ವಿಷಯಕ್ಕೆ ಹೋಗು

ಪಾರ್ಸಿ ಡೈರಿಫಾರಂ ಮುಂಬಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪಾರ್ಸಿ ಡೈರಿಫಾರಂ,' ಮುಂಬೈ ಇಂದ ಪುನರ್ನಿರ್ದೇಶಿತ)
ಚಿತ್ರ:Parsi dairy-farm.jpg
'ಪಾರ್ಸಿ ಡೈರಿಫಾರಂ,' ಮುಂಬಯಿ'

ಮುಂಬಯಿಯ ಪಾರ್ಸಿ ಡೈರಿಫಾರಂ ಹಾಲು, ಮೊಸರು, ಬೆಣ್ಣೆ, ತುಪ್ಪಗಳನ್ನು ಒದಗಿಸುವ ಒಂದು ಖಾಸಗಿ ಸಂಸ್ಥೆ. ಭಾರತಸರ್ಕಾರದ ಹಾಲುಸರಬರಾಜು ವ್ಯವಸ್ಥೆಯನ್ನು ಬಿಟ್ಟರೆ, ಖಾಸಗೀ ವಲಯದಲ್ಲಿ ಹಾಲು ಒದಗಿಸುವ ಹಾಲಿನ ಡೈರಿ, ದಿನಪ್ರತಿ, ೧೦,೦೦೦ ಲೀಟರ್ ಹಾಲು ಇಲ್ಲಿನಿಂದ ರವಾನಿಸಲಾಗುತ್ತದೆ. ಇದನ್ನು ನಿರ್ವಹಿಸಲು, ೧೬೦ ಜನ ಸಿಬ್ಬಂದಿವರ್ಗ ಇದ್ದಾರೆ. ಈ ಹಾಲಿನ ವಿಲೇವಾರಿ, ಮುಂಬಯಿಯಲ್ಲಿ, ಕೇವಲ ೫-೬ ಕೇಂದ್ರಗಳಿಂದ ಮಾತ್ರ ವ್ಯವಸ್ಥಿತವಾಗಿ ಆಗುತ್ತದೆ.

ಖಾಸಗಿ ಡೈರಿ

[ಬದಲಾಯಿಸಿ]

ಮುಂಬಯಿ ಅಹ್ಮೆದಾಬಾದ್ ರಸ್ತೆಯಲ್ಲಿ ಸಂಜನದ ಬಳಿ ಪಾರ್ಸಿ ಡೈರಿ ಫಾರಂನ ಸ್ವಂತ ಡೈರಿ ಇದೆ. ಅಲ್ಲಿ ವರ್ ವವಾಡಾ ಎಂಬ ಗ್ರಾಮದಲ್ಲಿ, ೨೭೫ ಎಕರೆ ಜಮೀನನ್ನು ಹಾಲಿನ ಡೈರಿಗಾಗಿ ಮೀಸಲಾಗಿಟ್ಟಿದ್ದಾರೆ. ಪ್ಯಾಶ್ಚರೈಸಿಂಗ್ ಯುನಿಟ್, ಮತ್ತು ಮಂಜಿನ ಕಾರ್ಖಾನೆ, ಅದಕ್ಕೆ ಸಂಬಂಧಪಟ್ಟ ಶಾಖೆಗಳಿವೆ. ಅಲ್ಲಿ ಎಮ್ಮೆ, ಹಸು, ಕರುಗಳು ಹಾಗೂ ಅವುಗಳ ದೊಡ್ಡಿಗಳಿವೆ. ಸುಮಾರು ೧೦೦ ಜನ ಅಲ್ಲಿ ದುಡಿಯುತ್ತಿದ್ದಾರೆ. ಜಾನುವಾರುಗಳಿಗೆ ಬೇಕಾದ ಹಸಿರುಹುಲ್ಲನ್ನು ಅಲ್ಲಿಯ ಹುಲ್ಲುಗಾವಲಿನಲ್ಲಿ ಬೆಳೆಸುತ್ತಾರೆ. ಮಿಕ್ಕ ಜಾಗದಲ್ಲಿ ಅರಣ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ನೀಲಗಿರಿ ಮರಗಳು, ಸಾಗುವಾನಿ ಮರಗಳು, ಗೋಡಂಬಿ ಗಿಡಗಳು, ಹಾಗೂ ಮಾವಿನಮರಗಳನ್ನು ಯತೇಚ್ಛವಾಗಿ ಬೆಳೆಸಿದ್ದಾರೆ. ಸುಮಾರು, ೫೦,೦೦೦ ಚದರಡಿ ಜಾಗವಿದೆಯೆಂದು ಅಂದಾಜು ಮಾಡಲಾಗಿದೆ. ಪಾರ್ಸಿ ಡೈರಿಯ ವಶದಲ್ಲಿ, ವಾಣಿಜ್ಯರೂಪದಲ್ಲಿ, ಮುಂಬಯಿಯ ಕೆಲವಾರು ಪ್ರದೇಶಗಳಲ್ಲಿ, ಜಮೀನು, ಆಸ್ತಿಯಿದೆ. ಅತ್ಯಂತ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅತ್ಯುತ್ತಮ ಮಟ್ಟದ ಹಾಲು ಸರಬರಾಜುಮಾಡುತ್ತಿರುವ ಪಾರ್ಸಿ ಡೈರಿ ಫಾರಂ ಒಂದು ಅದರ್ಶ ಸಂಸ್ಥೆ[].

