ವಿಷಯಕ್ಕೆ ಹೋಗು

ಪ್ರಾರ್ಥನಾ ಸಮಾಜ್, ಟೊರಾಂಟೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪ್ರಾರ್ಥನಾಸಮಾಜ್ ಇಂದ ಪುನರ್ನಿರ್ದೇಶಿತ)
ಚಿತ್ರ:PS067.JPG
'ಟೊರಾಂಟೋನಗರದ ಅತಿ ಹಳೆಯ ಪ್ರಾರ್ಥನಾ ಸಮಾಜ್'

ಪ್ರಾರ್ಥನಾ ಸಮಾಜ್ ಮಂದಿರ, ಟೊರಾಂಟೋ ನಗರದ ಡಂಡಾಸ್ ಸ್ಟ್ರೀಟ್ ವೆಸ್ಟ್ ನ 'ಫರ್ನ್ ರಸ್ತೆ' ಯಲ್ಲಿರುವ [] ಸರಳವಾದ ಅತಿಸುಲಭವಾಗಿ ತಲುಪಬಹುದಾದ ಮಂದಿರವಾಗಿದೆ.

ಮಹಾರಾಷ್ಟ್ರದಲ್ಲಿ ಆರಂಭವಾಯಿತು

[ಬದಲಾಯಿಸಿ]

'ಪ್ರಾರ್ಥನಾ ಸಮಾಜ್,' ಮುಂಬಯಿನಲ್ಲಿ ಸನ್ ೧೮೬೭ ರಲ್ಲಿ ಸ್ಥಾಪನೆಯಾಯಿತು. ಹಿಂದೂಸಮಾಜದ ಕೆಲವು ಹಳೆಯ, ಅರ್ಥಹೀನ ಸಂಪ್ರದಾಯಗಳನ್ನೂ, ಪುರೋಹಿತಶಾಹಿ ದಬ್ಬಾಳಿಕೆಯ ನಡವಳಿಕೆಗಳನ್ನು ಪ್ರತಿಭಟಿಸಿ ಈ ಸಂಸ್ಥೆಯನ್ನು ಕಟ್ಟಲಾಯಿತು. ಹೊಸ ಯುಗದ ಜ್ಞಾನವನ್ನು ಆಧರಿಸಿ, ಆಗಿನಕಾಲದ ಪಂಡಿತರಾದ, ಆರ್.ಜಿ.ಭಂಡಾರ್ಕರ್, ಜಸ್ಟಿಸ್ ಮಹದೇವ್ ಗೋವಿಂದ್ ರಾನಡೆ, ಈ ಅಭಿಯಾನದಲ್ಲಿ ಮುಂದಾಳುಗಳಾಗಿದ್ದರು. ಪ್ರಾರ್ಥನಾ ಸಮಾಜ್,ಬಂಗಾಳದ 'ಬ್ರಹ್ಮೊ ಸಮಾಜ'ದ ತತ್ವಗಳಿಂದ ಪ್ರೇರಿತ, ಹಾಗೂ ಆಧರಿಸಿದ್ದು. ಹಳೆಯ ಸಂಪ್ರದಾಯಗಳು ವೇದಮಂತ್ರಗಳು ಮತ್ತು ಮೇಲ್ಜಾತಿಯ,ಪಂಥಗಳು, ಪುರೋಹಿತಶಾಹಿಗಳಿಂದ ಹಿಂದೂ ಸಮಾಜವನ್ನು ಮುಕ್ತಗೊಳಿಸಿ, ಕೇವಲ 'ವಿಟ್ಠಲನ ನಾಮಸ್ಮರಣೆ', 'ಸಂತ್ ನಾಮದೇವ್ ಸಂಕೀರ್ತನೆಗಳು', ಮೊದಲಾದುವುಗಳಿಂದ ಜನ್ಮವನ್ನು ಶುದ್ಧಿಗೊಳಿಸಿಕೊಳ್ಳಬಹುದು. ಹಲವಾರು ಸಿಖ್ ಭಾರತೀಯರು,[] ದಶಕಗಳ ಹಿಂದೆ ಬಂದು ಟೊರಾಂಟೋ ನಗರದಲ್ಲಿ ನೆಲೆಸಿದ್ದಾರೆ. ಅದರಲ್ಲಿ ಬಹುಪಾಲು ಜನ ಪಂಜಾಬಿಗಳು.

