ವಿಷಯಕ್ಕೆ ಹೋಗು

ಚರ್ಚೆಪುಟ:ಡೊನಾಲ್ಡ್ ಬ್ಲ್ಯಾಕ್‌

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾನ್ ಬ್ಲಾಕಿ ಎಂಬ ವ್ಯಕ್ತಿ ಆಸ್ಟ್ರೇಲಿಯದ ದಕ್ಷಿಣ ಮೆಲ್ಬೋರ್ನಲ್ಲಿ ಏಪ್ರಿಲ್ ೫ನೆ ತಾರೀಕು ೧೮೮೨ರಂದು ಜನಿಸಿದನು. ಇವನು ಮುಂದೆ ೧೯೨೮ರಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ಚೊಚ್ಚಲ ಪಂದ್ಯವನ್ನು ಆಡಿದನು, ಆಗ ಅವನಿಗೆ ೪೬ ವರ್ಷಗಳು ಆಗಿದ್ದು ಅವನು ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ಚೊಚ್ಚಲ ಪಂದ್ಯವನ್ನು ಆಡಿದ ಅತಿ ಹೆಚ್ಚು ವಯಸ್ಸಿಗನೆಂಬ ಹಿರಿಮೆಗೆ ಪಾತ್ರನಾದನು. ಇದು ಅವನ ಛಲ ಹಾಗು ತನಗೆ ಕ್ರೀಡೆಯ ಮೇಲೆ ಇರುವ ಪ್ರೀತಿಯನ್ನು ತೋರುತ್ತದೆ.

       ಡಾನ್ ಬ್ಲಾಕಿಯ ಜನನದ ದಿನಾಂಕದಿಂದ ೧೧೯ ವರ್ಷಗಳು ಮುಂದೆ ಹೋದರೆ, ಅಂದರೆ ಏಪ್ರಿಲ್ ೫ನೆ ತಾರೀಕು ೨೦೦೧ರಂದು ಸುಮುಖ್ ವಿ ಮಾಕಂ ಎಂಬ ವ್ಯಕ್ತಿ ಜನಸಿದನು, ಆ ವ್ಯಕ್ತಿಯು ಬೇರೆ ಯಾರು ಅಲ್ಲ ಅದು ನಾನೆ, ಅದಕ್ಕೆ ಏನೋ, ನಾನು ಸಹ ಕ್ರೀಡಾ ಪ್ರೀಮಿ. ನಾನು ನನ್ನ ಬಾಲ್ಯದಿಂದಲು ನನ್ನ ಗೆಳೆಯರೊಡನೆ ಕೂಡಿ ಬಹಳಷ್ಟು ಬಗೆಯ ಆಟಗಳನ್ನು ಆಡುತ್ತಿದ್ದೆ, ಕಣ್ಣಮುಚ್ಚಾಲೆ,ಲಾಕ್ ಆಂಡ್ ಕೀ, ಚೆಸ್, ಚೌಕ ಬಾರ, ಕೇರಂ ಅವುಗಳಲ್ಲಿ ಕೆಲವು.ನನಗೆ ಬಹಳ ಇಷ್ಟವಾಗುತಿದ್ದ ಆಟದಲ್ಲಿ ಅಟಗುಣಿಮನೆ ಒಂದು. ಈ ಆಟವನ್ನು ನಾನು ನನ್ನ ಮುತ್ತಜ್ಜಿಯ ಒಡನೆ ಆಡುತ್ತಿದ್ದೆ, ಈ ಆಟವನ್ನು ಅವರೆ ನನಗೆ  ಹೇಳಿ ಕೊಟ್ಟದ್ದು. ಭಾನುವಾರಗಳೊಂದು ನಾನು ನನ್ನ ಅಣ್ಣ ಕೂಡಿ ಕಂಪ್ಯುಟರಿನಲ್ಲಿ ಆಟವಾಡುತ್ತಿದ್ದೆವು. ಹೀಗೆ ನಾನು ನನ್ನ ಹೆಚ್ಚಿನ ಬಾಲ್ಯವನ್ನು ಆಟ ಮತ್ತು ಕ್ರೀಡೆಯಲ್ಲಿಯೆ ಕಳಿದಿದ್ದೇನೆ. ಅಂತಹ ಬಾಲ್ಯವು ನನ್ನ ಪುಟ್ಟ ಜೀವನದ ಅತಿ ಸುಂದರ ಕ್ಷಣಗಳು.

