ನಿಯರ್‌ಬೈ ಶೇರ್
ನಿಯರ್ಬೈ ಶೇರ್ (ಆಂಗ್ಲ: Nearby Share) ಎನ್ನುವುದು ಗೂಗಲ್ ಸಂಸ್ಥೆ ಅಭಿವೃದ್ಧಿಪಡಿಸಿರುವ, ಕಡತಗಳನ್ನು ಹಂಚಿಕೊಳ್ಳುವ ಒಂದು ತಂತ್ರಾಂಶವಾಗಿದೆ.
ಆಪಲ್ ಸಂಸ್ಥೆಯ ಏರ್‌ಡ್ರಾಪ್ ಮತ್ತು ಆಂಡ್ರಾಯ್ಡ್ ಬೀಮ್‌ನಂತೆಯೇ(ಇದೂ ಸಹ ಗೂಗಲ್‌ನವರದ್ದೇ ಉತ್ಪನ್ನ) ಕಾರ್ಯನಿರ್ವಹಿಸುವ ಈ ತಂತ್ರಾಂಶ, ಬ್ಲೂಟೂತ್ ಮತ್ತು ವೈಫೈ ಜಾಲಬಂಧವನ್ನು ಬಳಸಿಕೊಂಡು ವಿವಿಧ ಪ್ರಕಾರದ ದತ್ತಾಂಶಗಳನ್ನು ಒಂದು ಸಾಧನದಿಂದ ಇನ್ನೊಂದು ಸಾಧನಕ್ಕೆ ವರ್ಗಾಯಿಸಲು ಅಥವಾ ನಕಲಿಸಲು ಈ ತಂತ್ರಾಂಶ ಅನುವು ಮಾಡಿಕೊಡುತ್ತದೆ[೧].
ಅಭಿವೃದ್ಧಿಪಡಿಸಿದವರು | ಗೂಗಲ್ |
---|---|
ಮೊದಲು ಬಿಡುಗಡೆ | ಅಗಸ್ಟ್ ೪, ೨೦೨೦ |
ಕಾರ್ಯಾಚರಣಾ ವ್ಯವಸ್ಥೆ | ಆಂಡ್ರಾಯ್ಡ್ ೬(ಮಾರ್ಷ್‌ಮಲೊ) ಮತ್ತು ನಂತರದ ಆವೃತ್ತಿಗಳಲ್ಲಿ ಲಭ್ಯ. |
ಗಣಕಯಂತ್ರದಲ್ಲಿ | ಆಂಡ್ರಾಯ್ಡ್ ಮತ್ತು ಕ್ರೋಮ್ ಕಾರ್ಯಾಚರಣಾ ವ್ಯವಸ್ಥೆ |
Replaces | ಆಂಡ್ರಾಯ್ಡ್ ಬೀಮ್ |
ವಿಧ | Utility software |
ಆರಂಭ
[ಬದಲಾಯಿಸಿ]ಅಗಷ್ಟ್ ೪ ೨೦೨೦ರಂದು ನೀಯರ್‌ಬೈ ಶೇರ್ ಅನ್ನು ಅಧೀಕೃತವಾಗಿ ಬಳಕೆದಾರರಿಗೆ ಬಿಡುಗಡೆ ಮಾಡಲಾಯಿತು.[೨] ಈ ತಂತ್ರಾಂಶವು ಆಂಡ್ರಾಯ್ಡ್ ೬(ಮಾರ್ಷ್‌ಮಲೊ) ಮತ್ತು ಅದರ ನಂತರದ ಆವೃತ್ತಿಯ ಕಾರ್ಯಾಚರಣ ವ್ಯವಸ್ಥೆ ಇರುವ ಫೋನ್‌ಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ[೩]. ಅದರೆ ಗೂಗಲ್ ಸಂಸ್ಥೆಯ ತಂತ್ರಜ್ಞರು, ಆಂಡ್ರಾಯ್ಡ್ ೬ಗಿಂತ ಹಿಂದಿನ ಆವೃತ್ತಿ ಇರುವ ಹಳೆಯ ಫೋನಿನಲ್ಲಿಯೂ ಈ ತಂತ್ರಾಂಶ ಕೆಲಸ ಮಾಡುವಂತೆ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ.
