ವಾತ್ಸ್ಯಾಯನ
ವಾತ್ಸಾಯನನನ್ನು ಭಾರತೀಯ ಇತಿಹಾಸದ ಕಾಮ ಶಾಸ್ತ್ರ ಪಂಡಿತನೆಂದು ವಿಶ್ಲೇಷಿಸಲಾಗುತ್ತದೆ.
ಕಾಮಕ್ಕೆ ಸಂಬಂಧಿಸಿದಂತೆ ವಾತ್ಸಾಯನ ಕಾಮಸೂತ್ರವೆಂಬ ಗ್ರಂಥವನ್ನು ರಚಿಸಿದ್ದಾನೆ.ಕಾಮಸೂತ್ರದಲ್ಲಿ ನರ-ನಾರಿಯ ಸಂಬಂಧ,ಮೋಹ,ರಾಗಗಳ ಬಗ್ಗೆ ಪ್ರಸ್ತಾಪಿಸಲಾಗಿದೆ.
ವಿಶ್ಲೇಷಣೆ
[ಬದಲಾಯಿಸಿ]ಬ್ರಾಹ್ಮಣ ವಿದ್ವಾಂಸನೊಬ್ಬನ ಮಗನೆಂದು ಹೇಳಲಾಗುವ ವಾತ್ಸಾಯನನ ಮೂಲ ಹೆಸರನ್ನು ಮಲ್ಲಿನಾಘ ಅಥವಾ ಮಲ್ಲನಾಘನೆಂದು ಭಾವಿಸಲಾಗುತ್ತದೆ. ಆತನ ಗತಕಾಲದ ಬಗ್ಗೆ ಯಾರಿಗೂ ಗೊತ್ತಿಲ್ಲ.ಆದರೂ ಆತ ಅಲ್ಲಲ್ಲಿ ಶಾತವಾಹನರ ಬಗ್ಗೆ ಮತ್ತು ಮರಾಹಮಿಹಿರನ ಬಗ್ಗೆ ಪ್ರಸ್ತಾಪಿಸುತ್ತಾನೆ. ಹೀಗಾಗಿ ಆತ ಗುಪ್ತರ ಕಾಲವಾದ ಕ್ರಿ.ಶ. ೪ನೇ ಮತ್ತು ೬ನೇ ಶತಮಾನಗಳ ಮಧ್ಯೆ ಆತ ಜೀವಿಸಿದ್ದರಬಹುದೆಂದು ಅಂದಾಜಿಸಲಾಗುತ್ತದೆ.
ಕುತೂಹಲಕರ ಸಂಗತಿಯೆಂದರೆ,ವಾತ್ಸಾಯನನ ಸಂಬಂಧಿಯೊಬ್ಬಳು ವೇಶ್ಯಾಮಂದಿರದಲ್ಲಿ ಕೆಲಸ ಮಾಡುತ್ತಿದ್ದರಿಂದ ಮತ್ತು ಆತನ ಬಾಲ್ಯವೆಲ್ಲ ಅಂಥ ಸ್ಥಳಗಳಲ್ಲೇ ಕಳೆದುಹೋಗಿದ್ದರಿಂದ ವಾತ್ಸಾಯನ ಕಾಮಸೂತ್ರದಂಥ ಗ್ರಂಥ ರಚಿಸಲು ಸಾಧ್ಯವಾಯಿತೆಂದೂ ಹೇಳುತ್ತಾರೆ.
ಮೂಲತಃ ಭಾರತೀಯರು ಕಾಮದಂಥ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವ,ವಿಶ್ಲೇಷಿಸುವ ಬಗ್ಗೆ ತೋರುವ ಮಡಿವಂತಿಕೆಯೂ ಕೂಡ ವಾತ್ಸಾಯನನ ಜೀವಿತಕಾಲದ ಬಗ್ಗೆ ಮುಸುಕಾಗಿರಿಸಿರಬಹುದು. ಆದರೆ ಆತನ ಕಾಮಸೂತ್ರ ಜಗತ್ವಿಖ್ಯಾತವಾಗಿರುವದೂ ಕೂಡ ಅಷ್ಟೇ ಸತ್ಯ ಸಂಗತಿಯಾಗಿದೆ.