"ಸದಸ್ಯ:C s anjali" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
==ನನ್ನ ಊರು==
ನಾನು ಹುಟ್ಟಿದ್ದು ಕರ್ನಾಟಕದ ಹಾಸನ ಜಿಲ್ಲೆಯಲ್ಲಿ,ಆದರೆ ನಾನು ಬೆಳೆದದ್ದು ಬೆಂಗಳೂರಿನಲ್ಲೆ.ಈಗ ಇರುವುದು ಸಹ ಬೆಂಗಳೂರಿನಲ್ಲೆ,ಆದ ಕಾರಣ ನಾನು ಇಲ್ಲಿಯೆ ವಿದ್ಯಾಭ್ಯಾಸ ಮಾಡುವಂತೆ ಆಯಿತು.ಆದರೆ ನಮ್ಮ ಸಂಭಂದಿಕರು ಇರುವುದು ನಮ್ಮ ಊರು ಹಾಸನದಲ್ಲೆ.ನಮ್ಮ ಸಂಭಂದಿಕರೆಲ್ಲ ಅಲ್ಲಿಯೆ ಇರುವುದರಿಂದ ನಾನು ಹಾಗು ನನ್ನ ತಮ್ಮ ಬೇಸಿಗೆ ರಜೆಗೆ ಅಲ್ಲಿಗೆ ಹೋಗುತ್ತಿದ್ದೆವು.ಎರಡು ತಿಂಗಳ ಕಾಲ ನಾವು ನಮ್ಮ ಅಜ್ಜನ ಮನೆಯಲ್ಲಿ,ನಮ್ಮ ದೊಡ್ಡಪ್ಪ ದೊಡ್ಡಮ್ಮನ ಮನೆಯಲ್ಲಿ,ಹೋಗಿ ನಮ್ಮ ರಜೆಯನ್ನು ಕಳೆಯುತ್ತಿದ್ದೆವು.ನಮ್ಮ ಜೊತೆ ಊರಿಗೆ ಬರುತಿದ್ದ ಅಕ್ಕ ಪಕ್ಕದ ಮನೆಯವರ ಮಕ್ಕಳು ಸೇರುತ್ತಿದ್ದೆವು,ಎಲ್ಲರು ಸೇರಿ ಹಲವು ಬಗೆಯ ಆಟಗಳನ್ನು ಆಡುತ್ತಿದ್ದೆವು.ಹೀಗೆ ನಮ್ಮ ರಜೆಯನ್ನು ಸಂತೋಷದಿಂದ ಕಳೆಯುತ್ತಿದ್ದೆವು.ಹೀಗೆಯೆ ನಮ್ಮ ಬಾಲ್ಯವು ಸಂತೋಷದಿಂದ ಕಳೆದೆವು.
==ನನ್ನ ವಿದ್ಯಾಭ್ಯಾಸಶಾಲಾ ದಿನಗಳು==
ನಾನು ನನ್ನ ಶಾಲೆಯಲ್ಲಿ ಬಹಳ ಚುರುಕು ವಿದ್ಯಾರ್ಥಿನಿ ಆಗಿದ್ದೆನು ಅದ ಕಾರಣ ನನನ್ನು ಕ್ಲಾಸ್ ಲೀಡರ್ ಆಗಿ ಮಾಡಿದ್ದರು.ನನ್ನ ಶಾಲೆಯ ಹೆಸರು "ಜ್ಞಾನ ಭಾರತಿ ಆಂಗ್ಲ ಶಾಲೆ".ನಾನು ನನ್ನ ಶಾಲೆಯಲ್ಲಿ ಬಹಳಷ್ಟು ಬಹುಮಾನಗಳನ್ನು ಗೆದ್ದಿದ್ದೇನೆ.ನನಗೆ ನನ್ನ ಶಾಲೆಯಲ್ಲಿ "ಬೆಸ್ಟ್ ಸ್ಟೂಡೆಂಟ್" ಅವಾರ್ಡ್ ದೊರಕಿತು.ನಾನು ಈ ಶಾಲೆಯಲ್ಲಿ ಎಲ್.ಕೆ.ಜಿ ಯಿಂದ ಏಳನೆಯ ತರಗತಿಯವರೆಗು ಓದಿದೆನು.ನಂತರ ನಾವು ಬೇರೆ ಊರಿಗೆ ಹೋಗಬೇಕಾಗಿ ಬಂದಿತು ಆದಕಾರಣ ನಾನು ಆ ಶಾಲೆಯನ್ನು ಬಿಡಬೇಕಾಗಿ ಬಂದಿತು.ನಾನು ಎಂಟನೆಯ ತರಗತಿಯೆನ್ನು ಬೇರೆ ಶಾಲೆಯಲ್ಲಿ ಮುಂದುವರೆಸಿದೆ.