ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:ಬೇಲೂರು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯರ ಚರ್ಚೆಪುಟ:Sanjay 153414/ಬೇಲೂರು ಇಂದ ಪುನರ್ನಿರ್ದೇಶಿತ)

ಚಿತ್ರಗಳು

[ಬದಲಾಯಿಸಿ]

ದೇವಸ್ಥಾನದ ಚಿತ್ರಗಳನ್ನು ಜೋಡಿಸುವುದರ ಬಗ್ಗೆ ಚರ್ಚೆ ಮಾಡಬೇಕಾಗಿದೆ. ಜೊತೆಗೆ ಒಂದು ಕರ್ನಾಟಕದ ಭೂಗೋಳದ ಚಿತ್ರ ಮಾಡಿ ಅದರಲ್ಲಿ ಬೇಲೂರಿನ ನಕ್ಷೆಯನ್ನು ಮಾಡಿದರೆ ಉಪಯುಕ್ತವೆಂದು ನನ್ನ ಅಭಿಪ್ರಾಯ. ಇದನ್ನೇ ಟೆಂಪ್ಲೇಟಾಗಿಟ್ಟುಕೊಂಡು ಬೇರೆ ಜಾಗಗಳಿಗೂ ನಕ್ಷೆಯಾಗಿ ಉಪಯೋಗಿಸಬಹುದು.
--ಅರುಣ ಪ್ರಕಾಶ ೧೧:೦೭, ೧೫ January ೨೦೦೭ (UTC)

ಆಂಗ್ಲ ವಿಕಿಯಲ್ಲಿರುವ Blank locater image ರೀತಿಯೇ? ಅದನ್ನೇ ಯಾಕೆ ಉಪಯೋಗಿಸಬಾರದು? ಅದಕ್ಕೆ ಸಂಬಂಧಪಟ್ಟ ಟೆಂಪ್ಲೇಟು ಇಲ್ಲಿ ಇದೆ. ಮತ್ತೊಂದು ವಿಷಯ, ಚರ್ಚೆ ಪುಟಗಳಲ್ಲಿ ಎಲ್ಲರೂ ತಮ್ಮ comments ನಂತರ ಸಹಿ ಹಾಕುವುದು ಒಳ್ಳೆಯದು. ಇದರಿಂದ ಯಾರು ಏನು ಹೇಳಿದರು ಎಂದು ಒಮ್ಮೆಲೆ ತಿಳಿಯುತ್ತದೆ. ಸಹಿ ಹಾಕಲು ನಾಲ್ಕು ಬಾರಿ Tilde (~~~~) ಸಂಜ್ಞೆಯನ್ನು ಒತ್ತಬೇಕು. (The key is usually above the tab key on most keyboards) ಶುಶ್ರುತ \ಮಾತು \ಕತೆ ೦೩:೧೦, ೧೫ January ೨೦೦೭ (UTC)

ಕ್ಷಮಿಸಿ ಶುಶ್ರುತ ಅವರೆ, ನಾನು ಇಲ್ಲಿಗೆ ಹೊಸಬ. ಇನ್ನ್ಮೇಲೆ ಆದಷ್ಟು ಸಹಿ ಮಾಡುವುದನ್ನು ಕಲೀತೀನಿ :-)
--ಅರುಣ ಪ್ರಕಾಶ ೧೧:೦೭, ೧೫ January ೨೦೦೭ (UTC)

ಹೌದು, ನೀವು ಹೇಳಿರುವ ಹಾಗೆಯೇ. ಆದರೆ ಭಾರತದ ಭೂಪಟದ ಬದಲು ಕರ್ನಾಟಕ/ದಕ್ಷಿಣ ಭಾರತ ಇದ್ದರೆ ಇನ್ನೂ ವಾಸಿ ಎಂದೆನಿಸುತ್ತದೆ. ಕಾರಣ ಆಗ ಹತ್ತಿರದ ಊರುಗಳನ್ನೂ ತೋರ ಬಹುದು. --ಅರುಣ ಪ್ರಕಾಶ ೧೧:೧೦, ೧೫ January ೨೦೦೭ (UTC)

ಇದೊಂದು ಉತ್ತಮ ಸಲಹೆ. ಆದರೆ ನನಗೆ ಇದನ್ನು ಹೇಗೆ ಮಾಡುವುದು ಎಂದು ತಿಳಿಯುತ್ತಿಲ್ಲ. ನಿಮಗೆ ತಿಳಿದಿದ್ದರೆ ನೀವು ಶುರು ಮಾಡಿ. ಬೇರೆಯವರು ಯಾವ ರೀತಿ ನಿಮಗೆ ಸಹಾಯ ಒದಗಿಸಬಹುದೆಂದು ತಿಳಿಸಿದರೆ ನಾನು ಕೈಲಾದಷ್ಟು ಸಹಾಯ ಮಾಡುವೆ. ಬೇರೆಯವರ ಗಮನಕ್ಕೆ ತರಲು ನಾನಿದನ್ನು ಅರಳಿಕಟ್ಟೆಯ ಇತರೆ ಚರ್ಚೆ ಪುಟದಲ್ಲಿ mention ಮಾಡಿರುವೆ. ಮುಂದಿನ ಮಾತುಕತೆಯನ್ನು ಅಲ್ಲಿ ಮುಂದುವರೆಸೋಣ.ಶುಶ್ರುತ \ಮಾತು \ಕತೆ ೧೭:೩೬, ೧೫ January ೨೦೦೭ (UTC)