ವಿಷಯಕ್ಕೆ ಹೋಗು

ಅರುಣ್ ಲಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯ:Bhoomika563/ನನ್ನ ಪ್ರಯೋಗಪುಟ ಇಂದ ಪುನರ್ನಿರ್ದೇಶಿತ)
ಅರುಣ್ ಲಾಲ್
ವಯಕ್ತಿಕ ಮಾಹಿತಿ
ಹುಟ್ಟು (1955-08-01) ೧ ಆಗಸ್ಟ್ ೧೯೫೫ (ವಯಸ್ಸು ೬೯)
ಮೊರಾದಾಬಾದ್, ಉತ್ತರ ಪ್ರದೇಶ, ಭಾರತ
ಬ್ಯಾಟಿಂಗ್ರೈ-ಹ್ಯಾಂಡ್ ಬ್ಯಾಟ್
ಬೌಲಿಂಗ್ರೈಟ್-ಆರ್ಮ್ ಮಧ್ಯಮ
ಪಾತ್ರಬ್ಯಾಟ್ಸಮನ್
ಸಂಬಂಧಗಳುಜಗದೀಶ್ ಲಾಲ್ (ತಂದೆ) , ಮುನಿ ಲಾಲ್ (ಚಿಕ್ಕಪ್ಪ), ಆಕಾಶ್ ಲಾಲ್ (ಸೋದರಸಂಬಂಧಿ)
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೧೯೮೧/೮೨-೧೯೯೫/೯೬ಬಂಗಾಳ
೧೯೭೭/೭೮-೧೯೮೦/೮೧ದೆಹಲಿ
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ಸ್ ಒಡಿಐ ಎಫ್ಸಿ ಲಿಸ್ಟ್-ಎ
ಪಂದ್ಯಗಳು ೧೬ ೧೩ ೧೫೬ ೬೫
ಗಳಿಸಿದ ರನ್ಗಳು ೭೨೯ ೧೨೨ ೧೦೪೨೧ ೧೭೩೪
ಬ್ಯಾಟಿಂಗ್ ಸರಾಸರಿ ೨೬.೦೩ ೯.೩೮ ೪೬.೯೪ ೨೮.೯೦
೧೦೦/೫೦ -/೬ -/೧ ೩೦/೪೩ -/೧೨
ಉನ್ನತ ಸ್ಕೋರ್ ೯೩ ೫೧ ೨೮೭ ೯೦
ಎಸೆತಗಳು ೧೬ - ೧೮೫೬ ೬೯೯
ವಿಕೆಟ್‌ಗಳು - - ೨೧ ೧೪
ಬೌಲಿಂಗ್ ಸರಾಸರಿ - - ೨೧ ೪೮.೭೮
ಐದು ವಿಕೆಟ್ ಗಳಿಕೆ - - - -
ಹತ್ತು ವಿಕೆಟ್ ಗಳಿಕೆ - n/a - -
ಉನ್ನತ ಬೌಲಿಂಗ್ - - ೪/೭೯ ೩/೩೮
ಹಿಡಿತಗಳು/ ಸ್ಟಂಪಿಂಗ್‌ ೧೩/- ೪/- ೧೪೫/- ೨೨/-
ಮೂಲ: Cricinfo, ಮೇ ೧೬ ೨೦೧೬

ಅರುಣ್ ಲಾಲ್ ಘೋಷ್ (೧ ಆಗಸ್ಟ್ ೧೯೫೫) ಭಾರತದ ನಿವೃತ್ತ ಕ್ರಿಕೆಟ್ ಆಟಗಾರ ಹಾಗೂ ವಿಶ್ಲೇಷಣಕಾರ. ಅವರು ಕ್ರಿಕೆಟ್ ಆಟದಲ್ಲಿ ಉತ್ತಮ ಕೌಶಲ್ಯ ತೋರಿದ ಬಲಗೈ ಕ್ರಿಕೆಟ್ ಆಟಗಾರ ಮತ್ತು ನಿಧಾನ ವೇಗದ ಬಲಗೈ ಬೌಲರ್.

ವೈಯಕ್ತಿಕ ಜೀವನ

[ಬದಲಾಯಿಸಿ]

ಅರುಣ್ ಅವರು ೧೯೫೫ ಅಗಸ್ಟ್ ೧ ಉತ್ತರ ಪ್ರದೇಶದ ಮುರಾದಾಬಾದ್ ನಲ್ಲಿ ಜನಿಸಿದರು. ತಂದೆ ಜಗದೀಶ ಲಾಲ್ ವೃತ್ತಪತ್ರಿಕೆ ಹಾಗೂ ಅಂತರಜಾಲ ಅಂಕಣದಲ್ಲಿ ನಿಯಮಿತವಾಗಿ ಕ್ರಿಕೆಟ್ ಆಟದ ವಿಶ್ಲೇಷಣೆ ಬರೆಯುತ್ತಾರೆ. ಅವರು ೧೯೭೯ ರಲ್ಲಿ ದೆಹಲಿಯಿಂದ ಕಲ್ಕತ್ತಾಗೆ ತೆರಳಿದರು ಮತ್ತು ಕ್ರಿಕೆಟ್ ಅಕಾಡೆಮಿಯೊಂದನ್ನು ಪ್ರಾರಂಭಿಸಿದರು.ಅರುಣ್ ಲಾಲ್ ಅವರು ಅಜ್ಮೀರ್ ಮೇಯೋ ಕಾಲೇಜ್ ನಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದರು.

