ವಿಕಿಪೀಡಿಯ:ವಿಕಿಪೀಡಿಯ ಏನಲ್ಲ
ವಿಕಿಪೀಡಿಯಾ ಒಂದು ಉಚಿತ ಆನ್ಲೈನ್ ರೂಪದ ವಿಶ್ವಕೋಶವಾಗಿದೆ. ವಿಕಿಪೀಡಿಯಾದಲ್ಲಿನ ಮಾಹಿತಿಯ ಪ್ರಮಾಣವು ಪ್ರಾಯೋಗಿಕವಾಗಿ ಅಪರಿಮಿತವಾಗಿದೆ. ಆದರೆ ಎಲ್ಲಾ ಬಗೆಯ ಜ್ಞಾನವನ್ನು ಒಳಗೊಂಡಿರುವ ಗುರಿಯನ್ನು ಹೊಂದಿಲ್ಲ. ವಿಕಿಪೀಡಿಯಾ ಯಾವ ವಿಷಯಗಳನ್ನು ಹೊರಗಿಡಬೇಕು ಅಥವಾ ಯಾವುದನ್ನು ಒಳಗೊಂಡಿರಬೇಕು ಎಂಬುದನ್ನು ಸಮುದಾಯದ ಸದಸ್ಯರು ನಿರ್ಧರಿಸುತ್ತಾರೆ. ಈ ಹೊರಗಿಡುವಿಕೆ ಅಥವಾ ಒಳಗೊಳ್ಳುವಿಕೆಗಳನ್ನು ಒಟ್ಟು ಸೇರಿಸಿ ವಿಕಿಪೀಡಿಯ ಎಂಬುದು ಏನಲ್ಲ ಎಂದು ವಿವರಿಸಲಾಗಿದೆ.
ಶೈಲಿ ಮತ್ತು ಸ್ವರೂಪ
[ಬದಲಾಯಿಸಿ]ವಿಕಿಪೀಡಿಯಾ ಪುಸ್ತಕ ರೂಪದ ವಿಶ್ವಕೋಶವಲ್ಲ
[ಬದಲಾಯಿಸಿ]ವಿಕಿಪೀಡಿಯಾ ಪುಸ್ತಕ ರೂಪದ ವಿಶ್ವಕೋಶ ಅಲ್ಲ. ಬದಲಾಗಿ ಡಿಜಿಟಲ್ ರೂಪದ ವಿಶ್ವಕೋಶ ಯೋಜನೆಯಾಗಿದೆ. ಪರಿಶೀಲನೆ ಮತ್ತು ಈ ಪುಟದಲ್ಲಿ ಪ್ರಸ್ತುತಪಡಿಸಲಾದ ಇತರ ಅಂಶಗಳನ್ನು ಹೊರತುಪಡಿಸಿ, ವಿಕಿಪೀಡಿಯಾ ಒಳಗೊಂಡಿರುವ ವಿಷಯಗಳ ಸಂಖ್ಯೆ ಅಥವಾ ವಿಷಯದ ಒಟ್ಟು ಮೊತ್ತಕ್ಕೆ ಯಾವುದೇ ಪ್ರಾಯೋಗಿಕ ಮಿತಿಯಿಲ್ಲ. ಆದಾಗ್ಯೂ, ಏನು ಮಾಡಬಹುದು ಮತ್ತು ಏನು ಮಾಡಬೇಕು ಎಂಬುದರ ನಡುವೆ ಪ್ರಮುಖ ವ್ಯತ್ಯಾಸಗಳಿವೆ. ಹಾಗಾಗಿ, ವಿಕಿಪೀಡಿಯಾಕ್ಕೆ ಸೇರಿಸಲಾಗುವ ಅಥವಾ ವಿಕಿಪೀಡಿಯಾದಲ್ಲಿ ತಿದ್ದುಪಡಿ ಮಾಡುವ ಲೇಖನಗಳು ಸೂಕ್ತವಾದ ವಿಷಯ ನೀತಿಗಳಿಗೆ ಬದ್ಧವಾಗಿರಬೇಕು. ಈ ನೀತಿ ನಿಯಮಗಳನ್ನು ವಿಕಿಪೀಡಿಯಾದ ಐದು ಸ್ತಂಭಗಳಲ್ಲಿ ವಿವರಿಸಲಾಗಿದೆ.
