ವಿಷಯಕ್ಕೆ ಹೋಗು

ಲಲಿತ್ ಮೋದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಲಲಿತ್ ಕುಮಾರ್ ಮೋದಿ ಇಂದ ಪುನರ್ನಿರ್ದೇಶಿತ)
Lalit Modi ಲಲಿತ್ ಮೋದಿ
ಐಪಿಎಲ್ ಆಟಗಾರರ ಹರಾಜಿನಲ್ಲಿ ಮೋದಿ

ಅಧ್ಯಕ್ಷ ಮತ್ತು ಕಮೀಷನರ್ ಇಂಡಿಯನ್ ಪ್ರೀಮಿಯರ್ ಲೀಗ್
ಅಧಿಕಾರ ಅವಧಿ
2008 – 2010

ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್ (ಆರ್ಸಿಎ) ನ ಅಧ್ಯಕ್ಷರು
ಅಧಿಕಾರ ಅವಧಿ
2005 – 2009

ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (PCA) ನ ಉಪಾಧ್ಯಕ್ಷರು
ಅಧಿಕಾರ ಅವಧಿ
2004 – 2012

ಮೋದಿ ಎಂಟರ್ಪ್ರೈಸಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ
ಅಧಿಕಾರ ಅವಧಿ
1992 – ಪ್ರಸ್ತುತ

ಗಾಡ್ಫ್ರೇ ಫಿಲಿಪ್ಸ್ ಇಂಡಿಯಾ ನ ಕಾರ್ಯನಿರ್ವಾಹಕ ನಿರ್ದೇಶಕ
ಅಧಿಕಾರ ಅವಧಿ
1992 – 2010

ಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷ (ಆರ್ಸಿಎ)
ಅಧಿಕಾರ ಅವಧಿ
2014 – 2015
ವೈಯಕ್ತಿಕ ಮಾಹಿತಿ
ಜನನ (1963-11-29) ೨೯ ನವೆಂಬರ್ ೧೯೬೩ (ವಯಸ್ಸು ೬೧)
ದೆಹಲಿ, ಭಾರತ
ಪೌರತ್ವ ಭಾರತೀಯ
ಸಂಗಾತಿ(ಗಳು) ಮಿನಲ್ ಮೋದಿ
ಮಕ್ಕಳು 2
ತಂದೆ/ತಾಯಿ ಕೃಷನ್ ಕುಮಾರ್ ಮೋದಿ ಮತ್ತು ಬೈನಾ ಮೋದಿ
ಅಭ್ಯಸಿಸಿದ ವಿದ್ಯಾಪೀಠ ಪೇಸ್ ಯೂನಿವರ್ಸಿಟಿ
ಡ್ಯೂಕ್ ವಿಶ್ವವಿದ್ಯಾಲಯ
ವೃತ್ತಿ ಉದ್ಯಮಿ ಮತ್ತು ಕ್ರಿಕೆಟ್ ನಿರ್ವಾಹಕರು
ಜಾಲತಾಣ lalitmodi.com

ಲಲಿತ್ ಕುಮಾರ್ ಮೋದಿ, [] ಮೋದಿ ಸಾಮ್ರಾಜ್ಯದ ಸ್ಥಾಪಕ, ರಾವ್ ಬಹದ್ದೂರ್ ಗುಜ್ಜರ್ ಮಲ್ ಮೋದಿ ಯವರ ಮೊಮ್ಮೊಗ. ಮೋದಿಯವರ ತಂದೆ, ಗುಜ್ಜರ್ ಮಲ್ ಮೋದಿಯವರ ಮೊದಲನೆಯ ಮಗ, ಕೃಶನ್ ಕುಮಾರ್ ಮೋದಿಯವರು. ಮೋದಿಯವರ ಚಿಕ್ಕಪ್ಪಂದಿರೆಲ್ಲಾ ಉದ್ಯೋಗಪತಿಗಳು.[][] [][]

