ರಾಜಾಬಾಯಿ ಟವರ್, ಮುಂಬಯಿ

ವಿಕಿಪೀಡಿಯ ಇಂದ
(ರಾಜಾಬಾಯಿ ಟವರ್, ಮುಂಬೈ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ರಾಜಾಬಾಯಿ ಗೋಪುರ,ಮುಂಬಯಿ'

ರಾಜಾಬಾಯಿ ಟವರ್, [೧]ದಕ್ಷಿಣ ಮುಂಬಯಿನ ಮುಂಬಯಿವಿಶ್ವವಿದ್ಯಾಲಯದ ಪರಿಸರದಲ್ಲಿ 'ಕಾನ್ವೊಕೇಶನ್ ಕಟ್ಟಡ'ದ ಪಕ್ಕದಲ್ಲೇಯೇ ನಿರ್ಮಿಸಲ್ಪಟ್ಟಿದೆ. ಇದನ್ನು ನಿರ್ಮಿಸಿದ ವಾಸ್ತುಶಿಲ್ಪಿ, 'ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್'ರವರು. ಭಾರತದ ವಾಣಿಜ್ಯ ರಾಜಧಾನಿ ಮುಂಬಯಿನಗರದಲ್ಲಿ 'ಗಿಲ್ಬರ್ಟ್ ಸ್ಕಾಟ್' ಕೆಲವೇ ಕಟ್ಟಡಗಳನ್ನು ನಿರ್ಮಿಸಿದರು. ಅವರು ತಮ್ಮ ಅನುಪಮ ಕಾರ್ಯವನ್ನು ಬ್ರಿಟನ್ ಮತ್ತು ಹಲವಾರು ದೇಶಗಳಲ್ಲಿ ನಡೆಸಿಕೊಂಡುಬಂದರು.

'ರಾಜಾಬಾಯಿ ಟವರ್' ಐತಿಹ್ಯ[ಬದಲಾಯಿಸಿ]

'ಮುಂಬಯಿನ ಕೋಟೆ ಪ್ರದೇಶದಲ್ಲಿ ಈ ಗಡಿಯಾರ ಗೋಪುರ, ಪಕ್ಕದಲ್ಲಿ ಕಾನ್ವೊಕೇಶನ್ ಕಟ್ಟಡವಿದೆ'.

