ವಿಷಯಕ್ಕೆ ಹೋಗು

ನಂದಮೂರಿ ತಾರಕ ರಾಮಾರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನ೦ದಮೂರಿ ತಾರಕ ರಾಮಾರಾವ್ ಇಂದ ಪುನರ್ನಿರ್ದೇಶಿತ)
ನಂದಮೂರಿ ತಾರಕ ರಾಮಾರಾವ್ (1952)

[[ಚಿತ್ರ:NTR in 1952.jpg|thumb|ನಂದಮೂರಿ ತಾರಕ dghghwhsjhhdjssuxjgxjehsshshhshgurhdyhydhsisjyshshಲ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದರು.ತೆಲುಗು ಜನರು "ಅನ್ನಗಾರು" ಎಂದು ಪ್ರೀತಿಯಿಂದ ಕರೆಯುವ ನಂದಮೂರಿ ತಾರಕ ರಾಮಾರಾವ್ ಅವರು ಒಬ್ಬ ಮಹಾನಟ ಹಾಗೂ ಪ್ರಜೆಗಳ ನಾಯಕರಾಗಿದ್ದರು. ಅವರ ಹೆಸರಿನ ಮೊದಲ ಆಂಗ್ಲ ಅಕ್ಷರಗಳಾದ ಎನ್.ಟಿ.ಆರ್, ಎನ್.ಟಿ.ರಾಮಾರಾವು ಆಗಿಯೂ ಪ್ರಸಿದ್ಧರಾದ ಅವರು ತೆಲುಗು, ತಮಿಳು ಹಾಗೂ ಹಿಂದೀ ಭಾಷೆಗಳಲ್ಲಿ ೪೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ನಂದಮೂರಿ ತಾರಕ ರಾಮಾರಾವ್ ಅನೇಕ ಪೌರಾಣಿಕ, ಜಾನಪದ ಹಾಗು ಸಾಮಾಜಿಕ ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ, ಇದಲ್ಲಿದೆ ರಾಮ ಕೃಷ್ಣರ ಪೌರಾಣಿಕ ಪಾತ್ರಗಳಲ್ಲಿ ನಟಿಸಿ ತೆಲುಗು ಜನರ ಪ್ರೀತಿಯನ್ನು ಸಂಪಾದಿಸಿದ್ದಾರೆ. ತಮ್ಮ ೪೪ವರ್ಷಗಳ ಸಿನಿಮಾ ಜೀವನದಲ್ಲಿ ನಂದಮೂರಿ ತಾರಕ ರಾಮಾರಾವ್ ೧೩ ಚಾರಿತ್ರಿಕ, ೫೫ ಜಾನಪದ, ೧೮೬ ಸಾಮಾಜಿಕ ಹಾಗೂ ೪೪ ಪೌರಾಣಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

ರಾಜಕೀಯ

[ಬದಲಾಯಿಸಿ]

ನಂದಮೂರಿ ತಾರಕ ರಾಮಾರಾವ್ ರವರೂ ೧೯೮೨ ಮಾರ್ಚ್ ೨೯ರ೦ದು ತೆಲುಗುದೇಶಂ ಎಂಬ ಹೆಸರಿನಲ್ಲಿ ಒಂದು ರಾಜಕೀಯ ಸಂಸ್ಥೆಯನ್ನು ಸ್ಥಾಪಿಸಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದರು. ಈ ಸಂಸ್ಥೆಯನ್ನು ಸ್ಥಾಪಿಸಿದ ೯ ತಿಂಗಳಲ್ಲಿಯೇ ಆಂಧ್ರಪ್ರದೇಶ್ ನಲ್ಲಿ ಕಾಂಗ್ರೆಸ್ ಪಾರ್ಟಿಯನ್ನು ಸೋಲಿಸಿ, ತಮ್ಮ ಪಾರ್ಟಿಯನ್ನು ನೆಲಗೊಳಿಸಿದರು. ಆನಂತರ ಎಂಟು ವರ್ಷಗಳ ಕಾಲ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಿ, ಅತ್ಯಧಿಕ ಕಾಲ ಕೆಲಸ ಮಾಡಿರುವ ಮುಖ್ಯಮ೦ತ್ರಿಯಾಗಿ ಹೆಸರುವಾಸಿಯಾದರು.[]

