ಮ್ಯಾಗ್ನಸ್ ಕಾರ್ಲ್ಸನ್
Magnus Carlsen | |
---|---|
Full name | Sven Magnus Øen Carlsen |
Country | Norway |
Born | Tønsberg, Vestfold, Norway | ೩೦ ನವೆಂಬರ್ ೧೯೯೦
Title | Grandmaster (2004) |
World Champion | 2013–present |
FIDE rating | 2830 (ಮೇ 2024) |
Peak rating | 2882 (May 2014) |
Ranking | No. 1 (ಮೇ 2024) |
Peak ranking | No. 1 (January 2010) |
ಮ್ಯಾಗ್ನಸ್ ಕಾರ್ಲ್ಸನ್ ತಮ್ಮ ೧೩ನೇ ವಯಸ್ಸಿನಲ್ಲಿ ಚದುರಂಗದ ಚಾಂಪಿಯನ್ ಆಗಿ ೨೬ ಎಪ್ರಿಲ್ ೨೦೦೪ರಂದು ಹೊರ ಹೊಮ್ಮಿರುತ್ತಾರೆ. ಆ ಸಮಯದಲ್ಲಿ ಕಾರ್ಲ್ಸನ್ ವಿಶ್ವ ಕಂಡ ಏರಡನೆ ಅತಿ ಚಿಕ್ಕ ವಯಸ್ಸಿನ ಚಾಂಪಿಯನ್ ಆಗಿರುತ್ತಾರೆ.
ಜೀವನ
[ಬದಲಾಯಿಸಿ]೧೯೯೦ರ ನವೆಂಬರ್ ೩೦ ರಂದು ನಾರ್ವೆಯ ತೊನ್ಸ್‌ಬರ್ಗ್‍ನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಜನನ. ತಂದೆ ಹೆನ್ರಿಕ್ ಅಲ್ಬರ್ಟ್ ಮತ್ತು ತಾಯಿ ಸಿಗ್ರನ್ ಒಯಿನ್ ಇಬ್ಬರೂ ಇಂಜಿನಿಯರರು. ಹೆನ್ರಿಕ್ ಮಗನಿಗೆ ಐದನೆಯ ವಯಸ್ಸಿನಲ್ಲಿ ಚೆಸ್ ರೂಢಿಸಿದರು. ಮೊದಲು ಕಾರ್ಲ್ಸನ್‍ಗೆ ಚೆಸ್ ಅಷ್ಟೊಂದು ಇಷ್ಟವಿರಲಿಲ್ಲ. ಆದರೆ ಕಠಿಣ ನಡೆಗಳನ್ನು ಬಿಡಿಸುವಲ್ಲಿ ಪ್ರಯತ್ನ ಮುಂದುವರಿಸಿದಂತೆ ಆಸಕ್ತಿ ಹೆಚ್ಚುತ್ತ ಹೋಯಿತು. ಬೆಂಟ್ ಲಾರ್ಸೆನರ 'ಫೈಂಡ್ ದಿ ಪ್ಲ್ಯಾನ್' ಚೆಸ್ ಪುಸ್ತಕ ಓದಿದ ಬಳಿಕವಂತೂ ದಿನ ಕನಿಷ್ಠ ನಾಲ್ಕು ಬಾರಿ ಚೆಸ್ ಬೋರ್ಡ್ ಮುಂದೆ ಕೂಡಲಾರಂಭಿಸಿದರು. ಕಾರ್ಲ್ಸನ್ ಹಿನ್ನೆಲೆ ಕೆದಕಿದಾಗ ಕುತೂಹಲಕರ ಸಂಗತಿಗಳು ಸಿಗುತ್ತವೆ. ಚೆಸ್ ಆಟಗಾರರು ಚುರುಕು ಬುದ್ಧಿಯುಳ್ಳವರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅದೇ ರೀತಿ ಕಾರ್ಲ್ಸನ್ ಚಿಕ್ಕಂದಿನಿಂದಲೂ ಅತ್ಯಂತ ಬುದ್ಧಿವಂತ. ಶಾಲೆ ಬಿಟ್ಟಿದ್ದೇಕೆಂದು ಕೇಳಿದರೆ "ಅಲ್ಲಿ ಹೇಳುತ್ತಿರುವ ವಿಷಯಗಳಲ್ಲಾ ನನಗೆ ಗೊತ್ತಿದೆ. ಅದು ಅತ್ಯಂತ ಸರಳ" ಎಂದು ಉತ್ತರಿಸುತ್ತಾರೆ ಕಾರ್ಲ್ಸನ್. ಇದು ಬೊಗಳೆ ಮಾತಲ್ಲ ಸತ್ಯ ಎಂಬುದಕ್ಕೆ ತನ್ನ ಹದಿಮೂರನೇ ವಯಸ್ಸಿನಲ್ಲಿ ಗ್ರ್ಯಾಂಡ್ ಮಾಸ್ಟರ್ ಗೌರವಕ್ಕೆ ಪಾತ್ರರಾಗಿ ಈ ಪ್ರಶಸ್ತಿಗೆ ಬಾಜನರಾದ ಜಗತ್ತಿನ ಮೊದಲ ಆಟಗಾರ ಎಂಬ ಕೀರ್ತಿ ಪಡೆದಿರುವುದೆ ಸಾಕ್ಷಿ.
ವಿಶ್ವನಾಥನ್ ಆನಂದ್ ಅವರ ವಯಸ್ಸಿನ ಅರ್ಧದಷ್ಟು ವಯಸ್ಸು ಹೊಂದಿರುವ ಕಾರ್ಲ್ಸನ್ ಸದ್ಯ ಜಗತ್ತಿನ ನಂಬರ್ ಒನ್ ಆಟಗಾರರೆನಿಸಿದ್ದಾರೆ. ಬಾಬಿ ಫಿಷರ್ ನಂತರ ಈ ಸ್ಥಾನಕೇರಿದ ಅತ್ಯಂತ ಕಿರಿಯ ಆಟಗಾರ. ಎಲೋ ರೇಟಿಂಗ್ ನಲ್ಲಿ ೨೮೭೨ ಎಲೋ ರೇಟಿಂಗ್ ಪಡೆಯುವ ಮೂಲಕ ಗ್ಯಾರಿ ಕಾಸ್ವರೋವ್ ಅವರ ದಾಖಲೆಯನ್ನು ಮುರಿದರು. ೧೯ನೇ ವಯಸ್ಸಿನಲ್ಲಿ ಕಾರ್ಲ್ಸನ್ ವಿಶ್ವದ ನಂ.೧ ಆಟನಗಾರರೆನಿಸಿದರು. ಕಾರ್ಲ್ಸನ್ ಸಾಮಾನ್ಯ ಚೆಸ್ ಆಡುವಾಗ ಯೋಚಿಸುತ್ತಾ ಗಂಟೆಗಟ್ಟಲೆ ಚೆಸ್ ಬೋರ್ಡ್ ಮುಂದೆ ಕುಳಿತುಳ್ಳುವುದಿಲ್ಲ. ದೊಡ್ಡ ನಡೆ ಅಂದರೆ ೧ ಗಂಟೆ ೩೦ ನಿಮಿಷ ಅಥವಾ ೨ ಗಂಟೆ ಕಾಲ ಚೆಸ್ ಬೋರ್ಡ್ ಮುಂದೆ ಕುಳಿತುಕೊಳ್ಳುವುದಿಲ್ಲ. ಅದರ ಬದಲು ಟೀವಿ ನೋಡುತ್ತಲೋ ಅಥವಾ ಇನ್ನೇನಾದರೂ ಮಾಡುತ್ತಲೋ ಕಾಲ ಕಳೆಯುತ್ತಾರಂತೆ. ಮುಖ್ಯವಾಗಿ ಕಾರ್ಲ್ಸನ್ ಅವರಲ್ಲಿ ತಾಳ್ಮೆ ಕಡಿಮೆ. ಶಾಲೆಗೆ ಹೋಗು ಎಂದರೆ ಮನೆಯ ವರಾಂಡದಲ್ಲೇ ಕುಳಿತುಕೊಂಡು ಅಕ್ಕಂದಿರನ್ನೇ ಗೇಲಿ ಮಾಡುತ್ತಿದ್ದ ಕಾರ್ಲ್ಸನ್‍ರನ್ನು ನಿಯಂತ್ರಿಸಲು ಅವರ ತಂದೆ ಹೆನ್ರಿಕ್ ಹರ ಸಾಹಸ ಪಡುತ್ತಿದ್ದರು. ಕಾರ್ಲ್ಸನ್ ೧೨ನೇ ವಯಸ್ಸಿನಲ್ಲಿದ್ದಾಗ ಅವರ ತಂದೆ ಕಾರನ್ನು ಮಾರಿ ಒಂದು ವರ್ಷ ಮನೆಯನ್ನು ಬಾಡಿಗೆಗೆ ಕೊಟ್ಟು ದೇಶ ಸಂಚಾರ ಮಾಡಿದ ಸಂದರ್ಭದಲ್ಲಿ ಕಾರ್ಲ್ಸನ್ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಚೆಸ್ ಚಾಂಪಿಯನ್-ಷಿಪ್-ನಲ್ಲಿ ಪಾಲ್ಗೊಂಡರು. ಇದರಿಂದ ಅನುಭವ ಪಡೆದ ಕಾರ್ಲ್ಸನ್ ಅದೇ ವರ್ಷ ಗ್ಯಾರಿ ಕಾಸ್ಟರೋವ್ ಅವರೊಂದಿಗೆ ಮೊದಲ ಬಾರಿಗೆ ಪಂದ್ಯವನ್ನಾಡಿದರು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಈ ಪಂದ್ಯ ಮುಗಿದು ಐದು ವರ್ಷ ಕಳೆದ ನಂತರ ಕ್ಯಾಸ್ಟರೋವ್ ಜತೆ ಸೇರಿದರು.
ಚೆಸ್ ಆಟಗಾರನೊಬ್ಬ ಮಾಡೆಲಿಂಗ್-ನಲ್ಲಿ ಕೆಲಸ ಮಾಡಿದ್ದು ಅಪರೂಪ ಆದರೆ ಕಾರ್ಲ್ಸನ್ ನಟಿ ಲೀವ್ ಟೇಲರ್ ಅವರೊಂದಿಗೆ ಮಾಡೆಲಿಂಗ್-ನಲ್ಲಿ ತೊಡಗಿಕೊಂಡರು. ಇದೇ ವೇಳೆ ಜಿ-ಸ್ಟ್ರಾರ್ ರಾ ಉತ್ಪನ್ನಗಳ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದರು.
ಈತ ಫುಟ್ಬಾಲ್ ಹಾಗೂ ಬಾಸ್ಕೆಟ್-ಬಾಲ್ ಅಭಿಮಾನಿ ಕೂಡ. ಕಾರ್ಲ್ಸನ್ ಅವರನ್ನು ಚಿಕ್ಕಂದಿನಿಂದಲೇ ಅದ್ಭುತ ಚೆಸ್ ಪ್ರತಿಭೆ ಎಂದು ಕರೆಯಲಾಗುತ್ತಿದೆ. ಇದಕ್ಕೆ ಕಾರಣವು ಇದೆ ಎಕೆಂದರೆ ತಾನಾಡಿದ ೧೦೦೦ ಪಂದ್ಯಗಳನ್ನು ನೆನಪಿಸಿಕೊಂಡು ಅವುಗಳ ನಡೆಯನ್ನು ಹೇಳಬಲ್ಲ ಸಾಮರ್ಥ್ಯ ಕಾರ್ಲ್ಸನ್ ಅವರಿಗೆ ಇದೆ. ಅಲ್ಲದೆ ಎಕಕಾಲದಲ್ಲಿ ೨೦ ಆಟಗಾರರೊಂದಿಗೆ ಆಡಿ ಅವರನ್ನು ಸೋಲಿಸುವ ಸಾಮರ್ಥ್ಯವೂ ಇದೆ. ಇದಕ್ಕೆ ಕಾರಣ ಮುಖ್ಯವಾಗಿ ಅವರ ಆಟದ ಶೈಲಿ.