'ಐ.ಪಿ.ಎಲ್ ಕ್ರಿಕೆಟ್ ಪ್ರತಿಯೋಗಿತೆಗಳು

[ಬದಲಾಯಿಸಿ]

ಐ.ಪಿ.ಎಲ್ ಕೂಸು ಜನ್ಮ ತಳೆದದ್ದು ೧೯೯೬ ರಲ್ಲಿ. ವಿಶ್ವದ ಕ್ರಿಕೆಟ್ ಆಟದ ದಿಕ್ಕನ್ನೇ ಬದಲಾಯಿಸಿದ ಲೀಗ್. ಸನ್ ೨೦೦೭ ರಲ್ಲಿ ಝೀ ಸಮೂಹ ಸಂಸ್ಥೆಯ ಅಧ್ಯಕ್ಷ, ಸುಭಾಷ್ ಚಂದ್ರ, ಬಿಸಿಎಲ್ ಭಾರತೀಯ ಕ್ರಿಕೆಟ್ ಲೀಗ್ ಸ್ಥಾಪಿಸಿದಾಗ, ಲಲಿತ್ ಮೋದಿಯವರು, ರಾಜಾಸ್ಥಾನ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ೨೦೦೭ ರ ಸೆಪ್ಟೆಂಬರ್ ೧೪ ರಂದು, ಮರುಜನ್ಮ ನೀಡಿದರು. ಮನಮೋಹನ್ ದಾಲ್ಮಿಯಾ 'ಕ್ರಿಕೆಟ್ ನ್ನು ವಾಣಿಜ್ಯೀಕರಿಸಿದರು', ಪ್ರೋತ್ಸಾಹವನ್ನು, 'ಬಿಸಿಸಿಐ ಮಾಜಿ ಅಧ್ಯಕ್ಷ', 'ಶರದ್ ಪವಾರ್', ಜೀವಂತವಾಗಿರಿಸಿದ ಹೆಗ್ಗಳಿಕೆ 'ಲಲಿತ್ ಮೋದಿ' ಯವರದು. ಡ್ಯೂಕ್ ವಿಶ್ವವಿದ್ಯಾನಿಲಯದ 'ಎಂಬಿಎ', 'ಹೈಫ್ಲಯಿಂಯಿಂಗ್ ಬದುಕು'. ಅಲ್ಲಿ ವ್ಯಾಸಂಗಮಾಡುತ್ತಿದ್ದಾಗ, ಮಾದಕದ್ರವ್ಯ ಕೊಕ್ಕೆನ್, ಹೊಂದಿದ್ದ ಹಾಗೂ ಒಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕೋರ್ಟ್ ವಿಚಾರಣೆ ಎದುರಿಸಬೆಕಾಯಿತು. ಚಾಲಾಕಿತನದಿಂದ ಮೋದಿ, ಅನಾರೋಗ್ಯದ ಕಾರಣವನ್ನು ಒಡ್ಡಿ ಭಾರತಕ್ಕೆ ವಾಪಸ್ಸಾಗಿ ಶಿಕ್ಷೆಯನ್ನು ತಪ್ಪಿಸಿಕೊಂಡರು.

ಪರಿವಾರ

[ಬದಲಾಯಿಸಿ]

