ಬಾಣಗಂಗ ಟ್ಯಾಂಕ್, ಹಾಗೂ ವಾಲ್ಕೇಶ್ವರ್ ದೇವಾಲಯ, ಮುಂಬೈ
(Marathi : बाणगंगा तलाव ) ಈ 'ಬಾಣಗಂಗ ಟ್ಯಾಂಕ್' ನಿರ್ಮಾಣ ಮಾಡಿದ ಸಮಯ ೧೧೨೭ ರಲ್ಲಿ.[೧] ಕೆರೆಯ ಪುನರ್ನಿರ್ಮಾಣದ ಕಾರ್ಯ ೧೭೧೫ ರಲ್ಲಿ ಆರಂಭವಾಯಿತು. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬಳಿಯಲ್ಲಿದ್ದ, 'ಸಿಲ್ಹರಿ ಸಂತತಿಯ ಅರಸರ ಬಳಿ',ಲಕ್ಷ್ಮಣ್ ಪ್ರಭುರವರು ಮಂತ್ರಿಯಾಗಿದ್ದರು. 'ರಾಮ ಕಾಮತ್' ಎಂಬ ಭಕ್ತರು, ವಾಲ್ಕೇಶ್ವರ್ ದೇವಸ್ಥಾನ ಕಟ್ಟಿಸಲು, ಹಣ ಸಂಗ್ರಹ ಮಾಡಿದರು. ದಕ್ಷಿಣ-ಬೊಂಬಾ ಯಿಯ 'ಮಲಬಾರ್ ಹಿಲ್' ವಲಯದ ಹತ್ತಿರವೆ 'ವಾಲ್ಕೇಶ್ವರ್ ದೇವಾಲಯ'ಇದೆ. ಈಗ ದೇವಾಲಯದ ಶಿಥಿಲವಾದ ಭಾಗಗಳಿಗೆ, 'ರಿ ಇನ್ ಫೋರ್ಸ್ಡ್ ಕಾಂಕ್ರೀಟ್' ಬಳಕೆ ಮಾಡಲಾಗಿವೆ.[೨]
ಐತಿಹ್ಯ
[ಬದಲಾಯಿಸಿ]- ಹಳೆಯ ಇತಿಹಾಸದ ಪ್ರಕಾರ, ೫೦೦೦ ವರ್ಷದ ರಾಮಾಯಣ ಕಾಲದಲ್ಲಿ ಶ್ರೀರಾಮಚಂದ್ರ, ತನ್ನ ತಂದೆಯ ಮಾತಿಗೆ ಗೌರವಕೊಟ್ಟು ೧೪ ವರ್ಷ ವನವಾಸ ಮಾಡುವ ಸಮಯದಲ್ಲಿ ಈ ಜಾಗದಲ್ಲಿ ಸ್ವಲ್ಪ ಸಮಯ ಇದ್ದರೆಂಬ ವಿಚಾರ ದಾಖಲಿಸಲಾಗಿದೆ. ರಾಮನು ತನ್ನ ಪತ್ನಿ ಸೀತಾದೇವಿಯನ್ನು ಅರಸುತ್ತಾ ಬಂದು, ಬಾಯಾರಿಕೆಯಾದಾಗ ತಮ್ಮ ಲಕ್ಷ್ಮಣನನ್ನು ನೀರು ತಂದು ಕೊಡಲು ಕೇಳಿದನು. ಲಕ್ಷ್ಮಣನು ತನ್ನ ಬತ್ತಳಿಕೆಯಿಂದ ಒಂದು ಬಾಣವನ್ನು ತೆಗೆದು ಧನುಷ್ಷಿಗೆ ಹೂಡಿ ಬಿಟ್ಟ ಬಾಣದಿಂದ ನೀರು ನೆಲದಿಂದ ಚಿಮ್ಮಿಬಂದು ಪುಟ್ಟ ನದಿ ಯಾಗಿ ಪ್ರವಹಿಸಿ, ಗಂಗಾನದಿಗೆ ಉಪನದಿಯಾಗಿ ಸೇರಿತಂತೆ. ಅದಕ್ಕಾಗಿಯೇ ಈ ಪುಷ್ಕರಣಿಗೆ, 'ಬಾಣಗಂಗ' ಎಂದು ಹೆಸರು ಬಂತು.[೩]
ಬಾಣಗಂಗದ ಹತ್ತಿರದಲ್ಲೇ ಇರುವ ಪ್ರಮುಖ ಯಾತ್ರಾ ಸ್ಥಳಗಳು
[ಬದಲಾಯಿಸಿ]- 'ಶ್ರಿಕಾಶಿ ಮಠ'
- ಶ್ರೀ ಗೌಡಪಾದಾಚಾರ್ಯ ಸಂಸ್ಥಾನದವರ ಆಡಳಿತದಲ್ಲಿರುವ 'ಕೈವಲ್ಯ ಮಠ' ಅಥವಾ 'ಕಾವ್ಲೆ ಮಠ'ಗಳಿವೆ.
