ನಾನಾ ಚೌಕ್, ಮುಂಬೈ

ವಿಕಿಪೀಡಿಯ ಇಂದ
Jump to navigation Jump to search
'ಮುಂಬಯಿ'ನ,'ಹಳೆಯ ನಾನಾ ಚೌಕ್'

(೧೦, ಅಕ್ಟೋಬರ್, ೧೮೦೩-೩೧, ಜುಲೈ, ೧೮೬೫)

ಜಗನ್ನಾಥ್ ರಾವ್ ಶಂಕರ್ ಸೇಠ್, ರ ಹೆಸರಿನಲ್ಲಿ ನಾನಾ ಚೌಕ್[ಬದಲಾಯಿಸಿ]

ಜಗನ್ನಾಥ್ ರಾವ್ ಶಂಕರ್ ಸೇಠ್, ಅಂದಿನ ಬೊಂಬಾಯಿನ ನಾಗರಿಕರಿಗೆ ನಾನಾ ಎಂದೇ, ಪರಿಚಿತರಾಗಿದ್ದರು. ಅವರ ಗೌರವಾರ್ಥವಾಗಿ ದಕ್ಷಿಣ ಬೊಂಬಾಯಿನ ಒಂದು ಚೌಕಕ್ಕೆ ಇಟ್ಟಹೆಸರೇ, 'ನಾನಾಚೌಕ್'. 'ಬ್ಯಾಂಕರ್', 'ಶಂಕರ್ ಸೇಠ್' ರವರು, ಉದಾರಿ, ಹಾಗೂ ಬೊಂಬಾಯಿನ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಿರಿವಂತ, ಬ್ರಾಹ್ಮಣ ವ್ಯಾಪಾರಿ, ಕುಟುಂಬದಲ್ಲಿ ಜನಿಸಿದರು. 'ಮರ್ಕುಟೆ,' ಜಾತಿಯ 'ದೈವಜ್ಞ,' ಪಂಗಡಕ್ಕೆ ಸೇರಿದ, ಪರಿವಾರದ ಸದಸ್ಯರಾಗಿದ್ದ ಸೇಠ್ ರವರು, 'ಅಕ್ಕಸಾಲಿ,'ಗಳಾಗಿದ್ದರು. ಹಾಗೂ ಹಣವನ್ನು ಸಾಲವಾಗಿ ಕೊಟ್ಟು ಬಡ್ಡಿ ಸಂಪಾದಿಸುತ್ತಿದ್ದರು. ಅವರ ಅಜ್ಜ, 'ಗಣಬಾ ಸೇಠ್,' ರವರ ಹೆಸರನ್ನು ಹತ್ತಿರದ, '(Gun bow),' ರಸ್ತೆಗೆ ಇಟ್ಟಿದ್ದರು. ಬೊಂಬಾಯಿನ 'ಪ್ರಥಮ ಕೋರ್ಟ್,' ಇಲ್ಲೇ ಇದ್ದದ್ದು. ತಂದೆಯವರಂತೆ, ವ್ಯವಹಾರ ಚತುರರೂ, ಹಾಗೂ ಪ್ರತಿಭಾವಂತ ಬ್ಯಾಂಕರ್ ಆಗಿದ್ದ ಶಂಕರ ಸೇಠ್ ರವರು, ಮಹಾದಾನಿಗಳೂ ಆಗಿದ್ದರು. ಅವರ ನಂಬಿಕೆಗೆ ಅರ್ಹವಾದ ವರ್ತನೆಗಳಿಂದ, 'ಅರಬ್', ಹಾಗೂ 'ಆಫ್ಗನ್' ಜನರೂ ಅವರಲ್ಲಿಗೆ ಹಣವನ್ನು ಸಾಲವಾಗಿ ಪಡೆಯಲು ಬರುತ್ತಿದ್ದರು. 'The Board of Education', ೧೮೨೪ ರಲ್ಲಿ ಆರಂಭ. ೧೮೪೦ ರಲ್ಲಿ ಅದು, 'Bombay Native Institution' ಅಂತ ಆಯಿತು. ನಂತರ, ೧೮೫೬ ರಲ್ಲಿ, 'The Elphinstone Educaional Institution,' ಆಯಿತು. 'ಎಲ್ಫಿನ್ ಸ್ಟನ್ ಕಾಲೇಜ್' ನ ಸ್ಥಾಪಕರಲ್ಲಿ ಇವರೂ ಒಬ್ಬರು. 'ಬಾಂಬೆ ಬೋರ್ಡ್ ಆಫ್ ಎಜುಕೇಶನ್,' ನ ಸದಸ್ಯರಾಗಿದ್ದರು. 'ಏಶಿಯಾಟಿಕ್ ಸೊಸೈಟಿ', ಬೊಂಬಾಯಿನ ಪ್ರಥಮ ಭಾರತೀಯ ಸದಸ್ಯರು. 'ಗ್ರಾಂಟ್ ರೋಡ್ ' ನ ಒಂದು ಸ್ಕೂಲ್ ಗೆ 'ರಂಗ ಸ್ಥಳ' ವನ್ನು ಕಟ್ಟಲು ಹಣವನ್ನು ಧರ್ಮಾರ್ಥವಾಗಿ ಭೂಮಿ-ದಾನದಾನಮಾಡಿದ್ದರು. ಹಿಂದೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯಮಾಡಿದರು. 'ಸರ್, ಜೆ. ಜೆ,' ಯವರ ಜೊತೆಗೂಡಿ, ೧೮೪೫ ರಲ್ಲಿ 'ಭಾರತೀಯ ರೈಲ್ವೆ ಅಸೋಸಿಯೇಷನ್' ಡೈರೆಕ್ಟರ್ ಆದರು. ಅದು ಕಾಲಕ್ರಮದಲ್ಲಿ, 'GIP Railway' ಗೆ ಸೇರಿತು. ೧೦ ಡೈರೆಕ್ಟರ್ ಗಳಲ್ಲಿ, ಇವರಿಬ್ಬರೂ ಭಾರತೀಯರಾಗಿದ್ದರೆಂದು ತಿಳಿಯಲು ಹೆಮ್ಮೆಯಾಗುತ್ತದೆ.