ಜನನ ನಾನು ಬೆಂಗಳೂರಿನ ಕೆ.ಸಿ.ಜಿ ಆಸ್ಪತ್ರೆಯಲ್ಲಿ ಏಪ್ರಿಲ್ ೫ನೆ ತಾರೀಕು ೨೦೦೧ರಂದು ಜನಿಸಿದೆ. ಬೆಂಗಳೂರು ಒಂದು ವಿಭಿನ್ನವಾದ ನಗರ, ಕರ್ನಾಟಕದ ರಾಜಧಾನಿ. ದೇಶದ ಮೂರನೇ ಸಿರಿವಂತ ನಗರ ಬೆಂಗಳೂರು. ಈ ನಗರವನ್ನು ವಿಶ್ವಾದ್ಯಂತ "ಸಿಲಿಕಾನ್ ವ್ಯಾಲಿ" ಎಂದು ಕರೆಯುತ್ತಾರೆ.


ವಿಧಾನ ಸೌಧ ಕ್ರಿಸ್ತ ಶಕ ೧೫೩೭ರ ತನಕ ಬೆಂಗಳೂರು ದಕ್ಷಿಣ ಭಾರತದ ಸಂಸ್ಥಾನಗಳಾದ ಗಂಗ, ಚೋಳ ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದೆ. ನಂತರ ವಿಜಯನಗರ ಸಾಮ್ರಾಜ್ಯದ ನಾಡ ಪ್ರಭು ಕೆಂಪೇಗೌಡರು ಬೆಂಗಳೂರಿನಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು. ಮರಾಠರು ಮತ್ತು ಮುಘಲರ ಅಲ್ಪಾವಧಿ ಆಡಳಿತಕ್ಕೆ ಒಳಪಟ್ಟಿದ್ದ ಬೆಂಗಳೂರು, ಮೈಸೂರು ರಾಜರ ಆಧಿಪತ್ಯದಲ್ಲೇ ಉಳಿದಿತ್ತು. ನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಆಡಳಿತಕ್ಕೆ ಒಳಪಟ್ಟ ಬೆಂಗಳೂರು, ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ(೧೭೯೯)ದಲ್ಲಿ ಬ್ರಿಟೀಷರ ಪಾಲಾಯಿತು. ತದನಂತರ ಬ್ರಿಟೀಷರು ಮೈಸೂರು ಸಂಸ್ಥಾನವನ್ನು ತಮ್ಮ ಆಡಳಿತದ ಒಂದು ರಾಜ್ಯವನ್ನಾಗಿಸಿ, ಬೆಂಗಳೂರನ್ನು ಅದರ ರಾಜಧಾನಿಯಾಗಿ ಘೋಷಿಸಿ, ಮೈಸೂರು ಒಡೆಯರ ಆಡಳಿತಕ್ಕೊಪ್ಪಿಸಿದರು. ಬೆಂಗಳೂರು ೧೫೩೭ರಲ್ಲಿ ಕೆಂಪೇಗೌಡರ ರಾಜಧಾನಿಯಾಗಿತ್ತು.ಈ ನಗರವನ್ನು ಕೆಂಪೇಗೌಡರು ನಿರ್ಮಿಸಿದರು. ಕೆಂಪೇಗೌಡ ಈ ನಗರವನ್ನು"ಬೆಂದ ಕಾಳೂರು", "ಗಂಡು ಭೂಮಿ" ಮತ್ತು "ನಾಯಕರ ರಾಜ್ಯ" ಎಂದು ಹೇಳುತಿದ್ದರು. ಹದಿನೆಂಟನೇ/ಹತ್ತೊಂಬತ್ತನೇ ಶತಮಾನದಲ್ಲಿ ಬೆಂಗಳೂರು ಒಂದು ನಗರವಾಗಿ ಬೆಳೆಯಿತು. ಆಗ ಪ್ರಮುಖವಾಗಿ ನಗರದಲ್ಲಿ ಎರಡು ಮುಖ್ಯ ರಸ್ತೆಗಳಿದ್ದವು. ಅವು "ಚಿಕ್ಕಪೇಟೆ" ಮತ್ತು "ದೊಡ್ಡಪೇಟೆ" ರಸ್ತೆಗಳು. ಸ್ವಾತಂತ್ರ್ಯಾ ನಂತರ ಬೆಂಗಳೂರು ಬಹು ದೊಡ್ಡ ಕೈಗಾರಿಕಾ ಉತ್ಪಾದನಾ ಕ್ಷೇತ್ರಗಳಿಗೆ ಮನೆಯಾಯಿತು. ಶಾಂತಿ ಸಮೃದ್ಧಿಯೂ, ಪರಿಸರ ಸಮೃದ್ಧಿಯೂ ಜನರನ್ನು ಈ ಊರಿನೆಡೆಗೆ ಆಕರ್ಷಿಸಿತು. ಹೆಚ್ ಎ ಎಲ್, ಬಿ ಇ ಎಲ್, ಐ ಟಿ ಐ, ಇಸ್ರೋ ನಂತಹ ಬಹು ದೊಡ್ಡ ಉತ್ಪಾದನಾ ಘಟಕಗಳಿಗೆ ಮನೆಯಾಯಿತು.

