ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ಸತ್ಯಭಾಮಾ ನಿಡ್ವಣ್ಣಾಯ

ವಿಕಿಪೀಡಿಯ ಇಂದ
Jump to navigation Jump to search
ಬಾಲಕೃಷ್ಣ ನಿಡ್ವಣ್ಣಾಯ ಮತ್ತು ಸತ್ಯಭಾಮ
ಊರೆಲ್ಲಾ ಹೆಳ್ಬೇಡಿ, ಅತ್ತೆ ಬೇಕಾಗಿದ್ದಾರೆ, ಬಾಡಿಗೆಗೆ, ರಾವಿನದಿ ದಂಡೆಯಲ್ಲಿ, ತುಳು, ಹಿಂದಿ ಭಾಷೆಯ ನಾಟಕಗಳಲ್ಲೂ ಪಾತ್ರನಿರ್ವಹಣೆ.ಹಾಮ್ಲೆಟ್, ನಾಟಕ ಪ್ರದರ್ಶನ. ಸಂಗೀತ, ನಾಟಕ ೧೯೬೭ ರಲ್ಲಿ ನಿಡ್ವಣ್ಣಾರವರು ಬರೆದ ನಾಟಕ, ಬಾಳಬಂಧನ ದಲ್ಲಿ ಪ್ರಮುಖ ಸ್ತ್ರೀಪಾತ್ರಧಾರಿಯಾಗಿ ನಟಿಸಿದ್ದರು. ಅವರು ನಟಿಸಿದ್ದ ನಾಟಕಗಳು : . ಹಿಂದಿ ಭಾಷೆಯ ಧಾರಾವಾಹಿಗಳು. ಹಸ್ರತೆ, ಕಿಸ್ಸಾ ಶಾಂತಿ ಕಾ, ಹಸ್ತರೇಖಾ,ಏಕ್ ಕಹಾನಿ ಧಾರವಾಹಿಯಲ್ಲಿ ’ನಾ ಕಿನ್ನಿನಾ’ ಮುಂತಾದವುಗಳು. ಟೆಲಿಫಿಲ್ಮ್- ದಿಲ್ ಬಡಾ, ಯಾ ದೌಲತ್. ಪ್ರತಿಫಲ್,
ಬಾಲಕೃಷ್ಣ ಹಾಗೂ ಸತ್ಯಭಾಮ ಜೊತೆಯಲ್ಲಿ.
ಹುಟ್ಟು
ಬಾಲಕೃಷ್ಣ ಮತ್ತು ಸತ್ಯಭಾಮ