ಕೆಲಸ ಮಾಡುವ ಬಗೆ
[ಬದಲಾಯಿಸಿ]ಆಂಡ್ರಾಯ್ಡ್ ಫೋನ್ ಮತ್ತು ಗಣಕಯಂತ್ರದ ಕಾರ್ಯನಿರ್ವಹಣ ತಂತ್ರಾಂಶವಾದ ಕ್ರೋಮ್ ಒಎಸ್- ಎರಡರಲ್ಲೂ ಈ ತಂತ್ರಾಂಶವು ಕಾರ್ಯನಿರ್ವಹಿಸುತ್ತದೆ. ನೀಯರ್‌ಬೈ ಶೇರ್ ಮುಖಾಂತರ ಎರಡು ಆಂಡ್ರಾಯ್ಡ್ ಸಾಧನಗಳ ನಡುವೆ ಅಥವಾ ಕ್ರೋಮ್ ಕಾರ್ಯಾಚರಣಾ ವ್ಯವಸ್ಥೆ ಹೊಂದಿರುವ ಎರಡು ಗಣಕಯಂತ್ರಗಳ ನಡುವೆ ಅಥವಾ ಆಂಡ್ರಾಯ್ಡ್ ಫೋನ್-ಕ್ರೋಮ್ ಗಣಕಯಂತ್ರದ ನಡುವೆ ಚಿತ್ರಗಳು, ವೀಡಿಯೊಗಳು, ಪಠ್ಯ, ಸಂಪರ್ಕ ಮಾಹಿತಿ, ಸ್ಥಳನಿರ್ದೇಶಾಂಕಗಳು, ತಂತ್ರಾಂಶಗಳು, ಮತ್ತಿತರೆ ವಿಧದ ದತ್ತಾಂಶಗಳನ್ನು ಹಂಚಿಕೊಳ್ಳಬಹುದು[೪]. ಈ ತಂತ್ರಾಂಶವನ್ನು ಬಳಸುವುದು ಬಹಳ ಸುಲಭವಿದ್ದು, ಮೊಬೈಲ್ ಅಥವಾ ಗಣಕಯಂತ್ರದಲ್ಲಿರುವ ನೀಯರ್‌ಬೈ ಶೇರ್ ತಂತ್ರಾಂಶವನ್ನು ತೆರೆದು ಅದಕ್ಕೆ ಕೆಲವೇ ಕೆಲವು ಮತ್ತು ಸರಳವಾದ ನಿರ್ದೇಶನವನ್ನು ನೀಡುವ ಮೂಲಕ ಈ ಸೌಲಭ್ಯವನ್ನು ಬಳಸಿ ಕಡತ ವರ್ಗಾವಣೆ ಮಾಡಬಹುದು.
ನೀಯರ್‌ಬೈ ಶೇರ್ ತೆರೆದಾಗ ತಂತ್ರಾಂಶವು ಮೊದಲಿಗೆ ಜಾಲಬಂಧದ ವ್ಯವಸ್ಥೆಗಳಾದ ಬ್ಲೂಟೂತ್ ಮತ್ತು ವೈಫೈ ಜಾಲಬಂಧವನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಂಡು ಯಾವುದರ ಮೂಲಕ ದತ್ತಾಂಶವನ್ನು ವೇಗವಾಗಿ ಕಳಿಸಬಹುದು ಎಂದು ಪರೀಕ್ಷಿಸುತ್ತದೆ. ತದನಂತರ ತನಗೆ ಸೂಕ್ತವಾದ ಜಾಲಬಂಧವನ್ನು ಆಯ್ದುಕೊಳ್ಳುತ್ತದೆ. ನಂತರ ದತ್ತಾಂಶವನ್ನು ಸ್ವೀಕರಿಸುವ ಸಾಧನವು ತಾನು ಆಯ್ಕೆ ಮಾಡಿಕೊಂಡ ಜಾಲಬಂಧದಲ್ಲಿ ಇದೆಯೇ ಎಂದು ಹುಡುಕುತ್ತದೆ ಮತ್ತು ಆ ಸಾಧನದೊಂದಿಗೆ ಬೆಸೆದುಕೊಳ್ಳಲು(Pairing) ಪ್ರಯತ್ನಿಸುತ್ತದೆ.