ಪಾರ್ಸಿ ಡೈರಿಯ ಉತ್ಪನ್ನಗಳು

[ಬದಲಾಯಿಸಿ]
  • 'ಪಾರ್ಸಿ ಡೈರಿ,' ಯಲ್ಲಿ, 'ತಾಜಾ ಹಾಲು', 'ಮೊಸರು', 'ಬೆಣ್ಣೆ', 'ತುಪ್ಪ,' ದೊರೆಯುತ್ತವೆ. 'ಮಹಾರಾಜಾ ಲಸ್ಸಿ,' ಅವರ, ವಿಶೇಷವಾದ, 'ಬ್ರಾಂಡ್ ಪೇಯ'.
  • 'ಆನ್ ಲೈನ್ ಶಾಪಿಂಗ್ ವ್ಯವಸ್ಥೆ,' ಇದೆ.
  • 'ರೆಸ್ಟೊರಾಂಟ್ ನಲ್ಲಿ, 'ಭಜಿಯ', 'ಬಟಾಟ ವಡ', 'ಥಾಲಿ ಊಟ', 'ಮಟ್ಕಾ-ಕುಲ್ಫಿ,' ಸಿಗುತ್ತದೆ.

೯೯ ವರ್ಷದ ಪಾರ್ಸಿ ಡೈರಿ ಅಳಿವಿನ ಅಂಚಿನಲ್ಲಿದೆ

[ಬದಲಾಯಿಸಿ]

ಪಾರ್ಸಿ ಡೈರಿಯ ಹಾಲಿನ ಉತ್ಪನ್ನಗಳು ಉತ್ತಮ ಗುಣಮಟ್ಟದ್ದಾಗಿದ್ದರೂ ಮಹಾರಾಷ್ಟ್ರ ರಾಜ್ಯದಲ್ಲಿ ಮತ್ತು ಮುಂಬಯಿ ಮಹಾನಗರದಲ್ಲಿ ಹಾಲಿನ ಉತ್ಪಾದನಾ ಡೈರಿ ಕೇಂದ್ರಗಳು ದಿನೇ ದಿನೇ ಹೆಚ್ಚುತ್ತಿವೆ. ಹಾಗಾಗಿ ಕೇವಲ ದಕ್ಷಿಣ ಮುಂಬಯಿ ಮತ್ತು ದಾದರ್ ನಂತಹ ಕೆಲವೇ ಜಿಲ್ಲೆಗಳಲ್ಲಿ ಒಟ್ಟಾಗಿ ವ್ಯಾಪಾರದಲ್ಲಿ ತೊಡಗಿರುವ ಪಾರ್ಸಿ ಡೈರಿಗೆ ಬಹಳ ಸವಾಲುಗಳಿವೆ. ವ್ಯಾಪಾರ ಕಡಿಮೆಯಾಗುತ್ತಿದೆ. ಹಿಂದಿನಿಂದ ಡೈರಿ ಪದಾರ್ಥಗಳನ್ನು ನಿಯಮಿತವಾಗಿ ಖರೀದಿಸುತ್ತಿರುವ ಗ್ರಾಹಕರ ಆಗ್ರಹದಂತೆ ನಡೆಯಲು ಅದರ ಮಾಲೀಕರು ಬದ್ಧರಾಗಿದ್ದಾರೆ. ಅದನ್ನು ಮುಚ್ಛುವ ಬಗ್ಗೆ ಪಾರ್ಸಿ ಡೈರಿಯ ಮಾಲಿಕರೂ ಸಿದ್ಧರಿಲ್ಲ.[]

ಉಲ್ಲೇಖಗಳು

[ಬದಲಾಯಿಸಿ]
  1. 10 vintage Bombay brands we can't help but love 20 July, 2010, Amana Fontanella- khan
  2. ND TV, : August 24, 2015, Mumbai's Parsi Dairy Will Not Close, Say Owners