ವಿಷಯಕ್ಕೆ ಹೋಗು

ಶೀತಲನಾಥ ಸ್ವಾಮಿ ಬಸದಿ, ಕಾರ್ಕಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶೀತಲನಾಥ ಸ್ವಾಮಿ ಬೆಟ್ಟದ ಬಸದಿ ಇಂದ ಪುನರ್ನಿರ್ದೇಶಿತ)

ಕಾರ್ಕಳ ತಾಲೂಕಿನ ಬಾಹುಬಲಿ ಬೆಟ್ಟದ ಮೇಲೆ ಆ ಬೃಹತ್ ಮೂರ್ತಿಯ ಎದುರುಗಡೆ, ಅದೇ ಆವರಣದೊಳಗೆ ಇರುವ ಬಸದಿಯ ಹೆಸರು ಶ್ರೀ ಶೀತಲನಾಥ ಬಸದಿ.

ಪೂಜೆಯ ದ್ವೆವ

[ಬದಲಾಯಿಸಿ]

ಇಲ್ಲಿ ಪೂಜಿಸಲ್ಪಡುವ ಮೂಲನಾಯಕ ಶ್ರೀ ಶೀತಲನಾಥ ಸ್ವಾಮಿ.

ಒಳಾಂಗಣ ಶಿಲವಿನ್ಯಾಸ

[ಬದಲಾಯಿಸಿ]

ಈ ಆವರಣದ ಪ್ರವೇಶದ್ವಾರದ ಇನ್ನೊಂದು ಪಾರ್ಶ್ವದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಇದೆ. ಈ ಬಸದಿ ಬಾಹುಬಲಿ ಬಿಂಬದಿಂದ ೫೦ ಅಡಿ ದೂರದಲ್ಲಿದೆ. ಹಾಗೂ ಪಾರ್ಶ್ವನಾಥ ಬಸದಿಯು ಅಷ್ಟೇ ಅಡಿ ದೂರದಲ್ಲಿದೆ. ಶ್ರೀ ಬಾಹುಬಲಿಯ ದರ್ಶನಕ್ಕೆ ಬಂದ ಯಾತ್ರಿಕರು ಈ ಎರಡೂ ಬಸದಿಗೆ ಬರುತ್ತಾರೆ. ಇವು ತಾಲೂಕು ಕೇಂದ್ರದಿಂದ ಎರಡು ಕಿ.ಮೀ ದೂರದಲ್ಲಿದೆ. ಇವು ಕಾರ್ಕಳದ ಶ್ರೀ ಜೈನಮಠಕ್ಕೆ ಸೇರಿವೆ.

ಮಾರ್ಗ

[ಬದಲಾಯಿಸಿ]

ಇವುಗಳಿಗೆ ದಾರಿಯೆಂದರೆ ಕಾರ್ಕಳದ ಗೋಮಟೇಶ್ವರನ ಸನ್ನಿಧಿಗೆ ಬರುವ ರಸ್ತೆಯಲ್ಲಿ ಬಂದು ಮೆಟ್ಟಿಲುಗಳನ್ನು ಏರಿ ಆವರಣವನ್ನು ಪ್ರವೇಶಿಸಬೇಕು. ಅಲ್ಲಿಯೇ ಈ ಬಸದಿ ಕಂಡುಬರುತ್ತವೆ.

ದೇವಾಲಯ ವಿನ್ಯಾಸ

[ಬದಲಾಯಿಸಿ]

