ಸದಸ್ಯ:R.MALATHY
ಡಾ. ಅಮ್ಮಸಂದ್ರ ಸುರೇಶ್

ಡಾ.ಅಮ್ಮಸಂದ್ರ ಸುರೇಶ್ ದಿನಾಂಕ 20.06.1970ರಂದು ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರದಲ್ಲಿ ಕೆಂಪೇಗೌಡ ಮತ್ತು ನರಸಮ್ಮನವರ ಪುತ್ರರಾಗಿ ಜನಿಸಿದರು. ಲೇಖಕ, ಅಂಕಣಕಾರ, ಮಾಧ್ಯಮ ವಿಶ್ಲೇಷಕ, ಹವ್ಯಾಸಿ ಅಭಿವೃದ್ಧಿ ಪತ್ರಕರ್ತ ಹಾಗೂ ಸಂಘಟಕರಾಗಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅವರು ಕರ್ನಾಟಕ ರಾಜ್ಯಾಧ್ಯಂತ ತಮ್ಮ ಬರಹಗಳಿಂದ ಪ್ರಸಿದ್ಧರಾಗಿದ್ದಾರೆ. ಪತ್ರಿಕಾ ಲೋಕದ ಜೊತೆಗೆ ಉತ್ತಮ ಲೇಖಕರೂ ಆಗಿರುವ ಅವರು ಪತ್ರಿಕೋದ್ಯಮದ ಒಳಗೊಂಡಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಇದುವರೆಗೂ 19 ಕೃತಿಗಳನ್ನು ಬರೆದಿದ್ದಾರೆ. 15.02.2023ರಂದು ನಡೆದ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ಮೈಸೂರಿನ ನರಸಿಂಹರಾಜ್ಯ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯ ಮತ್ತು ಸಂಘಟನೆ ಎರಡರಲ್ಲೂ ತೊಡಗಿದ್ದಾರೆ. ಕರ್ನಾಟಕ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಸಮುದಾಯಗಳ ವೇದಿಕೆಯ ಮಾಧ್ಯಮ ಸಲಹೆಗಾರರಾಗಿ, ಕಲ್ಪತರು ಚಾರಿಟಬಲ್ ಟ್ರಸ್ಟ್ ಮತ್ತು ನೆರಳು ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾಗಿ, ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಉದಯಕಾಲ ದಿನಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದ “ತಿರುಗಾಟ” ಅಂಕಣ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಬಾಳಿನಲ್ಲಿ ಹೊಸ ಬೆಳಕನ್ನು ತರುವಲ್ಲಿ ಯಶಸ್ವಿಯಾಗಿದೆ. ಕೃಷಿಯ ಕುರಿತು ಉದಯಕಾಲ ದಿನಪತ್ರಿಕೆಯಲ್ಲಿ “ಕೃಷಿ-ಖುಷಿ”, ಪ್ರಜಾಸತ್ಯ ದಿನಪತ್ರಿಕೆಯಲ್ಲಿ “ಅಂಚೆಯಣ್ಣನ ಅಂತರಾಳ” ಅಂಕಣಗಳನ್ನು ಬರೆಯುತ್ತಿದ್ದಾರೆ. ಪ್ರಸ್ತುತ, ವಿಶ್ವವಾಣಿ. ಉದಯಕಾಲ, ವಾರ್ತಾಭಾರತಿ ಸೇರಿದಂತೆ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಲೇಖನ ಮತ್ತು ಅಂಕಣಗಳನ್ನು ಬರೆಯುತ್ತಿದ್ದಾರೆ.
ಶಿಕ್ಷಣ
ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟೂರು ಅಮ್ಮಸಂದ್ರ, ಮಾಧ್ಯಮಿಕ ಮತ್ತು ಪ್ರೌಡ ಶಾಲಾ ಶಿಕ್ಷಣ-ದಂಡಿನಶಿವರ. ತುಮಕೂರಿನ ಶ್ರೀ ಸಿದ್ದಗಂಗಾ ಶಿಕ್ಷಕರ ತರಬೇತಿ ಸಂಸ್ಥೆಯಿಂದ ಟಿಸಿಹೆಚ್ ಅಧ್ಯಯನ. ಪದವಿ ಪೂರ್ವ ಶಿಕ್ಷಣ : ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜು, ಹುಲ್ಲೇಕೆರೆ, ತುರುವೇಕೆರೆ ತಾಲ್ಲೂಕು.