- ಕೆರೆಯ ದಡದಲ್ಲಿ, ಗತಿಸಿದ, ಮಠದ ಯತಿಗಳ, ಹಾಗೂ ಪ್ರಮುಖ 'ಗೌಡ ಸಾರಸ್ವತ ಬ್ರಾಹ್ಮಣರ ಸಮಾಧಿ'ಗಳಿವೆ.
- ಪುಷ್ಕರಣಿ ಬಳಿಯಲ್ಲೇ ಹಿಂದು-ಸ್ಮಶಾನ ಭೂಮಿಯಿದೆ.
- ಅದ್ವೈತ ವೇದಾಂತದ ಅನುಯಾಯಿಗಳಲ್ಲಿ ಪ್ರಮುಖರಾದ ಹಲವು ಗುರುಗಳ ಸಮಾಧಿಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳು :
- ಶ್ರೀ ರಂಜಿತ್ ಮಹಾರಾಜ್(೧೯೧೩-೨೦೦೦)
- ಶ್ರೀ. ಸಿದ್ಧರಾಮೇಶ್ವರ ಮಹಾರಾಜ್ (೧೮೮೮-೧೯೩೬)
'ಆಯತಾಕಾರದ-ಪುಷ್ಕರಣಿ' ಒಂದು ಪ್ರಮುಖ ಆಕರ್ಷಣೆಯಾಗಿದೆ
[ಬದಲಾಯಿಸಿ]- '(rectangular)' ಆಕಾರದ ಪುಷ್ಕರಣಿಯ ಸುತ್ತಲೂ ನಾಲ್ಕೂ ಕಡೆಗಳಿಂದ ಮೆಟ್ಟಿಲುಗಳಿವೆ. ದ್ವಾರದಲ್ಲೇ ಎರಡು ಕಂಭಗಳಿವೆ. ಅವುಗಳ ಮೇಲೆ ದೀವಿಗೆಗಳನ್ನು ಇಟ್ಟಿ ದ್ದಾರೆ. ಇವನ್ನು 'ದಿಯಾ' ಎನ್ನುತ್ತಾರೆ. ಹಳೆಯ ಕಾಲದಲ್ಲಿ ಅವುಗಳನ್ನು ಹಚ್ಚಿಟ್ಟಿರುತ್ತಿದ್ದರು. ಬಾಣಗಂಗಾ ಪುಷ್ಕರಣಿ ಮತ್ತು ಪರಶುರಾಮ ದೇವಾಲಯಗಳು, ಗೌಡ ಸಾರಸ್ವತ್ ಟೆಂಪಲ್ ಟ್ರಸ್ಟ್ ಗೆ ಸೇರಿದ ದೇವಾಲಯಗಳಾಗಿವೆ.
- ಪುರಾತನ ಕಾಲದ ಬ್ರಾಹ್ಮಣರ ವಂಶದವರು ಇಲ್ಲಿ ಇಂದಿಗೂ ವಾಸಿಸುತ್ತಿದ್ದಾರೆ. ಇದು ಕೆಲವೇ ಮೀಟರ್ ಸಮುದ್ರದಿಂದ ದೂರವಿದ್ದರು ಕೂಡ, ಪುಷ್ಕರಣಿಗೆ ಜಲ ಬರುವುದರಿಂದ ನೀರು ಸಿಹಿಯಾಗಿರುತ್ತದೆ. ಪ್ರತಿ ವರ್ಷವೂ ಜರುಗುವ ಬಂಗಾಗ ಉತ್ಸವದ ಸಲುವಾಗಿ ಪುಷ್ಕರಣಿಯನ್ನು ಚೆನ್ನಾಗಿ ಶುದ್ಧಿಗೊಳಿಸಲಾಗುತ್ತದೆ. ಮಹಾರಾಷ್ಟ್ರ ಪರ್ಯಟಕ ಖಾತೆಯವರು ಆಯೋಜಿಸುವ,(Maharashtra Tourism Development Corporation) '(MTDC)' ಸಂಗೀತೋತ್ಸವ ಜನವರಿ ತಿಂಗಳಿನಲ್ಲಿ, ಜರುಗುತ್ತದೆ.
