ಶಾಂತಿನಾಥ ಸ್ವಾಮಿ ಬಸದಿ, ನಾರಾವಿ
ಶ್ರೀ ಶಾಂತಿನಾಥ ಸ್ವಾಮಿ ಬಸದಿ, ನಾರಾವಿ
ಸ್ಥಳ
[ಬದಲಾಯಿಸಿ]ನಾರಾವಿಯ ಪ್ರಸಿದ್ಧ ಶ್ರೀ ಧರ್ಮನಾಥ ಸ್ವಾಮಿಯ ಎದುರಿನ ಗೋಪುರದ ಬಲಬದಿ (ಪೂರ್ವ ದಿಕ್ಕಿನ)ಯಲ್ಲಿ ಈ ಜಿನಾಲಯವಿದೆ.
ಒಳಾಂಗಣ ಶಿಲಾನ್ಯಾಸ
[ಬದಲಾಯಿಸಿ]ಬಸದಿಯನ್ನು ಪ್ರವೇಶಿಸುತ್ತಲೇ ಘಂಟಾ ಮಂಟಪ, ಗಂಧ ಕುಟಿ ಹಿತವಾದ ತೀರ್ಥಂಕರ ಮಂಟಪ ಮತ್ತು ಸುಕನಾಸಿ ಹಾಗೂ ಗರ್ಭಗೃಹಗಳಿವೆ. ಗಂಧಕುಟಿಯ ಹಿಂದುಗಡೆ ಒಂದು ಉನ್ನತ ಪೀಠದ ಮೇಲೆ ಅಶ್ವಾರೋಹಿಯಾದ ಬ್ರಹ್ಮಯಕ್ಷನ ಸುಂದರ ಶಿಲಾಮೂರ್ತಿ ಇದೆ. ಮಕರ ತೋರಣ ಸಂಯುಕ್ತವಾದ ಪ್ರಭಾವಳಿ ಹೊಂದಿರುವ ಸುಮಾರು ಮೂರುವರೆ ಅಡಿ ಎತ್ತರದ ಭಗವಾನ್ ಶಾಂತಿನಾಥ ಸ್ವಾಮಿಯ ಶಿಲಾ ಬಿಂಬವಿದೆ.ಈ ಬಸದಿಗೂ ಒಳಗಡೆ ಪ್ರದಕ್ಷಿಣಾ ಪಥವಿದೆ. ಖಡ್ಗಾಸನ ಭಂಗಿಯಲ್ಲಿದೆ.ಧರ್ಮನಾಥ ಸ್ವಾಮಿ ಬಸದಿಯ ಬಲಪಾರ್ಶ್ವದಲ್ಲಿ ಹಿಂದುಗಡೆ ಕ್ಷೇತ್ರಪಾಲನ ಸುಂರದ ಗುಡಿಯಿದೆ.
ತೀರ್ಥಂಕರ ಶಿಲಾಸನ
[ಬದಲಾಯಿಸಿ]ಶ್ರೀ ಶಾಂತಿನಾಥ ಮತ್ತು ಶ್ರೀ ಅನಂತನಾಥ ಸ್ವಾಮಿಯ ಹಿಂದಿನ ಬಸದಿ ಇದ್ದ ಸ್ಥಳದಲ್ಲಿ ಈಗ ಅನಂತ ಶಾಂತಿ ತೀರ್ಥಂಕರ ವನ ಎಂಬ ತೀರ್ಥಂಕರ ಭಗವಾನರಿಗೆ ಸಂಬಂಧಿಸಿದ ಗಿಡ (ವೃಕ್ಷ) ಗಳನ್ನು ನೆಟ್ಟು ಬೆಳೆಸಿರುವ ಒಂದು ವ್ಯವಸ್ಥಿತ ವನವನ್ನು ನಿರ್ಮಿಸಲಾಗಿದೆ. ಹಿಂದೆ ಈ ಪರಿಸರದಲ್ಲಿ ಒಂದು ಅಮೂಲ್ಯ ಶಿಲಾ ಶಾಸನವೂ ಇತ್ತು. ಅದನ್ನು ಪಂಕ್ತಿಗಳ ಅನುಸಾರ ಈ ರೀತಿ ಓದಲಾಗಿದೆ.