ಪದವಿ : (ಪತ್ರಿಕೋದ್ಯಮ,ಮನೋವಿಜ್ಞಾನ ಮತ್ತು ಐಚ್ಚಿಕ ಕನ್ನಡ)-ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರು.
ಸ್ನಾತಕೋತ್ತರ ಪದವಿ : ಪತ್ರಿಕೋದ್ಯಮ ಮತ್ತು ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
ಪಿ,ಎಚ್ ಡಿ : ಪ್ರಸಿದ್ದ ಮಾಧ್ಯಮ ತಜ್ಞರಾದ ಪ್ರೊ.ಎನ್ ಉಷಾರಾಣಿಯವರ ಮಾರ್ಗದರ್ಶನದಲ್ಲಿ “ಕನ್ನಡ ದಿನಪತ್ರಿಕೆಗಳಲ್ಲಿ ಕೃಷಿ ವರದಿ ಹಾಗೂ ಇನ್ನಿತರೆ ಬರಹಗಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸುವ ಮೂಲಕ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ 2013ರಲ್ಲಿ ಪಿ.ಹೆಚ್ ಡಿ ಪ್ರಧಾನ.
ಡಿ. ಲಿಟ್ : “ಪ್ರದರ್ಶಕ ಕಲೆಗಳು ಮತ್ತು ಮುದ್ರಣ ಮಾಧ್ಯಮ” ವಿಷಯದ ಕುರಿತು ಮಹಾಪ್ರಬಂಧವನ್ನು ಮಂಡಿಸುವ ಮೂಲಕ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಿಂದ 2024ರಲ್ಲಿ ಡಿ.ಲಿಟ್ ಪ್ರಧಾನ.
ಪತ್ರಿಕೋದ್ಯಮ ಸೇವೆ :
ಪದವಿಯಲ್ಲಿ ಪತ್ರಿಕೋದ್ಯಮವನ್ನು ವ್ಯಾಸಂಗ ಮಾಡುತ್ತಿರುವಾಗಲೇ ತುಮಕೂರಿನಲ್ಲಿ 1991ರಲ್ಲಿ “ಸುದ್ದಿ ಸವಾಲು” ಎಂಬ ಜಿಲ್ಲಾ ಮಟ್ಟದ ವಾರಪತ್ರಿಕೆಯನ್ನು ಆರಂಭಿಸುವ ಮೂಲಕ ಪತ್ರಿಕಾರಂಗ ಪ್ರವೇಶ. 1990 ರಿಂದ 1993ರವೆಗೂ ತುಮಕೂರು ಜಿಲ್ಲೆಯ ಪ್ರಮುಖ ವಾರಪತ್ರಿಕೆಗಳಲ್ಲೊಂದಾಗಿದ್ದ ಹಕ್ಕೋತ್ತಾಯ ವಾರಪತ್ರಿಕೆಗೆ ಅಂಕಣಕಾರರಾಗಿ ಸೇವೆ. 1994-1995ರಲ್ಲಿ ಬೆಂಗಳೂರಿನ ಉದಯವಾಣಿ ಪತ್ರಿಕಾ ಕಚೇರಿಯಲ್ಲಿ ಇಂಟರ್ನ್ಷಷಿಪ್, 1999 ರಿಂದ 2004 ರವರೆಗೆ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕು ಪ್ರಜಾವಾಣಿ ಪತ್ರಿಕೆಯ ಅರೆಕಾಲಿಕ ವರದಿಗಾರರಾಗಿ ಸೇವೆ. 2003 ರಿಂದ 2005ರವರೆಗೂ ರಾಜ್ಯ ಮಟ್ಟದ ದಿನಪತ್ರಿಕೆ ಜನವಾಹಿನಿ ದಿನಪತ್ರಿಕೆಯಲ್ಲಿ ಅಂಕಣಕಾರರಾಗಿ “ಮಾಧ್ಯಮ ವಿಶ್ಲೇಷಣೆ” ಎಂಬ ಶೀರ್ಷಿಕೆಯೊಂದಿಗೆ ಸುಮಾರು ಎರಡು ವರ್ಷಗಳಿಗೂ ಹೆಚ್ಚು ಸಮಯ ಅಂಕಣಗಳ ಬರಹ.