ಮನೆಯ ಸಂಬಂಧಿಕರೆಲ್ಲರ ಒಪ್ಪಿಗೆಪಡೆಯದೆ, ಹೆತ್ತವರ ವಿರೋಧ ಎದುರಿಸಿ, ತಾಯಿಯ ಸ್ನೇಹಿತೆಯನ್ನು ಮದುವೆಯಾದರು. ತಂದೆಯಮನೆಯಿಂದ ಹೊರಬಂದು, ರುಚಿರ್, ಅಲಿಯಾ, ಹಾಗೂ, ಮಲಮಗಳು ಕರೀಮಾಜೊತೆ ಮುಂಬೈನಲ್ಲಿ, ವಾಸ್ತವ್ಯಹೂಡಿದರು. ಭಾರತದಲ್ಲಿ 'ಎಫ್ ಟಿವಿ'ಯ ಅವತಾರವಾದ ಮೋದಿ ಎಂಟರ್ ಟೇನ್ ಮೆಂಟ್ ನೆಟ್ ವರ್ಕ್ಶ್ ಸ್ಥಾಪನೆಮಾಡಿದರು. ಈ ಮೊದಲು ಇಎಸ್ಪಿಎನ್ನೋಡಿಕೊಳ್ಳುತ್ತಿತ್ತು. ಮೊದಮೊದಲು ಮೋದಿಯವರ ಆಸಕ್ತಿ, ಫುಟ್ ಬಾಲ್, ಟೆನ್ನಿಸ್ ಆಟಗಳ ಕಡೆಗಿತ್ತು. ನಂತರ ಕ್ರಿಕೆಟ್ ಕಡೆವಾಲಿದ್ದು ಇತಿಹಾಸ.

ಕ್ರಿಕೆಟ್ ವಲಯದಲ್ಲಿ

[ಬದಲಾಯಿಸಿ]

ಹಿಮಾಚಲ ಪ್ರದೇಶದ ಕ್ರಿಕೆಟ್ ಅಸೋಸಿಯೇಷನ್, ಆಗಿನ ಮುಖ್ಯಮಂತ್ರಿ, 'ಪ್ರೇಮ್ ಕುಮಾರ್ ಧಮಾಲ್' ಗೆ ಕ್ರಿಕೆಟ್ ಸ್ಟೇಡಿಯಮ್ ಒಂದನ್ನು ನಿರ್ಮಿಸಿ, ಭಾರತದ ಬೇಸಿಗೆ ಕ್ರಿಕೆಟ್ ತವರೂರನ್ನಾಗಿ ಮಾಡುವ ಸಲಹೆಯನ್ನು ನೀಡಿ ಅವರ ಮನಸ್ಸನ್ನು ಒಲಿಸಿಕೊಂಡರು. ಪ್ರಭಾವಿತರಾದ 'ಧಮಾಲ್' ರವರು, ಮೋದಿಯವರನ್ನು ತಮ್ಮ ಪ್ರತಿನಿಧಿಯಾಗಿ, ಮುಂಬೈನ 'ಬಿಸಿಸಿಐ'ಗೆ ಕಳಿಸಿಕೊಟ್ಟರು. 'ಬಿಜೆಪಿ ಪಕ್ಷದ ಮುಖ್ಯಮಂತ್ರಿ ವಸುಂಧರಾರಾಜೆ'ಯವರ ಸಹಕಾರದಿಂದ 'ಅಸೋಸಿಯೇಶನ್ ಅಧ್ಯಕ್ಷ'ರಾದರು. ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡಾಗ, ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಬಿಎಸ್ ಬಿಂದ್ರಾರವರು ಅಧ್ಯಕ್ಷರಾಗಿದ್ದಾಗ,ಮೋದಿಯವರನ್ನು ಉಪಾಧ್ಯಕ್ಷರನ್ನಾಗಿ ಮಾಡಿದರು. ಮುಂದೆ ಕೇಂದ್ರ ಸರ್ಕಾರದ ಕೃಷಿಮಂತ್ರಿ, ಶರದ್ ಪವಾರ್ ಜೊತೆ ಸಂಬಂಧ ಬೆಳೆಯಿತು. ಬಿಸಿಸಿಐ ಚುನಾವಣೆಯಲ್ಲಿ ಜಗಮೋಹನ್ ದಾಲ್ಮಿಯಾ ಪರಾಭವಗೊಂಡು, ಶರದ್ ಪವಾರ್ ಅಧಿಕಾರಕ್ಕೆ ಬಂದರು.ಬಿಸಿಸಿಐ ಆದಾಯ ೧ ಮಿಲಿಯನ್ ಡಾಲರ್ ಗೆ ಏರಿದರೆ, ಐಪಿಎಲ್ ಆದಾಯ, ೪ ಮಿಲಿಯನ್ ಡಾಲರ್ ಆಯಿತು. ವಿದೇಶಿ ಹವಾಲದ ಸಹಾಯ ಪಡೆದು ತಮ್ಮ ಸಬಂಧೀಕರಿಗೆ, ಐಪಿಎಲ್ ಪ್ರಾಂಚೆಸಿ ದೊರಕಿಸಿಕೊಟ್ಟರು. ಲಲಿತ್ ಕುಮಾರ್ ಮೋದಿ.