ಬಾಲ್ಯ

[ಬದಲಾಯಿಸಿ]

ಎನ್.ಟಿ.ರಾಮಾರಾವ್ ರವರು ೧೯೨೩ ಮೇ ೨೮ರಂದು, ಆಂಧ್ರಪ್ರದೇಶ್ ರಾಷ್ಟ್ರದಲ್ಲಿನ ಕೃಷ್ಣಾ ಜಿಲ್ಲೆ, ಪಾಮರು ಮಂಡಲ, ನಿಮ್ಮಕೂರು ಗ್ರಾಮದಲ್ಲಿ ಲಕ್ಷ್ಮಯ್ಯ ಚೌದರಿ, ವೆಂಕಟರಾಮಮ್ಮ ದಂಪತಿಗಳಿಗೆ ಜನಿಸಿದರು. ಆನಂತರ ಅದು ತಾರಕರಾಮಾರಾವ್ ಎಂದು ಬದಲಾಯಿತು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ವಿಜಯವಾಡದ ಮುನಿಸಿಪಾಲ್ ಹೈಸ್ಕೂಲಿನಲ್ಲಿ ಮಾಡಿದರು. ಆನಂತರ ವಿಜಯವಾಡದ ಎಸ್.ಆರ್.ಆರ್. ಕಾಲೇಜು ಸೇರಿದರು. ಇಲ್ಲಿ ವಿಶ್ವನಾಥ ಸತ್ಯನಾರಾಯಣ ತೆಲುಗು ವಿಭಾಗದ ಅಧಿಪತಿಯಾಗಿದ್ದರು.ಒಮ್ಮೆ ರಾಮರಾವ್ ಅವರನ್ನು ಒಂದು ನಾಟಕದಲ್ಲಿ ಹೆಂಗಸಿನ ವೇಷ ಧರಿಸುವುದಾಗಿ ಹೇಳಿದರು. ಆದರೆ ರಾಮರಾವ್ ಅವರು ತಮ್ಮ ಮೀಸೆಯನ್ನು ತೆಗೆಯಲು ಒಪ್ಪಲಿಲ್ಲ. ಮೀಸೆಯೊಡನೆ ನಟನೆ ಮಾಡಿರುವುದರಿಂದ ಎಲ್ಲರು ಅವರನ್ನುಮೀಸಾಲ ನಾಗಮ್ಮ " ಎಂದು ಕರೆಯಲಾರಂಭಿಸಿದರು.೧೯೪೨ ಮೇ ತಿಂಗಳಿನಲ್ಲಿ ೨೦ ವರ್ಷದ ವಯಸ್ಸಿನಲ್ಲಿ ತಮ್ಮ ಸೋದರ ಮಾವನ ಮಗಳಾದ ಬಸವರಾಮತರಕಂ ಅವರನ್ನು ಮದುವೆಯಾದರು."ವಿವಾಹ ವಿದ್ಯಾನಾಷಾಯಃ " ಎನ್ನುವ ರೀತಿಯಲ್ಲಿ ಮದುವೆಯಾದ ನಾಂತರ ಪರೀಕ್ಷೆಯಲ್ಲಿ ಎರಡು ಬಾರಿ ನಪಾಸು ಆದರು. ಆನಂತರ ಗುಂಟೂರು ಆಂಧ್ರ ಕ್ರಿಶ್ಚಿಯನ್ ಕಳಾಶಾಲೆಯಲ್ಲಿ ಸೇರಿದರು. ಅಲ್ಲಿಯೂ ನಾಟಕಗಳಲ್ಲಿ ಬಹಳ ಚುರುಕಾಗಿ ಭಾಗವಹಿಸುತ್ತಿದ್ದರು. ಅದೇ ಸಮಯದಲ್ಲಿ ನ್ಯಾಷನಲ್ ಆರ್ಟ್ಸ್ ಥಿಯೇಟರ್ ಗ್ರೂಪ್ ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿ ಕೊಂಗರ ಜೋಗಯ್ಯ, ಮುಕ್ಕಾಮಲ,ನಾಗಭೂಷಣಂ,ಕೆ.ವಿ.ಎಸ್.ಶರ್ಮ ಮುಂತಾದವರು ಸೇರಿ "ಚೇಸಿನ ಪಾಪಂ" ಮುಂತಾದ ನಾಟಕಗಳಲ್ಲಿ ಪಾಲ್ಗೊಂಡರು.ಕೆಲವು ದಿನದ ನಂತರ ಈ ಸಂಸ್ಥೆಯು ಹಲವು ಚಲನಚಿತ್ರಗಳನ್ನು ಉತ್ಪಾಸಿದರು. ಎನ್.ಟಿ.ಆರ್ ಅವರು ಒಳ್ಳೆಯ ಚಿತ್ರಕಾರರಾಗಿದ್ದರು. ನಾಡಿನಾದ್ಯಂತ ನಡೆದ ಚಿತ್ರಲೇಖನ ಸ್ಪರ್ಧೆಯಲ್ಲಿಯೂ ಅವರಿಗೆ ಬಹುಮಾನ ಲಭಿಸಿದೆ. ಸುಭಾಷ್ ಚಂದ್ರ ಬೋಸ್ ರವರು ವಿಜಯವಾಡ ಬಂದಾಗ ಎನ್.ಟಿ.ಆರ್ ರವರು ಬೋಸ್ ಅವರ ಚಿತ್ರವನ್ನು ಬಿಡಿಸಿ ಅವರಿಗೆ ಕಾಣಿಕೆಯಾಗಿ ನೀಡಿದರು.