ವಿಶ್ವನಾಥ್ ಅನಂದ್ ಅವರ ಜೊತೆ ಆಟ
[ಬದಲಾಯಿಸಿ]ಚೆನ್ನೈನಲ್ಲಿ ನಡೆದ ವಿಶ್ವ ಚಾಂಪಿಯನ್‍ಶಿಪ್ ಪಂದ್ಯ ನಿರೀಕ್ಷಿತ ಪೈಪೋಟಿ ಕಾಣಲೇ ಇಲ್ಲ. ತಮ್ಮ ವೃತಿಜೀವನದಲ್ಲಿ ಇದೇ ಮೊದಲ ಬಾರಿ ಆನಂದ್ ಅವರಿಗೆ ಸೋಲು ಲಭಿಸಿತು. ಒಂದೇ ಒಂದು ಪಂದ್ಯ ಜಯಿಸದ ವಿಶಿ ಅಬಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. ಕಾರ್ಲ್ಸನ್ ಅವರು ಹನ್ನೆರಡು ಸುತ್ತುಗಳ ಹಣಾಹಣೆಯಲ್ಲಿ ಇನ್ನು ಎರಡು ಸುತ್ತುಗಳ ಆಟ ಬಾಕಿ ಇರುವ೦ತೆಯೇ ಮ್ಯಾಗ್ನಸ್ ೬.೫-೩.೫ ಅಂಕಗಳ ಚಾರಿತ್ರ್ರಿಕ ಗೆಲುವು ಪಡೆದರು. ಸ್ಪರ್ಧೆಯಲ್ಲಿ ನಡೆದ ಪಂದ್ಯಗಳಲ್ಲಿ ನಾರ್ವೆಯ ತರುಣ ಮೂರನ್ನು ಗೆದ್ದರೆ ಉಳಿದ ಏಳು ಪಂದ್ಯಾಗಳು "ಡ್ರಾ"ನಲ್ಲಿ ಅಂತ್ಯ ಕಂಡಿತು. ಎಂಟು ಗೇಮ್-ಗಳು ಮುಗಿದಾಗ ಮ್ಯಾಗ್ನಸ್ ಗೆಲುವಿನತ್ತ ದಾಪುಗಾಲು ಇಟ್ಟ್ಟಿದ್ದರೆ ಆನಂದ್ ರಿಂದ ಪವಾಡ ಮಾತ್ರ ನಡೆಯಬೇಕಿತ್ತು. ಆದರೆ ಆನಂದ್ ರವರು ಒಂಬತ್ತನೆಯ ಮಹತ್ವದ ಗೇಮ್ ನಲ್ಲಿ ಸೋತುಬಿಟ್ಟರು. ಮುಂದಿನ ಪಂದ್ಯಗಳಲ್ಲಿ ಮ್ಯಾಗ್ನಸ್ ಗೆ ಒಂದು ಡ್ರಾ ಮಾತ್ರ ಸಾಕಾಗಿತ್ತು. ಹತ್ತನೆಯ ಗೇಮ್ ನಲ್ಲಿ ನಾಲ್ಕು ತಾಸುಗಳಿಗೂ ಹೆಚ್ಚಿನ ಸೆಣಸಾಟ ನಡೆದು ಅಂತೂ ಡ್ರಾ ಆದಾಗ ಚೆಸ್ ಲೋಕ ತನ್ನ ಹೊಸ ಅಧಿಪತಿಯನ್ನು ಕಂಡಿತು. ವಿಭಿನ್ನ ಬಗೆಯ ಓಪನಿಂಗ್ಗಳು, ಮಧ್ಯಾವಧಿಯಲ್ಲಿ ಜಾಗರೂಕತೆಯ ಆಟ ಮತ್ತು ಕೊನೆಯ ಹಂತದಲ್ಲಿ ಎದುರಾಳಿಯನ್ನು ಕಂಗೆಡಿಸುವಂತಹ ಆಟದ ವೈಖರಿಯನ್ನು ರೂಡೀಸಿಕೊಂಡಿರುವ ಮಹಾಮೇಧಾವಿ ಮ್ಯಾಗ್ನಸ್ ಆನಂದ್‍ಗೆ ಮೇಲುಗೈ ಅವಕಾಶವನ್ನೆ ಕೊಡದೆ ಅದ್ಬುತ ಗೆಲುವು ಸಾಧಿಸಿದರು.ಐದು ಬಾರಿಯ ಚಾಂಪಿಯನ್ ಮತ್ತು ೨೦೦೭ರಿಂದ ಯಾರಿಗೂ ಪ್ರಶಸ್ತಿಯನ್ನು ಬಿಟ್ಟುಕೊಡದ ಆನಂದ್ ರನ್ನು ಕಂಗೆಡಿಸುವ ಮೂಲಕ ಮ್ಯಾಗ್ನಸ್ ಇಂದಿನ ಮಹಾಶಕ್ತಿ ತಾನೆಂದು ಸಾರಿದ್ದಾರೆ. ತನ್ನ ಆಟದ ಶೈಲಿಯ ಮೂಲಕ ಎದುರಾಳಿಯ ಸಹನಾ ಶಕ್ತಿಯನ್ನು ಪರೀಕ್ಷಿಸಿದ ಈ ಯುವಕ ಮಹತ್ಸಾಧನೆ ಮೆರೆದಿದ್ದಾರೆ. ೪೨ ವರ್ಷಗಳಲ್ಲಿ ವಿಶ್ವ ಚೆಸ್ ಕಿರೀಟ ಗೆಲ್ಲುತ್ತಿರುವ ಮೊದಲ ಪಾಶ್ಚಿಮಾತ್ಯನೆಂಬ ಹಿರಿಮೆ ಮತ್ತು ಸಂತೋಷ ಈತನದು.ಮೊದಲ ನಾಲ್ಕು ಆಟಗಳಲ್ಲಿ ವಿಭಿನ್ನ ಲೆಕ್ಕಾಚಾರಗಳಿಂದ ಆನಂದ್ ರಿಗೆ ಅನುಕೂಲವಾಗಿದ್ದಂತೆ ತೋರಲಿಲ್ಲ. ಮ್ಯಾಗ್ನಸ್ ವಿಶಿ ಅವರ ಡ್ರಾ ಗೆ ಅನಿವಾರ್ಯವಾಗಿ ಒಂದು ಗೇಮ್ ಬಿಟ್ಟುಕೊಡದೆ ಚಾಂಪಿಯನ್ ಆದರು.