'ನಾನಾ ಚೌಕ್, ಮುಂಬಯಿ'

'ಭಾರತದ ಮೊಟ್ಟಮೊದಲ ಪ್ರಯಾಣಿಕರ ರೈಲಿನಲ್ಲಿ ಸವಾರಿ ಮಾಡಿದ್ದರು'[ಬದಲಾಯಿಸಿ]

ಬಾಂಬೆ 'ವಿಟಿ,' ಯಿಂದ 'ಥಾಣೆ,' ಯವರೆಗೆ ಓಡಿದ, " ಐತಿಹಾಸಿಕ, ಪ್ರಪ್ರಥಮ ರೈಲು ಪ್ರಯಾಣ," ದ ಆನಂದವನ್ನು ಅನುಭವಿಸಿದ್ದರು ಭಾರತದಲ್ಲಿ ರೈಲ್ವೆ ಪ್ರಯಾಣವನ್ನು ಪ್ರಾರಂಭಿಸಿದ್ದು ಬೊಂಬಾಯಿನ, 'ವಿ.ಟಿ'. ರೈಲ್ವೆ ಸ್ಟೇಶನ್ ನಿಂದ 'ಥಾಣೆ' ವರೆಗೆ ನಡೆಸಿದ ಪ್ರಪ್ರಥಮ ರೈಲು ಸೇವೆ. ಆಸಮಯದಲ್ಲಿ, 'ಡೈರೆಕ್ಟರ್ ಶಂಕರ್ ಸೇಠ್' ರವರು, ಇತರ ಪ್ರತಿಷ್ಠಿತ ವ್ಯಕ್ತಿಗಳ ಜೊತೆಗೆ, ಆ ರೈಲಿನಲ್ಲಿ ಸುಮಾರು ೪೫ ನಿಮಿಷಗಳ ಪ್ರಯಾಣದ ಆನಂದವನ್ನು ಪಡೆದಿದ್ದರು. ೧೮೫೭ ರಲ್ಲಿ ನಡೆದ, 'ಭಾರತದ ಪ್ರಥಮ ಸ್ವಾತಂತ್ರ್ಯ ಸಮರ' 'ದಲ್ಲಿ, ಭಾಗವಹಿಸಿದ್ದರೆಂಬ ಶಂಕೆಯಮೇಲೆ ಅವರನ್ನು ಬಂಧಿಸಲಾಗಿತ್ತು. ಆದರೆ ಸಾಕಷ್ಟು ಪುರಾವೆಗಳಿಲ್ಲದೆ, ಅವರನ್ನು ಬಿಡಲಾಯಿತು. ಶಂಕರ್ ಸೇಠ್, "ಬಾಂಬೆ, ಲೆಜಿಸ್ಲೇಟಿವ್ ಕೌನ್ಸಿಲ್, " ನ ಹಿಂದು ಸದಸ್ಯರಾಗಿದ್ದರು. ಜುಲೈ, ೩೧, ೧೮೬೫ ರಲ್ಲಿ ಮೃತರಾದರು. ಅವರ ನೆನೆಪಿಗಾಗಿ 'ದಾದರ್' ನ ವೃತ್ತವನ್ನು, 'ಶಂಕರ್ ಸೇಠ್ ಸರ್ಕಲ್,' ಎಂದು ಹೆಸರಿಸಲಾಗಿದೆ.

'ಜನನ್ನಾಥ್ ರಾವ್ ಶಂಕರ್ ಸೇಠ್', ಒಬ್ಬ ಸಮಾಜ ಸುಧಾರಕರು[ಬದಲಾಯಿಸಿ]

'ಸಮಾಜಸುಧಾರಣೆಯ ಕೆಲಸದಲ್ಲೂ ಸಕ್ರಿಯರಾಗಿ ಕೆಲಸಮಾಡಿದ್ದರು. 'ಸರ್ ಜಾರ್ಜ್ ಬರ್ಡ್ ವುಡ್', ಮತ್ತು 'ಡಾ. ಭಾವುದಾಜಿ ಲಾಡ್', ರವರು, ಊರಿನ ಪುನರ್ ನಿರ್ಮಾಣದ ಕೆಲಸದಲ್ಲಿ ಹೆಚ್ಚಿನ ಆಸಕ್ತಿಯನ್ನು ತೆಗೆದುಕೊಂಡರು. 'ಸರ್ ಜಾನ್ ಮಲ್ಕಂ,' ರವರು, ಹಿಂದೂಗಳಲ್ಲಿ ರೂಢಿಯಲ್ಲಿದ್ದ 'ಸತೀ ಸಹಗಮನ ಪದ್ಧತಿ,'ಯನ್ನು ನಿರ್ಮೂಲಮಾಡಲು, ಶಂಕರ್ ಸೇಠ್ ರವರ ಸಹಾಯವನ್ನು ಅಪೇಕ್ಷಿಸಿದರು. ಅದಕ್ಕೆ ಶಂಕರ್ ಸೇಠ್ ರವರು, ತಮ್ಮ ಸಹಾಯವನ್ನು ನೀಡಿದ್ದರಿಂದ ಗಮನಾರ್ಹ ಪ್ರಮಾಣದಲ್ಲಿ 'ಸತಿ' ಪ್ರಕರಣಗಳು ಕಡಿಮೆಯಾದವು. ಅದೇ ಸಮಯದಲ್ಲಿ, ಬ್ರಿಟಿಷ್ ನವರು, 'ಸೋನಾಪುರ್' ದಲ್ಲಿ ಒಂದು 'ಸ್ಮಶಾನ,' ವನ್ನು ಕಟ್ಟಿಕೊಟ್ಟರು. (ಈಗಿನ 'ಮೆರಿನ್ ಲೈನ್ಸ್') ಶಂಕರ್ ಸೇಠ್ ರವರ, ಮರಣದ ಒಂದು ವರ್ಷದ ನಂತರ, ಅವರ ಅಮೃತಶಿಲೆಯ ಮೂರ್ತಿಯನ್ನು ನಿರ್ಮಿಸಿ, 'ಏಶಿಯಾಟಿಕ್, ಸೊಸೈಟಿ ಕಟ್ಟಡ' ದೊಳಗೆ ಸ್ಥಾಪಿಸಿದ್ದಾರೆ. 'ದಾದರ್ ಟಿ. ಟಿ,' ಯ ಒಂದು ಪ್ರಮುಖ ವೃತ್ತಕ್ಕೆ,'ಅವರ ಹೆಸರನ್ನು ಇಟ್ಟಿದ್ದಾರೆ.

