್ ಶಾಲೆಗೆ ಸೇರಿದರು. ಎರಡು ವರ್ಷಗಳ ನಂತರ ಅವರು ತಮ್ಮ ನಗರದ ಇಂಫಾಲ್ ಇಂಡಿಯಾದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ತರಬೇತಿ ಕೇಂದ್ರಕ್ಕೆ ಸೇರಿದರು. ಜ್ಯೂನಿಯರ್ ನ್ಯಾಷನಲ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೊದಲು 2006 ಮತ್ತು 2008 ರ ವರ್ಷಗಳಲ್ಲಿ ಉಪಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಲ್ಲಿ ಗೆದ್ದರು. 2011 ರಲ್ಲಿ ವಿಶ್ವಯುವ ಚಾಂಪಿಯನ್ ಶಿಪ್ ಗೆದ್ದರು. ಅದೇ ವರ್ಷದಲ್ಲಿ ಹಿರಿಯ ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆದ್ದರು. 2011 ರಲ್ಲಿ ನಡೆದ 11 ನೇ ಹಿರಿಯ ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದಾರೆ. 2018 ರಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಸರ್ಜುಬಾಲಾ ಕ್ವಾರ್ಟರ್ ಫೈನಲ್ ನಲ್ಲಿ ಚೀನಾದ ಚಾಂಗ್ ಯುವಾನ್ ವಿರುದ್ದ ಜಯಗಳಿಸಿದ್ದಾರೆ[೨].
ಸಾಧನೆಗಳು
[ಬದಲಾಯಿಸಿ]ಸರ್ಜುಬಾಲಾ ದೇವಿಯವರು ಗೌರವಾನ್ವಿತ ಬಾಕ್ಸರ್ ಆಗಿದ್ದು, ಬಾಕ್ಸಿಂಗ್ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಗಳು ಹೀಗಿವೆ. ೨೦೦೬ ಉಪ ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್ ಶಿಪ್ ಚಿನ್ನದ ಪದಕ ೨೦೦೮ ಉಪ ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್ ಶಿಪ್ ಚಿನ್ನದ ಪದಕ ೨೦೦೯ ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್ ಶಿಪ್ ಚಿನ್ನದ ಪದಕ[೩]