ಮಾಧ್ಯಮ, ಕೃಷಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಕನ್ನಡದ ರಾಜ್ಯ ಮಟ್ಟದ ದಿನಪತ್ರಿಕೆಗಳಾದ ವಿಶ್ವವಾಣಿ, ಉದಯಕಾಲ ಮತ್ತು ವಾರ್ತಾಭಾರತಿ ಪತ್ರಿಕೆಗಳಲ್ಲಿ ಲೇಖನಗಳ ಬರವಣಿಗೆಯಲ್ಲಿ ತೊಡಗಿದ್ದಾರೆ. ಕಳೆದ ಮೂವತ್ತೆರಡು ವರ್ಷಗಳಿಂದ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಸತತವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಇದುವರೆಗೂ 2000 ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಕನ್ನಡದ ಪ್ರಮುಖ ಮಾಧ್ಯಮ ವಿಶ್ಲೇಷಕರಲ್ಲಿ ಮಂಚೂಣಿಯಲ್ಲಿರುವ ಡಾ.ಅಮ್ಮಸಂದ್ರ ಸುರೇಶ್, ಮಾಧ್ಯಮಗಳ ಕುರಿತು ಸಾಕಷ್ಟು ವಿಶ್ಲೇಷಣಾ ಬರಹಗಳನ್ನು ಬರೆದಿದ್ದಾರೆ. ಮಾಧ್ಯಮ, ಅಭಿವೃದ್ಧಿ, ಸಂಸ್ಕೃತಿ ಮತ್ತು ಕೃಷಿಗೆ ಮೀಸಲಾದ “ಮಾಧ್ಯಮ ಲೋಕ” ಎಂಬ ಯೂ ಟ್ಯೂಬ್ ವಾಹಿನಿಯನ್ನು ಮುನ್ನೆಡೆಸುತ್ತಿದ್ದಾರೆ. ಮುದ್ರಣ ಮಾದ್ಯಮ, ಅಂತರ್ ಜಾಲ ಪತ್ರಿಕೋದ್ಯಮ, ಸಾಮಾಜಿಕ ಮಾಧ್ಯಮ ಹೀಗೆ ಮಾಧ್ಯಮದ ಬಹುತೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ರಾಜ್ಯ ಮಟ್ಟದ ಉದಯಕಾಲ ದಿನಪತ್ರಿಕೆಯಲ್ಲಿ ಪ್ರಕಟವಾದ “ತಿರುಗಾಟ” ಅಂಕಣ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಬಾಳಿನಲ್ಲಿ ಹೊಸ ಬೆಳಕನ್ನು ತರುವಲ್ಲಿ ಯಶಸ್ವಿಯಾಗಿದೆ. ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಗುಂಪಿನಲ್ಲಿ 46 ಅಲೆಮಾರಿ ಸಮುದಾಯಗಳು ಸೇರಿವೆ. ಈ 46 ಸಮುದಾಯಗಳ ಪೈಕಿ ಈಗಾಗಲೇ 40 ಸಮುದಾಯಗಳ ಕುರಿತು ಲೇಖನಗಳನ್ನು ಈಗಾಗಲೇ ಬರೆದಿದ್ದು ಈ ಲೇಖನಗಳು ಅಲೆಮಾರಿ ಸಮುದಾಯಗಳ ಜೀವನ, ವೃತ್ತಿ, ಸಮಸ್ಯೆಗಳು ಹಾಗೂ ಈ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತಂದಿರುವ ಹಲವು ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿಯನ್ನು ಈ ಸಮುದಾಯಗಳ ಜನರಿಗೆ ಒದಗಿಸುವಲ್ಲಿ ಸಫಲವಾಗಿವೆ. ಈ ಲೇಖನಗಳನ್ನು ಒಟ್ಟುಗೂಡಿಸಿ “ನೆಲೆ ಇಲ್ಲದವರು” ಎಂಬ ಹೆಸರಿನಲ್ಲಿ ಕೃತಿಯೊಂದನ್ನು ಮೈಸೂರಿನ ಮಹಿಮಾ ಪ್ರಕಾಶನ ಹೊರತಂದಿದೆ. ಈ ಕೃತಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ಒಂದು ಅತ್ಯುತ್ತಮ ದಾಖಲೆಯಾಗಿದೆ.
