ವಿಷಯಕ್ಕೆ ಹೋಗು

ಪೆಂಟೋಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪರೋಕ್ಷವಾಗಿ ಬಿಸಿಯಾದ ಕ್ಯಾಥೋಡ್ ವರ್ಗದ ಪೆಂಟೋಡ್ ಅನ್ನು ಪ್ರತಿನಿಧಿಸುವ ಗ್ರಾಫಿಕ್ ಚಿಹ್ನೆ
ವಿದ್ಯುದ್ವಾರಗಳು, ಮೇಲಿನಿಂದ ಕೆಳಕ್ಕೆ ಪಟ್ಟಿಮಾಡಲಾಗಿದೆ:
ಆನೋಡ್,
ಸಪ್ರೆಸರ್ ಗ್ರಿಡ್,
ಸ್ಕ್ರೀನ್ ಗ್ರಿಡ್,
ನಿಯಂತ್ರಣ ಗ್ರಿಡ್,
ಕ್ಯಾಥೋಡ್

ಪೆಂಟೋಡ್ ಎಂಬುದು ಐದು ವಿದ್ಯುದ್ವಾರಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ ಸಾಧನವಾಗಿದೆ. ಈ ಸಾಧನವನ್ನು ೧೯೨೬ರಲ್ಲಿ ಗಿಲ್ಲಿಸ್ ಹೋಲ್ಸ್ಟ್ ಮತ್ತು ಬರ್ನ್ಹಾರ್ಡ್ ಡಿ.ಹೆಚ್.ಟೆಲ್ಲೆಜನ್ ಅವರು ಕಂಡುಹಿಡಿದರು.[] ಈ ಪದವು ಸಾಮಾನ್ಯವಾಗಿ ಮೂರು-ಗ್ರಿಡ್ ನಿರ್ವಾತ ಕೊಳವೆ ವರ್ಧಕ ಅಥವಾ ಥರ್ಮಿಯೋನಿಕ್ ವಾಲ್ವ್‌ಗೆ ಅನ್ವಯಿಸುತ್ತದೆ. ಪೆಂಟೋಡ್ ಪರದೆ-ಗ್ರಿಡ್ ಕೊಳವೆ ಅಥವಾ ಷೀಲ್ಡ್-ಗ್ರಿಡ್ ಕೊಳವೆ (ಒಂದು ರೀತಿಯ ಟೆಟ್ರೋಡ್ ಕೊಳವೆ) ನಿಂದ, ಪರದೆ ಗ್ರಿಡ್ ಮತ್ತು ವಿದ್ಯುದ್ವಾರದ ನಡುವೆ ಗ್ರಿಡ್ ಅನ್ನು ಸೇರಿಸುವ ಮೂಲಕ ಅಭಿವೃದ್ಧಿಪಡಿಸಲಾಗಿದೆ.[] ಪರದೆ-ಗ್ರಿಡ್ ಕೊಳವೆ ವಿದ್ಯುದ್ವಾರದದ ಎಲೆಕ್ಟ್ರಾನ್‌ಗಳ ದ್ವಿತೀಯ ಉತ್ಸರ್ಜಿಕೆಯ ಕಾರಣದಿಂದಾಗಿ  ವರ್ಧಕವಾಗಿ ಕಾರ್ಯಕ್ಷಮತೆಯಲ್ಲಿ ಸೀಮಿತವಾಗಿತ್ತು.[] ಹೆಚ್ಚುವರಿ ಗ್ರಿಡ್ ಅನ್ನು ‘ನಿಗ್ರಹಿಸುವ ಗ್ರಿಡ್’ ಎಂದು ಕರೆಯಲಾಗುತ್ತದೆ. ನಿಗ್ರಹಿಸುವ ಗ್ರಿಡ್ ಸಾಮಾನ್ಯವಾಗಿ ಋಣದ್ವಾರದ ಸಾಮರ್ಥ್ಯದಲ್ಲಿ ಇರುವುದು. ಈ ನಿಗ್ರಹಿಸುವ ಗ್ರಿಡ್ ಋಣದ್ವಾರಕ್ಕೆ ಹೋಗುವ ದ್ವಿತೀಯ ಉತ್ಸರ್ಜನೆಯನ್ನು ತಡೆಯುವುದು.[][] ನಿಗ್ರಹಕಾರ ಗ್ರಿಡ್‍ನ್ನು ಸೇರಿಸುವುದರಿಂದ ವರ್ಧಕ ಕಾರ್ಯಾಚರಣೆಯಲ್ಲಿ ಪೆಂಟೋಡ್‍ನ ಪ್ಲೇಟ್ ನಿಂದ ಹೊರಬರುವ ಸಿಗ್ನಲ್ ಪರದೆ ಗ್ರಿಡ್ ಕೊಳವೆಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರುತ್ತದೆ. ೧೯೬೦ರ ದಶಕದಿಂದ ೧೯೭೦ರ ದಶಕದವರೆಗೆ ಪೆಂಟೋಡ್ ಟ್ಯೂಬ್‌ಗಳನ್ನು ಅತಿಹೆಚ್ಚಾಗಿ ತಯಾರಿಸಲಾಯಿತು ಮತ್ತು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸಲಾಯಿತು. ಇದೆ ಸಮಯದಲ್ಲಿ ಕೊಳವೆಗಳನ್ನು ಟ್ರಾನ್ಸಿಸ್ಟರ್ ನೊಂದಿಗೆ ಹೊಸ ವಿನ್ಯಾಸಗಳಲ್ಲಿ ಬದಲಾಯಿಸಲಾಯಿತು. ೨೧ನೇ ಶತಮಾನದ ಶುರುವಲ್ಲೇ, ಕೆಲವು ಪೆಂಟೋಡ್‍ಗಳು ಹೆಚ್ಚಿನ ಶಕ್ತಿಯ ರೇಡಿಯೊ ಆವರ್ತನ ಸಾಧನೆಗಳು, ಸಂಗೀತ ವಾದ್ಯ ವರ್ಧಕಗಳು ಮತ್ತು ನಿರ್ದಿಷ್ಟ ಮಾರುಕಟ್ಟೆಗಳ ಉತ್ಪಾದನೆಯಲ್ಲಿವೆ.