ದತ್ತಾಂಶವನ್ನು ಸ್ವೀಕರಿಸುವ ಸಾಧನದ ಮಾಲಿಕ, ದತ್ತಾಂಶವನ್ನು ಕಳಿಸುವ ಸಾಧನಕ್ಕೆ ತನ್ನ ಸಾಧನವನ್ನು ಬೆಸೆದುಕೊಳ್ಳಲು ಅನುಮತಿ ನೀಡುತ್ತಾನೆ. ಬೆಸೆಯುವಿಕೆ ಯಶಸ್ವಿಯಾದ ನಂತರ ದತ್ತಾಂಶವು ಒಂದು ಸಾಧನದಿಂದ ಇನ್ನೊಂದು ಸಾಧನಕ್ಕೆ ವರ್ಗಾವಣೆ ಆಗುತ್ತದೆ. ದತ್ತಾಂಶ ಪ್ರೇಷಕ ಸಾಧನವು ದತ್ತಾಂಶ ಗ್ರಾಹಕದೊಂದಿಗೆ ಬೆಸೆದುಕೊಳ್ಳಲು ಅದರ ಮಾಲಿಕ ಅನುಮತಿ ನೀಡಿದ ಹೊರತು ದತ್ತಾಂಶದ ವರ್ಗಾವಣೆ ಸಾಧ್ಯವಾಗುವುದಿಲ್ಲ.
ಸಾಮಾನ್ಯವಾಗಿ, ದೊಡ್ಡ ಗಾತ್ರದ ಕಡತಗಳನ್ನು ಒಂದು ಸಾಧನದಿಂದ ಇನ್ನೊಂದು ಸಾಧನಕ್ಕೆ ವರ್ಗಾಯಿಸಲು ಅಥವಾ ನಕಲಿಸಲು ವೈಫೈ ಜಾಲಬಂಧವನ್ನು ಬಳಸಲಾಗುತ್ತದೆ. ಚಿಕ್ಕ ಗಾತ್ರದ ಕಡತಗಳನ್ನು ವರ್ಗಾಯಿಸಲು ಬ್ಲೂಟೂತ್ ಅಥವಾ ಎನ್ ಎಫ್ ಸಿಯನ್ನು ಬಳಸಲಾಗುತ್ತದೆ. ವೈಫೈ ಸಂಪರ್ಕದ ಮೂಲಕ 600ಎಂಬಿ/ಸೆ. ವೇಗದಲ್ಲಿ ಕಡತಗಳನ್ನು ವರ್ಗಾಯಿಸಬಹುದು[೫].
ಇವನ್ನೂ ಓದಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "How to use Nearby Share on your Android phone". androidcentral.com. Android Central. Retrieved 15 April 2022.
- ↑ "Instantly share files with people around you with Nearby Share". blog.google. Google. Retrieved 15 April 2022.
- ↑ "Instantly share files with people around you with Nearby Share". blog.google. Google. Retrieved 15 April 2022.
- ↑ "Instantly share files with people around you with Nearby Share". blog.google. Google. Retrieved 15 April 2022.
- ↑ "How Fast Is a Wi-Fi Network?". Lifewire. Dotdash Meredith. Retrieved 15 April 2022.