ಡಾ.ಅಮ್ಮಸಂದ್ರ ಸುರೇಶ್ ರವರು ಹಿಂದುಳಿದ ವರ್ಗಗಳ ಅದರಲ್ಲೂ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ನಡೆಸುತ್ತಿರುವ ಕಾರ್ಯಚಟುವಟಿಕೆಗಳನ್ನು ನಮ್ಮ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಸೇರಿದಂತೆ, ಕರ್ನಾಟಕ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಸಮುದಾಯಗಳ ವೇದಿಕೆ, ಕರ್ನಾಟಕ ರಾಜ್ಯ ಬೈಲ್ ಪತ್ತರ್ ಸಂಘ, ಕರ್ನಾಟಕ ರಾಜ್ಯ ಗೋಸಂಗಿ ಅಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ದೊಂಬಿದಾಸ ಸಂಘ, ಸೇರಿದಂತೆ ಹಲವು ಹಿಂದುಳಿದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಸಂಘಟನೆಗಳು ಮನಸಾರೆ ಶ್ಲಾಘಿಸಿವೆ. ಈ ಎಲ್ಲಾ ಸಂಘ ಸಂಸ್ಥೆಗಳು ಶ್ರೀಯುತರ ಮಾರ್ಗದರ್ಶನವನ್ನು ಹಲವು ವಿಧದಲ್ಲಿ ಪಡೆಯುತ್ತಿವೆ.
ಲೇಖಕರಾಗಿ : ಡಾ.ಅಮ್ಮಸಂದ್ರ ಸುರೇಶ್ ಇದುವರೆಗೂ 20 ಕೃತಿಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಮುಖ್ಯವಾದ ಕೃತಿಗಳು ಈ ಕೆಳಕಂಡಂತಿವೆ.
1. ಕನ್ನಡ ದಿನಪತ್ರಿಕೆಗಳಲ್ಲಿ ಕೃಷಿ ಸುದ್ದಿ (2013)
2. ಡಾ.ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ (2020)
3. ಕೊರೋನಾ ತಂದ ಅನಿವಾರ್ಯತೆಗಳು (2020)
4. ಅಂಬೇಡ್ಕರ್ ಬೆಳಕಿನಲ್ಲಿ ಪತ್ರಿಕೋದ್ಯಮ, ಸಿರಿ-ಸಮೃದ್ಧಿ ಪ್ರಕಾಶನ (2021)
5. ಅಭಿವೃದ್ಧಿಗಾಗಿ ಸಂವಹನ, ಹೆಚ್ ಎಸ್ ಆರ್ ಎ ಪ್ರಕಾಶನ, ಬೆಂಗಳೂರು (2021)
6. ದೀಮಂತ ಪತ್ರಕರ್ತ ಡಾ.ಬಿ.ಆರ್.ಅಂಬೇಡ್ಕರ್, ಸಿರಿ-ಸಮೃದ್ಧಿ ಪ್ರಕಾಶನ (2021)
7. ಮಹಾನಾಯಕನ ಮಹಾ ಕೊಡುಗೆಗಳು, ಮಹಿಮಾ ಪ್ರಕಾಶನ (2021)
8. ನೆಲೆ ಇಲ್ಲದವರು-ಮಹಿಮಾ ಪ್ರಕಾಶನ, ಮೈಸೂರು (2022)
9. ಮಾಧ್ಯಮ ಹಸಿ ಆಶಯ-ಹುಸಿ ನಿರೀಕ್ಷೆ-ವಂಶಿ ಪ್ರಕಾಶನ, ಬೆಂಗಳೂರು (2022)
10. ಅಸಮಾನತೆಯ ಉದಾರೀಕರಣ-ವಂಶಿ ಪ್ರಕಾಶನ, ಬೆಂಗಳೂರು (2022)
11. ಪತ್ರಿಕೋದ್ಯಮದ ತೇರು ಎಳೆದವರು-ಮಹಿಮಾ ಪ್ರಕಾಶನ ಮೈಸೂರು(2022)
12. ಮಹಾ ಮಾನವತಾವಾದಿ-ವಂಶಿ ಪ್ರಕಾಶನ, ಬೆಂಗಳೂರು.(2022)
13. ಪತ್ರಕರ್ತ ಗಾಂಧೀಜಿ-ಮಹಿಮಾ ಪ್ರಕಾಶನ(2023)
14. ಸಂವಿಧಾನ : ಜನ ಮಿಡಿತ-ನಾಡಿ ಮಿಡಿತ-ಮಹಿಮಾ ಪ್ರಕಾಶನ(2023)
15. ಶೋಷಣೆಗಳ ಅನ್ವೇಷಣೆ(2023)
16. ಆನೆಗೊಂದಿ ಪೇಟೆಯೊಳಗೆ-ಮಹಿಮಾ ಪ್ರಕಾಶನ, ಮೈಸೂರು (2024)