ಚಿತ್ರ:దస్త్రం:Mayabazar.jpg
ಮಾಯಾಬಜಾರ್‍ನಲ್ಲಿ ಎನ್.ಟಿ.ಆರ್

ತಾರಕ ರಾಮಾರಾವ್-ಬಸವ ತಾರಕಂ ದಂಪತಿಗಳಿಗೆ ೧೧ ಮಕ್ಕಳು, ಅಂದರೆ ನಾಲ್ಕು ಹೆಣ್ಣು ಮಕ್ಕಳು ಹಾಗು ೭ ಗಂಡು ಮಕ್ಕಳು . ಜಯಕೃಷ್ಣ, ಸಾಯಿಕೃಷ್ಣ, ಹರಿಕೃಷ್ಣ[], ಮೋಹನಕೃಷ್ಣ, ಬಾಲಕೃಷ್ಣ[], ರಾಮಕೃಷ್ಣ ಮತ್ತು ಜಯಶಂಕರ್ ಕೃಷ್ಣ ಇವರ ಪುತ್ರರು. ಗಾರಪಾಟಿ ಲೋಕೇಶ್ವರಿ, ದಗ್ಗುಬಾಟಿ ಪುರಂದರೇಶ್ವರಿ[], ನಾರ ಭುವನೇಶ್ವರಿ, ಕುಂಟಮನೇನಿ ಉಮಾಮಹೇಶ್ವರಿ ಇವರ ಪುತ್ರಿಯರು. ರಾಮರಾವ್ ರವರು ಕಾಲೇಜಿನಲ್ಲಿರುವಾಗ ಅವರ ಆಸ್ತಿಯು ಮೋಸದಿಂದ ಅಪಹರಣೆಯಾಯಿತು.ಆಗ ಅವರು ಜೀವನ ನಡೆಸಲು ಅನೇಕ ಕೆಲಸಗಳನ್ನು ಮಾಡಿದರು. ಕೆಲವು ದಿನ ಹಾಲಿನ ಮಾರಾಟ, ನಂತರ ಅಂಗಡಿಗಳಲ್ಲಿ ಕೆಲಸ,ಆನಂತರ ಮುದ್ರಣಾಲಯವನ್ನು ಕೂಡ ನಡೆಸಿದರು. ಆರ್ಥಿಕವಾಗಿ ಹಿಂದುಳಿದರೂ ಸಹ ಸಾಲ ಮಾಡುತ್ತಿರಲಿಲ್ಲ.ರಾಮಾರಾವ್ ರವರು ೧೯೪೭ರಲ್ಲಿ ಪದವೀದರರಾದರು. ಅದರ ನಂತರ ಅವರು ಮದರಾಸು ಸರ್ವೇಸ್ ಕಮಿಷನ್ ಪರೀಕ್ಷೆ ಬರೆದರು. ೧೧೦೦ ಜನರು ಬರೆದಿರುವ ಆ ಪರೀಕ್ಷೆಯಲ್ಲಿ ಆಯ್ಕೆಯಾದ ಏಳು ಜನರಲ್ಲಿ ಒಬ್ಬರಾದರು. ಆಗ ಅವರಿಗೆ ಮಂಗಳಗಿರಿಯಲ್ಲಿ ಸಬ್ ರಿಜಿಸ್ಟರರಾಗಿ ಉದ್ಯೋಗ ಲಭಿಸಿತು. ಆದರೆ ಸಿನಿಮಾ ಗಳಲ್ಲಿ ನಟಿಸಬೇಕೆಂಬ ಕಾರಣದಿಂದಾಗಿ ಮೂರು ವರಕ್ಕಿಂತ ಹೆಚ್ಚಾಗಿ ಕೆಲಸ ಮಾಡಲಿಲ್ಲ.