ವಿಷಯಕ್ಕೆ ಹೋಗು

ರೀಗಲ್ ಸಿನೆಮಾ ಥಿಯೇಟರ್, ದಕ್ಷಿಣ ಮುಂಬೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರೀಗಲ್ ಸಿನೆಮಾ ಇಂದ ಪುನರ್ನಿರ್ದೇಶಿತ)
'ರೀಗಲ್ ಸಿನೆಮಾ ಥಿಯೇಟರ್,ಮುಂಬಯಿ'

ರೀಗಲ್ ಸಿನೆಮಾ ಮಂದಿರ ದಕ್ಷಿಣ ಮುಂಬಯಿ ನಗರದಲ್ಲಿ ೧೯೩೩ ರಲ್ಲಿ ಶುರುವಾಯಿತು. ಅಂದಿನ ದಿನಗಳಲ್ಲಿ 'ಆರ್ಟ್ ಡೆಕೊ,' ಸಿನೆಮಾಗೃಹಗಳು ನಗರದಲ್ಲಿ ಭಾರಿ ಹೆಸರು ಮಾಡಿದ್ದವು. ಕೆಲವೇ ಚಿತ್ರಮಂದಿರಗಳನ್ನು ಹೊಂದಿದ್ದ ಆಗಿನ ಮುಂಬಯಿ ನಗರದಲ್ಲಿ 'ರೀಗಲ್ ಚಿತ್ರಮಂದಿರ', ಅತ್ಯಾಧುನಿಕ ಚಿತ್ರಮಂದಿರವೆಂದು ಪರಿಗಣಿಸಲ್ಪಟ್ಟಿತ್ತು. ಇದರ ವಿನ್ಯಾಸ ಹಾಗೂ ನಿರ್ಮಾಣ ಕಾರ್ಯವನ್ನು ಚಾರ್ಲ್ಸ್ ಸ್ಟೀವನ್ಸ್ ನಿರ್ವಹಿಸಿದರು. ಭವನದ ಒಳಗಿನ ಅಲಂಕಾರದ ನಿರ್ವಹಣೆಯನ್ನು ಕಾರ್ಲ್ ಸ್ಕಾರ್ ಒಪ್ಪಿಕೊಂಡರು.

ರೀಗಲ್ ಸಿನೆಮಾ ಮುಂಬಯಿನ ಪ್ರಖ್ಯಾತ ಗೇಟ್ವೆ ಆಫ್ ಇಂಡಿಯದ ಹತ್ತಿರವೇ ಇದೆ. ರೀಗಲ್ ವೃತ್ತದಲ್ಲಿ ಕಟ್ಟಲಾಗಿದ್ದ ರಾಜಯೋಗ್ಯವಾದ ಈ ಭವ್ಯ ಚಿತ್ರಮಂದಿರಕ್ಕೆ ರೀಗಲ್ ಸಿನೆಮ ಎಂಬ ಹೆಸರೂ ಬಂತು. ಇಲ್ಲಿ ಪ್ರದರ್ಶಿತಗೊಂಡ ಅತಿಹೆಚ್ಚಿನ ಹಾಲಿವುಡ್ ಚಿತ್ರಗಳು ವಿಶ್ವದ ಹಲವು ನಗರಗಳಲ್ಲಿ ಪ್ರದರ್ಶನಗೊಂಡಿದ್ದು, ಅತಿ ದೊಡ್ಡಹೆಸರನ್ನು ಮಾಡಿದ ಚಿತ್ರಗಳು. ಹಿಂದಿ ಚಿತ್ರಗಳೂ ಸಾಕಷ್ಟು ಪ್ರಮಾಣದಲ್ಲಿ ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿದ್ದವು. ಈಗಲೂ ಈ ಚಿತ್ರಮಂದಿರದಲ್ಲಿ ಚಿತ್ರವನ್ನು ವೀಕ್ಷಿಸುವುದು ಒಂದು ಪ್ರತಿಷ್ಥೆಯ ಸಂಕೇತವೆಂದು ಮುಂಬಯಿ ನಗರದ ಯುವಕ-ಯುವತಿಯರು ಭಾವಿಸುತ್ತಾರೆ.