17. ಮನುಜಕುಲಂ ತಾನೊಂದೆವಲಂ-ಆದ್ರಿ ಪ್ರಕಾಶನ (2024)
18. ಪ್ರದರ್ಶಕ ಕಲೆಗಳು ಮತ್ತು ಮುದ್ರಣ ಮಾಧ್ಯಮ – ಆದ್ರಿ ಪ್ರಕಾಶನ (2024)
19. ಅಗ್ನಿಕುಂಡದಿಂದ ಎದ್ದು ಬಂದ ಚೇತನ (ಕಾದಂಬರ) – ಆದ್ರಿ ಪ್ರಕಾಶನ
ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾಗಿರುವ ಡಾ.ಅಮ್ಮಸಂದ್ರ ಸುರೇಶ್, ಕರ್ನಾಟಕ ರಾಜ್ಯಾದಾದ್ಯಂತ ತಮ್ಮದೇ ಆದ ಓದುಗ ಬಳಗವೊಂದನ್ನು ಸೃಷ್ಟಿಸಿಕೊಂಡಿದ್ದಾರೆ.
ಸಂಘಟನೆ :
ಉತ್ತಮ ಸಂಘಟಕರು ಮತ್ತು ಲೇಖಕರಾದ ಡಾ.ಅಮ್ಮಸಂದ್ರ ಸುರೇಶ್ ಪ್ರಸ್ತುತ ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯದ ಸೇವೆಯಲ್ಲಿ ತೊಡಗಿದ್ದಾರೆ. ಕರ್ನಾಟಕ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಸಮುದಾಯಗಳ ವೇದಿಕೆಯ ಮಾಧ್ಯಮ ಸಲಹೆಗಾರರಾಗಿ, ಕಲ್ಪತರು ಚಾರಿಟಬಲ್ ಟ್ರಸ್ಟ್ ಮತ್ತು ನೆರಳು ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾಗಿ ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ :
15.02.2023ರಂದು ನಡೆದ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಆಗುವ ಮೂಲಕ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕೃಷಿ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ವಿಷಯದಸಂಪನ್ಮೂಲ ವ್ಯಕ್ತಿ
ಕೃಷಿ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ, ಬಾಗಲಕೋಟೆ ವಿಶ್ವವಿದ್ಯಾಲಯ, ಶ್ರೀ ಸಿದ್ಧಾರ್ಥ ಮಾಧ್ಯಮ ಸಂಸ್ಥೆ ಸೇರಿದಂತೆ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದು ಹಲವು ವಿಚಾರ ಸಂಕಿರಣಗಳನ್ನು ಭಾಗವಹಿಸಿದ್ದಾರೆ.
ಪ್ರಶಸ್ತಿ-ಪುರಸ್ಕಾರಗಳು :
ಡಾ.ಅಮ್ಮಸಂದ್ರ ಸುರೇಶ್ ಅವರಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ, ಅವುಗಳಲ್ಲಿ ಮುಖ್ಯವಾದವುಗಳೆಂದರೆ,
1. ಕನ್ನಡ ಸಾಹಿತ್ಯ ಪರಿಷತ್ ದೀನ ದಲಿತರ ಮತ್ತು ಶೋಷಿತ ವರ್ಗಗಳ ರಕ್ಷಣೆಗೆ ಶ್ರಮಿಸುವ ವ್ಯಕ್ತಿಗಳ ಕುರಿತ ಸಾಹಿತ್ಯ ಕೃತಿಗೆ ನೀಡುವ 2022ನೇ ಸಾಲಿನ ‘ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ’
2. ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ 2024ನೇ ಸಾಲಿನ ದತ್ತಿ ಪ್ರಶಸ್ತಿ.