ವೃತ್ತಿ ಜೀವನ

[ಬದಲಾಯಿಸಿ]

ಅವರು ೧೯೮೨ ಮತ್ತು ೧೯೮೯ರ ನಡುವೆ ಬಲಗೈ ಬ್ಯಾಟ್ ಮೆನ್ ಆಗಿ ಭಾರತ ತಂಡದಲ್ಲಿ ಆಡಿದರು.೧೯೮೨ರಲ್ಲಿ ಶ್ರೀಲ೦ಕಾದ ವಿರುದ್ದ ಮದ್ರಾಸ್ನಲ್ಲಿ ೬೩ ರನ್ಗಳಿಸಿ,ಸುನಿಲ್ ಗವಾಸ್ಕರ್ ಅವರೊಂದಿಗೆ ೧೫೬ ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.ಅವರ ಮುಂದಿನ ಟೆಸ್ಟ್ನಲ್ಲಿ ಅವರು ಪಾಕಿಸ್ತಾನದ ವಿರುದ್ದ ೫೧ ಅಂಕಗಳನ್ನು ಗಳಿಸಿದರು ಮತ್ತು ೧೦೫ ರನ್ಗಾಗಿ ಸುನಿಲ್ ಗವಾಸ್ಕರ್ ಅವರ ಆರಂಭಿಕ ಪಾಲುದಾರಿಕೆಯನ್ನು ಹಂಚಿಕೊಂಡರು. ೧೯೮೭ರಲ್ಲಿ ಕಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದಲ್ಲಿ ೯೩ ರನ್ ಗಳಿಸಿದರು.

ಅವರ ಏಕದಿನ ಸರಾಸರಿ ೯.೩೬ ರಷ್ಟಾಗಿತ್ತು.

ಲಾಲ್ ಏಳು ವರ್ಷಗಳ ಅಂತರಾಷ್ಟ್ರೀಯ ವೃತ್ತಿಜೀವನದ ಸಮಯದಲ್ಲಿ ಅವರು ಬಲಶಾಲಿಗಳಾಗಿ ಹೆಸರು ವಾಸಿಯಾಗಿದ್ದರು. ಅವರು ಭಾರತಕ್ಕೆ ಆರು ಟೆಸ್ಟ್ಗಳಲ್ಲಿ ಅರ್ಧಶತಕಗಳನ್ನು ಬಾರಿಸಿದರು.೧೯೮೨ರಲ್ಲಿ ಶ್ರೀಲಂಕಾ ವಿರುದ್ಧದ ಪ್ರಥಮ ಪಂದ್ಯದಲ್ಲಿ ಮತ್ತು ೧೯೮೭ ರಲ್ಲಿ ಈಡನ್ ಗಾರ್ಡನ್ಸ್ನಲ್ಲಿ ನಡೆದ ಅದೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳಲ್ಲಿ ಮತ್ತು ೧೯೮೮-೮೯ ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತಕ್ಕೆ ತಮ್ಮ ಅಂತಿಮ ಪಂದ್ಯಗಳನ್ನು ಆಡಿದರು.ಭಾರತೀಯ ದೇಶೀಯ ಮಟ್ಟದಲ್ಲಿ ಅವರು ಬಂಗಾಳ ಕ್ರಿಕೆಟ್ ತಂಡ ಮತ್ತು ದೆಹಲಿ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದರು, ಅಲ್ಲಿ ಅವರು ೧೦,೦೦೦ರನ್ಗಳನ್ನು ಗಳಿಸಿದ್ದಾರೆ ಮತ್ತು ಅವರು ೨೮೭ ಅಂಕಗಳೊಂದಿಗೆ ೪೬.೯೪ ಸರಾಸರಿಯಲ್ಲಿದ್ದಾರೆ. ಅವರು ೨೦೦೧ರಲ್ಲಿ ದೇಶೀಯ ಕ್ರಿಕೆಟ್ನಿಂದ ರಾಜೀನಾಮೆ ಮಾಡಿದರು. ಅವರ ಕೊನೆಯ ಕ್ಲಬ್ ಪಂದ್ಯವು ಪೂರ್ವ ಬಂಗಾಳದೊಂದಿಗೆ ಆಗಿತ್ತು.ಲಾಲ್ ಅವರು ೪೫ ನೇ ವಯಸ್ಸಿನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ನಿವೃತ್ತಿಯನ್ನು ಘೋಷಿಸಿದರು.[]