ಇಂದಿನ,’ನಾನಾ ಚೌಕ್,’ ಪ್ರದೇಶ[ಬದಲಾಯಿಸಿ]

'ತಾರ್ ದೇವ್,' ಗೆ ಎಡಭಾಗದ್ದೇ "ನಾನಾ ಚೌಕ್", 'ಜನನ್ನಾಥ್ ರಾವ್, ಶಂಕರ್ ಸೇಠ್,' ರವರ ಹೆಸರಿನಲ್ಲಿ ಇದೆ. ಜನ ಅವರನ್ನು ಪ್ರೀತಿಯಿಂದ 'ನಾನಾ' ಎನ್ನುತ್ತಿದ್ದರು. ಮಹಾದಾನಿಗಳು, ಹಾಗೂ ಧರ್ಮಾರ್ಥ ಕಾರ್ಯಗಳಲ್ಲಿ ನಿಸ್ಸೀಮರು. 'ಗ್ರಾಂಟ್ ರೋಡ್' ಪರಿಸರದಲ್ಲಿದೆ. ಈ ಜಾಗ, ೬ ರಸ್ತೆಗಳು ಕೂಡುವ ಸ್ಥಳ. ಚೌಕ'ದಲ್ಲಿ ಸಾರ್ವಜನಿಕರ ಸಂಖ್ಯೆ ಹೆಚ್ಚು. ಮುಂದಕ್ಕೆ ಹೋದರೆ, 'ಕೆಂಪ್ಸ್ ಕಾರ್ನರ್', 'ಗಿರ್ಗಾಮ್', 'ಚೌಪಾತಿ', 'ಮೆರಿನ್ ಡ್ರೈವ್', 'ಒಪೇರಾ ಹೌಸ್', 'ಕೆನಡಿ ಬ್ರಿಡ್ಜ್', 'ಗ್ರಾಂಟ್ ರೋಡ್' ಸೇತುವೆ, ಮತ್ತು 'ಬಸ್ಸು ನಿಲ್ದಾಣ.' ಸರಿಯಾಗಿ ವಿಳಾಸ ಹೇಳಬೇಕೆಂದರೆ, ಆದರ್ಶ್ ಮಿಠಾಯಿ ಅಂಗಡಿ ಇದರ ಬದಿಯಲ್ಲೇ ಇದೆ.

'ಆದರ್ಶ್ ಮಿಠಾಯಿ ಮಂದಿರ್'[ಬದಲಾಯಿಸಿ]

-ಆದರ್ಶ್ ಮಿಠಾಯಿ ಮಂದಿರ್, ಗೆ ಸಾಹುಕಾರರು, ಹಿರಿಯರು, ಕಿರಿಯರು, ಮಹಿಳೆಯರು, ತಮ್ಮ ಕಾರುಗಳಲ್ಲಿ ಬಂದು ಖರೀದಿಸುತ್ತಾರೆ. ಮಲಬಾರ್ ಹಿಲ್ ನಿಂದ 'ತಾಜಾ ಮಿಠಾಯಿ', 'ಪೇಢೆ' ಗಳನ್ನು ಮೆಲ್ಲಲು ಬರುತ್ತಾರೆ. 'ಮೈಸೂರ್ ಪಾಕ್', ಗಟ್ಟಿ, ರಂಗುರಂಗಿನ. 'ಹಲ್ವ' ಕೂಡ ಇಲ್ಲಿ ಪ್ರಸಿದ್ಧಿ. ಬಾದಾಮಿ ಪುಡಿಯನ್ನು ಅದರ ಮೇಲೆ ಲೇಪಿಸುತ್ತಾರೆ.

'ಸೈಫಿ ಪಿಕ್ಚರ್ ಫ್ರೇಮ್ ವರ್ಕ್ಸ್'[ಬದಲಾಯಿಸಿ]

ಆದರ್ಶ್ ಮಿಠಾಯಿ ಮಂದಿರ್, ಪಕ್ಕದಲ್ಲಿ, ಒಳ್ಳೆ ಹೆಸರುಮಾಡಿದ 'ಪಿಕ್ಚರ್ ಫ್ರೇಮ್ ವರ್ಕ್ಸ್', ಇದೆ. ಇಡಿ ಬೊಂಬಾಯಿನಲ್ಲೆ ಇದರ ಬಗ್ಗೆ ಜನರಿಗೆ ಗೊತ್ತಿದೆ. ಸ್ವಲ್ಪ ಹಣ ಜಾಸ್ತಿ ಕೇಳುತ್ತಾರೆ, ಅಷ್ತೆ. ಮಿಠಾಯಿ ಮಂದಿರದ ಎದುರಿಗೆ, ಹಿಂದಿನ ಎರಡಂತಸ್ತಿನ ಮನೆಗಳು ಮಾಯವಾಗಿ, ಈಗ, ಕೆಲವು ಹೊಸ ಕಟ್ಟಡಗಳು ಬಂದಿವೆ.