ಪೆಂಟೋಡ್‍ನ ವಿಧಗಳು

[ಬದಲಾಯಿಸಿ]
  • ಸಾಮಾನ್ಯ ಪೆಂಟೋಡ್‌ಗಳನ್ನು ಶಾರ್ಪ್-ಕಟ್ಆಫ್ ಅಥವಾ ಹೈ-ಇಳಿಜಾರು ಪೆಂಟೋಡ್‌ಗಳೆಂದು ಉಲ್ಲೇಖಿಸಲಾಗುತ್ತದೆ ಮತ್ತು ನಿಯಂತ್ರಣ ಗ್ರಿಡ್‌ನಲ್ಲಿ ಏಕರೂಪದ ದ್ಯುತಿರಂಧ್ರ ಗಾತ್ರವನ್ನು ಹೊಂದಿರುತ್ತದೆ. ನಿಯಂತ್ರಣ ಗ್ರಿಡ್‌ನ ಏಕರೂಪದ ನಿರ್ಮಾಣವು ವರ್ಧನೆಯ ಅಂಶಕ್ಕೆ ಕಾರಣವಾಗುತ್ತದೆ (mu ಅಥವಾ μ} ಮತ್ತು ಟ್ರಾನ್ಸ್‌ಕಂಡಕ್ಟನ್ಸ್ ಹೆಚ್ಚುತ್ತಿರುವ ಋಣಾತ್ಮಕ ಗ್ರಿಡ್ ವೋಲ್ಟೇಜ್‌ನೊಂದಿಗೆ ಬಹಳ ಕಡಿಮೆ ಬದಲಾಗುತ್ತದೆ, ಇದು ಪ್ಲೇಟ್ ಕರೆಂಟ್‌ನ ಸಾಕಷ್ಟು ಹಠಾತ್ ಕಡಿತಕ್ಕೆ ಕಾರಣವಾಗುತ್ತದೆ.[] ಈ ಪೆಂಟೋಡ್‌ಗಳು ನಿಯಂತ್ರಣ ಗ್ರಿಡ್ ಮೇಲೆ ಸೀಮಿತ ವ್ಯಾಪ್ತಿಯ ಸಿಗ್ನಲ್ ಮತ್ತು ಪೂರ್ವಾಗ್ರಹದಲ್ಲಿ ಕಾರ್ಯನಿರ್ವಹಿಸುವ ವರ್ಧಕ ವಿನ್ಯಾಸಗಳಲ್ಲಿ ಅನ್ವಯಿಸಲು ಸೂಕ್ತವಾಗಿವೆ. ಉದಾಹರಣೆಗಳು: EF37A, EF86/6267, 1N5GT, 6AU6A, 6J7GT. ಪೆಂಟೋಡ್‌ಗಳಿಗಾಗಿ ಯುರೋಪಿಯನ್ ವಾಲ್ವ್ ಹೆಸರಿಸುವ ಯೋಜನೆಯಲ್ಲಿ, EF37 ಯನ್ನು ಹೊರತುಪಡಿಸಿ ಸಮ ಸಂಖ್ಯೆ ಚೂಪಾದ-ಕಟಾಫ್ ಸಾಧನವನ್ನು ಸೂಚಿಸಿದರೆ, ಬೆಸ ಸಂಖ್ಯೆ ಅಲಕ್ಕಾದ-ಕಟಾಫ್ ಅನ್ನು ಸೂಚಿಸುತ್ತದೆ.
  • ಅಲಕ್ಕಾದ-ಕಟಾಫ್, ಬದಲಾಗುವ-μ, ಅತಿ-ನಿಯಂತ್ರಣ ಅಥವಾ ಬದಲಾಗುವ-ಓಟ ಪೆಂಟೋಡ್‌ಗಳು ಸಾಮಾನ್ಯ ಪೆಂಟೋಡ್‌ಗಳಿಗಿಂತ ಧನಧ್ರುವದ ವಿದ್ಯುತ್ಪ್ರವಾಹ  ಕಡಿತಗೊಳಿಸದೆ, ನಿಯಂತ್ರಣ ಗ್ರಿಡ್ ಮೇಲೆ ಹೆಚ್ಚಿನ ಸಿಗ್ನಲ್ ಮತ್ತು ಪೂರ್ವಾಗ್ರಹ ವಿಭವಾಂತರವನ್ನು ನಿರ್ವಾಹಿಸಬಲ್ಲದು. ಬದಲಾಗುವ-μನ ನಿಯಂತ್ರಣ ಗ್ರಿಡ್ ನ ವಿಭವವು ಋಣಧ್ರುವಗಿಂತ ಋಣಾತ್ಮಕವಾದರೂ ಧನಧ್ರುವದ ಪ್ರವಾಹದ ಮೇಲೆ ಅಷ್ಟು ಪರಿಣಾಮ ಬೀಳುವುದಿಲ್ಲ.ನಿಯಂತ್ರಣ ಗ್ರಿಡ್ ನಾನಾ ತಿರುವುಗಳ ಹೆಲಿಕ್ಸ್ ರೂಪವನ್ನು ಹೆಚ್ಚಾಗಿ ಹೊಂದಿರುತ್ತದೆ. ನಿಯಂತ್ರಣ ಗ್ರಿಡ್ ನ  ವೋಲ್ಟೇಜ್ ಹೆಚ್ಚು ಋಣಾತ್ಮಕವಾಗುತ್ತಿದ್ದಂತೆ, ಟ್ಯೂಬ್‌ನ ನಿರಂತರವಾಗಿ ಹೆಚ್ಚುತ್ತಿರುವ ವರ್ಧಕ ಅಂಶವು ಚಿಕ್ಕದಾಗುತ್ತದೆ. ಬದಲಾಗುವ-μ ಪೆಂಟೋಡ್‌ಗಳು ವಿರೂಪತೆ ಮತ್ತು ಕ್ರಾಸ್ -ಮಾಡ್ಯುಲೇಶನ್ (ಇಂಟರ್‌ಮಾಡ್ಯುಲೇಶನ್) ಅನ್ನು ಕಡಿಮೆ ಮಾಡುತ್ತವೆ ಮತ್ತು ಸಾಮಾನ್ಯ ಪೆಂಟೋಡ್‌ಗಳಿಗಿಂತ ಹೆಚ್ಚಿನ ಕ್ರಿಯಾತ್ಮಕ ವರ್ಧಕ ವ್ಯಾಪ್ತಿಯನ್ನು ಅನುಮತಿಸುತ್ತವೆ. ಅಲಕ್ಕಾದ-ಕಟಾಫ್ ಪೆಂಟೋಡ್‌ಗಳನ್ನು ಮೊದಲು ಆಕಾಶವಾಣಿ ರಿಸೀವರ್‌ಗಳ ಆಕಾಶವಾಣಿ ಆವರ್ತನ ವರ್ಧಕ ಹಂತಗಳಲ್ಲಿ, ಸ್ವಯಂಚಾಲಿತ ಧ್ವನಿ ನಿಯಂತ್ರಣದೊಂದಿಗೆ, ಮತ್ತು ಸಿಗ್ನಲ್ ಹಾಗು ವಿಭವ ನಿಯಂತ್ರಣ ಅನ್ವಯಗಳ್ಲಲಿ ಬಳಸಲಾಗಬಹುದು . ಮಾರುಕಟ್ಟೆಯಲ್ಲಿ ಲಭ್ಯವಾದ ಮೊದಲ ಬದಲಾಗುವ ಮು ಪೆಂಟೋಡ್ಗಳೆಂದರೆ RCA 239 ಮತ್ತು ಮುಲ್ಲಾರ್ಡ್ VP4 .
  • ಶಕ್ತಿ ಚಾಲಿತ ಪೆಂಟೋಡ್‌ಗಳು ಅಥವಾ ಶಕ್ತಿ-ವರ್ಧಕ ಪೆಂಟೋಡ್‌ಗಳು ಎಂದರೆ ಸಾಮಾನ್ಯ ಪೆಂಟೋಡ್‌ಗಳಿಗಿಂತ ಹೆಚ್ಚಿನ ಪ್ರವಾಹ, ಹೆಚ್ಚಿನ ತಾಪಮಾನ ಮತ್ತು ಹೆಚ್ಚಿನ ವಿಭವಾಂತರಗಳಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ಕೊಳವೆಗಳು. ಶಕ್ತಿ ಚಾಲಿತ ಪೆಂಟೋಡ್‌ನ ಋಣಧ್ರುವ ಅಗತ್ಯವಾಗಿರುವ ಪ್ರವಾಹವನ್ನು ಕೊಳವೆ ಮೂಲಕ ಒದಗಿಸಬಲ್ಲದು ಮತ್ತು ಲೋಡ್ ಪ್ರತಿರೋಧದಲ್ಲಿ ಅಪೇಕ್ಷಿತ ಶಕ್ತಿಯನ್ನು ಉತ್ಪಾದಿಸಲು ಸಾಕಷ್ಟು ಎಲೆಕ್ಟ್ರಾನ್ ಉತ್ಸರಗಿಸುವ ಸಾಮರ್ಥ್ಯವನ್ನು ಹೊಂದಿದೆ . ಶಕ್ತಿ ಚಾಲಿತ ಪೆಂಟೋಡ್‌ನ ಪ್ಲೇಟ್ ಅಥವಾ ಧನಧ್ರುವ ಸಾಮಾನ್ಯ ಪೆಂಟೋಡ್‌ನ ಪ್ಲೇಟ್‌ಗಿಂತ ಹೆಚ್ಚಿನ ಶಕ್ತಿಯನ್ನು ಹರಿದು ಬಿಡುವ ಸಾಮರ್ಥ್ಯವನ್ನು ಹೊಂದಿರುವಂತೆ ವಿನ್ಯಾಸಗೊಳಿಸಲಾಗಿದೆ . EL34, EL84, 6CL6, 6F6, 6G6, SY4307A, 6K6GT ಪೆಂಟೋಡ್ ಗಳು ಶಕ್ತಿ ವರ್ಧನಕಾಗಿ ವಿನ್ಯಾಸಗೊಂಡಿದೆ. ದೂರದರ್ಶನದ ನಿರ್ದಿಷ್ಟ ಅವಶ್ಯಕತೆಗಳಿಗಾಗಿ ಬಳಸುವ ಕೆಲವು ಘನತೆ ಪೆಂಟೋಡ್‌ಗಳು:
  • ದೃಶ್ಯದ  ಉತ್ಪತ್ತಿಸುವ ಪೆಂಟೋಡ್‌ಗಳು: 15A6/PL83, PL802
  • ಚೌಕಟ್ಟಿನ  ಉತ್ಪತ್ತಿಸುವ ( ಶೃಂಗೀಯ ವಿಚಲನೆ) ಪೆಂಟೋಡ್‌ಗಳು: PL84, 18GV8/PCL85
  • ರೇಖೀಯ ಉತ್ಪತ್ತಿಸುವ (ದಿಗ೦ತದ ವಿಚಲನೆ) ಪೆಂಟೋಡ್‌ಗಳು: PL36, 27GB5/PL500, PL505 ಇತ್ಯಾದಿ
  • "ಟ್ರೈಯೋಡ್-ಪೆಂಟೋಡ್" ಎಂದರೆ ಒಂದೇ ಕವಚದಲ್ಲಿ ಟ್ರೈಯೋಡ್ ಮತ್ತು ಪೆಂಟೋಡ್ ಎರಡನ್ನೂ ಹೊಂದಿರುವ ಒಂದು ಟ್ಯೂಬ್, ಉದಾಹರಣೆಗೆ ECF80 ಅಥವಾ ECL86.