೬, ಆಗಸ್ಟ್, ೧೯೩೭ ರಲ್ಲಿ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಮೀಪದ ' ನೂಜಜೆ ' ಎಂಬ ಚಿಕ್ಕ ಗ್ರಾಮದಲ್ಲಿ. ತಂದೆ ದಿ. ಸುಬ್ರಾಯ ನಿಡ್ವಣ್ಣಾಯ , ಮತ್ತು ತಾಯಿ, ದಿ. ಕಾವೇರಮ್ಮ.
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಗಳುಸುಪ್ರಸಿದ್ಧ, ಕನ್ನಡ ರಂಗ-ನಟಿ, ಸತ್ಯಭಾಮಾರವರನ್ನು ೧೯೬೯ ರಲ್ಲಿ ಮದುವೆಯಾದರು.
ಶಿಕ್ಷಣಪ್ರಾಥಮಿಕ ಮತ್ತು ಪ್ರೌಢಶಿಕ್ಷಣ-ಪುತ್ತೂರು. ಕರ್ನಾಟಕ ಪೊಲಿಟೆಕ್ನಿಕ್ ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ, (ಮಂಗಳೂರು)
ಅಧ್ಯಯನ ಮಾಡಿದ ವಿದ್ಯಾಕೇಂದ್ರಗಳುಕರ್ನಾಟಕ ಪಾಲಿಟೆಕ್ನಿಕ್,ಮಂಗಳೂರು.
ವೃತ್ತಿವೆಂಕಟ್ರಾಯ ತಲೆಗೇರಿ, ಸದಾನಂದ ಸುವರ್ಣ, ಎಚ್.ಮೋಹನ್, ಇಮ್ತಿಯಾಜ್ ಹುಸೇನ್, ಮತ್ತು ಕರ್ನಾಟಕ ನಾಟಕ ಅಕ್ಯಾಡಮಿಯಿಂದ ಪುರಸ್ಕೃತರಾದ ಭರತ್ ಕುಮಾರ್ ಪೊಲಿಪು, ಮುಂತಾದ ಸಮರ್ಥ ನಿರ್ದೇಶಕರ ಗರಡಿಯಲ್ಲಿ, ನಾಯಕ-ಪಾತ್ರಮಾಡಿ ಜನಪ್ರಿಯತೆಯನ್ನು ಗಳಿಸಿದರು.
ಖ್ಯಾತಿನಾಟಕ ನಿರ್ದೇಶನ, ಲೇಖಕ, ಕವಿ,ಸಂಘಟಕ,೩೦ ನಾಟಕಗಳಲ್ಲಿ, ೨೦ ನಾಟಕಗಳು ಮುಂಬಯಿನಗರದಲ್ಲಿ ಯಶಸ್ವಿಯಾಗಿ ಪ್ರದರ್ಶನಗಳನ್ನು ಕಂಡವುಗೃಹಪ್ರವೇಶ, ೨. ಹಿತ್ತಾಳೆಕಿವಿ, ೩. ಯಾರು ಹಿತವರು, ೪. ವಸಂತ ಕುಸುಮ, ೫. ಬಾಳಬಂಧನ, ೬. ಹೃದಯಾಘಾತ, ೭. ಹುಚ್ಚರ್ಯಾರು, ೮. ನಾವ್ಕಂಡ ನಮ್ಗಂಡ, ೯. ವೃದ್ಧಾಶ್ರಮ, ೧೦. ಕನಸೋ ನನಸೋ, ೧೧, ರಂಗಮಂಚ, ೧೨. ತಿರುಗುಬಾಣ, ೧೩. ಆಪ್ತಮಿತ್ರ, ೧೪. ಮೃಷಾನ್ನ, ೧೫. ಋಣಾನುಬಂಧ, ೧೬. ಯಾರಿಗೆ ಯಾರುಂಟು, ೧೭. ಸತ್ಯಮೆವಜಯತೆ, ೧೮. ದುರಾಸೆ ದುಃಸ್ವಪ್ನ , ೧೯. ಕೈಗೆ ಬಂದ ತುತ್ತು ಮುಂತಾದ ಹಲವು ನಾಟಕಗಳನ್ನು ರಚಿಸಿದ್ದಾರೆ.

ಬಾಲಕೃಷ್ಣ ನಿಡ್ವಣ್ಣಾಯರವರ, ಪೂರ್ವ ವೃತ್ತಾಂತ[ಬದಲಾಯಿಸಿ]