ಮೋದಿಯವರ ಪ್ರಭಾವಿ ಜೀವನ ಶೈಲಿ

[ಬದಲಾಯಿಸಿ]

ಲಲಿತ್ ಕುಮಾರ್ ಮೋದಿಯವರು, ತಮ್ಮ ವರ್ಚಸ್ಸನ್ನು ಎಲ್ಲರಮೇಲೆ ಜಮಾಯಿಸಿ, ಯಾರ ವಿರೋಧಕ್ಕೂ ಬಲಿಯಾಗದೆ, ತಮಗೆ ಬೇಕಾದಂತೆ ತಮ್ಮ ಐಶಾರಾಮದ ಜೀವನ ಶೈಲಿಯನ್ನು ಅಳವಡಿಸಿಕೊಂಡು ಎಲ್ಲರ ಮಧ್ಯೆ ಸರಾಗವಾಗಿ ಓಡಾಡಿಕೊಂಡಿದ್ದರು. ಅತ್ಯಂತ ದುಬಾರಿ ಜೀವನ ಅವರದಾಗಿತ್ತು.

  • ಸ್ವಂತ ವಿಮಾನ, (೯೬ ಕೋಟಿಬೆಲೆಯ, ೧೩ ಸೀಟ್ ಗಳ,ಬೊಂಬಾರ್ಡೈರ್ ಚಾಲೆಂಜರ್ ೩೦೦)
  • ಯಾಟ್ (ವಿಹಾರ ನೌಕೆ),
  • ಐಷಾರಾಮಿ ಕಾರುಗಳು
  • ಮಿಸ್ ಬಾಲಿವುಡ್, ಮತ್ತು ಐಪಿಎಲ್ ಸುಂದರಿಯರ ಸಹವಾಸ,

ಶಶಿ ತರೂರ್ ಮತ್ತು ಮೋದಿಯವರ ಮಧ್ಯೆ ವಿವಾದಗಳು

[ಬದಲಾಯಿಸಿ]

ಶಶಿ ತರೂರ್ ಮೇಲೆ ಮೋದಿ ಒತ್ತಡತಂದು, ವಿವಾದ ನಿರ್ಮಿಸಿದರು. ಸ್ನೇಹಿತೆ, ಗೆಬ್ರಿಯೆಲ ದೆಮೆತ್ರಿಯೇಟ್ಸ್, ಸಹವಾಸದಿಂದ ಪಾರಾಗಲು, ಅವಳಿಗೆ ಭಾರತದ ವೀಸಾ ದೊರಕದಂತೆ ತಡೆಯಲು, ವಿದೇಶಾಂಗ ಖಾತೆ ರಾಜ್ಯ ಸಚಿವ, ತರೂರ್ ಮೇಲೆ ಒತ್ತಾಯ ಹೇರಿದರು. ಇದು ಮೊಟ್ಟಮೊದಲ ವಿವಾದಕ್ಕೆ ಶ್ರೀಗಣೇಶಕ್ಕೆ ಕಾರಣ. ತರೂರ್ ಸಹಕರಿಸದಿದ್ದಾಗ, ಅವರ ಸ್ನೇಹಿತೆ, ಸುನಂದಾ ಪುಷ್ಕರ್ ಷೇರು ಹೊಂದಿದ್ದ, ಕೊಚ್ಚಿತಂಡದ ಫ್ರಾಂಚೈಸಿ ವಿವರಗಳನ್ನು ಅಂತರ್ಜಾಲದ ಟ್ವಿಟರ್ ಸೈಟ್ ನಲ್ಲಿ ಬಹಿರಂಗಪಡಿಸಿದರು.