ಮ್ಯಾಗ್ನಸ್ ಒಂದೆ ಗುರಿಯಿಂದ ಆಟದಲ್ಲಿ ತಲ್ಲೀನರಾಗುತಿದ್ದರು.ಆನಂದ್ ಜೊತೆ ಚೆನೈನಲ್ಲಿ ಸೆಣೆಸಲು ರೆಡಿಯಾಗುವ ಮೊದಲು ಎರದು ಬಾರಿ ವಿಶ್ವ ಚಾಂಪಿಯನ್ ಶಿಫ್ ಗೆ ಅರ್ಹತೆಯಾಗಿದರು.೨೦೧೩ ಮಾರ್ಚ್-ಏಪ್ರಿಲ್ ನಲ್ಲಿ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಜಯಗಳಿಸಿ ಆನಂದರಿಗೆ ಸವಾಲು ಎಸೆದಿದ್ದರು ಮ್ಯಾಗ್ನಸ್. ೨೦೦೫ರಲ್ಲಿಯೆ ಮ್ಯಾಗ್ನಸ್ ರ ಆಟವನ್ನು ಮೆಚ್ಚಿ ವಾಶಿಂಗ್ಟನ್ ಪೋಸ್ಟ್ ಚೆಸ್ 'ಆಟದ ಮೋಜಾರ್ಟ್ ಎಂದು ಬಣ್ಣಿಸಿತ್ತು. ಚೆನೈಗೆ ಬರುವ ಮುನ್ನ ೨೦೦೯ರಿಂದ ೨೦೧೨ರ ವರೆಗೆ ಸತತ ನಾಲ್ಕು ಚೆಸ್ ಆಸ್ಕರ್ ಪ್ರಶಸ್ತಿಗಳನ್ನು ಪಡೆದಿದರು.ಆನಂದ್ ರವರನ್ನು ಮ್ಯಾಗ್ನಸ್ ರವರು ಈ ರೀತಿ ಸರಳವಾಗಿ ಸೋಲಿಸುವರೆಂದು ಯಾರಿಗು ತಿಳಿದಿರಲ್ಲಿಲ್ಲ.ಮ್ಯಾಗ್ನಸ್ ರವರ ಎಳಿಗೆಯ ಬಗ್ಗೆ ಹೇಳಬೇಕಾದರೆ ಅವರು ಅತಿ ಚಿಕ್ಕ ವಯಸಿನಲ್ಲಿಯೆ ದೊಡ್ಡ ಆಟಗಾನೆಂಬ ದಾಖಲೆ ಮಾಡಿದಾರೆ.೧೨ನೆಯ ವಯಸಿನಲ್ಲಿಯೆ ನಾರ್ವೆಯ 'ಎ'ಗ್ರೆಡ್ ಪಂದ್ಯಾಗಳಲ್ಲಿ ಆಡುವ ಮಟ್ಟಿಗೆ ಸಿದ್ದರಾಗಿದರು ಬಿಡುವಿನ ವೇಳೆಯಲ್ಲಿ ಡೋನಾಲ್ದ್ ಡಕ್ ಕಾಮಿಕ್ ಪುಸ್ತಕಗಳನ್ನು ಒದುವುದನ್ನು ಅಭ್ಯಾಸ ಮಾಡಿಕೊಂಡಿದರು. ೨೦೦೯,೨೦೧೦,೨೦೧೧ ಮತ್ತು ೨೦೧೨ರಲ್ಲಿ ಮ್ಯಾಗ್ನಸ್ ರವರಿಗೆ ನಾಲ್ಕು ಬಾರಿ ಆಸ್ಕರ್ ಪ್ರಶಸ್ತಿ ಲಬಿಸಿತು. ೨೦೦೯ರಲ್ಲಿ ನಾರ್ವೇ ದೇಶದ 'ನೇಮ್ ಆಪ್ ದಿ ಇಯರ್' ಮತ್ತು 'ಸ್ಪೋರ್ಟ್ಸ್ ಮನ್ ಆಪ್ ದಿ ಇಯರ್' ಪ್ರಶಸ್ತಿ ಲಬಿಸಿತು. ವಿಶ್ವದ ನೂರು ಗಣ್ಯ ವ್ಯಕ್ತಿಗಳಲ್ಲಿ ಒಬ್ಬರೆಂಬ ಗೌರವ ಅಮೆರಿಕದ ಟೈಮ್ಸ್ ಪತ್ರಿಕೆ ಇಂದ ದೊರಕಿತು.ಮ್ಯಾಗ್ನಸ್ ರವರು ಮಹಾಮೇದಾವಿ ಚೆಸ್ ಪಟು.ಚೆಸ್ ಇತಿಹಾಸದಲ್ಲೆ ಅತಿ ಹೆಚ್ಚು ಇಲೋ ಅಂಕ ಪಡೆದಿರುವ ಆಟಗಾರ ಮ್ಯಾಗ್ನಸ್ ರವರು.ತಮ್ಮ ಸಾಧನೆಗನ್ನು ಸಾದಿಸಿ ಚೆಸ್ ಲೋಕಕ್ಕೆ ಅಧಿಪತಿಯಾಗಿದ್ದಾರೆ.