ಮುಂಬಯಿ ಮಹಾನಗರದ ಕನ್ನಡ ರಸಿಕರಿಗೆ, ಚಿರಪರಿಚಿತರಾದ, ಬಾಲಕೃಷ್ಣ ನಿಡ್ವಣ್ಣಾಯರವರು,[೧] ಕನ್ನಡ ರಂಗಭೂಮಿಯನ್ನು ಶ್ರೀಮಂತವಾಗಿರಿಸಿದ್ದಾರೆ. ಹಿರಿಯನಟರಾದ ಅವರು, ತಮ್ಮ ನಾಟಕರಚನೆ, ನಿರ್ದೇಶನ, ನಟನೆ,ಗಳಿಂದ ಮುಂಬಯಿನ ಎಲ್ಲಾ ವರ್ಗದ ಜನರ ಮನಗಳನ್ನು ರಂಜಿಸಿದ್ದಾರೆ. ಯುವ, ಉದಯೋನ್ಮುಖ ಕಲಾಕಾರರನ್ನು ಗುರುತಿಸಿ, ಒಂದು ಹೊಸ ಕಲಾಕಾರರ ಪೀಳಿಗೆ ಯನ್ನು ನಿರ್ಮಾಣಮಾಡುವ ಹಾದಿಯಲ್ಲಿ ಶ್ರಮಿಸುತ್ತಿದ್ದಾರೆ. ಅವರ ಈ ಕಾರ್ಯದಲ್ಲಿ ಹೆಗಲಿಗೆ ಹೆಗಲು-ಕೂಟ್ಟು ಸಮರ್ಥವಾಗಿ ದುಡಿಯುತ್ತಿರುವ ಕಲಾವಿದೆ, ಶ್ರೀಮತಿ ಸತ್ಯಭಾಮಾ ಬಾಲಕೃಷ್ಣ ನಿಡ್ವಣ್ಣಾಯ. ತಮ್ಮ ಕಲೆಗಳಿಗೆ ಸ್ಪಂದಿಸಿ, ಒಬ್ಬರಿಗೊಬ್ಬರು ಪೂರಕವಾಗಿ ಕನ್ನಡ ರಂಗಭೂಮಿಯ ಏಳಿಗೆಗೆ ಸತತವಾಗಿ ೬೦ ವರ್ಷಗಳಿಂದ ದುಡಿಯುತ್ತಿದ್ದಾರೆ. ೭೦ ರ ಹರೆಯದ ಬಾಲಕೃಷ್ಣರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಮೀಪದ ' ನೂಜಜೆ ' ಎಂಬ ಚಿಕ್ಕ ಗ್ರಾಮದಲ್ಲಿ. ೬, ಆಗಸ್ಟ್, ೧೯೩೭ ರಲ್ಲಿ. ತಂದೆ ದಿ. ಸುಬ್ರಾಯ ನಿಡ್ವಣ್ಣಾಯ , ಮತ್ತು ತಾಯಿ, ದಿ. ಕಾವೇರಮ್ಮ. ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಗಳನ್ನು ಪುತ್ತೂರಿನಲ್ಲೇ ಮುಗಿಸಿದರು. ಮಂಗಳೂರಿಗೆ ಹೋಗಿ, ಕರ್ನಾಟಕ ಪೊಲಿಟೆಕ್ನಿಕ್ ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ, ಪಡೆದರು. ಅವರು ೧೯೬೦ ರ ಅಂಚಿನಲ್ಲಿ ಮುಂಬಯಿನಗರಕ್ಕೆ ಪಾದಾರ್ಪಣೆಮಾಡಿದರು.

ಬಾಲ್ಯದಿಂದಲೂ ಸತತವಾಗಿ ನಾಟಕಗಳ ಗೀಳು[ಬದಲಾಯಿಸಿ]