ಟೆಟ್ರೋಡ್ಗೊಳೊಂದಿಗೆ  ಹೋಲುವಿಕೆ

[ಬದಲಾಯಿಸಿ]

ಮೊದಲಿನ ಟ್ರೈಯೋಡ್‌ಗಿಂತ ಸಾಮಾನ್ಯವಾದ ಟೆಟ್ರೋಡ್ ಅಥವಾ ಪರದೆ-ಗ್ರಿಡ್ ಕೊಳವೆ ಹೆಚ್ಚಿನ ವರ್ಧನ ಅಂಶ, ಹೆಚ್ಚಿನ ಶಕ್ತಿ ಮತ್ತು ಅತೀ ವ್ಯಾಪ್ತಿ ಆವರ್ತನ ಸಾಮರ್ಥ್ಯವನ್ನು ನೀಡುತ್ತಿತ್ತು. ಆದರೆ, ಟೆಟ್ರೋಡ್‌ನಲ್ಲಿ, ಋಣಧ್ರುವದಿಂದ ಬರುವ ಎಲೆಕ್ಟ್ರಾನ್‌ಗಳು ಧನಧ್ರುವದಿಂದ ದ್ವಿತೀಯಾ ಉತ್ಸರ್ಗಿಕೆಯಿಂದ ಎಲೆಕ್ಟ್ರಾನ್‌ಗಳನ್ನು ಹೊರಹೊಡೆಯುತ್ತವೆ. ಅವು ಹೆಚ್ಚಿನ ವಿಭವವೊಂದಿರುವ ಕಾರಣ ಪರದೆ ಗ್ರಿಡ್ ಗೆ ಹರಿಯುವುದು. ಧನಧ್ರುವದಿಂದ ಉತ್ಪತ್ತಿಯಾಗುವ ಎಲೆಕ್ಟ್ರಾನ್‌ಗಳ ಈ ಹರಿವು ಒಟ್ಟು ಧನಧ್ರುವದ ಪ್ರವಾಹವನ್ನು Ia ಕಡಿಮೆ ಮಾಡುತ್ತದೆ. ಧನಧ್ರುವದ ವಿಭವ Va ಹೆಚ್ಚಾದಂತೆ, ಋಣಧ್ರುವದಿಂದ ಬರುವ ಎಲೆಕ್ಟ್ರಾನ್‌ಗಳು ಹೆಚ್ಚಿನ ಶಕ್ತಿಯೊಂದಿಗೆ ಧನಧ್ರುವನ್ನು ಹೊಡೆಯುತ್ತವೆ, ಹೆಚ್ಚಿನ ದ್ವಿತೀಯಾ ಉತ್ಸರ್ಗಿಕೆಯಿಂದ ಎಲೆಕ್ಟ್ರಾನ್‌ಗಳನ್ನು ಹೊರಹಾಕುತ್ತದೆ , ಧನಧ್ರುವದಿಂದ ಹೊರಬರುವ ಎಲೆಕ್ಟ್ರಾನ್‌ಗಳ ಈ ಹರಿವನ್ನು ಹೆಚ್ಚಿಸುತ್ತವೆ. ಫಲಿತಾಂಶ,ಟೆ ಟ್ರೋಡ್‌ನಲ್ಲಿ ಧನಧ್ರುವದಲ್ಲಿ ರೇಖೀಯವಾಗಿ, ವಿಭವ Va ಹೆಚ್ಚಾದಂತೆ ಪ್ರವಾಹ Ia ಕಡಿಮೆಯಾಗುತ್ತದೆ. ಈ ಗುಣಲಕ್ಷಣ (ΔVa/ΔIa < 0) ಅನ್ನು ಋಣಾತ್ಮಕ ಪ್ರತಿರೋಧ ಎಂದು ಕರೆಯುತ್ತಾರೆ. ಇದು ಟೆಟ್ರೋಡ್ ಅಸ್ಥಿರವಾಗಲು ಕಾರಣವಾಗಬಹುದು, ಕೆಲವು ಸಂದರ್ಭಗಳಲ್ಲಿ ಔಟ್‌ಪುಟ್‌ನಲ್ಲಿ ಪರಾವಲಂಬಿ ಸ್ಪಂದನಗಳು (ಡೈನಾಟ್ರಾನ್ ಸ್ಪಂದನಗಳು) ಉಂಟಾಗುತ್ತವೆ.