3. ಕರ್ನಾಟಕ ಜಾನಪದ ಪರಿಷತ್ತು ಕೊಡಮಾಡುವ 2024ನೇ ಸಾಲಿನ “ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ”.
4. ತುರುವೇಕೆರೆ ತಾಲ್ಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2022.
5. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಕೊಡ ಮಾಡುವ 2022ರ “ವಿಶ್ವಮಾನವ” ಪ್ರಶಸ್ತಿ.
6. ಕರ್ನಾಟಕ ಹೊಯ್ಸಳ ಸಂಘ ಮತ್ತು ಸವಿಗನ್ನಡ ಪತ್ರಿಕೆಗಳು ಕೊಡಮಾಡುವ “ಹೊಯ್ಸಳ ಪ್ರಶಸ್ತಿ”
7. ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಕೊಡ ಮಾಡುವ “ಸೇವಾ ಭೂಷಣ” ಮತ್ತು “ಕರುನಾಡ ರತ್ನ” ಪ್ರಶಸ್ತಿ.
8. ತುರುವೇಕೆರೆ ನಾಗರಿಕ ವೇದಿಕೆ ಕೊಡ ಮಾಡುವ “ಬರಹಬ್ರಹ್ಮ” ಪ್ರಶಸ್ತಿ.
9. ಮೈಸೂರಿನ ತನುಮನ ಸಂಸ್ಥೆ ಕೊಡ ಮಾಡುವ “ಬುದ್ಧನಾಡಭೂಷಣ ಪ್ರಶಸ್ತಿ.
10. ಮೈಸೂರಿನ ಜನಚೈತನ್ಯ ಫೌಂಡೇಷನ್ ಕೊಡಮಾಡುವ “ಜನಚೈತನ್ಯ ಪುರಸ್ಕಾರ”
11. ಬೆಂಗಳೂರಿನ ವಿಶ್ವೇಶ್ವರಯ್ಯ ಪ್ರತಿಷ್ಠಾನ ಕೊಡಮಾಡುವ “ವಿಶ್ವೇಶ್ವರಯ್ಯ ರಾಷ್ಟ್ರೀಯ ಪ್ರಶಸ್ತಿ”
12. ಡಾ. ಬಿ. ಆರ್. ಅಂಬೇಡ್ಕರ್ ಸದ್ಭಾವನ ಪ್ರಶಸ್ತಿ.
13. ಕೌಂಡಿನ್ಯ ಸಾಹಿತ್ಯ ಪ್ರಶಸ್ತಿ.
ಉಪನ್ಯಾಸಗಳು
1. “ಕೃಷಿ ಪತ್ರಿಕೋದ್ಯಮ”, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು, ದಿನಾಂಕ : 12.06.2021
2. “ಕ್ಷೀರಸಾಗರ ಜನಪರ ಹೋರಾಟಗಳು”,ಕ್ಷಿರಸಾಗರ ನೆನೆಪುಗಳು ಕಾರ್ಯಕ್ರಮ, ಕ್ಷೀರ ಸಾಗರರ ಸ್ನೇಹ ಬಳಗ, ಹೆಚ್.ಡಿ.ಕೋಟೆ, ದಿನಾಂಕ : 29.08.2021
3. “ಪತ್ರಕರ್ತರಾಗಿ ಗಾಂಧೀಜಿ”, ಶ್ರೀ ಚಿದಂಬರೇಶ್ವರ ಉಚಿತ ಗ್ರಂಥಾಲಯ,ತುರುವೇಕೆರೆ, ದಿನಾಂಕ : 02.10.2021
4. “ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳು”, ಕನ್ನಡ ಸಾಹಿತ್ಯ ಪರಿಷತ್ತು, ಹೆಗ್ಗಡದೇವನಕೋಟೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಗ್ಗಡದೇವನಕೋಟೆ, ದಿನಾಂಕ : 04.06.2022
5. “ಹಿಂದುಳಿದ ಅಲೆಮಾರಿ ಸಮುದಾಯಗಳ ಬದುಕು-ಭವಣೆ”, ರಾಜ್ಯ ಬಂಧುತ್ವ ಅಧಿವೇಶನ, ಮಾನವ ಬಂಧುತ್ವ ವೇದಿಕೆ ಕರ್ನಾಟಕ, ದಾವಣಗೆರೆ, ದಿನಾಂಕ : 08.09.2022