ಬಾಲಕೃಷ್ಣ ನಿಡ್ವಣ್ಣಾಯ ರವರಿಗೆ, ಡಾ. ಶಿವರಾಮ ಕಾರಂತರ, ಆದರ್ಶ, ಹಾಗೂ ಕಾರ್ಯಾಚರಣೆಗಳು, ಅತ್ಯಂತ ಗಾಡವಾದ ಪರಿಣಾಮವನ್ನು ಬೀರಿದ್ದವು. ತಮ್ಮ ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ, ನಾಟಕರಚನೆಯ ಗೀಳನ್ನು ಹಚ್ಚಿಕೊಂಡಿದ್ದರು. ಅದರ ಜೊತೆಗೆ, ನಿರ್ದೇಶನ, ಹಾಗೂ ನಟನಾಕಲೆಯನ್ನೂ ಕರಗತಮಾಡಿಕೊಂಡರು. ೧೯೬೦ ರ ಹೊತ್ತಿಗೆ, ಅವರು ಬೊಂಬಾಯಿಮಹಾನಗರಕ್ಕೆ ಪಾದಾರ್ಪಣೆಮಾಡಿದರು. ಅಲ್ಲಿಯೂ , ರಂಗಭೂಮಿ ಅವರನ್ನು ಅಕರ್ಷಿಸಿತು. ಆಗಲೇ ಹೆಸರುಮಾಡಿದ್ದ, ವೆಂಕಟ್ರಾಯ ತಲೆಗೇರಿ, ಸದಾನಂದ ಸುವರ್ಣ, ಎಚ್.ಮೋಹನ್, ಇಮ್ತಿಯಾಜ್ ಹುಸೇನ್, ಮತ್ತು ಕರ್ನಾಟಕ ನಾಟಕ ಅಕ್ಯಾಡಮಿಯಿಂದ ಪುರಸ್ಕೃತರಾದ ಭರತ್ ಕುಮಾರ್ ಪೊಲಿಪು, ಮುಂತಾದ ಸಮರ್ಥ ನಿರ್ದೇಶಕರ ಗರಡಿಯಲ್ಲಿ, ನಾಯಕ-ಪಾತ್ರಮಾಡಿ ಜನಪ್ರಿಯತೆಯನ್ನು ಗಳಿಸಿದರು.

ಸತ್ಯಭಾಮಾರವರೊಡನೆ ವಿವಾಹ[ಬದಲಾಯಿಸಿ]

ಬೊಂಬಾಯಿನಗರದ, ಸುಪ್ರಸಿದ್ಧ, ಕನ್ನಡ ರಂಗ- ನಟಿ, ಸತ್ಯಭಾಮಾರವರನ್ನು ೧೯೬೯ ರಲ್ಲಿ ಮದುವೆಯಾದದ್ದು, ಅವರ ವೃತ್ತಿರಂಗ ಜೀವನದಲ್ಲಿ, ಒಂದು ಹೊಸತಿರುವನ್ನೇ ನಿರ್ಮಾಣಮಾಡಿತು. ಸಮಾನ ಮನೋಪ್ರವೃತ್ತಿಯ, ಆಸಕ್ತಿಗಳ, ಈ ಕಲಾವಂತ ದಂಪತಿಗಳು, ರಂಗ-ಕಲಾಕ್ಷೇತ್ರಲ್ಲಿ ತಮ್ಮ ಛಾಪನ್ನು ಮೂಡಿಸುವಲ್ಲಿ ಸಕ್ರಿಯರಾಗಿ ದುಡಿದು, ಯಶಸ್ವಿಯಾದರು. ಬಾಲಕೃಷ್ಣ ನಿಡ್ವಣ್ಣಾಯ,[೨] ತಾವು ಬರೆದ ಸುಮಾರು ೩೦ ನಾಟಕಗಳಲ್ಲಿ, ೨೦ ನಾಟಕಗಳು ಮುಂಬಯಿನಗರದಲ್ಲಿ ಯಶಸ್ವಿಯಾಗಿ ಪ್ರದರ್ಶನಗಳನ್ನು ಕಂಡವು.

ಕೆಲವು ಪ್ರಮುಖ ನಾಟಕಗಳ ಹೆಸರುಗಳು[ಬದಲಾಯಿಸಿ]