ವಿಕ್ಟೋರಿಯ ಮಹಾರಾಣಿಯವರ ವಜ್ರಮಹೋತ್ಸವ

[ಬದಲಾಯಿಸಿ]

ಇಂಗ್ಲಂಡ್ ನ ಸಾಮ್ರಾಜ್ಞಿ ವಿಕ್ಟೋರಿಯಾ,೧೮೯೭ ರ ತಮ್ಮ ವಜ್ರಮಹೋತ್ಸವ ಸಮಾರಂಭದ ಸಮಯದಲ್ಲಿ ವಿಶ್ವದಾದ್ಯಂತ, ಬ್ರಿಟಿಷ್ ಸಾಮ್ರಾಜ್ಯದ ಅಧೀನದಲ್ಲಿದ್ದ ಸಾವಿರಾರು ಜನರನ್ನು ಇಂಗ್ಲೆಂಡಿಗೆ ಆಹ್ವಾನಿಸಿದ್ದರು. ಬ್ರಟಿಷ್ ಸೈನ್ಯದಲ್ಲಿ ಬಹು ಹೆಚ್ಚಿನ ಪಾಲು ಸೈನಿಕರು, ಪಂಜಾಬಿನ ಸಿಕ್ಖರು. ಹೀಗೆ ಇಂಗ್ಲೆಂಡ್ ಗೆ ಹೋಗಿ ವಾಪಸ್ ಬರುವಾಗ ಕೆನಡಾದ ಮುಖಾಂತರ ಬಂದರು. ಭಾರತಕ್ಕೆ ಬಂದಮೇಲೆ ಬ್ರಿಟಿಷ್ ಸೈನ್ಯದಲ್ಲಿ ಕೆಲಸಮಾದಿದ್ದರಿಂದ ಸಿಗುವ ಸವಲತ್ತುಗಳ ಬಗ್ಗೆ ಅವರಿಗೆ ಬಹಳ ಖುಷಿ ಇತ್ತು. ೧೯೦೨ ರಲ್ಲಿ ಮೊದಲ ಸಿಖ್ ಪರಿವಾರ ಕೆನಡ ತಲುಪಿತ್ತು. ಅವರೆಲ್ಲ ಹಾಂಕಾಂಗ್ ನಿಂದ ಇಂಗ್ಲೆಂಡಿನ ಚಕ್ರವರ್ತಿ, ಎಡ್ವರ್ಡ್-೭ ರ ಪಟ್ಟಾಭಿಷೇಕಕ್ಕೆ ಹೋರಟಿದ್ದ ಸೇನೆಯ ಜೊತೆ ಇದ್ದರು. ೧೯೦೪-೧೯೦೮ ರ ವರೆಗೆ ವಲಸೆ ಹೋದರು. ಆಗ ಕೆನಡಾಕ್ಕೆ ಬರಲು ಪರವಾನಗಿ ಕಾನೂನು ಸಹಾಯಕಾರಿಯಾಗಿರಲಿಲ್ಲ. ಆ ಸಮಯದಲ್ಲಿ ೫ ಸಾವಿರಕ್ಕೂ ಹೆಚ್ಚು ಜನ ದಕ್ಷಿಣ ಏಷಿಯನ್ನರು. ಅವರಲ್ಲಿ ೯೦% ಸಿಖ್ಖರು. ಕೆನಡಾದ ಬ್ರಿಟಿಷ್ ಕೊಲಂಬಿಯಾಕ್ಕೆ ಹೋದರು. ಆದರೆ ೨೦೦೦ ದ ಹೊತ್ತಿಗೆ, ಹಲವರು ವಾಪಸ್ಸಾದರು. ಅಲ್ಲಿ ಹೆಚ್ಚು ಪ್ರಮಾಣದ ವಲಸೆಗಾರರಲ್ಲಿ ಸಿಖ್ಖರೇ ಪ್ರಮುಖರು. ಆಸಮಯದಲ್ಲಿ ಜನಾಂಗದ ಅಸಮಾನತೆಯನ್ನು ಅನುಭವಿಸಿದರು ಬ್ರಿಟಿಷ್ ಕೊಲಂಬಿಯದಲ್ಲಿ ನೆಲೆಸಿದ ಸಿಖ್ ಪರಿವಾರಗಳು ತಮ್ಮ ಗುರುದ್ವಾರಗಳನ್ನು ಸ್ಥಾಪಿಸಿ ತಮ್ಮ ನೆಲೆಯನ್ನು ಭದ್ರಪಡಿಸಿಕೊಂಡರು. ೧೯೦೭ ರಲ್ಲಿ ಕೆನಡಾದ ವ್ಯಾಂಕೂವರ್ ರಾಜ್ಯದಲ್ಲಿ 'ವ್ಯಾಂಕೂವರ್ ಖಾಲ್ಸಾ ದಿವಾನ್ ಸೊಸೈಟಿ' ಸ್ಥಾಪನೆಯಾಯಿತು. ೧೯೦೮ ರಲ್ಲಿ ಸ್ಥಾಪನೆಯಾದ ಮೊಟ್ಟಮೊದಲ ಖಾಯಂ ಗುರುದ್ವಾರವೆಂದು ಹೆಸರಾಗಿದೆ. ಕೆಲವು ದಶಕಗಳಲ್ಲಿ ಇತರ ರಾಜ್ಯಗಳಲ್ಲೂ ಅಲ್ಲಿನ ಸಿಖ್ ಪರಿವಾರಗಳು ಗುರುದ್ವಾರಾಗಳನ್ನು ಕಟ್ಟಿಕೊಂಡರು. ಆ ರಾಜ್ಯಗಳು :