ಆ ಶಾಲೆಯುಲ್ಲಿ ನನಗೆ ಹೊಂದಿಕೊಂಡು ಹೋಗಲು ಸ್ವಲ್ಪ ಕಷ್ಟವಾಯಿತು ಹಾಗು ಆ ಶಾಲೆಯಲ್ಲಿ ವಿದ್ಯಾಭ್ಯಾಸವು ಅಷ್ಟೇನು ಹೇಳಿಕೊಳ್ಳುವಂತಿರಲ್ಲಿಲ್ಲ ಆದ್ದರಿಂದ ನಾನು ಆ ಶಾಲೆಯನ್ನು ಬಿಟ್ಟು ಬೇರೆ ಶಾಲೆಯನ್ನು ಸೇರಿದೆ ಆ ಶಾಲೆಯ ಹೆಸರು "ಶಾಂತಿನಿಕೇತನ ವಿದ್ಯಾ ಸಂಸ್ಥೆ" ನಾನು ಈ ಶಾಲೆಯಲ್ಲಿ ನನ್ನ ಒಂಬತ್ತನೆಯ ತರಗತಿಯನ್ನು ಹಾಗು ನನ್ನ ಹತ್ತನೆಯ ತರಗತಿಯನ್ನು ಮುಗಿಸಿದೆನು.ನಾನು ಒಂಬತ್ತನೆಯ ತರಗತಿಯಲ್ಲಿ ಮೊದಲು ಸೇರಿದ ಕೆಲವು ತಿಂಗಳು ಹೊಂದಿಕೊಂಡು ಹೋಗೂವುದ್ದು ಸ್ವಲ್ಪ ಕಷ್ಟವಾಯಿತು ಆದರೆ ನನ್ನ ಜೊತೆಯೆ ಸೇರಿದ್ದ ಇನ್ನು ಇಬ್ಬರು ಸ್ನೇಹಿತೆಯರು ಇದ್ದಿದ್ದರಿಂದ ನನಗೆ ಅಷ್ಟೇನು ಬೇಸರವಾಗುತಿರಲಿಲ್ಲ ನಾನು ಹಾಗು ಅವರು,ಒಟ್ಟಿಗೆ ಇರುತ್ತಿದ್ದೆವು.ನಾವು ಒಳ್ಳೆಯ ಸ್ನೇಹಿತರಾಗಿ ಎರೆಡು ವರ್ಷ ಜಗಳವಿಲ್ಲದೆ ಸಂತೋಷದಿಂದ ಇದ್ದೆವು.
==ನನ್ನ ಪ್ರವಾಸ==
ನಾವು ಎಲ್ಲರು ಹತ್ತನೆಯ ತರಗತಿಯಲ್ಲಿ ಕೇರಳಕ್ಕೆ ಪ್ರವಾಸಕ್ಕೆ ಹೋಗಿದ್ದೆವು.ನಾವು ರೈಲಿನಲ್ಲಿ ಕೇರಳಕ್ಕೆ ಪ್ರಯಾಣ ಮಾಡಿದೆವು.ನಾವು ರೈಲಿನಲ್ಲಿ ಪ್ರಯಾಣ ಮಾಡಿದ್ದರಿಂದ ನಾವು ಹಾಗು ನಮ್ಮ ಪ್ರಾಂಶುಪಾಲರು,ಶಿಕ್ಷಕಿಯರು,ಶಿಕ್ಷಕರು, ಎಲ್ಲರು ಸೇರಿ ತುಂಬಾ ಖುಷಿಯಿಂದ,ಸಂತೋಷವಾಗಿ ಆಟವಾಡಿದೆವು. ನಾವು ಕೇರಳದಲ್ಲಿ ಎಲ್ಲಾ ಸ್ನೇಹಿತರೊಡನೆ ಬಹಳಷ್ಟು ಪೋಟೋಗಳನ್ನು ತೆಗೆದುಕೊಂಡಿದ್ದೆವು.ಅಲ್ಲಿ ನಾವು ಕೊವ್ವಲ್ಲಮ್ ಬೀಚ್ ಗೆ ಹೋಗಿದ್ದೆವು,ನಾವು ಎಲ್ಲರು ಸೇರಿ ಕೇರಳದಲ್ಲಿರುವ ಪದ್ಮನಾಭ ದೇವಸ್ಥಾನಕ್ಕೆ ಹೋಗಿದ್ದೆವು,ನಮ್ಮ ಜೊತೆ ನಮ್ಮ ಶಾಲೆಯ ಶಿಕ್ಷಕಿಯರು,ಪ್ರಾಂಶುಪಾಲರು,ಶಿಕ್ಷಕರು ಎಲ್ಲರು ಬಂದಿದ್ದರು.ನಾವು ಬರೀ ಈ ಸ್ಥಳವಲ್ಲದೆ ಬೇರೆ ಸ್ಥಳಗಳಾದ ಕನ್ಯಾಕುಮಾರಿಯಲ್ಲಿರುವ ತಿರುವಳ್ಳುವರ್ ಪ್ರತಿಮೆಯನ್ನು ನೋಡಿದೆವು,ಇದು ನನ್ನ ಕೇರಳ ಪ್ರವಾಸದ ಅನುಭವ.
==ನನ್ನ ಶಿಕ್ಷಕರು==
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/648971" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