6. ಮೂಡಲಪಾಯ ಯಕ್ಷಗಾನದ ಬೆಳವಣಿಗೆಯಲ್ಲಿ ವಿಧ್ವಾನ್ ಕ.ನ.ದಾಸಾಚಾರ್ ಅವರ ಕೊಡುಗೆ, ಶ್ರೀ ರಂಗನಾಥ ಯಕ್ಷಗಾನ ಮಂಡಳಿ(ಮೂಡಲಪಾಯ), ಮುನಿಯೂರು, ತುರುವೇಕೆರೆ ತಾಲ್ಲೂಕು, ದಿನಾಂಕ : 20.12.2022
7. “ಮೈಸೂರಿನ ಶಿಕ್ಷಣ, ಸಾಹಿತ್ಯ, ಜನಪದ ಮತ್ತು ಸಂಸ್ಕೃತಿ, ಮೈಸೂರು ನುಡಿ ಸಡಗರ, ಚೇತನ ಫೌಂಡೇಷನ್, ಕರ್ನಾಟಕ, ದಿನಾಂಕ : 16.02.2025
8. “ಪ್ರದರ್ಶನ ಕಲೆಗಳು ಮತ್ತು ಮುದ್ರಣ ಮಾಧ್ಯಮ”, ಡಾ. ಗಂಗೂಬಾಯಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು, ದಿನಾಂಕ : 06.04.2025
9. “ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಸಂಪಾದಕತ್ವದ ಪತ್ರಿಕೆಗಳು ಹಾಗೂ ಅಂದಿನ ಸಂದರ್ಭದ ವಿಶ್ಲೇಷಣೆ”, ದಲಿತ ಸಂಸ್ಕೃತಿ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ದಿನಾಂಕ : 15.04.2025
10. “ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ”, ಶ್ರೀ ಸಿದ್ಥಾರ್ಥ ಪ್ರಥಮ ದರ್ಜೆ ಕಾಲೇಜು ಮತ್ತು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು, ದಿನಾಂಕ : 26.04.2025
11. “ಕೃಷಿ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ”, ಬಾಗಲಕೋಟೆ ವಿಶ್ವವಿದ್ಯಾಲಯ, ಜಮಖಂಡಿ, ದಿನಾಂಕ : 30.05.2025
12. ”ಅಭಿವೃದ್ಧಿ ಸಂವಹನ ವಿವಿಧ ಮಾಧ್ಯಮಗಳ ಪಾತ್ರ”, ಶ್ರೀ ಸಿದ್ಥಾರ್ಥ ಪ್ರಥಮ ದರ್ಜೆ ಕಾಲೇಜು ಮತ್ತು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು, ದಿನಾಂಕ : 28.06.2025
13. “ಮಾಧ್ಯಮಗಳಲ್ಲಿ ಅಭಿವೃದ್ಧಿ ಸುದ್ಧಿಗಳು”, ಶ್ರೀ ಸಿದ್ಥಾರ್ಥ ಪ್ರಥಮ ದರ್ಜೆ ಕಾಲೇಜು ಮತ್ತು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು, ದಿನಾಂಕ : 30.06.2025
14. “ಸದೃಢ ಸುಸ್ಥಿರ ಸಮಾಜದಲ್ಲಿ ಸಮಾನತೆ ಮತ್ತು ಮಹಿಳಾ ಸಬಲೀಕರಣಗಳನ್ನು ಸಾಧಿಸುವಲ್ಲಿ ಮಾಧ್ಯಮಗಳ ಪಾತ್ರ” ಮೈಸೂರು ಸಾಹಿತ್ಯ ಸಂಭ್ರಮ-2025, ದಿನಾಂಕ :05.07.2025
ಸಂಪರ್ಕ ವಿಳಾಸ
ಡಾ. ಅಮ್ಮಸಂದ್ರ ಸುರೇಶ್
315. ಓ ಬ್ಲಾಕ್, ಹೆಚ್ ಪಿ ಓ ಮತ್ತು ಆರ್ ಎಂ ಎಸ್ ಬಡಾವಣೆ
ಶಕ್ತಿನಗರ, ಮೈಸೂರು-570029
ಮೊಬೈಲ್ : 9448402346
ಇ-ಮೇಲ್ : sureshammasandrawriter@gmail.com
***