ವಿಷಯಕ್ಕೆ ಹೋಗು

ಫ್ರಾನ್ಸಿಸ್ ಕನ್ನಿಂಗ್‌ಹ್ಯಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ರಿಟಿಷ್ ಶಿಲ್ಪಕಲಾವಿದ ಫ್ರಾನ್ಸಿಸ್ ಚಾಂಟ್ರೆ ನಿರ್ಮಿಸಿದ, ಯುವಕ ಫ್ರಾನ್ಸಿಸ್ ಕನ್ನಿಂಗ್‌ಹ್ಯಾಮ್ ನ ಪ್ರತಿಮೆ

ಫ್ರಾನ್ಸಿಸ್ ಕನಿಂಗ್‌ಹ್ಯಾಮ್,(ಜನನ ೧೮೨೦ ಡಿಸೆಂಬರ್ ೩- ಮರಣ ೧೮೭೫) ಮದ್ರಾಸ್ ಸೈನ್ಯದಲ್ಲಿ ಆಫೀಸರ್ ಆಗಿದ್ದ, ಸ್ಕಾಟಿಷ್ ಕುಟುಂಬದಲ್ಲಿ ಜನಿಸಿದ ಒಬ್ಬ ವ್ಯಕ್ತಿ. ಆಗಿನ ಮೈಸೂರು ಸಂಸ್ಥಾನದಲ್ಲಿ ಅಸ್ತಿತ್ವದಲ್ಲಿದ್ದ, ಮಾರ್ಕ್ ಕಬ್ಬನ್ ನೇತೃತ್ವದ ಮೈಸೂರಿನ ನಾಗರಿಕ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಕುಟುಂಬ

[ಬದಲಾಯಿಸಿ]

ಫ್ರಾನ್ಸಿಸ್ ಕನ್ನಿಂಗ್‌ಹ್ಯಾಮ್‌ನ ತಂದೆ, ಕವಿ ಅಲನ್ ಕನ್ನಿಂಗ್‌ಹ್ಯಾಮ್, ತಾಯಿ ಜೀನ್ ವಾಕರ್. 'ಹಿಸ್ಟರಿ ಆಫ್ ಸಿಖ್' ಪುಸ್ತಕದ ಕರ್ತೃ ಜೋಸೆಫ್ ಡವೆ ಮತ್ತು ಪುರಾತತ್ವಶಾಸ್ತ್ರಜ್ಞ ಅಲೆಕ್ಸಾಂಡರ್ ಕನ್ನಿಂಗ್‌ಹ್ಯಾಮ್(ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಸಂಸ್ಥೆಯ ಸ್ಥಾಪಕ) ಇಬ್ಬರು ಫ್ರಾನ್ಸಿಸ್‌ನ ಅಣ್ಣಂದಿರು. ಒಟ್ಟಿಗೆ ತಮ್ಮ ವೃತ್ತಿಜೀವನವನ್ನು ಹಂಚಿಕೊಂಡರು. ಈ ಸೋದರರ ಕೆಡೆಟ್ ಶಿಪ್ಸ್ ಒಬ್ಬ ಸ್ನೇಹಿತನ ಮುಖಾಂತರ ದೊರೆಯಿತು. ಸರ್ ವಾಲ್ಟರ್ ಸ್ಕಾಟ್, ರಾಬರ್ಟ್ ಡುಂಡಾಸ್ ಜೊತೆ ತುಂಬಾ ಸಲಿಗೆಯಿಂದಿದ್ದರು. ಬೇರೆಯವರು ಸ್ಕಾಟಿಷ್ ಇತ್ತು. ಬೋರ್ಡ್ ಆಫ್ ಕಂಟ್ರೋಲ್ ನಲ್ಲಿ ಕೆಲಸದಲ್ಲಿದ್ದರು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಮಿಲಿಟರಿ ಸೆಮಿನರಿಯಲ್ಲಿ ಟ್ರೇನಿಂಗ್ ಪಡೆದ ಬಳಿಕ, 'ಆಡಿಸ್ ಕೋಂಬ್', ನಂತರ ಸರ್ರೆ, ಪ್ರಾನ್ಸಿಸ್ ಗೆಝೆಟೆಡ್ ಆದರು. ೧೮೩೮ ರಲ್ಲಿ ೨೩ ನೆಯ ಫೀಲ್ಡ್ ಇಂಜಿನಿಯರ್ ಪದವಿಗೆ ಏರಿದರು.

