ಪಟ್ಟಣಸೆರಗು
ಗೋಚರ
(ಪಟ್ಟಣಶೆರಗು ಇಂದ ಪುನರ್ನಿರ್ದೇಶಿತ)
ಇದು ಬಳ್ಳಾರಿ ತಾಲೂಕಿನಲ್ಲಿ ಬರುವ ಒಂದು ಗ್ರಾಮ. ಕುರುಗೋಡಿನಿಂದ ಸುಮಾರು ೧೫ ಕಿ.ಮೀ.ದೂರದಲ್ಲಿದೆ. ಬಳ್ಳಾರಿಗೆ ೩೫ ಕಿ.ಮೀ ಅಂತರ. ಸುಮಾರು ೫೦೦ ಮನೆಗಳಿರುವ, ೧೮೦೦ ಜನರಿರುವ ಒಂದು ಪುಟ್ಟ ಗ್ರಾಮ. ತುಂಗಭದ್ರಾ ಕಾಲುವೆಯಿಂದಾಗಿ ಸಂಪದ್ಭರಿತವಾಗಿರುವ ಇಲ್ಲಿ ಭತ್ತವನ್ನು ಹೆಚ್ಚು ಬೆಳೆಯುತ್ತಾರೆ.
- ಸಾಕ್ಷರತೆ
- ೪೦ %
- ಜಾತಿ
- ಅಧಿಕ ಸಂಖ್ಯೆಯಲ್ಲಿ ಗೊಲ್ಲರು. ನಂತರ ಕುರುಬರು. ಉಪ್ಪಾರರು, ಭೋವಿ ಜನಾಂಗ ಮತ್ತು ಅಗಸರು ಇತರೆ.
- ಬೆಳೆಗಳು
- ಅಧಿಕವಾಗಿ ಭತ್ತ ಬೆಳೆಯುತ್ತಾರೆ.ಇದಲ್ಲದೆ ಹತ್ತಿ,ಮೆಣಸಿನಕಾಯಿ,ತೊಗರಿ ಮುಂತಾದವು.
ಪ್ರಮುಖ ದೇವಾಲಯಗಳು
[ಬದಲಾಯಿಸಿ]- ಸುಂಕ್ಲಮ್ಮ ದೇವಾಲಯ
- ಕೃಷ್ಣ ಮಂದಿರ
- ಅಂಬಾ ಮಠ
- ಮಾರುತಿ ದೇವಾಲಯ
- ಮಹಾಂಕಾಳಿ ದೇವಾಲಯ
- ತಾಯಮ್ಮ ದೇವಾಲಯ
- ಸೋಮೇಶ್ವರ ಗುಡಿ
- ಅರ್ಧನಾರೀಶ್ವರ ದೇವಾಲಯ
- ಈರಣ್ಣ ದೇವಾಲಯ