ಫಾದರ್ ಅರುಪೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಫ಼ಾದರ್ ಅರುಪೆ ಇಂದ ಪುನರ್ನಿರ್ದೇಶಿತ)

ಜನನ ಹಾಗೂ ವಿದ್ಯಾಬ್ಯಾಸ ಫ಼ಾ.ಪೇದ್ರೊ ಅರುಪೆ ಅವರು ೧೪ನವೆಂಬರ್೧೯೦೭ರಂದು ಬಾಸ್ಕ್,ಸ್ಪೇನ್ ನಲ್ಲಿ ಜನಿಸಿದರು.ಅರುಪೆಯವರು ಸಂತಿಯಾಗೊ ಅಪೋಸ್ತಲ್ ಹೈ ಸ್ಕೂಲ್ ನಲ್ಲಿ ವಿದ್ಯಾಬ್ಯಾಸವನ್ನು ಮಾಡಿದರು.ತಮ್ಮ ವೈದ್ಯಕೀಯ ಶಿಕ್ಷಣಕ್ಕಾಗಿ ಮ್ಯಾಡ್ರಿಡ್ಗೆ ಹೋದರು.ಅವರು ಅಲ್ಲಿ ವೈದ್ಯಕಿಯ ಶಿಕ್ಷಣ ಮಾಡುವಾಗ ಯೇಸುವಿನಿಂದ ಪ್ರೇರಿತರಾಗಿ ದೇಹದ ವೈದ್ಯಕಿಯ ಶಿಕ್ಷಣವನ್ನು ತ್ಯಜಿಸಿ ಆತ್ಮದ ವೈದ್ಯನಾಗಲು ಜೆಸ್ವಿಟ್ ಸಭೆಗೆ ೧೯೨೭ ರಲ್ಲಿ ಸೇರಿದರು.ಗುರುದೀಕ್ಷೆ ಪಡೆದ ನಂತರ ಅಮೇರಿಕಕ್ಕೆ ಮೆಡಿಕಲ್ ಎತಿಕ್ಸ್ನಲ್ಲಿ ಡಾಕ್ಟರೆಟ್ ಮಾಡಲುಹೋದರು.

ಜಪಾನ್ - ಹಿರೋಶಿಮ ಡಾಕ್ಟರೆಟ್ ಮುಗಿದ ಬಳಿಕ ಅರುಪ್ಪೆಯವರು ಜಪಾನಿಗೆ ಒಬ್ಬ ಮಿಶನರಿಯಾಗಿ ಕಳುಹಿಸಿದರು.ಅಲ್ಲಿ ಅವರು ನವಸಹೋದರರ ನಿರ್ದೇಶಕರಾಗಿದ್ದರು.ಅಮೇರಿಕ ಹಿರೋಶಿಮದ ಮೇಲೆ ದಾಳಿ ಮಾಡಿದ ಸಂದರ್ಬವದು.ಅರುಪ್ಪೆಯವರು ತಮ್ಮ ನವಿಶಿಯಟ್ ಅನ್ನು ಒಂದು ಆಸ್ಪತ್ರೆಯನ್ನಾಗಿ ಪರಿವರ್ತಿಸಿದರು.ಅನೇಕರಿಗೆ ಚಿಕಿತ್ಸೆಯನ್ನು ನೀಡಿದರು.ಆದರೆ ಜಪಾನಿನ ಮಿಲಿಟ್ರಿಗಳು ಅವರ ಮೇಲೆ ಸಂದೇಹ ಪಟ್ಟರು.ಅವರನ್ನು ಜೈಲಿಗೆ ಹಾಕಿದರು.ಅಂದು ಕ್ರಿಸ್ಮಸ್ ಹಬ್ಬದ ರಾತ್ರಿ ನೂರಾರು ಜನಗಳು ಜೈಲಿನ ಬಳಿ ಬಂದು ಅರುಪ್ಪೆಯವರಿಗೆ ಕ್ರಿಸ್ಮಸ್ ಹಾಡುಗಳನ್ನು ಹಾಡಿದರು.ಇದು ಅರುಪ್ಪೆಯವರನ್ನು ಭಾವುಕರನ್ನಾಗಿ ಮಾಡಿತು.ಅರುಪ್ಪೆಯವರ ಜೀವನ ಶೈಲಿಯನ್ನು ನೋಡಿದ ಜೈಲಿನ ಅದಿಕಾರಿಗಳು ಮನಪರಿವರ್ತನೆಗೊಂಡು ಅವರನ್ನು ಒಂದೆ ತಿಂಗಳಲ್ಲಿ ಬಿಡುಗಡೆ ಮಾಡಿದರು.ಅರುಪ್ಪೆಯವರನ್ನು ಮೊದಲ ಜಪಾನಿನ ಪ್ರಾಂತ್ಯಾಧಿಕಾರಿಯನ್ನಾಗಿ ಮಾಡಿದರು.

ಫಾ.ಜನರಲ್(೧೯೬೫) ಜನಾರ್ದನ ಸೇವೆಯೇ ದೇವರ ಸೇವೆಯಂದು ಅರುಪ್ಪೆಯವರು ತಮ್ಮ ಕಾರ್ಯವನ್ನು ನಿರ್ವಹಿಸಿದರು.ಇವರ ಜೀವನ ಶೈಲಿಯನ್ನು ನೋಡಿ ಇವರನ್ನು ಎರಡನೆ ಇಗ್ನಾಸಿಯಂದು ಕರೆದರು.ಧರ್ಮಸಭೆಯಲ್ಲಿ ಒಂದು ಹೊಸ ತಿರುವನ್ನು ನೀಡಿದರು.ಬಡವರ ಸೇವೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅನೇಕರಿಗೆ ಮಾದರಿಯಾದರು.ನ್ಯಾಯ,ಸಮಾನತೆಗೆ ತಮ್ಮ ಜೀವನವನ್ನೆ ಮುಡಿಪಾಗಿಟ್ಟರು.೫ ಫೆಬ್ರವರಿ ೧೯೯೧ ರಂದು ಈ ಲೋಕವನ್ನು ತ್ಯಜಿಸಿದರು.