ಪ್ರಮುಖ ಉತ್ಪಾದಕರಾದ ಬಿ.ಎ.ಸುಬ್ಬಾರಾವ್ ರವರು ಎನ್.ಟಿ,ಆರ್ ಅವರ ಫೋಟೋ ಎಲ್.ವಿ.ಪ್ರಸಾದ್ ಹತ್ತಿರ ನೋಡಿ, ಅವರನ್ನು ಮದರಾಸಿಗೆ ಕರೆದು "ಪಲ್ಲೇಟೂರಿ ಪಿಲ್ಲ" ಎಂಬ ಚಿತ್ರದಲ್ಲಿ ಕಥಾ ನಾಯಕನಾಗಿ ನಟಿಸಲು ಅವಕಾಶ ನೀಡಿದರು.ಈ ಚಿತ್ರದಲ್ಲಿ ನಟಿಸುವುದರಿಂದ ೧೧೧೬ರೂಗಳು ಲಭಿಸಿತು. ಅದರಿಂದ ಅವರು ತಮ್ಮ ಸಬ್ ರಿಜಿಸ್ಟರ್ ಕೆಲಸಕ್ಕೆ ರಾಜೀನಾಮೆ ನೀಡಿದರು.ಆದರೆ ಅವರು ನಟಿಸಿದ " ಪಲ್ಲೆಟೂರಿ ಪಿಲ್ಲ" ಚಿತ್ರವು ನಿರ್ಮಾಣ ಮಾಡಲು ತಡವಾಯಿತು. ಅಷ್ಟರಲ್ಲಿ "ಮನದೇಶಂ" ಎಂಬ ಚಿತ್ರದಲ್ಲಿ ಅವಕಾಶ ಲಭಿಸಿತು. ಅದ್ದರಿಂದ ಇವರ ಮೊದಲು ಚಿತ್ರವು "ಮನದೇಶ೦" ಆಯಿತು. ಇವೆರಡರ ನ೦ತರ ಎನ್.ಟಿ.ಆರ ರವರು ತಮ್ಮ ನಿವಾಸವನ್ನು ಮದ್ರಾಸಿಗೆ ಬದಲಾಯಿಸಿದರು.ಆನಂತರ ಅವರು ಮಾಡಿದ ಹಲಾವಾರು ಚಿತ್ರಗಳಿಗೆ ತಿಂಗಳಿಗೆ ರೂ.೫೦೦ ಹಾಗೂ ರೂ.೫೦೦೦ ಪಾರಿತೋಶಿಕವಾಗಿ ಪಡೆಯುತ್ತಿದ್ದರು. ಇವರು ನಟಿಸಿದ "ಪಾತಾಳ ಭೈರವಿ" ಎಂಬ ಚಿತ್ರವೂ ೩೪ ಕೇಂದ್ರಗಳಲ್ಲಿ ೧೦೦ ದಿನ ಆಡಿದರಿಂದ ಅಂದಿನ ಕಾಲದಲ್ಲೆ ಸಂಚಲನೆಯನ್ನು ಸೃಷ್ಟಿಸಿತು. ೧೯೫೬ರಲ್ಲಿ ಬಿಡುಗಡೆಯಾದ "ಮಾಯಾಬಜಾರ್"[] ಚಿತ್ರಕ್ಕೆ ಅವರು ರೂ.೭೫೦೦ ಪಾರಿತೋಷಿಕವಾಗಿ ಪಡೆದರು.ಅಂದಿನ ಕಾಲದಲ್ಲಿ ಅದೇ ದೊಡ್ಡ ವಿಜಯ ಎಂದು ಭಾವಿಸುತ್ತಿದ್ದರು.