ಟೆಲೆಜೆನ್ ಪರಿಚಯಿಸಿದ ಪೆಂಟೋಡ್ ಕೊಳವೆಯಲ್ಲಿ ಒಂದು  ಹೆಚ್ಚುವರಿ ವಿದ್ಯುದ್ವಾರ ಅಥವಾ ಮೂರನೇ ಗ್ರಿಡ್ ಇದೆ. ಇದನ್ನು ನಿಗ್ರಹಿಸುವ ಗ್ರಿಡ್ ಎಂದು ಕರೆಯುತ್ತಾರೆ. ಇದು ಪರದೆ ಗ್ರಿಡ್ ಮತ್ತು ಧನಧ್ರುವದ  ನಡುವೆ ಇದೆ .ಇದು ದ್ವಿತೀಯ ಉತ್ಸರ್ಜಿಕೆಯ ಸಮಸ್ಯೆಯನ್ನು ಪರಿಹರಿಸುತ್ತದೆ. ನಿಗ್ರಹಿಸುವ  ಗ್ರಿಡ್‌ಗೆ ಕಡಿಮೆ ವಿಭವವನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಅದು ಗ್ರೌಂಡ್‌ಗೆ ಸಂಪರ್ಕಿಸಲ್ಪಟ್ಟಿರುತ್ತದೆ ಅಥವಾ ಋಣಧ್ರುವಕ್ಕೆ ಸಂಪರ್ಕಿಸಲ್ಪಟ್ಟಿರುತ್ತದೆ. ಧನಧ್ರುವದಿಂದ ಬರುವ ದ್ವಿತೀಯ ಉತ್ಸರ್ಜಿಕೆಯ ಎಲೆಕ್ಟ್ರಾನ್‌ಗಳು ನಿಗ್ರಹಿಸುವ ಗ್ರಿಡ್‌ನ ಋಣಾತ್ಮಕ ವಿಭವದಿಂದ ಹಿಮ್ಮೆಟ್ಟಿಸಲ್ಪಡುತ್ತವೆ, ಆದ್ದರಿಂದ ಅವು ಪರದೆ ಗ್ರಿಡ್‌ಗೆ ತಲುಪಲಾರವು. ಈ ಕಾರಣದಿಂದ ಧನಧ್ರುವಕ್ಕೆ  ಹಿಂದಿರುಗುತ್ತವೆ . ಋಣಧ್ರುವದಿಂದ ಬರುವ ಪ್ರಾಥಮಿಕ ಎಲೆಕ್ಟ್ರಾನ್‌ಗಳು ಹೆಚ್ಚಿನ ಚಲನ ಶಕ್ತಿಯನ್ನು ಹೊಂದಿರುತ್ತವೆ, ಆದ್ದರಿಂದ ಅವು ಇನ್ನೂ ನಿಗ್ರಹಿಸುವ ಗ್ರಿಡ್‌ನ ಮೂಲಕ ಹಾದುಹೋಗಿ ಧನಧ್ರುವವನ್ನು ತಲುಪಬಹುದು.

ಆದ್ದರಿಂದ, ಪೆಂಟೋಡ್‌ಗಳು ಹೆಚ್ಚಿನ ಪ್ರವಾಹವನ್ನು ನೀಡಬಹುದು ಮತ್ತು ವಿಸ್ತಾರವಾದ ವಿಭವಾಂತರವನ್ನು  ಉತ್ಪಾದಿಸಬಹುದು. ಧನಧ್ರುವ ಅಥವಾ ಪ್ಲೇಟ್ ಪರದೆ ಗ್ರಿಡ್‌ಗಿಂತ ಕಡಿಮೆ ವಿಭವದಲ್ಲಿಯೂ ಸಹ ಉತ್ತಮವಾಗಿ ವರ್ಧಿಸಬಹುದು.