ಗೃಹಪ್ರವೇಶ, ೨. ಹಿತ್ತಾಳೆಕಿವಿ, ೩. ಯಾರು ಹಿತವರು, ೪. ವಸಂತ ಕುಸುಮ, ೫. ಬಾಳಬಂಧನ, ೬. ಹೃದಯಾಘಾತ, ೭. ಹುಚ್ಚರ್ಯಾರು, ೮. ನಾವ್ಕಂಡ ನಮ್ಗಂಡ, ೯. ವೃದ್ಧಾಶ್ರಮ, ೧೦. ಕನಸೋ ನನಸೋ, ೧೧, ರಂಗಮಂಚ, ೧೨. ತಿರುಗುಬಾಣ, ೧೩. ಆಪ್ತಮಿತ್ರ, ೧೪. ಮೃಷಾನ್ನ, ೧೫. ಋಣಾನುಬಂಧ, ೧೬. ಯಾರಿಗೆ ಯಾರುಂಟು, ೧೭. ಸತ್ಯಮೆವಜಯತೆ, ೧೮. ದುರಾಸೆ ದುಃಸ್ವಪ್ನ , ೧೯. ಕೈಗೆ ಬಂದ ತುತ್ತು ಮುಂತಾದ ಹಲವು ನಾಟಕಗಳನ್ನು ರಚಿಸಿದ ಖ್ಯಾತಿ ಇವರದು. ಇವರ ನಾಟಕಗಳು ಸಾರುವ ಸಂದೇಶ, ಬಳಸುವ ಪ್ರಭಾವೀ ಭಾಷೆ, ನಾಟಕದ ಕೊನೆಯವರೆಗೂ ಕಾಯ್ದಿಟ್ಟುಕೊಳ್ಳುವ ಕುತೂಹಲವನ್ನು ಜೀವಂತವಾಗಿಡುವ ವಿಧಾನಗಳು, ರಸಿಕರಿಗೆ ಮುದನೀಡುತ್ತಿವೆ. ೫ ನೇ ತರಗತಿಗೆ ಆಯ್ಕೆಯಾಗಿರುವ ಮಹಾರಾಷ್ಟ್ರ ರಾಜ್ಯ-ಸರ್ಕಾರದ ಕನ್ನಡ ಪಠ್ಯಪುಸ್ತಕದಲ್ಲಿ, ಪ್ರಕೃತಿ ಔಂದರ್ಯ, ವೆಂಬ ಮಕ್ಕಳನಾಟಕದ ಭಾಗವಿದೆ.

ಚಂದನ ಟಿ.ವಿ, ಯಲ್ಲಿ ಪ್ರಸ್ತುತಪಡಿಸಿದ ನಾಟಕ, " ಹುಚ್ಚ ರ್ಯಾರು ? ," ಜನಮನ್ನಣೆ ಗಳಿಸಿತ್ತು. ೧೯೬೦ ರಲ್ಲಿ, " ವಿಶಾಲ ಮೈಸೂರು ಸಂಗೀತ ನಾಟಕ ಅಕ್ಯಾಡಮಿ, "ಯವರು ಏರ್ಪಡಿಸಿದ್ದ ೪೮ ನಾಟಕ ಸ್ಪರ್ಧೆಯಲ್ಲಿ, ಪರ್ವತವಾಣಿಯವರು ಬರೆದ, "ಉಂಡಾಡಿಗುಂಡ " ನಾಟಕ ಕ್ಕೆ, ಪ್ರಥಮ ಬಹುಮಾನ ದೊರೆಯಿತು. ಈ ನಾಟಕದ ಅಭಿನಯಕ್ಕಾಗಿ ಬಾಲಕೃಷ್ಣರಿಗೆ ’ಅತ್ಯುತ್ತಮ ನಟ- ಪ್ರಥಮ’ ಬಹುಮಾನ ದೊರಕಿತ್ತು.

ಸತ್ಯಭಾಮಾರವರ ಸ್ಥೂಲ ಪರಿಚಯ[ಬದಲಾಯಿಸಿ]