ಕ್ರೀಡೆ ಹಾಗು ವಿಧ್ಯಾಭ್ಯಾಸ

        ನಾನು ೨೦೧೪ನೇಯ ಇಸವಿಯಲ್ಲಿ ಪ್ರೌಡಶಾಲೆಯನ್ನು ಆಗಮಿಸಿದೆ. ಆದರೆ ಇದಕ್ಕಿನ್ನ ಮುಖ್ಯವಾದ ವಿಚಾರವು ನನ್ನ ಪ್ರೌಡಶಾಲೆಯ ಹಿಂದಿನ ಶಿಕ್ಷಣ ಹೇಗೆ ನೆಡೆಯಿತು ಎಂಬುದು. ನಾನು ಪ್ರೌಡಶಾಲೆಯ ಹಿಂದೆ "ಮಾಂಟಸರಿ" ಎಂಬ ವಿದ್ಯಾಪದ್ಧತಿಯಲ್ಲಿ ಓದುತ್ತಿದ್ದೆ. ಅಲ್ಲಿ ಪಠ್ಯ ಪುಸ್ತಕಗಳು ಇರಲಿಲ್ಲ, ಕಪ್ಪು ಹಲಗೆ ಇರಲ್ಲಿಲ್ಲ, ಮೇಜುಗಳು ಇರಲಿಲ್ಲ, ಪರೀಕ್ಷೆಯೂ ಇರಲಿಲ್ಲ. ಅಲ್ಲಿ ಕೆಲವು ವಿಭಿನ್ನವಾದ ಶಿಕ್ಷಣದ ವಸ್ತುಗಳಿಂದ ಶಿಕ್ಷಣ ನೀಡಲಾಗುತ್ತಿತ್ತು ಹಾಗು ವಿಷಯವನ್ನು ತಿಳಿದಿರುವುದು ಹಾಗು ಗ್ರಹಿಸುವ ಶಕ್ತಿಗಳ ಆದಾರದ ಮೇಲೆ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳ್ಳಿಸುತ್ತಿದ್ದರು. ಅಷ್ಟೇ ಅಲ್ಲದೆ ಜೀವನಾಧಾರಿತ ಶೈಲಿಯಲ್ಲಿ ಶಿಕ್ಷಣ ನೀಡುತ್ತಿದ್ದರು. ಈ ರೀತಿಯ ಶಿಕ್ಷಣವು ನನ್ನ ವ್ಯಕ್ತಿಗತ ಬೆಳವಣಿಗೆಯನ್ನು ಮಾಡಿತು. ಈ ಪದ್ಧತಿಯಲ್ಲಿ ಮನೆಗೆಲಸಗಳನ್ನೂ ನೀಡುತ್ತಿರಲಿಲ್ಲ, ಹಾಗಾಗಿ ನಾನು ಶಾಲೆಯನ್ನು ಮುಗಿಸಿಕೊಂಡು ಮನೆಗೆ ಬಂದ ನಂತರ ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾದ್ಯವಾಗುತ್ತಿತ್ತು, ನಾನು ಆಗ ಭರತನಾಟ್ಯ, ಕರ್ನಾಟಿಕ ಸಂಗೀತ, ಕ್ರಿಕೆಟ್, ಹಾಗು ಪಿಟೀಲಿನ ಶಾಲೆಗಳಿಗೆ ಹೋಗುತ್ತಿದ್ದೆ, ಇದು ನನ್ನನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸುವಂತೆ ಮಾಡುತ್ತಿತ್ತು. ನಾನು ೭ನೇ ತರಗತಿಯವರೆಗು ಇದೇ ಪದ್ಧತಿಯಲ್ಲಿಯೆ ಶಿಕ್ಷಣವನ್ನು ಪಡೆದೆ. ನನ್ನ ಜೀವನದ ಈ ಘಟ್ಟವು ಬಹಳ ಅರ್ಥಘರ್ಬಿತವಾಗಿ ಕೂಡಿತ್ತು.