ಮುಂಬಯಿನಗರದ,'ಸ್ಟಾಕ್ ಎಕ್ಸ್ ಚೇಂಜ್,' ಸ್ಥಾಪಕ, 'ಪ್ರೇಮ್ ಚಂದ್ ರಾಯ್ ಚಂದ್', ತಮ್ಮ ತಾಯಿಯವರ ಹೆಸರನ್ನು ಗಡಿಯಾರದ ಗೋಪುರಕ್ಕೆ ಇಟ್ಟರು. ರಾಜಾಬಾಯಿಯವರು, ಆಗಿನ ಕಾಲದ ಬೊಂಬಾಯಿನ ಅತ್ಯಂತ ಪ್ರಖ್ಯಾತ ಶ್ರೀಮಂತ ಹತ್ತಿ ವರ್ತಕ, ಮತ್ತು ' ದಲಾಲ್, 'ಪ್ರೇಮ್ ಚಂದ್ ರಾಯ್ ಚಂದ್ ರವರ ತಾಯಿಯವರು. ಅವರ ಹೆಸರಿನಲ್ಲಿ ರಾಜಾಬಾಯಿ ಗಡಿಯಾರದ ಟವರ್ ನ್ನು ನಿರ್ಮಾಣ ಮಾಡುವುದು 'ಪ್ರೇಮ್ ಚಂದ್ ರಾಯ್ ಚಂದ್' ರವರ ಉದ್ದಿಶ್ಯವಾಗಿತ್ತು. ಅಂದಿನ ಬ್ರಿಟಿಷ್ ಸರ್ಕಾರವನ್ನು ಸಂಪರ್ಕಿಸಿ ತಮ್ಮ ಆಸೆಯನ್ನು ತಿಳಿಸಿದರು. ಆಗ ತಾನೆ ಬೊಂಬಾಯಿನ ವಿಶ್ವವಿದ್ಯಾಲಯ 'ಫೋರ್ಟ್' ವಲಯದಲ್ಲಿ ಸ್ಥಾಪನೆಯಾಗಿತ್ತು. "ಪದವಿದಾನ ಸಮಾರಂಭದ ಭವ್ಯ ಕಟ್ಟಡ', ದ ಪಕ್ಕದಲ್ಲೇ ಇದನ್ನು ಕಟ್ಟಲು ಅನುಮತಿದೊರೆಯಿತು. 'ರಾಯ್ ಚಂದ್,' ಇಂಗ್ಲೆಂಡ್ ನ 'ಪಾರ್ಲಿಮೆಂಟ್ ಹೌಸ್,' ನ 'ಬಿಗ್ ಬೆನ್ ಗಡಿಯಾರಗೋಪುರ', ವನ್ನು ಕಂಡು ಪ್ರಭಾವಿತರಾಗಿದ್ದರು. ಅಂತಹದೇ ಭವ್ಯ ಕಟ್ಟಡವನ್ನು 'ಬೊಂಬಾಯಿನ ವಿಶ್ವವಿದ್ಯಾಲಯದ ಕ್ಯಾಂಪಸ್' ನಲ್ಲಿ ನಿರ್ಮಿಸುವುದು, ಅವರ ಮಹದಾಸೆಯಗಿತ್ತು. ಈ ಕಾರ್ಯ, ಅವರಿಗೆ, ಅತ್ಯಂತ ಪ್ರತಿಶ್ಠೆಯಸಂಕೇತವೂ ಆಗಿತ್ತು. ಪ್ರೇಮ್ ಚಂದ್ ರಾಯ್ ಚಂದ್ ರವರ ತಾಯಿಯವರಿಗೆ, ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲ. ಆಕೆ, ಜೈನ ಮತಸ್ಥರು. ಮನೆಯಲ್ಲಿ, ಹೊತ್ತು ಮುಳುಗುವುದರೊಳಗೆ ಊಟವನ್ನು ಮಾಡುವ ಪರಿಪಾಠವಿತ್ತು. ಸಾಯಂಕಾಲ, ಗಡಿಯಾರದ ಗಂಟೆ ಹೊಡೆದಾಗ, ಅವರಿಗೆ ಸಮಯದ ಅರಿವಾಗುತ್ತಿತ್ತು. ಸಾಮಾನ್ಯವಾಗಿ, ಅಂದಿನ ದಿನಗಳಲ್ಲಿ ಯಾರ ಬಳಿಯೂ ಗಡಿಯಾರವಿರುತ್ತಿರಲಿಲ್ಲ. ಕೈಗಡಿಯಾರ, ಕೇವಲ ಅತ್ಯಂತ ಶ್ರೀಮಂತರು ಬಳಸುತ್ತಿದ್ದರು. 'ರಾಜಾಬಾಯಿ ಗೋಪುರ ಗಡಿಯಾರ,' ದ ಘಂಟೆಯನಾದ, ಸುಮಾರು ಒಂದು ಮೈಲಿಯವರೆಗೆ ಕೇಳಿಸುತ್ತಿತ್ತು. ಇದರಿಂದಾಗಿ,ಯಾರಸಹಾಯವೂ ಇಲ್ಲದೆ ರಾಜಾಬಾಯಿಯವರು, ತಮ್ಮ ನೇಮದಂತೆ ದಿನ-ನಿತ್ಯದ ಕೆಲಸಗಳನ್ನು ಮಾಡಿಕೊಳ್ಳಲು ನೆರವಾಯಿತು. ತಮ್ಮ ತಾಯಿಯವರಿಗೆ, 'ಪ್ರೇಮ್ ಚಂದ್ ರಾಯ್ ಚಂದ್'ನೀಡಿದ ಪ್ರೀತಿಯ ಕೊಡುಗೆ

'ರಾಜಾಬಾಯಿ ಗಡಿಯಾರದ ಗೋಪುರ, ನಿರ್ಮಾಣ ಕಾರ್ಯ[ಬದಲಾಯಿಸಿ]