ಇವು ಶಿಲಾಮಯವಾಗಿವೆ. ಹಾಗೂ ಬಲವಾದ ಗೋಡೆಯಿಂದ ಆವೃತವಾಗಿದ್ದು ಕಲ್ಲಿನ ಛಾವಣಿಯಿಂದ ನಿರ್ಮಿಸಲ್ಪಟ್ಟಿವೆ. ಪ್ರಸ್ತುತ ಶೀತಲನಾಥ ಬಸದಿಯನ್ನು ವೀರಪಾಂಡ್ಯ ಭೈರವ ಅರಸ ಕಟ್ಟಿಸಿದ್ದನೆಂದು ಹೇಳುತ್ತಾರೆ. ಪ್ರಸ್ತುತ ಶ್ರೀ ಶೀತಲನಾದ ಬಸದಿಯನ್ನು ಇತ್ತೀಚೆಗೆ ಹೊಸ ಸಾರಣೆಯೊಂದಿಗೆ ಬಲಗೊಳಿಸಲಾಗಿದೆ.ಈ ಬಸದಿಗೆ ಮೇಗಿನ ನೆಲೆ ಇಲ್ಲ. ಎಡ ಬದಿಗೆ ಹೊರಗೆ ಬ್ರಹ್ಮಸ್ತಂಭ ಇದೆ. ಹಾಗೂ ಬಲ ಬದಿಗೆ ಧ್ವಜಸ್ತಂಭವಿದೆ. ಈ ಬಸದಿಯನ್ನು ಪ್ರವೇಶಿಸುವಾಗ ಸಿಗುವ ಎಡ ಬಲ ಬದಿಗಳಲ್ಲಿರುವ ಗೋಪುರವನ್ನು ಜನರು ವಿಶೇಷ ದಿನದಂದು ಕುಳಿತುಕೊಳ್ಳಲು ಉಪಯೋಗಿಸುತ್ತಾರೆ. ಈ ಬಸದಿಗೆ ಕಾರ್ಯಾಲಯವಿಲ್ಲ. ಹಿಂದೆ ಇಲ್ಲಿ ಯಾವ ಮುನಿಗಳೂ ಬಂದು ವಾಸ್ತವ್ಯ ಇರಲಿಲ್ಲ. ಹಾಗೂ ಈ ಬಸದಿಯಲ್ಲಿ ಯಾರೂ ಚಾತುರ್ಮಾಸ ನಡೆಸಿಲ್ಲ. ಇಲ್ಲಿಯ ಕಂಬಗಳಲ್ಲಿ ಶಿಲ್ಪಕಲಾಕೃತಿಗಳು ಇಲ್ಲ. ಬಸದಿಯ ಎದುರಿನ ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯ ಮೇಲೆ ದ್ವಾರಪಾಲಕರ ಅಥವಾ ಆ ಗೊಡೆಯ ಮೇಲೆ ಬೇರೆ ಯಾವ ಚಿತ್ರಗಳೂ ಇಲ್ಲ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪಗಳು ಇಲ್ಲ.ಈ ಬಸದಿಯಲ್ಲಿ ಗಂಧಕುಟಿಯು ಈ ತೀರ್ಥಂಕರ ಮಂಟಪದಲ್ಲಿ ಇಲ್ಲ. ಮೂಲನಾಯಕನ ಮೂರ್ತಿ ಶಿಲೆಯದ್ದು. ಅದರ ಎತ್ತರ ೪ ಅಡಿ. ಇದು ಖಡ್ಗಾಸನ ಭಂಗಿಯಲ್ಲಿದ್ದು ಸುತ್ತಲೂ ಮಕರತೋರಣದ ಪ್ರಭಾವಳಿ ಇದೆ.

ಪೂಜಾ ವಿದಾನ

[ಬದಲಾಯಿಸಿ]

ದಿನವೂ ಬೆಳಿಗ್ಗೆ ಶ್ರೀ ಸ್ವಾಮಿಗೆ ಜಲಾಭಿಷೇಕ ಮಾಡುತ್ತಾರೆ. ಮತ್ತು ವಿಶೇಷ ಪೂಜೆ ನಡೆಯುತ್ತದೆ. ಈ ಬಸದಿಯಲ್ಲಿ ಒಂದು ದಿನದಲ್ಲಿ ಬೆಳಿಗ್ಗೆ ಮಾತ್ರ ಪೂಜೆ ನಡೆಯುತ್ತದೆ. ವರ್ಷದ ಹುಣ್ಣಿಮೆ ದಿನಗಳಂದು ವಿಶೇಷವಾಗಿ ಉತ್ಸವ ನಡೆಯುತ್ತದೆ. []

ಉಲ್ಲೇಖಗಳು

[ಬದಲಾಯಿಸಿ]
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೧೯.