        ೨೦೧೪ನೇಯ ಇಸವಿಯಲ್ಲಿ ಸಾಂಪ್ರದಾಯಕ ಪ್ರೌಡಶಾಲೆಯನ್ನು ಆಗಮಿಸಿದಾಗ ಅಲ್ಲಿನ ವಾತವರಣಕ್ಕೆ ಹೊಂದಿಕೊಳ್ಳಲು ಕಠಿಣವಾಯಿತು. ಸಾಂಪ್ರದಾಯಕ ಪದ್ಧತಿಯ ನಿಯಮಗಳನ್ನು ಪಾಲಿಸುವಲ್ಲಿ ನನಗೆ ಸಮಸ್ಯೆಗಳು ಉಂಟಾಗುತಿತ್ತು, ಯಾರ ಮುಂದೆ ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದು ನನಗೆ ತಿಳಿದಿರಲಿಲ್ಲ, ಇದು ನನ್ನನ್ನು ಕೆಲವೊಮ್ಮೆ ಸಂಕಟಕ್ಕೆ ಒಳಮಾಡುತ್ತಿತ್ತು. ಓದಿನಲ್ಲಿಯೂ ಪ್ರಶಂಸನೀಯ ಪ್ರದರ್ಶಣಗಳನ್ನು ಮಾಡುತ್ತಿರಲಿಲ್ಲ. ಅದೆ ವೇಳೆಯಲ್ಲಿ ನನ್ನ ಕ್ರೀಡೆಯ ಹುಚ್ಚು ನನ್ನನ್ನು ಕಬಡ್ಡಿಯಕಡೆ ಸೆಳೆಯುತ್ತಿತ್ತು. ಸಮಯ ಮೆಲ್ಲನೆ ಮುಂದುವರೆಯುತ್ತಿತ್ತು, ಕಾಲ ನನಗೆ ಹಲವು ವಿಚಾರಗಳನ್ನು ಕಲಿಸುತ್ತ ನಡೆಯುತ್ತಿತ್ತು. ೮ನೇ ತರಗತಿಯಲ್ಲೆ ಶಾಲೆಯ ಕಬಡ್ಡಿ ಹಾಗು ಕ್ರಿಕೆಟ್ ತಂಡಗಳಲ್ಲಿ ಆಡಿದೆ, ಆಗ ನನ್ನನಲ್ಲಿ ಆತ್ಮವಿಶ್ವಾಸ ಹೆಚ್ಚಿತು. ೮ನೇ ತರಗತಿಯಲ್ಲಿ ನಾನು ಪಡೆದ ಆತ್ಮವಿಶ್ವಾಸವು ೯ನೇ ತರಗತೆಯಲ್ಲಿ ಓದಿನ ದಿಕ್ಕಿನಲ್ಲಿ ಸಣ್ಣ-ಸಣ್ಣ ಹೆಜ್ಜೆ ಮುಂದುಹಿಡಲು ಸಹಯಕಾರಿಯಾಯಿತು. ಹೀಗೆ ಕೆಲವು ಕಾಲ ಮುಂದುವರಿಯುತ್ತಿತ್ತು, ನನ್ನನಲ್ಲಿ ಮೂಡಿದ್ದ ಬೆಳವಣಿಗೆಯಿಂದ ನಾನು ಬಹಳ ಸಂತುಷ್ಟನಾಗಿದ್ದೆ.
         ಅದೇನೋ ಜಾದು ನನ್ನಮೇಲೆ ಆದಂತೆ, ೯ನೇ ತರಗತಿ ಮುಕ್ತಾಯಗೊಳ್ಳುವಷ್ಟರಲ್ಲಿ ನನ್ನ ದ್ಯಾಸ ಕ್ರೀಡೆಯಿಂದ ಓದಿನಕಡೆಗೆ ಹೋಗಿಬಿಟ್ಟಿತ್ತು. ಅಲ್ಲಿನಿಂದ ನನ್ನ ವಿಙ್ಞಾನದ ಪಯಣ ಶುರುವಾಯಿತು. ನಾನು ೧೦ನೇ ತರಗತಿಯನ್ನು ಪ್ರವೇಶಿಸುವ ಮುನ್ನವೆ ಬಿ. ಎಸ್ ಸಿ ಪದವಿಯನ್ನು ಮಾಡಬೇಕೆಂಬ ಆಸಕ್ತಿ ನನ್ನನಲ್ಲಿ ಮೂಡಿತ್ತು, ಹಾಗಾಗಿ ಗಣಿತ ಶಾಸ್ತ್ರ ಹಾಗು