ಹಲವಾರು ಆರೋಪಗಳು

[ಬದಲಾಯಿಸಿ]
  • ರಹಸ್ಯ ಷೇರ್ ಗಳು,ಪ್ರಸಾರದ ಹಕ್ಕಿನಲ್ಲಿ ಅವ್ಯವಹಾರ, ಹೊರ ಫ್ರಾಂಚೈಸ್ ಹರಾಜಿನಲ್ಲಿ ಮೋಸ,* ನಡವಳಿಕೆಯಲ್ಲಿ ನಯವಿಲ್ಲದಿರುವುದು, ತೆಗೆದುಕೊಳ್ಳುವ ನಿರ್ಣಯಗಳೆಲ್ಲಾ ಏಕಪಸಕ್ಷೀಯವಾಗಿದ್ದವು.
  • ಕಿಂಗ್ಸ್ ಎಲೆವೆನ್ ಪಂಜಾಬ್ ತಂಡದಲ್ಲಿ ಅವರ ಬಂಧು, ಮೋಹಿತ್ ಬರ್ಮನ್ ಷೇರ್ ಹೊಂದಿದ್ದಾರೆ. ಸುರೇಶ್ ಚೆಲ್ಲೆರಾಂ ರಾಜಾಸ್ಥಾನ್ ರಾಯಲ್ ತಂಡ ದಲ್ಲಿ ಶೇ ೪೪.೧ ರಷ್ಟು ಪಾಲುದಾರಿಕೆ ಹೊಂದಿದ್ದಾರೆ.
  • ಮೋದಿ ಮತ್ತು ಅವರ ಬಂಧುವರ್ಗ ಹೂಡಿರುವ ಹಣ, ಡಿಜಿಟಲ್, ಇಂಟರ್ನೆಟ್, ಮೊಬೈಲ್ ಹಕ್ಕು, ರಾಜಸ್ಥಾನ್ ರಾಯಲ್ಸ್ ಕಿಂಗ್ಸ್ ಇಲೆವೆನ್ ,ಪಂಜಾಬ್ ತಂಡಗಳಲ್ಲಿ, ೮೦ ಮಿಲಿಯನ್ ಡಾಲರ್ ಒಪ್ಪಂದಗಳ ವಿವರಗಳು ಬಯಲಾಗಿವೆ. ಪ್ರಸಾರದ ಹಕ್ಕು ಪಡೆಯಲುನೀಡಿರುವ ನೆರವಿನ ಹಣ, ದಲ್ಲಿ ಬ್ರಷ್ಠಾಚಾರ ನಡೆದಿದೆ. Multi Screen midia, ಸಿಂಗಪುರ್ ಕಂ, ಮತ್ತು ವರ್ಲ್ಡ್ ಸ್ಪೋರ್ಟ್ಸ್ ಸಮೂಹ ಮಾರಿಷಸ್ ನಡುವೆ ನಡೆದಿದೆ. ಲಲಿತ್ ಲಂಚವನ್ನು ಗಿಟ್ಟಿಸಿದ್ದಾರೆ. ಆಯಕರ ಇಲಾಖೆ ಹಣದ ವಿವರಗಳನ್ನು ಪಡೆಯಲು ಲಲಿತ್ ಮನೆಗೆ ದಾಳಿ ನಡೆಸಿತು.

ಉಲ್ಲೇಖಗಳು

[ಬದಲಾಯಿಸಿ]
  1. LKM, 16 February 2015
  2. Lalit Modi: ESPN profile
  3. Debaashis Bhattacharya (19 April 2009). "Who's this man?". The Telegraph. Archived from the original on 3 ಮಾರ್ಚ್ 2016. Retrieved 14 ಜುಲೈ 2017.
  4. "The other side of Lalit Modi". Indian Express. 2012-05-16. Archived from the original on 2016-05-07. Retrieved 2017-07-14.
  5. James Astill (2013). The Great Tamasha. Bloomsbury.