ಟ್ರೈಯೋಡ್‌ಗಳೊಂದಿಗೆ ಹೋಲಿಕೆ

[ಬದಲಾಯಿಸಿ]
  • ಪ್ರತಿಕ್ರಿಯಾ ಸಮರ್ಥ್ಯ: ಪೆಂಟೋಡ್‌ಗಳು (ಮತ್ತು ಟೆಟ್ರೋಡ್‌ಗಳು) ಎರಡನೇ ಗ್ರಿಡ್‌ನ ಪರದೆ ಪರಿಣಾಮದಿಂದಾಗಿ, ಕಡಿಮೆ ಪ್ರತಿಕ್ರಿಯಾ ಸಮರ್ಥ್ಯವನ್ನು ಹೊಂದಿರುತ್ತವೆ. ಪೆಂಟೋಡ್‌ಗಳಿಗೆ ಹೋಲಿಸಿದರೆ ಟ್ರೈಯೋಡ್‌ಗಳು ಹೆಚ್ಚಿನ ಅಂತರ್‌ಗತ ಧನಧ್ರುವ ಪ್ರತಿರೋಧವನ್ನು ಹೊಂದಿರುತ್ತವೆ, ಹಾಗಾಗಿ ಧ್ವನಿ ವರ್ಧಕ ಮಂಡಳಗಳಲ್ಲಿ ಬಳಸಿದಾಗ, ಹೆಚ್ಚಿನ ನಿಗ್ರಹ ಗುಣಕವನ್ನು ಹೊಂದಿರುತ್ತವೆ (ಋಣಾತ್ಮಕ ಪ್ರತಿಕ್ರಿಯೆ ಇಲ್ಲದಿದ್ದಾಗ). ಈ ಕಾರಣದಿಂದ ಒಂದೇ ಟ್ರಾನ್ಸ್‌ಕಂಡಕ್ಟ್ಯಾನ್ಸ್‌ ಹೊಂದಿರುವ ಟ್ರೈಯೋಡ್‌ಗಿಂತ  ಪೆಂಟೋಡ್ನಲ್ಲೇ ಹೆಚ್ಚಿನ ವಿಭವಾ ವರ್ಧನ ಉತ್ಪತ್ತಿ ಮಾಡಬಹುದು. ಅಂದರೆ, ಕಡಿಮೆ ಶಕ್ತಿ ಚಾಲನ ಸಿಗ್ನಲ್‌ನೊಂದಿಗೆ ಪರಿಣಾಮಕಾರಿ ಉತ್ಪಾದಿಸುವ ಹಂತವನ್ನು ಪೆಂಟೋಡ್‌ಗಳನ್ನು ಬಳಸಿ ತಯಾರಿಸಬಹುದು.
  • ಗದ್ದಲ (ಬಿಭಿನ್ನತೆ ಗದ್ದಲ): ಪೆಂಟೋಡ್‌ಗಳು ಹೆಚ್ಚಿನ ಗದ್ದಲ(ಸದ್ದು) ಹೊಂದಿರುತ್ತವೆ, ಏಕೆಂದರೆ ಋಣಧ್ರುವದ ಪ್ರವಾಹವು ಪರದೆ ಗ್ರಿಡ್ ಮತ್ತು ಧನಧ್ರುವ ನಡುವೆ ಯಾದೃಚ್ಛಿಕವಾಗಿ ವಿಭಜನಗೊಳ್ಳುತ್ತದೆ.
  • ಪೂರೈಕೆ ವೋಲ್ಟೇಜ್: ಪೆಂಟೋಡ್ಗಳಿಗೆ ಪೂರೈಸುವ ವಿಭವವು ಏರಿಳಿತವಾದರೂ ಯಾವುದೇ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಅಸ್ಥಿರವಾದ ಪೂರೈಕೆಗಳೊಂದಿಗೂ ಕಾರ್ಯನಿರ್ವಹಿಸಬಹುದು.
  • ಗ್ರಿಡ್ ವಿಭವ  ಮತ್ತು ಧನಧ್ರುವದ ಪ್ರವಾಹದ ಸಂಬಂಧ: ಧನಧ್ರುವದ ವಿಭವವನ್ನು ಸ್ಥಿರವಾಗಿರಿಸಿದಾಗ, ಪೆಂಟೋಡ್‌ಗಳು ಮತ್ತು ಟ್ರೈಯೋಡ್‌ಗಳು (ಮತ್ತು ಟೆಟ್ರೋಡ್‌ಗಳು)  ಗ್ರಿಡ್ ಒಳಬರುವ ವಿಭವವು (ಒಂದು) ಮತ್ತು ಧನಧ್ರುವದಿಂದ ಉತ್ಪತ್ತಿಯಾಗುವ ಪ್ರವಾಹದ ನಡುವೆ ಮೂಲತಃ ಹೋಲಿಸಬಹುದಾದ ಸಂಬಂಧವನ್ನು ಹೊಂದಿರುತ್ತವೆ. ಈ ಸಂಬಂಧ ಚದರ ಕಾನೂನಿನ ಸಂಬಂಧಕ್ಕೆ ಹೋಲಿಸಬಹದು .
ಜನರಲ್ ಎಲೆಕ್ಟ್ರಿಕ್ 12AE10 ಡಬಲ್ ಪೆಂಟೋಡ್

