ಮುಂಡ್ಕೂರು
ಗೋಚರ
ಮುಂಡ್ಕೂರು | |
---|---|
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ | |
ರಾಷ್ಟ್ರ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಉಡುಪಿ |
ತಾಲೂಕು | ಕಾರ್ಕಳ |
ಗ್ರಾಮ ಪಂಚಾಯತ್ | ಮುಂಡ್ಕೂರು |
ಮುಂಡ್ಕೂರು (ಮುಂಡೇರ್, ಮುಂಡುಕೂರು, Mundkur, Mundukuru, Mundkooru) ಉಡುಪಿ ಜಿಲ್ಲೆಯ ತೆಂಕಣ ಗಡಿ ಭಾಗದ ಒಂದು ಗ್ರಾಮ. ಮುಂಡ್ಕೂರಿನ ಪಶ್ಚಿಮ ಮತ್ತು ದಕ್ಷಿಣದಲ್ಲಿ ಮಂಗಳೂರು ತಾಲೂಕಿಗೆ ಸೇರಿದ ಉಳೆಪಾಡಿ, ಕರ್ನಿರೆ, ಕಲ್ಲಮುಂಡ್ಕೂರು ಇತ್ಯಾದಿ ಗ್ರಾಮಗಳು ಇವೆ.
ಮಾರ್ಗಸೂಚಿ
[ಬದಲಾಯಿಸಿ]ಮಂಗಳೂರು ತಾಲೂಕಿನ ಕಿನ್ನಿಗೋಳಿ ಸನಿಹ ಮೂರುಕಾವೇರಿಯಿಂದ ದಾಮಸ್ಕಟ್ಟೆ ಸಂಕಲಕರಿಯದ ಮೂಲಕ ಬೆಳ್ಮಣ್ಣುಗೆ ಹೋಗುವ ರಾಜ್ಯ ರಸ್ತೆಯಲ್ಲಿ ಮುಂಡ್ಕೂರು ಗ್ರಾಮವಿದೆ. ಮೂರುಕಾವೇರಿಗೆ ಮುಲ್ಕಿ, ಹಳೆಯಂಗಡಿ, ಕಿನ್ನಿಗೋಳಿ, ಮೂಡಬಿದ್ರೆ, ಕಟೀಲು ಕಡೆಗಳಿಂದ ಹೋಗಲು ರಸ್ತೆಗಳಿವೆ. ಹಾಗೆಯೇ, ಬೆಳ್ಮಣ್ಣುಗೆ ಪಡುಬಿದ್ರಿ (ಪಡ್ಡೆದ್ರ) , ಶಿರ್ವಾ, ನಿಟ್ಟೆ, ಕಾರ್ಕಳ ಕಡೆಗಳಿಂದ ಬರಲು ರಸ್ತೆಗಳಿವೆ.
- ಮಂಗಳೂರಿನಿಂದ ಬರುವವರಿಗೆ (1) ಬಿಜೈ-(ಬೊಂದೆಲ್)- ಕಾವೂರು-ಬಜಪೆ- ಕಟೀಲ್-ಮೂರುಕಾವೇರಿ-ಮುಂಡ್ಕೂರು ಹತ್ತಿರದ ದಾರಿ. (2) ಪರ್ಯಾಯವಾಗಿ: ಕೂಳೂರು-ಹಳೆಯಂಗಡಿ-ಪಕ್ಷಿಕೆರೆ-ಕಿನ್ನಿಗೋಳಿ- ಮೂರುಕಾವೇರಿ-ಸಂಕಲಕರಿಯ-ಮುಂಡ್ಕೂರು ಇಲ್ಲವೆ (3) ನಂತೂರು- ಕುಲಶೇಖರ- ಕುಡುಪು-ವಾಮಂಜೂರು-ಗುರುಪುರ-ಕೈಕಂಬ- ಪೆರಾರ್- ಬಜಪೆ-ಕಟೀಲು-ಮೂರುಕಾವೇರಿ-ಮುಂಡ್ಕೂರು ರಸ್ತೆಯಿಂದ ಬರಬಹುದು.
- ಉಡುಪಿಯಿಂದ ಬರುವವರಿಗೆ ಉಡುಪಿ- ಕಟಪಾಡಿ- ಶಿರ್ವ ಮಂಚಕಲ್- ಬೆಳ್ಮಣ್ಣು-ಮುಂಡ್ಕೂರು ಹತ್ತಿರದ ದಾರಿ.
- ಕಾರ್ಕಳದಿಂದ ಬರುವವರಿಗೆ ಕಾರ್ಕಳ- ನಿಟ್ಟೆ-ಬೆಳ್ಮಣ್ಣು -ಮುಂಡ್ಕೂರು ಹತ್ತಿರದ ದಾರಿ.
- ಮೂಡಬಿದ್ರಿಯಿಂದ ಬರುವವರಿಗೆ ಮೂಡಬಿದ್ರಿ -ಅಲಂಗಾರು- ಪುತ್ತಿಗೆ- ಕೊಡ್ಯಡ್ಕ-ಕಡಂದಲೆ-ಪಾಲ್ಡಡ್ಕ-ಸಚ್ಚೇರಿಪೇಟೆ-ಮುಂಡ್ಕೂರು ಹತ್ತಿರದ ದಾರಿ. ಪರ್ಯಾಯವಾಗಿ (2)ಮೂಡಬಿದ್ರಿ- ಕಲ್ಲಮುಂಡ್ಕೂರು-ಮೂರುಕಾವೇರಿ-ಮುಂಡ್ಕೂರು, ಇಲ್ಲವೆ (3) ಮೂಡಬಿದ್ರಿ-ಮಿಜಾರು-ಗಂಜಿಮಠ-ಕೈಕಂಬ- ಬಜಪೆ-ಕಟೀಲು- ಮೂರುಕಾವೇರಿ-ಮುಂಡ್ಕೂರು ದಾರಿಯಿಂದ ಬರಬಹುದಾಗಿದೆ.
ಭೌಗೋಳಿಕ ನಿರ್ದೆಶಾಂಕಗಳು
[ಬದಲಾಯಿಸಿ]ಮುಂಡ್ಕೂರು ಗ್ರಾಮದ (ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪರಿಸರದ) ಭೌಗೋಳಿಕ ನಿರ್ದೇಶಾಂಕಗಳು ಡಿಗ್ರಿ-ಮಿನಿಟ್-ಸೆಕೆಂಡುಗಳಲ್ಲಿ ಹೀಗಿವೆ:
- ಅಕ್ಷಾಂಶ: 13° 07' 42.18" N
- ರೇಖಾಂಶ: 74° 52' 00.61" E
ದುರ್ಗಾಪರಮೇಶ್ವರಿ ದೇವಸ್ಥಾನ
[ಬದಲಾಯಿಸಿ]ವಿಠೋಬ ದೇವಸ್ಥಾನ
[ಬದಲಾಯಿಸಿ]ಗರೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- Gururaja Bhat, P. (1969) Antiquities of south Canara. Prabhakar Press, Udupi. p. 31+ plates 184
- Gururaja Bhat, P. (1975,2014) Studies in Tuluva history and culture.( Second impression 2014), Dr Padur Gururaja Bhat Memorial Trust,Udupi, (original published in 1975).p. 457+ plates+preview+ appendix.
- https://searchworks.stanford.edu/view/11933303
- https://archive.org/stream/in.ernet.dli.2015.129914/2015.129914.Studies-In-Tuluva-History-And-Culture_djvu.txt