'ರಾಜಾಬಾಯಿ ಕ್ಲಾಕ್ ಟವರ್',[೨] ನಿರ್ಮಾಣಕಾರ್ಯ, ೧೮೭೮ ರಲ್ಲಿ ಮುಗಿಯಿತು. ದಕ್ಷಿಣ ಮುಂಬೈ ನ 'ಕೋಟೆ' ಪ್ರದೇಶದಲ್ಲಿರುವ ಇದನ್ನು, ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ತಗುಲಿದಂತೆ ಕಟ್ಟಲಾಗಿದೆ. ಟವರ್ ಎತ್ತರ, ೮೫ ಮೀಟರ್ (೨೮೦ ಅಡಿ). 'ರಾಜಾಬಾಯಿ ಟವರ್,' ನ್ನು ಆಗಿನಕಾಲದ ವಿಖ್ಯಾತ ಬ್ರಿಟಿಷ್ ಕಟ್ಟಡ ನಿರ್ಮಾಪಕ, 'ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್,' ರವರು, ಕಟ್ಟಿದರು. ಇದರ ವಿನ್ಯಾಸ, ಲಂಡನ್ ನಗರದ, 'ಬಿಗ್ ಬೆನ್ ಗಡಿಯಾರ ಗೋಪುರ,' ವನ್ನು ಹೋಲುತ್ತದೆ. ಈ ಕಟ್ಟಡದ ಶಂಕುಸ್ಥಾಪನೆಯನ್ನು ಮಾರ್ಚ್ ೧, ೧೮೬೯ ರಲ್ಲಿ ಮಾಡಲಾಯಿತು. ನವೆಂಬರ್, ೧೮೭೮. ರಲ್ಲಿ ಕೆಲಸ ಮುಗಿಯಿತು. ಟವರ್ ಕಟ್ಟಡಕ್ಕೆ ತಗುಲಿದ ಒಟ್ಟು ಖರ್ಚು ೨ ಲಕ್ಷ ರೂಪಾಯಿಗಳು. 'Premchand Roychand', 'Bombay Stock Exchange,' ನ 'ಸ್ಥಾಪಕಮಹಾಶಯರು'. ಅವರು ಒಬ್ಬ 'ದಳಾಳಿ' ಯಾಗಿ, ಕಾರ್ಯನಿರ್ವಹಿಸುತ್ತಿದ್ದರು. ಸಾರ್ವಜನಿಕರು ಈ ಗೋಪುರದೆ ಮೇಲ್ಭಾಗದ ವರೆವಿಗೂ ಹೋಗಿ, ಅಲ್ಲಿಂದ ಬೊಂಬಾಯಿ ನಗರದ ನಸರ್ಗಿಕ ಸೌಂದರ್ಯವನ್ನು ಕಂಡು ಆನಂದಿಸುತ್ತಿದ್ದರು. ಇಂತಹ 'ಪ್ರಖ್ಯಾತ ಗಡಿಯಾರದ ಗೋಪುರ', ಎಲ್ಲರ ಮನಸೆಳೆದಾಗ್ಯೂ, ಭಗ್ನ-ಪ್ರೇಮಿಗಳು, ಅಲ್ಲಿಂದ ಬಿದ್ದು 'ಆತ್ಮಹತ್ಯೆ' ಮಾಡಿಕೊಳ್ಳುತ್ತಿದ್ದ ಪ್ರಸಂಗ ಬೇಸರವನ್ನು ತಂದಿತು. ಆದ್ದರಿಂದ ಈ ಪ್ರಸಂಗದ ತರುವಾಯ, ಸಾರ್ವಜನಿಕ ವೀಕ್ಷಣೆಯನ್ನು ಬಂದ್ ಮಾಡಲಾಯಿತು.

'ರಾಜಾಬಾಯಿ ಟವರ್' ಕಟ್ಟಡದ ವಿನ್ಯಾಸ  :[ಬದಲಾಯಿಸಿ]

