ಲಕ್ಷ್ಮೀ ನಾರಾಯಣ ಹಾಗೂ ಉಮಾ ಮಹೇಶ್ವರ ದೇವಸ್ಥಾನ, ಘಾಟ್ಕೋಪರ್ (ಪೂ), ಮುಂಬೈ
ಮೇಘ್ ಜೀ ವಲ್ಲಭ್ ದಾಸ್ ಟ್ರಸ್ಟ್ ನ ವತಿಯಿಂದ ಸನ್. ೧೯೦೨ ರಲ್ಲಿ ಸ್ಥಾಪಿತವಾಯಿತು. ಆಗಿನ ಕಾಲದಲ್ಲಿ ಇದು ಪ್ರಥಮ ಮಂದಿರವೆಂದು ಖ್ಯಾತಿ ಪಡೆದಿತ್ತು. ಮೇಘ್ ಜಿ ಯವರು, ಒಬ್ಬ ಪ್ರತಿಷ್ಠಿತ, ಶ್ರೀಮಂತ ವ್ಯಾಪಾರಿಯಾಗಿದ್ದರು. ಅವರ ವ್ಯಾಪಾರಶಾಖೆಗಳು ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ವ್ಯಾಪಿಸಿದ್ದವು. ಅವರ ಮಕ್ಕಳಲ್ಲಿ ಒಬ್ಬರಾದ ಪುರುಷೋತ್ತಮ್ ಸೇಠ್ ಭಾರತದ ಶ್ರೇಷ್ಠ ಉದ್ಯೋಗಪತಿ, ಜೆ.ಆರ್.ಡಿ.ಟಾಟರವರ ಸಮಕಾಲೀನರಾಗಿದ್ದರು. ಅವರು ಒಬ್ಬ ಸಮರ್ಥ ಪೈಲೆಟ್ ಎಂದು ಹೆಸರುಪಡೆದಿದ್ದರು. ಕೆಲವು ಪಾರಿತೋಷಕಗಳನ್ನೂ ಗಳಿಸಿದ್ದಾರೆ. ಮೇಘ್ ಜಿ ಮತ್ತು ಪರಿವಾರದವರು, ಭಾರತದ ಸ್ವಾತಂತ್ರ್ಯ ಸಮರದ ಸಮಯದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿದ್ದರು. ಸುಭಾಶ್ ಚಂದ್ರ ಬೋಸ್ ರವರು ಬೊಂಬಾಯಿಗೆ ಬಂದಾಗ, ಲಕ್ಷ್ಮೀ ನಾರಾಯಣ ದೇವಸ್ಥಾನದ ಅಂಗಳದಲ್ಲೇ ಉಳಿದುಕೊಂಡಿದ್ದರು. ಶೇಟ್ ಜಿಯವರ ಮತ್ತೊಬ್ಬ ಮಗ ಬರ್ಮಾಶೆಲ್ ಕಂಪೆನಿಯಲ್ಲಿ ದೊಡ್ಡ ಅಧಿಕಾರಿಯಾಗಿದ್ದರು.ಸನ್ ೧೯೮೧ ರಲ್ಲಿ, ಕಂಚಿಕಾಮಕೋಟಿ ಪೀಠದ ಜಯೇಂದ್ರ ಸರಸ್ವತಿಸ್ವಾಮಿಗಳು ಆಗಮಿಸಿ ದೇವತಾರ್ಚನೆಯನ್ನು ಮಾಡಿದ್ದರು.
ಶಿವಲಿಂಗ ಸ್ವಯಂಭು
[ಬದಲಾಯಿಸಿ]ದೇವಾಲಯದ ನಿರ್ಮಿಸಿದ ಸಮಯದಲ್ಲಿ ಆಂಗಣದಲ್ಲಿ ಭಾವಿಯೊಂದನ್ನೂ ನಿರ್ಮಣಮಾಡಿದ್ದರು. ಭಕ್ತಾದಿಗಳು ಭಾವಿಯಿಂದ ಕುಡಿಯುವ ನೀರನ್ನು ಸೇದುತ್ತಿದ್ದಾಗ ಶಿವಲಿಂಗ ಸಿಕ್ಕಿದ್ದು ಅದನ್ನೇ ಮುಂದೆ ಪ್ರತಿಷ್ಠಾಪನೆ ಮಾಡಿದರಂತೆ. ಅದೇ ಮುಂದೆ ಉಮಾ ಮಹೇಶ್ವರ್ ಮಂದಿರ್ ಯೆಂದು ಪ್ರಸಿದ್ಧಿಯಾಯಿತು. ಅನ್ನಕುಮಾತ್ಸನ್ ಉತ್ಸವದಲ್ಲಿ ೫೬ ಭೋಗಗಳಿಂದ ಉಪಾಸನೆ ಮಾಡುತ್ತಾರೆ. ಪುಷ್ಪೇಂದ್ರ ಪೂಜಾರಿ ಪರಿವಾರದವರು, ಸುಮಾರು ನೂರು ವರ್ಷಗಳಿಗಿಂತ ಹೆಚ್ಚು ಸಮಯದಿಂದ ಪೂಜಾವಿಧಾನಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.