ವಿಕಿಪೀಡಿಯವನ್ನು ಸುಲಭವಾಗಿ ತೆರೆಯಲು ಸಂಪಾದಕರು ಪ್ರತಿಯೊಂದು ಲೇಖನಗಳನ್ನು ಸಮಂಜಸವಾದ ಗಾತ್ರಕ್ಕೆ ಸೀಮಿತಗೊಳಿಸಬೇಕು (ವಿಕಿಪೀಡಿಯ:ಲೇಖನ ಗಾತ್ರವನ್ನು ನೋಡಿ). ದೊಡ್ಡ ಲೇಖನಗಳನ್ನು ಸೂಕ್ತವಾಗಿ ವಿಭಜಿಸುವುದು, ಉಪಶೀರ್ಷಿಕೆಗಳನ್ನು ಸೇರಿಸುವುದು ಮತ್ತು ಸಾಕಷ್ಟು ಸಾರಾಂಶಗಳನ್ನು ಬಿಡುವುದು ಉತ್ತಮ ಅಭ್ಯಾಸವಾಗಿದೆ. (ವಿಕಿಪೀಡಿಯ:ಸಾರಾಂಶ ಶೈಲಿಯನ್ನು ನೋಡಿ). ಪುಸ್ತಕ ರೂಪದ ವಿಶ್ವಕೋಶದಲ್ಲಿ ಲೇಖನಗಳು ಚಿಕ್ಕದಾಗಿರುತ್ತವೆ. ಈ ಲೇಖನಗಳು ಮುಂದೆ ಬರುವ ವಿಶ್ವಕೋಶದಲ್ಲಿ ಮಾತ್ರ ನವೀಕರಣ ಹೊಂದುತ್ತವೆ. ಆದರೆ ವಿಕಿಪೀಡಿಯದಲ್ಲಿ ಒಂದು ಲೇಖನವು ಹೆಚ್ಚಿನ ಮಾಹಿತಿಯನ್ನು ಒಳಗೊಂಡಿರುತ್ತದೆ, ಹೆಚ್ಚಿನ ಬಾಹ್ಯ ತಾಣಗಳ ಕೊಂಡಿಗಳನ್ನು ಒದಗಿಸುತ್ತದೆ ಮತ್ತು ಕಾಲಕಾಲಕ್ಕೆ ವೇಗವಾಗಿ ನವೀಕರಣವಾಗುತ್ತಾ ಇರುತ್ತದೆ.
ವಿಶ್ವಕೋಶ ರೂಪದ ವಿಷಯವಸ್ತು
[ಬದಲಾಯಿಸಿ]ಅತ್ಯಂತ ನೈಜವಾದ, ನಿಖರವಾದ ಮಾಹಿತಿಗಳನ್ನು ವಿಕಿಪೀಡಿಯಾದಲ್ಲಿ ಸೇರಿಸುವಂತಿಲ್ಲ. ಅಂದರೆ ಒಂದು ವಿಷಯದ ಬಗ್ಗೆ ಬರೆಯುವಾಗ ತೀರಾ ಆಳವಾದ ಮಾಹಿತಿಯನ್ನು ವಿವರವಾಗಿ ವಿಕಿಪೀಡಿಯಾದಲ್ಲಿ ಬರೆಯುವಂತಿಲ್ಲ. ಬದಲಾಗಿ ಒಪ್ಪಿತ ರೀತಿಯಲ್ಲಿ ಸಾರಾಂಶರೂಪದಲ್ಲಿ ಆ ಮಾಹಿತಿಯನ್ನು ಸೇರಿಸಬಹುದು. ಇದರೊಂದಿಗೆ ಸಮತೂಕದ ಮತ್ತು ಪರೀಶೀಲನೆಗೆ ಅರ್ಹವಾದ ಉಲ್ಲೇಖಗಳನ್ನು ಬರಹದಲ್ಲಿ ಸೇರಿಸಬಹುದು.
ವಿಕಿಪೀಡಿಯಾ ಶಬ್ಧಕೋಶವಲ್ಲ
[ಬದಲಾಯಿಸಿ]ವಿಕಿಪೀಡಿಯವು ನಿಘಂಟು ಅಲ್ಲ, ಅಥವಾ ಬಳಕೆ ಅಥವಾ ಪರಿಭಾಷೆಯ ಮಾರ್ಗದರ್ಶಿಯಲ್ಲ. ನಿಘಂಟಿನ ಉದ್ದೇಶಕಾಗಿ, ನಮ್ಮ ಸೋದರ ಯೋಜನೆಯಾದ ವಿಕ್ಷನರಿಗೆ ಭೇಟಿ ಕೊಡಬಹುದು. ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:
- ವ್ಯಾಖ್ಯಾನಗಳು. ಲೇಖನಗಳು ಉತ್ತಮ ವ್ಯಾಖ್ಯಾನ ಅಥವಾ ವಿವರಣೆಯೊಂದಿಗೆ ಪ್ರಾರಂಭವಾಗಬೇಕು, ಆದರೆ ವ್ಯಾಖ್ಯಾನಕ್ಕಿಂತ ಹೆಚ್ಚು ಮಾಹಿತಿ ಹೊಂದಿರದ ಲೇಖನಗಳನ್ನು ಸೂಕ್ತ ರೀತಿಯಲ್ಲಿ ವಿಸ್ತರಿಸಬೇಕು. ಒಂದು ಲೇಖನವು ವ್ಯಾಖ್ಯಾನವನ್ನು ಮೀರಿ ವಿಸ್ತರಿಸಲಾಗದಿದ್ದರೆ, ಅಂತಹ ಬರಹಗಳಿಗೆ ವಿಕಿಪೀಡಿಯಾ ಸೂಕ್ತ ಜಾಗವಲ್ಲ.