ಚಲನಚಿತ್ರಗಳು

[ಬದಲಾಯಿಸಿ]

೧.ಮನದೇಶಂ[]

  • ೨.ಷಾವುಕಾರು
  • ೩.ಪಲ್ಲೆಟೂರಿ ಪಿಲ್ಲ
  • ೪.ಮಾಯಾರಂಭ
  • ೫.ಸಂಸಾರಂ
  • ೬.ಮಾಯಾರಂಭ (ತಮಿಳು)
  • ೭.ಪಾತಾಳಾಭೈರವಿ
  • ೮.ಪಾತಾಳಾಭೈರವಿ (ತಮಿಳು)
  • ೯.ಪಾತಾಳಾಭೈರವಿ(ಹಿಂದೀ)
  • ೧೦.ಪೆಳ್ಳಿಚೇಸಿ ಚೂಡು
  • ೧೧.ದಾಸಿ
  • ೧೨.ಪಲ್ಲೆಟೂರು
  • ೧೩.ಕಳ್ಯಾಣಪನ್ನಿಪ್ಪರ್ (ತಮಿಳು)
  • ೧೪.ವೆಲೈಕರಿಮಗಲ್ (ತಮಿಳು)
  • ೧೫.ಅಮ್ಮಲಕ್ಕಲು
  • ೧೬.ಮರುಮುಗಳ್ (ತಮಿಳು)
  • ೧೭.ಪಿಚ್ಚಿಪುಲ್ಲಯ್ಯ
  • ೧೮.ಚಂಡೀರಾಣಿ (ತಮಿಳು)
  • ೧೯.ಚಂದ್ರಹಾರಂ
  • ೨೦.ರೇಚುಕ್ಕ
  • ೨೧.ತೋಡುದೊಂಗಲು
  • ೨೨.ರಾಜು ಪೇದ
  • ೨೩.ಸಂಘಂ
  • ೨೪.ಅಗ್ಗಿರಾಮುಡು
  • ೨೫.ಪರಿವರ್ತನ
  • ೨೬.ಇದ್ದರು ಪೆಳ್ಳಾಲು
  • ೨೭.ಮೀಸಂ
  • ೨೮.ವಿಜಯಗೌರಿ
  • ೨೯.ಜಯಸಿಂಹ
  • ೩೦.ಕನ್ಯಾಶುಲ್ಕಂ
  • ೩೧.ಸಂತೋಷಂ
  • ೩೨.ನಯಾ ಆದ್ಮಿ
  • ೩೩.ತೆನಾಲಿ ರಾಮಕೃಷ್ಣ
  • ೩೪.ಚಿಂತಾಮಣಿ
  • ೩೫.ಜಯಂ ಮನದೆ
  • ೩೬.ಸೇಂತವೂರು
  • ೩೭.ಉಮಾಸುಂದರಿ
  • ೩೮.ಚಿರಂಜೀವುಲು
  • ೩೯.ಶ್ರೀ ಗೌರಿ ಮಹತ್ಮ್ಯಂ
  • ೪೦.ಪೆಂಕಿ ಪೆಳ್ಳಾಮ್

ಇವರು ನಿರ್ದೇಶಿಸಿದ ಚಿತ್ರಗಳು

[ಬದಲಾಯಿಸಿ]
  • ೧.ಸೀತಾರಾಮುಲ ಕಳ್ಯಾಣಂ
  • ೨.ಗುಲೇಬಕಾವಳಿ ಕಥ
  • ೩.ಶ್ರೀ ಕೃಷ್ಣ ಪಾಂಡವಿಯಂ
  • ೪.ವರಕಟ್ನಂ
  • ೫.ತಾತಮ್ಮಕಲ
  • ೬.ಸಾಮ್ರಾಟ್ ಅಶೋಕ್
  • ೭.ಬ್ರಹ್ಮರ್ಷಿ ವಿಶ್ವಾಮಿತ್ರ
  • ೮.ಆಕ್ಬರ್ ಸಲೀಮ್ ಅನಾರ್ಕಲಿ
  • ೯.ಶ್ರೀ ರಾಮ ಪಟ್ಟಾಭಿಶೇಕಂ
  • ಇವರು ಉತ್ಪಾದಿಸಿದ ಚಿತ್ರಗಳು:
  • ೧.ಸಾಮ್ರಾಟ್ ಅಶೋಕ್
  • ೨.ಬ್ರಹ್ಮರ್ಷಿ ವಿಶ್ವಾಮಿತ್ರ
  • ೩.ಚಂಡಶಾಸನುಡು
  • ೪.ಶ್ರೀಮದ್ವಿರಾಟ್ ಪೊತುಲೂರಿ ವೀರಬ್ರಹ್ಮೇಂದ್ರ ಸ್ವಾಮಿ ಚರಿತ್ರ
  • ೫.ಶ್ರೀ ತಿರುಪತಿ ವೆಂಕಟೇಶ್ವರ ಕಳ್ಯಾಣಂ
  • ೬.ದಾನ ವೀರ ಶೂರ ಕರ್ಣ
  • ೭.ಶ್ರೀನಾಥ ಕವಿಸಾರ್ವಭೌಮ
  • ೮.ಶ್ರೀಮದ್ವಿರಾಟಪರ್ವಂ