ವಿಙ್ಞಾನದಲ್ಲಿ ನನ್ನ ಆಸಕ್ತಿ ಹೆಚ್ಚುತ್ತ ಹೋಯಿತು. ಇದರ ಒಡನೆ ನನ್ನನ್ನು ಶಾಲೆಯ ನಾಯಕನಾಗಿ ಆಯ್ದುಕೊಳ್ಳಲಾಯಿತು, ಈ ವೆಳೆಯಲ್ಲಿ ನಾನು ನಾಯಕತ್ವದ ಬಗ್ಗೆ ತಿಳಿದುಕೊಂಡೆ. ಸಾಮನ್ಯನಾಗಿ ನನ್ನ ಕೆಲಸಗಳ್ಳನ್ನು ಮಾಡಿಕೊಳ್ಳುವ ಹಾಗು ನಾಯಕನ ಕರ್ತವ್ಯಗಳನ್ನು ಮಾಡುವ ಎರಡು ವ್ಯಕ್ತಿತ್ವಗಳನ್ನು ಒಂದೆ ಸಮಯದಲ್ಲಿ ನನ್ನನಲ್ಲಿ ರೂಡಿಗೊಳಿಸಿಕೊಂಡಿದ್ದೆ, ಇದು ನನ್ನ ನಾಯಕತ್ವದ ಹಿರಿಮೆಯಾಗಿತ್ತು ಎಂದು ನನ್ನ ಗೆಳೆಯರು ಹಾಗು ನನ್ನ ಗುರುಗಳು ಹೇಳುತ್ತಿದ್ದರು, ಇದು ನನಗೆ ಬಹಳ ಹೆಮ್ಮೆಯ ವಿಚಾರವಾಗಿತ್ತು. ಈ ರೀತಿ ನಾನು ಹಲವು ವಿಚಾರಗಳಲ್ಲಿ ನನ್ನ ಗುರುಗಳ ಹೊಗಳಿಕೆಗೆ ಪಾತ್ರನಾಗುತ್ತಿದ್ದೆ. ನಾನು ಆ ವರ್ಷ, ೧೦ನೇ ತರಗತಿಯನ್ನು ೧೦ ಸಿ.ಜಿ.ಪಿ.ಎ ಅಂಕಗಳಿಂದ ಉತ್ತೀರ್ಣನಾದೆ. ನಂತರ ನನ್ನ ಪಯಣ ಹೊರ ಪ್ರಪಂಚದಕಡೆಗೆ ನಡೆಯುತ್ತಿತ್ತು.
          ಈ ರೀತಿ ನನ್ನ ಜೀವನ ಹಲವು ಕಲೆಗಳ ಮಿಶ್ರಣವಾಗಿದ್ದು ಅದರ ಗುರಿಯ ದಿಕ್ಕಿನಲ್ಲಿ ನಡೆಯುತಲಿದೆ. ನನ್ನ ಈ ಜೀವನ ಮತ್ತೊಬ್ಬರಿಗೆ ಸ್ಪೂರ್ತಿಯಾಗದಿದ್ದರು ಪ್ರತಿಯೊಂದು ವಿಭಾಗದಿಂದಲು ಸ್ಪೂರ್ತಿಯನ್ನು ಪಡೆಯಬಹುದು ಎಂದು ನನಗೆ ಕಲಿಸಿದೆ. ನನ್ನ ತಂದೆ-ತಾಯಿ ನನಗೆ ಹೇಳಿಕೊಟ್ಟದ್ದು ಒಂದೆ, ಅದು "ಎಂದಿಗು ಕೆಟ್ಟ ಆಲೊಚನೆ ಮಾಡಬೇಡ, ನಿನಗೆ ಕೇಡು ಮಾಡಿದವರಿಗು ಕೀಡನ್ನು ಕೊರಬೇಡ". ಈ ಗುಣಪಾಠವೆ ನನ್ನ ಗುರಿಯಾಗಬೇಕು, ಈ ಜೀವನವನ್ನು ಅವರಿಗಾಗಿ ಹಾಗು ದೇಶಕ್ಕಾಗಿ ಅಡಿಯಾಗಿ ಇಡಬೇಕು, ಇದೇ ನನ್ನ ಜೀವನದ ಅತ್ಯುತ್ತಮ ಲಕ್ಷವಾಗಿರಬೇಕು.

Start a discussion about ಡೊನಾಲ್ಡ್ ಬ್ಲ್ಯಾಕ್‌

Start a discussion