  1. ವಿಕ್ಟೋರಿಯ,
  2. ನಾನೈಮೋ,
  3. ನ್ಯೂ ವೆಸ್ಟ್ ಮಿನ್ಸ್ತರ್,
  4. ಅಬ್ಬಾಟ್ಸ್ ಫೋರ್ಡ್, ಮುಂತಾದ ರಾಜ್ಯಗಳಲ್ಲಿ

ಭಾರತೀಯ ಸೈನ್ಯದಲ್ಲಿ ಕೆಲಸನಿರ್ವಹಿಸುತ್ತಿದ್ದ ಯೋಧರು. ಇಂಗ್ಲೆಂಡಿನ ಸಾಮ್ರಾಜ್ಞಿ ವಿಕ್ಟೋರಿಯಳ ವಜ್ರಮಹೋತ್ಸವದ ಸಂದರ್ಭದಲ್ಲಿ ಅವರನ್ನೆಲ್ಲಾ ಬ್ರಿಟಿಷ್ ಸರಕಾರ ಇಂಗ್ಲೆಂಡಿಗೆ ಕರೆದೊಯ್ದಿತ್ತು. ವಾಪಸ್ ಬರುವಾಗ ಕೆನಡಾ ದೇಶದಲ್ಲಿ ನೆಲೆಸಲು ಹಲವು ಸೌಲಭ್ಯಗಳನ್ನು ನೀಡುವುದಾಗಿ ಆಶ್ವಾಸನೆ ಕೊಟ್ಟಿದ್ದರಿಂದ, ಬಹುಪಾಲು ಜನ ಭಾರತೀಯರು ಟೋರಾಂಟೋ ನಗರದಲ್ಲಿ ಉಳಿದುಕೊಂಡರು.[] ಅವರಿಗೆ ದೊಡ್ಡಪ್ರಮಾಣದ ಜಮೀನುಗಳು, ಮತ್ತು ಇರಲು ಮನೆಗಳನ್ನು ಕೊಡಲಾಯಿತು. ಹಾಗೆ ನೆಲಸಿದ ಅವರು 'ಪ್ರಾರ್ಥನಾ ಸಮಾಜದ ನಿರ್ಮಾಣ'ದಲ್ಲಿ ಬಹಳ ಯೋಗದಾನ ಮಾಡಿದ್ದಾರೆ.

ಚಿತ್ರ:PS073.JPG
'ಗಣಪತಿ ವಿಗ್ರಹ'
ಚಿತ್ರ:PS072.JPG
'ಪ್ರವಚನ'

ಉಲ್ಲೇಖಗಳು

[ಬದಲಾಯಿಸಿ]
  1. 'Hindu Prarthana Samaj, Toronto city
  2. "Sikh population around the world". Archived from the original on 2014-03-29. Retrieved 2014-06-21.
  3. First Sikhs in Canada