ಆರಂಭಿಕ ಬಳಕೆ: ಪೆಂಟೋಡ್ ಟ್ಯೂಬ್‌ಗಳನ್ನು ಮೊದಲು ಗ್ರಾಹಕ-ಮಟ್ಟದ ಆಕಾಶವಾಣಿ ರಿಸೀವರ್‌ಗಳಲ್ಲಿ ಬಳಸಲಾಯಿತು. ಪ್ರಸಿದ್ಧ ಪೆಂಟೋಡ್ ಪ್ರಕಾರ, EF50, ಎರಡನೇ ಮಹಾಯುದ್ಧದ ಆರಂಭದ ಮೊದಲು ವಿನ್ಯಾಸಗೊಳಿಸಲಾಗಿತ್ತು ಮತ್ತು ರೇಡಾರ್ ಸಾಧನಗಳು ಮತ್ತು ಇತರ ಮಿಲಿಟರಿ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ವ್ಯಾಪಕವಾಗಿ ಬಳಸಲಾಯಿತು. ಪೆಂಟೋಡ್ ಮಿತ್ರರಾಷ್ಟ್ರಗಳ ಎಲೆಕ್ಟ್ರಾನಿಕ್ ಪ್ರಾಬಲ್ಯಕ್ಕೆ ಕೊಡುಗೆ ನೀಡಿತು.

ಗಣಕಯಂತ್ರಗಳಲ್ಲಿ ಬಳಕೆ: ಕೋಲೋಸಸ್ ಗಣಕಯಂತ್ರ ಮತ್ತು ಮ್ಯಾಂಚೆಸ್ಟರ್ ಬೇಬಿ ಭಾರಿ ಸಂಖ್ಯೆಯ EF36 ಪೆಂಟೋಡ್ ಕೊಳವೆಗಳನ್ನು ಬಳಸಿದವು.[][][][೧೦] ನಂತರ, 7AK7 ಕೊಳವೆಯನ್ನು ಗಣಕಯಂತ್ರ ಸಾಧನಗಳಲ್ಲಿ ಬಳಸಲು ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಲಾಯಿತು.[೧೧]

ದೂರದರ್ಶನದ ಬಳಕೆ: ಎರಡನೇ ಮಹಾಯುದ್ಧದ ನಂತರ, EF50 ನಂತರದ EF80 ಪೆಂಟೋಡ್‌ಗಳನ್ನು ವ್ಯಾಪಕವಾಗಿ ದೂರದರ್ಶನದ ರಿಸೀವರ್‌ಗಳಲ್ಲಿ ಬಳಸಲಾಯಿತು. ೧೯೬೦ರ ದಶಕದಲ್ಲಿ ಕೊಳವೆಗಳನ್ನು ಟ್ರಾನ್ಸಿಸ್ಟರ್‌ಗಳಿಂದ ಬದಲಾಯಿಸಲಾಯಿತು. ಆದಾಗ್ಯೂ, ಅತೀ ಶಕ್ತಿ ರೇಡಿಯೊ ಟ್ರಾನ್ಸ್‌ಮಿಟರ್‌ಗಳು (ಅವುಗಳ ಪ್ರಸಿದ್ಧ 'ವ್ಯಾಲ್ವ್ ಶಬ್ದ'ದ ಕಾರಣ) ,ಉನ್ನತವಾದ ಹಾಗು ಅಧಿಕೃತ ಆಡಿಯೊ ಸಾಧನಗಳು, ಧ್ವನಿವರ್ಧಕದ ಪೂರ್ವವರ್ಧಕಗಳು ಮತ್ತು ಎಲೆಕ್ಟ್ರಿಕ್ ಗಿಟಾರ್‌ಗಳ ಉತ್ತಮಗುಣಮತ್ತದ ಆವೃತ್ತಿಗಳಲ್ಲಿ ಇನ್ನೂ ಬಳಸಲಾಗುತ್ತದೆ. ಮಾಜಿ ಸೊವಿಯಟ್ ಒಕ್ಕೂಟದ ದೇಶಗಳಲ್ಲಿ ದೊಡ್ಡ ಸಂಗ್ರಹಗಳು ಇಂತಹ ಸಾಧನಗಳ ನಿರಂತರ ಪೂರೈಕೆಯನ್ನು ಒದಗಿಸಿವೆ. GU-50 ಟ್ರಾನ್ಸ್‌ಮಿಟರ್ ಕೊಳವೆಯಂತಹ ಕೆಲವು ಇತರ ಉದ್ದೇಶಗಳಿಗೆ ವಿನ್ಯಾಸಗೊಳಿಸಲಾದ ಪೆಂಟೋಡ್ಗಳು ಆಡಿಯೊ ವರ್ಧಕ ಬಳಕೆಗೆ ಉಪಯೋಗಿಸಲಾಗಿದೆ.