ಪ್ರಶಸ್ತಿ ಹಾಗು ಸನ್ಮಾನಗಳು

[ಬದಲಾಯಿಸಿ]
ನಾಗರಿಕ ಸನ್ಮಾನ *೧೯೬೮ರಲ್ಲಿ ಭಾರತ ಸರ್ಕಾರದಿಂದ "ಪದ್ಮಶ್ರೀ"

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

[ಬದಲಾಯಿಸಿ]
  • ೧೯೫೪ - ಅತ್ಯುತ್ತಮ ನಿರ್ಮಾಪಕನಾಗಿ ತೆಲುಗು ಚಲನಚಿತ್ರ 'ತೋಡು ದೊಂಗಲು'ಗೆ ಮೆರಿಟ ಪ್ರಮಾಣ್ ಪತ್ರ
  • ೧೯೬೦ - ಅತ್ಯುತಮ ನಿರ್ಮಾಪನಾಗಿ ತೆಲುಗು ಚಲನಚಿತ್ರ 'ಸೀತಾರಮ ಕಲ್ಯಾಣಂ'ಗೆ ಮೆರಿಟ ಪ್ರಮಾಣ ಪತ್ರ
  • ೧೯೬೮ - ಅತ್ಯುತ್ತಮ ನಿರ್ದೇಶಕನಾಗಿ ತೆಲುಗು ಚಲನಚಿತ್ರ 'ವರಕಟ್ನಂ'ಗೆ

ರಾಷ್ಟ್ರಪತಿ ಪ್ರಶಸ್ತಿಗಳು

[ಬದಲಾಯಿಸಿ]
  • ೧೯೫೪ - 'ರಾಜು ಪೆಧ' ಚಲನಚಿತ್ರಕ್ಕೆ ಅತ್ಯುತ್ತಮ ನಟನೆ
  • ೧೯೬೩ - 'ಲವಕುಶ' ಚಿತ್ರಕ್ಕೆ ಅತ್ಯುತ್ತಮ ನಟನೆ
  • ದಕ್ಷಿಣ ಭಾರತ ಫ಼ಿಲ್ಮ್ಪೆರ್ ಪ್ರಶಸ್ತಿಗಳು
  • ೧೯೭೨ - 'ಬಡಿ ಪಂತುಲು' ಚಲನಚಿತ್ರಕ್ಕೆ ಅತ್ಯುತ್ತಮ ತೆಲುಗು ನಟ್

ಇತರ ಸನ್ಮಾನ

[ಬದಲಾಯಿಸಿ]
  • ೧೯೭೮ - ಆಂಧ್ರ ವಿಶ್ವವಿದ್ಯಾನಿಲಯದಿಂದ ಗೌರವನೀಯ "ಡಾಕ್ಟ್ರೇಟ್" ಪದವಿ ಪಡೆದರು

ಉಲ್ಲೇಖಗಳು

[ಬದಲಾಯಿಸಿ]
  1. "Nandamuri Taraka Rama Rao". www.britannica.com/.
  2. https://en.wikipedia.org/wiki/Nandamuri_Harikrishna
  3. https://en.wikipedia.org/wiki/Nandamuri_Balakrishna
  4. https://en.wikipedia.org/wiki/Daggubati_Purandeswari
  5. https://en.wikipedia.org/wiki/Mayabazar
  6. http://www.imdb.com/name/nm0004417/?ref_=nmbio_bio_nm#actor