ಸಾಧನೆಗಳು

[ಬದಲಾಯಿಸಿ]

೧೯೮೯-೯೦ರ ರಣಜಿ ಟ್ರೋಫಿ ಫೈನಲ್ನಲ್ಲಿ ಲಾಲ್ ಅವರು ಅಜೇಯ ೫೦ ರನ್ನುಗಳನ್ನು ಬಾರಿಸಿದರು.ಅವರು ೧೯೯೫ ರವರೆಗೂ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು ಮತ್ತು ಕ್ಲಬ್ ಕ್ರಿಕೆಟ್ನಲ್ಲಿ ಮತ್ತಷ್ಟು ಆರು ವರ್ಷಗಳ ಕಾಲ ಸಕ್ರಿಯರಾಗಿದ್ದರು. ರಾಜ್ಯ ಮತ್ತು ವಲಯ ಮಟ್ಟದ ಪಂದ್ಯಗಳನ್ನು ಆಡುವ ಸಂದರ್ಭದಲ್ಲಿ ಅವರು ಉತ್ತಮ ಆಟವನ್ನು ಪ್ರದರ್ಶಿಸಿದ್ದರು. ೧೯೮೯ರಲ್ಲಿ ೫೧ವರ್ಷಗಳ ನಂತರ ಬಂಗಾಳಕ್ಕೆ ತನ್ನ ಮೊದಲ ರಣಜಿ ಟ್ರೋಫಿಯನ್ನು ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ದುಲೀಪ್ ಮತ್ತು ದಿಯೋಧರ್ ಟ್ರೋಫಿಯಲ್ಲಿ ಪೂರ್ವ ವಲಯದಲ್ಲಿನ ವಿಜಯಗಳಲ್ಲಿ ಅವರು ಪ್ರಮುಖ ಪಾತ್ರವಹಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ, ಬಂಗಾಳ ಮತ್ತು ಪೂರ್ವ ವಲಯವನ್ನು ಎಂಭತ್ತರ ದಶಕದಲ್ಲಿ ಮತ್ತು ತೊಂಬತ್ತರ ದಶಕದ ಆದಿಯಲ್ಲಿ ರಾಷ್ಟ್ರೀಯ ದೃಷ್ಟಿಕೋನದಲ್ಲಿ ಪರಿಗಣಿಸುವ ಒಂದು ಶಕ್ತಿಗೆ ಅವರು ಜವಾಬ್ದಾರರಾಗಿರುತ್ತಾರೆ. ಅವರು ೧೯೮೨ ರಿಂದ ೧೯೮೯ ರವರೆಗೂ ಭಾರತಕ್ಕೆ ೧೬ ಟೆಸ್ಟ್ಗಳನ್ನು ಆಡಿದ್ದರು, ಅವರು ೨೬೯ ರ ಸರಾಸರಿಯಲ್ಲಿ ೭೨೯ ರನ್ಗಳನ್ನು ಗಳಿಸಿದರು.

೨೦೧೬ರಲ್ಲಿ, ದವಡೆ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅವರು ಸಫಲರಾದರು.ಆದರೆ ಜನವರಿ ೨೦೧೬ ರಿಂದ ಅವರು ವ್ಯಾಖ್ಯಾನ ಬಾಕ್ಸ್ನಿಂದ ಹೊರಗುಳಿದಿದ್ದಾರೆ.ಲಾಲ್ ಅವರು ಬಳಲುತ್ತಿರುವ ಕ್ಯಾನ್ಸರ್ ಬಹಳ ಅಪರೂಪವಾದದ್ದು ಮತ್ತು ಅಪಾಯಕಾರಿ.[] ಕ್ರಿಕೆಟ್ ವಿಶ್ಲೇಷಣೆಯ ಕುರಿತಾದ ಅವರ ಅಂಕಣಗಳು ನಿಯತಕಾಲಿಕ ಮತ್ತು ಅಂತರಜಾಲ ಕಾಲಮ್ಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅವರು ೧೯೭೯ ರಲ್ಲಿ ದೆಹಲಿಯಿಂದ ಕಲ್ಕತ್ತಾಗೆ ತೆರಳಿದರು ಮತ್ತು ಕ್ರಿಕೆಟ್ ಅಕಾಡೆಮಿಯೊಂದನ್ನು ಪ್ರಾರಂಭಿಸಿದರು[]

ಉಲ್ಲೇಖಗಳು

[ಬದಲಾಯಿಸಿ]
  1. http://www.espncricinfo.com/india/content/story/106122.html
  2. http://www.espncricinfo.com/india/content/story/1002061.html
  3. "ಆರ್ಕೈವ್ ನಕಲು". Archived from the original on 2016-06-02. Retrieved 2018-10-29.