ಕಾರ್ಲ್ಸನ್ ಇಲೋ ರೇಟಿಂಗ್ ದಾಖಲೆ
[ಬದಲಾಯಿಸಿ]- ೨೦೦೬-೧೫ ವರ್ಷ ೩೨ ದಿನದ ವಯಸ್ಸಿನಲ್ಲಿ ೨೬೨೫ ಅಂಕಗಳು ೨೬೦೦ ಇಲೋ ಅಂಕ ಗಿಟ್ಟಿಸಿದ ಅತಿ ಕಿರಿಯ.
- ೨೦೦೭-೧೬ ವರ್ಷ ೨೧೩ ದಿನದ ವಯಸ್ಸಿನಲ್ಲಿ ೨೭೧೦ ಅಂಕಗಳು ೨೭೦೦ ಇಲೋ ಅಂಕ ಗಿಟ್ಟಿಸಿದ ಅತಿ ಕಿರಿಯ.
- ೨೦೦೯-೧೮ ವರ್ಷ ೩೬೬ ದಿನದ ವಯಸ್ಸಿನಲ್ಲಿ ೨೮೦೧ ಅಂಕಗಳು ೨೮೦೦ ಇಲೋ ಅಂಕ ಗಿಟ್ಟಿಸಿದ ಅತಿ ಕಿರಿಯ.
- ೨೦೧೩-೨೨ ವರ್ಷ ವಯಸ್ಸಿನಲ್ಲಿ ೨೮೫೩ಕ್ಕೂ ಹೆಚ್ಚು ಅಂಕಗಳು ೨೮೫೩ ಇಲೋ ಅಂಕ ಗಿಟ್ಟಿಸಿದ ಮೊದಲ ಆಟಗಾರ.
ಕಾರ್ಲ್ಸನ್ ವಿಶಿಷ್ಟ ದಾಖಲೆಗಳು
[ಬದಲಾಯಿಸಿ]- ೨೦೧೦ರಲ್ಲಿ ವಿಶ್ವದ ನಂ.೧ ಶ್ರೇಯಾಂಕ ಪಡೆದ ಅತಿ ಕಿರಿಯ ಆಟಗಾರ.
- ವಿಶ್ವ ಚಾಂಪಿಯನ್-ಶಿಪ್ ಜಯಿಸಿದ ಎರಡನೆಯ ಪಾಶ್ಚಿಮಾತ್ಯ ಆಟಗಾರ.
ಕಾರ್ಲ್ ಸನ್ ಗೆದ್ದಿರುವ ಪ್ರಮುಖ ಚೆಸ್ ಟೂರ್ನಿಗಳು
[ಬದಲಾಯಿಸಿ]ಬಿಯೆಲ್ ಜಿಎಂ , ನಾನ್ ಜಿಂಗ್ ಪರ್ಲ್ ಸ್ಟ್ರಿಂಗ್ , ಕೋರಸ್ , ಅಂಬರ್ ಬ್ಲೈಂಡ್ ಫೋಲ್ಡ್ , ಗ್ರ್ಯಾನ್ ಸ್ಲಾಮ್ ಚೆಸ್ ಫೈನಲ್ , ವಿಶ್ವ ಚಾಂಪಿಯನ್‍ಶಿಪ್ ಟೂರ್ನಿ.