ಇನ್ನೊಂದು ದೃಶ್ಯ

(Venitiyan) ವೆನಿಟಿಯನ್ ಮತ್ತು (Gothic) ಗೋಥಿಕ್ ಶೈಲಿಯಲ್ಲಿ ಕಟ್ಟಲಾಗಿದೆ. ಬೊಂಬಾಯಿನ ಹತ್ತಿರ ಸಿಗುವ 'ಕುರ್ಲ ಸ್ಟೋನ್' ನ್ನೆ ಬಳಸಿಕೊಂಡು ಕಟ್ಟಿದ್ದಾರೆ. ಬೊಂಬಾಯಿನಗರದಲ್ಲೇ ವಿಶೇಷವಾಗಿದ್ದ, 'ಸ್ಟೇನ್ಡ್ ಗ್ಲಾಸ್ ಕಿಟಕಿ' ಗಳ ಉಪಯೋಗವನ್ನು ಮಾಡಿದ್ದಾರೆ. ಕೆಳಗಿನ ಮಹಡಿಯಲ್ಲಿ ಎರಡು ಅಕ್ಕ-ಪಕ್ಕದ ಕೊಠಡಿಗಳಿವೆ. ಇವುಗಳ ಅಳತೆ, (೫೬ x ೨೭.೫ ಅಡಿ (೧೭ x ೮.೫ ಮೀಟರ್) ಇದೆ. ಟವರ್ ಗೆ ಒಂದು ೨.೪ ಚದರ ಮೀಟರ್ (೨೬ ಚದರ ಗಜ), 'ಕ್ಯಾರಿಯೇಜ್ ಪೋರ್ಚ್', ಮತ್ತು ವೃತ್ತಾಕಾರವಾಗಿ ಮೇಲಕ್ಕೆ ಹೋಗುವ 'ಸ್ಟೇರ್ ಕೇಸ್,' ಇದೆ. ೨.೬ ಚದರ ಮೀಟರ್ಗಳ ಅಳತೆಯ ವಿಶಾಲವಾದ 'ದಿವಾನಖಾನೆ,' ಇಮಾರತ್ತಿನ ಸೌಂದರ್ಯವನ್ನು ಇಮ್ಮಡಿಸುತ್ತದೆ. (೨೮ ಚದರ ಗಜ) ಅಳತೆಯ 'ಕ್ಯಾರಿಯೇಜ್', 'ಚೌಕಾರದ ರೂಪದ ಪೊರ್ಚ್', ಮೇಲಿನ ಗ್ಯಾಲರಿವರೆಗೆ ಹಮ್ಮಿಕೊಂಡಿದೆ. ಮೊದಲ ಮಹಡಿಯ ಎತ್ತರ. ೬೮ ಅಡಿ (೨೦.೭ ಮೀಟರ್) ಕೆಳಗಿನ ನೆಲದಿಂದ 'ಚೌಕಾಕಾರ' ದಿಂದ 'ಅಷ್ಟಚತುರ್ಭುಜ' ದ ಆಕಾರವಾಗಿದೆ. ಈ ಗ್ಯಾಲರಿಯಿಂದ ಟವರ್ ಮೇಲಿನವರೆಗೆ, ೧೧೮ ಅಡಿ ಇದೆ. (೩೬ ಮೀಟರ್) ಮತ್ತು ೩ ನೆಯ ಹಂತದಿಂದ ಕೊನೆಯವರೆಗೆ, 'ಸಿಂಗಾರ' ಕ್ಕಾಗಿ ನಿರ್ಮಿಸಿದ್ದಾರೆ. ಕಟ್ಟಿದ ಕೊನೆಯ ಅಂತಸ್ತಿನವರೆಗೆ, ೯೪ ಅಡಿ (೨೮.೭ ಮೀಟರ್), ಒಟ್ಟು ಎತ್ತರ ೨೮೦ ಅಡಿ. ಈ ಕಟ್ಟಡ ನಿರ್ಮಾಣವಾದ ಸಮಯದಲ್ಲಿ, ಬೊಂಬಾಯಿನ ಅತ್ಯಂತ ಎತ್ತರದ ಕಟ್ಟಡವಾಗಿತ್ತು. ನಂತರದ ದಿನಗಳಲ್ಲಿ ಹಲವಾರು ಭಾರಿ ಕಟ್ಟಡಗಳು ಬೊಂಬಾಯಿನ ಪರಿಸರದಲ್ಲಿ ಕಾಣಿಸಿಕೊಳ್ಳಲಾರಂಭಿಸಿದವು.

ಗೋಪುರದ ಗಡಿಯಾರದ ಘಂಟಾನಾದ[ಬದಲಾಯಿಸಿ]

ಬ್ರಿಟಿಷ್ ರಾಜ್ಯಾಡಳಿತದ ಸಮಯದಲ್ಲಿ " God save the king, Home sweet home, Rule Britannia and A Handel Symphony ", ಹಾಡುಗಳನ್ನು ಸಮಾರಂಭಗಳಲ್ಲಿ ಜನರಿಂದ ಸುಶ್ರಾವ್ಯವಾಗಿ ಹಾಡಲಾಗುತ್ತಿತ್ತು.ಈ ಸಂಗೀತ ಲಹರಿಯನ್ನು ನಿರ್ಮಿಸಿದವರು, ಜರ್ಮನ್ ಇಂಗ್ಲೀಷ್ ಮೂಲದ, ಜಾರ್ಜ್ ಫ್ರೆಡರಿಕ್ ಹ್ಯಾಂಡೆಲ್ (1685-1759)ಯೆಂಬ ಸಂಗೀತಗಾರರು. ಗಡಿಯಾರದ ಅಲಾರಾಂನಲ್ಲೂ ಗಾನ ಸಿರಿಯನ್ನು ಅಳವಡಿಸಿದ್ದರು. ಮೊದಲು ೧೬ ಟ್ಯೂನ್ಸ್ ಇತ್ತು. ಇದು ದಿನದಲ್ಲಿ ೪ ಬಾರಿ ಕೇಳಿಬರುತ್ತಿತ್ತು. ಈಗ ಒಂದು ರಾಗವನ್ನು ಪ್ರತಿ ೧೫ ನಿಮಿಷಗಳಿಗೊಮ್ಮೆಯಂತೆ ಬಾರಿಸಲು ವ್ಯವಸ್ಥೆ ಮಾಡಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Mumbai-Commercial Capital of India, 'Rajabai Tower,Mumbai'
  2. Only Mumbai-Rajabai Tower-Mumbai University