ಸದಸ್ಯ:ಸ್ಮಿತಾ ಮಾವೆ

ವಿಕಿಪೀಡಿಯ ಇಂದ
(ಸದಸ್ಯ:Smitha~knwiki ಇಂದ ಪುನರ್ನಿರ್ದೇಶಿತ)
Jump to navigation Jump to search

ನನ್ನ ಹೆಸರು ಸ್ಮಿತಾ ಮಾವೆ. ಮಾವೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಸಾಲೆತ್ತೂರು ಗ್ರಾಮದ ಒಂದು ಪುಟ್ಟ ಹಳ್ಳಿ. ಅಡಿಕೆ ತೋಟ, ಹಸಿರು ಗದ್ದೆ ಹಾಗೂ ಗುಡ್ಡ ಬೆಟ್ಟಗಳಿಂದ ಸುತ್ತುವರಿದಿರುವ ಸುಂದರವಾದ ತಾಣ. ಪಕ್ಕದಲ್ಲಿಯೇ ಹರಿಯುತ್ತಿರುವ ಪುಟ್ಟ ನದಿ, ನದಿಯ ಆಚೆ ಕಳೆಂಜಿಮಲೆ ಕಾಡು. ನನ್ನ ಅಜ್ಜ ಸಣ್ಣವರಿದ್ದಾಗ ಆ ಕಾಡಿನಲ್ಲಿ ಹುಲಿಗಳೆಲ್ಲ ಇದ್ದವಂತೆ. ಈಗ ಹೆಚ್ಚೆಂದರೆ ಕಾಡುಹಂದಿಗಳಿರಬಹುದೇನೋ... .