ಸಂಗೀತ, ನಾಟಕಗಳಿಂದ ಅಗಲೇ ಹೆಸರುಮಾಡಿದ್ದ ಸತ್ಯಭಾಮಾರವರು, ೧೯೬೭ ರಲ್ಲಿ ನಿಡ್ವಣ್ಣಾರವರು ಬರೆದ ನಾಟಕ, ಬಾಳಬಂಧನ ದಲ್ಲಿ ಪ್ರಮುಖ ಸ್ತ್ರೀಪಾತ್ರಧಾರಿಯಾಗಿ ನಟಿಸಿದ್ದರು. ಅವರು ನಟಿಸಿದ್ದ ನಾಟಕಗಳು : ಊರೆಲ್ಲಾ ಹೆಳ್ಬೇಡಿ, ಅತ್ತೆ ಬೇಕಾಗಿದ್ದಾರೆ, ಬಾಡಿಗೆಗೆ, ರಾವಿನದಿ ದಂಡೆಯಲ್ಲಿ, ತುಳು, ಹಿಂದಿ ಭಾಷೆಯ ನಾಟಕಗಳಲ್ಲೂ ಪಾತ್ರನಿರ್ವಹಣೆ. ಶ್ರೀವಾಸ್ತವರವರ ನಿರ್ದೇಶನದ ಅಡಿಯಲ್ಲಿ ಹಾಮ್ಲೆಟ್, ನಾಟಕ ಪ್ರದರ್ಶನ.

ಹಿಂದಿ ಭಾಷೆಯ ಧಾರಾವಾಹಿಗಳು[ಬದಲಾಯಿಸಿ]

ಚಲನಚಿತ್ರ[ಬದಲಾಯಿಸಿ]

ಮಕ್ಕಳು[ಬದಲಾಯಿಸಿ]

ಮಗ ರಾಜೇಶ್, ಚಿತ್ರಕಲಾವಿದ, ಹಾಡುಗಾರ. 'ಕಂಪ್ಯೂಟರ್ ಗ್ರಾಫಿಕ್ಸ್ 'ಕಲಿತು, ಅಮೆರಿಕೆಯಲ್ಲಿ ೧೯೯೧ ರಿಂದ ಸ್ವಂತ ಉದ್ಯೋಗವನ್ನು ಸ್ಥಾಪಿಸಿದ್ದಾರೆ. ಪತ್ನಿ ರೇಖಾ ಹಾಗೂ ಪುತ್ರಿ ರಿಶಾಳೊಂದಿಗೆ ಅಮೆರಿಕದಲ್ಲಿಯೇ ನೆಲೆಸಿದ್ದಾರೆ. ನಿಡ್ವಣ್ಣಾಯ ದಂಪತಿಗಳ ಮಗಳು 'ರಶ್ಮಿ' ಕೂಡ ನುರಿತ ಗಾಯಕಿ. ಹಲವು ಒಳ್ಳೆಯ ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ. ಈಕೆ ನೃತ್ಯಗಾತಿ ಕೂಡ ಹೌದು. 'ಫ್ಯಾಶನ್ ಡಿಸೈನಿಂಗ್' ನಲ್ಲಿ ಪ್ರಾವೀಣ್ಯತೆ ಪಡೆದು ಸ್ವಲ್ಪ ಕಾಲ, ಅಮೆರಿಕೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದರು. ಕರ್ನಾಟಕ ಬ್ಯಾಂಕ್ ನಲ್ಲಿ ಉನ್ನತ ಅಧಿಕಾರಿಯಾಗಿರುವ ಶ್ರೀ ವಸಂತ ಹೆರ್ಳೆ, ಯವರನ್ನು ವಿವಾಹವಾಗಿ, ಈಗ ಚಂಡೀಗಢ್ ನಲ್ಲಿ ವಾಸಿಸುತ್ತಿದ್ದಾರೆ. ವಸಂತ್ ಹಾಗೂ ರಶ್ಮಿ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ, ವಿನಮ್ರಾ ಹಾಗೂ ಮಧುರಾ.ಮುಂಬಯಿ ಕನ್ನಡ ರಂಗಭೂಮಿಗೆ ಸುದೀರ್ಘಸಮಯದವರೆಗೆ, ತಮ್ಮ ಅಪಾರಕೊಡುಗೆಯನ್ನು ಕೊಟ್ಟಿರುವ, ಈ ವಿಶಿಷ್ಠ ಪ್ರತಿಭೆಯ ಪತಿ-ಪತ್ನಿಯರು, "ಶ್ರೀ ಕಲಾನಿಲಯ" ದ ಸ್ಥಾಪನೆಯಿಂದಾಗಿ, ಒಂದು ಹೊಸತಲೆಮಾರಿನ ನಾಟಕಕಾರರ ತಂಡವೊಂದನ್ನು, ಸಿದ್ಧಗೊಳಿಸುವ ಮಹತ್ಕಾರ್ಯದಲ್ಲಿ ತಮ್ಮನ್ನು ತಾವು, ತೊಡಗಿಸಿಕೊಂಡಿದ್ದಾರೆ.