ಪೆಂಟೋಡ್‌ ಟ್ರೈಯೋಡ್‌ ಸರ್ಕ್ಯೂಟ್‌ಗಳು

[ಬದಲಾಯಿಸಿ]

ಒಂದು ಪೆಂಟೋಡ್‌ನಲ್ಲಿ  ಪರದೆ ಗ್ರಿಡ್ (ಗ್ರಿಡ್ 2) ಅನ್ನು ಧನಧ್ರುವಗೆ(ಪ್ಲೇಟ್) ಸಂಪರ್ಕಿಸಬಹುದು. ಈ ಸಂದರ್ಭದಲ್ಲಿ ಅದರ ಸಮಾನ ಗುಣಲಕ್ಷಣಗಳೊಂದಿಗೆ (ಕಡಿಮೆ ಆನೋಡ್ ಪ್ರತಿರೋಧ, ಕಡಿಮೆ μ, ಕಡಿಮೆ ಶಬ್ದ, ಹೆಚ್ಚಿನ ಚಾಲನ ಶಕ್ತಿ ಅಗತ್ಯವಿದೆ) ಸಾಮಾನ್ಯ ಟ್ರೈಯೋಡ್‌ ಆಗಿ ಬದಲಾಗುತ್ತದೆ . ನಂತರ ಸಾಧನವನ್ನು "ಟ್ರೈಯೋಡ್-ಸಂಪರ್ಕಿತ" ಎಂದು ಕರೆಯಲಾಗುತ್ತದೆ. ಇದನ್ನು ಕೆಲವೊಮ್ಮೆ ಸಂಗೀತ ಪ್ರಿಯರಿಗೆ ಪೆಂಟೋಡ್ ವರ್ಧಕ ಸರ್ಕ್ಯೂಟ್‌ಗಳಲ್ಲಿ ಆಯ್ಕೆಯಾಗಿ ಒದಗಿಸಲಾಗುತ್ತದೆ. ಇದರಿಂದ  ಟ್ರೈಯೋಡ್ ಶಕ್ತಿ ವರ್ಧಕದ ಬಯಸಿದ "ಧ್ವನಿ ಗುಣಲಕ್ಷಣಗಳನ್ನು" ನೀಡುತ್ತದೆ. ಪರದೆ ಗ್ರಿಡ್‌ನ ಶಕ್ತಿ ಅಥವಾ ವಿಭವ ರೇಟಿಂಗ್‌ನ ಮೀರಿಸುವಿಕೆಯನ್ನು ತಡೆಯಲು, ಸ್ಥಳೀಯ ಆಂದೋಲನಗಳನ್ನು ತಡೆಯಲು ಪರದೆ ಗ್ರಿಡ್‌ನೊಂದಿಗೆ ಸರಣಿಯಲ್ಲಿ ಒಂದು ನಿರೋಧಕವನ್ನು ಸೇರಿಸಬಹುದು. "ನಿಜವಾದ" ಶಕ್ತಿ ಚಾಲನಾ ಟ್ರೈಯೋಡ್‌ಗಳ ಖರ್ಚನ್ನು ತಪ್ಪಿಸಲು ಬಯಸುವ ಸಂಗೀತ ಪ್ರಿಯರಿಗೆ ಟ್ರೈಯೋಡ್-ಸಂಪರ್ಕವು ಉಪಯುಕ್ತ ಆಯ್ಕೆಯಾಗಿದೆ.

ಇದನ್ನೂ ನೋಡಿ

[ಬದಲಾಯಿಸಿ]
  • ಬೀಮ್ ಟೆಟ್ರೋಡ್
  • ಪೆಂಟೋಡ್ ಟ್ರಾನ್ಸಿಸ್ಟರ್
  • ವಾಲ್ವ್ ಆಡಿಯೋ ಆಂಪ್ಲಿಫಯರ್ ತಾಂತ್ರಿಕ ವಿವರಣೆ
  • ನಿರ್ವಾತ ಕೊಳವೆಗಳ ಪಟ್ಟಿ

ಉಲ್ಲೇಖಗಳು

[ಬದಲಾಯಿಸಿ]
  1. G. Holst and B.D.H. Tellegen, "Means for amplifying electrical oscillations", US Patent 1945040, January 1934.
  2. "RCA Receiving Tube Manual, 1940"; p118
  3. Solymar, Lazlo (2012). Modern Physical Electronics. Springer Science and Business Media. p. 8. ISBN 978-9401165075.
  4. ETC Carney, Allen F. (1998). The Navy Electricity and Electronics Training Series, Module 06: Introduction to Electronic Emission, Tubes, and Power Supplies. Pensacola FL: Naval Education and Training Professional Development and Technology Center. p. 1-47.
  5. Whitaker, Jerry (2016). Power Vacuum Tubes Handbook, 3rd Edition. CRC Press. p. 87. ISBN 978-1439850657.
  6. Reich, Herbert J. (1941). Principles of Electron Tubes. New York: McGraw-Hill. p. 62.
  7. Tony Sale. "The Colossus Rebuild Project"
  8. Tony Sale. "The Colossus: its purpose and operation".
  9. Michael Saunby. "Small signal audio pentodes" Archived 2016-12-13 ವೇಬ್ಯಾಕ್ ಮೆಷಿನ್ ನಲ್ಲಿ..
  10. B. Jack Copeland. "Colossus: The secrets of Bletchley Park's code-breaking computers".
  11. Sylvania. Engineering Data Service. 7AK7 Archived 2016-06-16 ವೇಬ್ಯಾಕ್ ಮೆಷಿನ್ ನಲ್ಲಿ.. July 1953.
"https://kn.wikipedia.org/w/index.php?title=ಪೆಂಟೋಡ್&oldid=1251327" ಇಂದ ಪಡೆಯಲ್ಪಟ್ಟಿದೆ