ಆಫ್ಘಾನ್ ಯುದ್ಧದಲ್ಲಿ ಭಾಗವಹಿಸಿದ್ದರು

[ಬದಲಾಯಿಸಿ]

ರಾಬರ್ಟ್ ಸೇಲ್ ಜೊತೆ ಜಲಾಲಾಬಾದ್ ನಲ್ಲಿ ೧೮೫೦ ರ ಮೊದಲ ಆಫ್ಗನ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಆಗ ಮೈಸೂರ್ ಕಮೀಶನ್ ಗೆ ವರ್ಗವಾಗಿದ್ದರು. ಬೆಂಗಳೂರಿನ ಆಫೀಸ್ ನಲ್ಲಿ ಸೆಕ್ರೆಟರಿಯಾಗಿ ಕಮೀಶನ್ ನ,ಸರ್ ಮಾರ್ಕ್ ಕಬ್ಬನ್ ರಿಗೆ []ಡೆಪ್ಯುಟಿಯಾಗಿ. ಚೀಫ್ ಕಮೀಶನರ್ ಆಫ್ ಬೆಂಗಳೂರು. ಲಾಲ್ ಬಾಗ್ ನ ಬಡಾವಣೆಯಲ್ಲಿ ತಮ್ಮ ಅಮೂಲ್ಯ ಯೋಗದಾನ ಕೊಡುವುದರ ಜೊತೆಗೆ, ನಂದಿ ಹಿಲ್ಸ್ ನಲ್ಲಿ ಸರ್ ಮಾರ್ಕ್ ಕಬ್ಬನ್[] ರ ಬಂಗಲೆ,ಯನ್ನು ನಿರ್ಮಿಸಿದರು. ಆಗಿನ ಕಾಲದಲ್ಲಿ ಅದು ಬೆಂಗಳೂರಿನಲ್ಲೇ ಅತಿದೊಡ್ಡ ಬಂಗಲೆ ಎಂಬ ಖ್ಯಾತಿಗೆ ಒಳಗಾಗಿತ್ತು. ಆ ಬಂಗಲೆಯ ಹೆಸರು, 'ಬಾಲ ಬ್ರೂಯಿ'. ೧೮೬೧ ರಲ್ಲಿ ಕಬ್ಬನ್[] ನಿವೃತ್ತರಾಗಿ ಬೆಂಗಳೂರನ್ನು ಬಿಟ್ಟಾಗ,ಕನ್ನಿಂಗ್ ಹ್ಯಾಮ್ ಖಾಸಗಿ ವಲಯದಲ್ಲಿ ಕೃಷ್ಣರಾಜವೊಡಿಯರ್-೩, ಸೇವಕನಾಗಿ ಕೆಲಸ,ದತ್ತು ಪಡೆದು, ತಮ್ಮ ಸಾಮ್ರಾಜ್ಯಕ್ಕೆ ದಿಕ್ಕಾಗಿ ಇರಲು ಪ್ರೇರೇಪಿಸಿದರು. ಪ್ರಭಾವೀ ಬರಹಗಾರ, ಅವರ ಲೇಖನಗಳು ಮುಂದಿನ ಚೀಫ್ ಕಮಿಶನರ್, ಲೆವಿನ್ ಬೆಂಥಮ್ ಬೌರಿಂಗ್ ಗೆ ತಲೆನೋವಿನ ಕೆಲಸವಾಗಿ ಪರಿಣಮಿಸಿತ್ತು. ಇಂಗ್ಲೆಂಡಿಗೆ ವಾಪಸ್ಸಾದ ನಂತರವೂ ಬರವಣಿಗೆ ಖಾಯಂ ಆಗಿ ಇಟ್ಟುಕೊಂಡಿದ್ದರು. ಕಿಟ್ ಮಾರ್ಲೋ ಎನ್ನುವವರ ಕೃತಿ ಸಂಪಾದನೆ,೧೮೭೦ ರಕ್ಕು ಫಿಲಿಪ್ ಮೆಸಿಂಜರ್,ಬೆನ್ ಜಾನ್ಸನ್ ೧೮೭೨ ರಲ್ಲಿ ತಮ್ಮ ಜೀವನದ ಕೊನೆಯ ಹಂತದಲ್ಲಿ ಸೋದರ ಪೀಟರ್ ಕನ್ನಿಂಗ್ ಹ್ಯಾಮ್ ರ ಪುಸ್ತಕ, 'ಹ್ಯಾಂಡ್ ಬುಕ್ ಟು ಲಂಡನ್', ೧೮೭೫ ರ, ಡಿಸೆಂಬರ್, ೩ ರಂದು ನಿಧನ,ಇಂದಿಗೂ ಬೆಂಗಳೂರಿನ ಕಲಾಸಿಪಾಳ್ಯಂ ಜಿಲ್ಲೆಯಲ್ಲಿ ಅವರ ಹೆಸರಿನಲ್ಲಿ 'ಕನ್ನಿಂಗ್ ಹ್ಯಾಮ್ ಎಂಬ ರಸ್ತೆಯ ಹೆಸರು' ಇದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Cubbon Park Bangalore". Archived from the original on 2014-06-25. Retrieved 2014-08-03.
  2. "Raj bhavan building of karnataka'". Archived from the original on 2014-04-09. Retrieved 2014-08-03.
  3. He sure did make a mark!
  4. The Administration of Mysore Under Sir Mark Cubbon (1834-1861)