ಶಿಲಾ ಶಾಸನ
[ಬದಲಾಯಿಸಿ]ಮುಂಭಾಗ
[ಬದಲಾಯಿಸಿ]೧. ಸ್ವಸ್ತಿ ಶ್ರೀಮತು ಪಂಡ್ಯಚ ೨. ಕ್ರವರ್ತು ರಾಯ ಗಜಾಂಕುಶ ಶ್ರೀ ೩. ವೀರ ಕುಲಶೇಖರಾಳ್ವೇಂದ್ರ ದೇವರು ವಿ ೪. ಜಯ ರಾಜ್ಯಂ ಗೆಯ್ಯತ್ತಮಿದ್ದ ರೌದ್ರಿ ೫. ಸಂವತ್ಸರದ ಧನುಮಾಸ ಮೊದ ೬. ಲಗಿ ಮಂಗಳೂರು ಹಿರ್ಯರ ೭. ಮೆನ್ಯ ಭುವನಾಶ್ರಯದ ಮುಂದ ೮. ಣ ಮೊಗಸಾಲೆಯಲು ವಡ್ಡೋಲಗಂ ೯. ಗೊಟ್ಟಿದ ಅಮರ ಶ್ರೀಪಾದ ಸಂನಿ ೧೦. ಧಾನದಲು ಕುಮಾರ ಬಂಕಿ ೧೧. ದೇವರುಂ ಮುಂತಾಗಿ ಯಿದ್ದಂತ ಪ್ರ ೧೨. ಧಾನದಂ ನಕರ ಹಂಜಮಾನರುಂ ಎ ೧೩. ರಡು ಕೊಲಬಳಿಯರುಂ ಸಕಲ ಛತ್ರ ೧೪. ಮನ್ನೆಯರ್ಗೆಯುಂ ಕೂಡಿನೆರೆದಿದ್ದ ಪ್ರ ೧೫. ಹರದಲು ಮಂಗಳೂರ ೧೬. ಹೊರಹಿನವರುಂ ನೆಲದವರುಂ ೧೭. ಕೋಟಿಯವರು ಹರಹರಿಯವನುಂ ಬಿ ೧೮. ಮ್ಮುದೇವ ಬಳಿಯ ಬೀರಲದೇವಿಯರ ಕುವರ ಗಣಪಂಣ್ಣಂಗ್ಗೆ ಧಾ ೧೯. ರೆಯನೆರದು ಕೊಟ್ಟ ಮಂಜುನಾ ೨೦. ಥ ದೇವರಿಗೆ.....
ಹಿಂಭಾಗ
[ಬದಲಾಯಿಸಿ]೨೧. ಮಯ್ಯಂದು ಹಡಪ ೨೨. ಕೈಯಂ ಕೊಟ್ಟ (ಪಾದಕಾಣಿಕೆ?) ೨೩. ಧರ್ಮಕ್ಕೆ ಯಾವರು ವಕ್ರಸ್ಥರ ೨೪. ಗಂಗೆ ವಾರಣಾಸಿಯಲು ಸಾವಿರ ಕಪಿಲೆ ೨೫. ಯ ವಧಿಸಿದ ದೋಶ. ಮಂಜುನಾಥ ದೇ ೨೬. ವರ ಕಿತ್ತ ದೋಷ ಯಾವೂರಿಂದ ಒಬ್ಬ ೨೭. ರು ವರ್ತಿಸ್ತಾರಾದರೆ ಅರಸಿಂಗೆ ದಂ ೨೮. ಡ ಗ ೧೦೦೦ ಒಂದು....... ೨೯. ಹಾರವರಿ ಬ್ರಹ್ಮರು ಮುದಲಾಗಿ ೩೦. ೧೨೦.......