'೨೦೧೦ರ ಅಜಂತಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರು'[ಬದಲಾಯಿಸಿ]

೨೦೧೦ ರ ರವಿವಾರ, ಅಕ್ಟೋಬರ್, ೩೧ ರಂದು, ಮುಂಬಯಿನ ಮಾಟುಂಗಾ ಉಪನಗರದಲ್ಲಿರುವ ಹಿರಿಯ ಕನ್ನಡ ಸಂಸ್ಥೆ, ಮೈಸೂರ್ ಅಸೋಸಿಯೇಷನ್ ನ ಹವಾನಿಯಂತ್ರಿತ ಸುಸಜ್ಜಿತ ಸಭಾಂಗಣದಲ್ಲಿ, 'ಅಜಂತಾ ಸಾಂಸ್ಕೃತಿಕ ವಿದ್ಯಾಸಂಸ್ಥೆ (ರಿ)' ಹಾಗೂ 'ಮೈಸೂರ್ ಅಸೋಸಿಯೇಷನ್', ಜಂಟಿಯಾಗಿ ಹಮ್ಮಿಕೊಂಡ 'ಕನ್ನಡ ರಾಜ್ಯೋತ್ಸವ ಸಮಾರಂಭ'ದಲ್ಲಿ ನಗರದ ಹಲವಾರು 'ಸುವರ್ಣ ಮಹೋತ್ಸವ ಕಂಡ ಕನ್ನಡ ಸಂಘ ಸಂಸ್ಥೆಗಳನ್ನು' ಗೌರವಿಸುವ ಸಲುವಾಗಿ ಅವುಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಆ ಸಾಲಿನಲ್ಲಿ ಹೆಸರಾಂತ ರಂಗ ಕಲಾವಿದ ದಂಪತಿಗಳಾದ,'ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ಸತ್ಯಭಾಮಾ ನಿಡ್ವಣ್ಣಾಯ'ರನ್ನು ಶಾಲುಹೊದಿಸಿ, 'ಫಲಪುಷ್ಪ'ಗಳನ್ನು ನೀಡಿ ಸನ್ಮಾನಿಸಲಾಯಿತು. ಈ ಸುಂದರ ಸಂಜೆಯಂದು, ಮಂಚದಮೇಲೆ, ನಿವೃತ್ತ ಮಾಜಿ-ನ್ಯಾಯಾಧೀಶ, 'ಶ್ರೀ. ಶ್ರೀಕೃಷ್ಣ', ನಿವೃತ್ತ-ಪ್ರಾಧ್ಯಾಪಕ, 'ಜಿ.ವಿ.ಕುಲಕರ್ಣಿ' ಹಾಗೂ ಅನೇಕ ಗಣ್ಯರು ಹಾಜರಿದ್ದರು.

ಉಲ್ಲೇಖಗಳು[ಬದಲಾಯಿಸಿ]

  1. asambhava balakrishna nidwannaya 'ಅಸಂಭವ ಕೃತಿಯ ರಚನಕಾರರು,ಬಾಲಕೃಷ್ಣ ನಿಡ್ವಣ್ಣಾಯ'
  2. 'ಈ ದಂಪತಿಗಳು-ಮುಂಬೈಕನ್ನಡರಂಗಭೂಮಿಯ ಅಪೂರ್ವ ಕಲಾರತ್ನಗಳು' ! ಸಂಪದ,October 17, 2007