- ಈಗ ಇದು ಮಹಾರಾಷ್ಟ್ರದ ಪ್ರಮುಖ ಉತ್ಸವಗಳಲ್ಲೊಂದಾಗಿದೆ. ಕೆಲವು 'ಕಲಾವಿದ'ರಿಗೆ ಮತ್ತು ಮತ್ತು 'ಸಾಹಿತ್ಯ ಪ್ರೇಮಿ'ಗಳಿಗೆ ಪ್ರೋತ್ಸಾಹ ಕೊಡುವ ತಾಣವಾಗಿದೆ. 'ವೃತ್ತ ಚಿತ್ರ'ಗಳನ್ನು ಮೊದಲು ತೆಗೆದು ಕೊಳ್ಳಲಾಗುತ್ತಿತ್ತು. 'ಹೆರಿಟೇಜ್ ಕಟ್ಟಡಗಳ ಗುಂಪಿಗೆ ಸೇರುವುದ ರಿಂದ', ೨೦೦೭ ರ ನವೆಂಬರ್ ತಿಂಗಳಿನ ಬಳಿಕ ನಿಲ್ಲಿಸಲಾಗಿದೆ. ಪ್ರತಿ ವರ್ಷವೂ ಬಾಣಗಂಗಾ ಉತ್ಸವ ಜರುಗುತ್ತದೆ.
ವಾಲ್ಕೇಶ್ವರ್ ದೇವಾಲಯಕ್ಕೆ ತಲುಪುವ ಹಾದಿ
[ಬದಲಾಯಿಸಿ]ಮುಂಬಯಿನಗರದ ಸಿ.ಎಸ್.ಟಿ.ನಿಲ್ದಾಣದಿಂದ ೧೦೧, ೧೦೩, ೧೦೬,೧೦೮ ಬಸ್ ಗಳು ನೇರವಾಗಿ ವಾಲ್ಕೇಶ್ವರ್ ಮಂದಿರದ ಸಮೀಪಕ್ಕೆ ಹೋಗುತ್ತವೆ. ಅಲ್ಲಿ ಇಳಿದ ಬಳಿಕ ಮೆಟ್ಟಿಲು ಇಳಿದು ಹೋದರೆ ಬಾಣಗಂಗಾ ಪುಷ್ಕರಣಿ ಹಾಗೂ ಕಾಶಿಮಠ, ಮತ್ತು ವಾಲ್ಕೇಶ್ವರ್ ಮಂದಿರಗಳನ್ನು ದರ್ಶನ ಮಾಡಿ ಬರಬಹುದು. ಅಲ್ಲಿಂದ ಹತ್ತಿರದ ಮುನಿಸಿಪಲ್ ಸ್ಕೂಲ್ ಬಳಿಯಲ್ಲೇ 'ಟ್ಯಾಕ್ಸಿ ಸ್ಟಾಂಡ್' ಇದೆ. ಮೆರಿನ್ ಡ್ರೈವ್, ಚೌಪಾತಿ, ಚರ್ನಿ ರೋಡ್ ರೈಲ್ವೆ ನಿಲ್ದಾಣ, ಇಲ್ಲವೇ ಚರ್ಚ್ ಗೇಟ್ ರೈಲ್ವೆ ನಿಲ್ದಾಣಕ್ಕೂ ತಲುಪಲು ಬಿ.ಇ.ಎಸ್.ಟಿ, ಬಸ್ ಹಾಗೂ ಟ್ಯಾಕ್ಸಿ ವ್ಯವಸ್ಥೆ ಇದೆ.
ಉಲ್ಲೇಖಗಳು
[ಬದಲಾಯಿಸಿ]- ↑ "ಮುಂಬಯಿನ ಆಕರ್ಷಕ ಪರ್ಯಟಕ ಸ್ಥಳಗಳು". Archived from the original on 2015-03-13. Retrieved 2014-10-06.
- ↑ Walkeshwar Temple in Mumbai Maharashtra, Indian temples, Thursday, 24 January 2013
- ↑ "'ಬಾಣಗಂಗ ದೇವಸ್ಥಾನ', GSB Konkani". Archived from the original on 2008-10-06. Retrieved 2014-10-06.