'ಉಡುಪಿ ಕೃಷ್ಣ ರೆಸ್ಟೋರೆಂಟ್ '[ಬದಲಾಯಿಸಿ]

'ಉಡುಪಿ ಕೃಷ್ಣ ರೆಸ್ಟೋರೆಂಟ್,' ನಲ್ಲಿ ಬಿಸಿ ಚಹ, ದಕ್ಷಿಣ ಭಾರತೀಯರ, ಹೆಸರುವಾಸಿಯಾದ, ಬಿಸಿ-ಬಿಸಿ,'ಮೆದುವಡ', ಮತ್ತು 'ದೋಸೆ' 'ಇಡ್ಲಿ' ಗಳು ಸಿಗುತ್ತವೆ. ಬೆಳಗಿನ ವಾಕಿಂಗ್ ಹೋಗಿ-ಬರುವವರಿಗೆ, ಚೌಕಕ್ಕೆ ಹತ್ತಿರದಲ್ಲೇ, 'ಶೆಟ್ಟಿ ಭೆಲ್ ಪುರಿ ಅಂಗಡಿ', (ಹಳೆಯತರಹವೇ ಇದೆ;) ಬದಲಾಗಿಲ್ಲ. 'ಪಾರ್ಸಿಜನ', 'ಮಹಾರಾಷ್ಟ್ರಿಯನ್ನರು', 'ಗುಜರಾತಿ'ಗಳು, ನಾನ ಚೌಕದಲ್ಲಿ ಕಾಣುವ ಸಮುದಾಯಗಳು. ರಸ್ತೆಯುದ್ದಕ್ಕು ಇರುವ ತರಕಾರಿ ಅಂಗಡಿಗಳ ಸಾಲು, 'ರೈಲ್ವೆ ಸ್ಟೇಶನ್' ಗೆ ಕರೆದೊಯ್ಯುತ್ತದೆ. 'ಮಲಬಾರ್ ಹಿಲ್' ಹಾಗೂ 'ಕೆಂಪ್ಸ್ ಕಾರ್ನರ್' ನ ಜನಕ್ಕೆ ಬೇಕಾದ, 'ಮೀನು', 'ಮಾಂಸ', ಮತ್ತು ತರಕಾರಿಗಳು ಇಲ್ಲಿ ದೊರೆಯುತ್ತವೆ.

'ನೆಸ್ ಬಾಗ್',[ಬದಲಾಯಿಸಿ]

'ಕೆನ್ನಡಿ ಬ್ರಿಡ್ಜ್' ಮತ್ತು 'ಗ್ರಾಂಟ್ ರೋಡ್' ನ್ನು ಸೇರಿಸುವ ಚಿಕ್ಕ 'ಕರ್ವ್', ನಲ್ಲಿದೆ . ಬಸ್ಸಿನಲ್ಲಿ ಹೋಗಲಿ, ಇಲ್ಲವೆ ಟ್ಯಾಕ್ಸಿಯಲ್ಲಿ ಹೋದರೂ ತಕ್ಷಣ ಕಣ್ಣಿಗೆ ಬೀಳುತ್ತದೆ.

'ಟಾಪ್ ಇನ್ ಟೌನ್'[ಬದಲಾಯಿಸಿ]

'ಟಾಪ್ ಇನ್ ಟೌನ್', 'ಕೃಷ್ಣ ರೆಸ್ಟೋರೆಂಟ್,' ಪಕ್ಕದ ಹಳೆ ಅಂಗಡಿ. ಮೊದಲು ಹೆಸರುವಾಸಿಯಾಗಿತ್ತು. ಕೊಡೆಯಿಂದ ದಾರ-ಸೂಜಿವರೆಗೆ ಸಿಕ್ಕುತ್ತದೆ. ಗೃಹಿಣಿಯರಿಗೆ ಬೇಕಾದ ವಸ್ತುಗಳು ಸಿಗುತ್ತವೆ. ಮುಂಬಯಿ ನಗರದ, 'ಬಾಲಿವುಡ್,' ಖ್ಯಾತಿಯ, "ಜಾಕಿ ಶೆರಾಫ್," ಚಿಕ್ಕ ಗಣೇಶನ ವಿಗ್ರಹವನ್ನು ಇಲ್ಲಿಂದ ಖರೀದಿಸುತ್ತಾರೆ. ಪುಟ್ಟ ಅಂಗಡಿಯೊಂದರಲ್ಲಿ. 'ವಾಲ್ಕೇ ಶ್ವರ್,' ಮತ್ತು 'ತೀನ್ ಬತ್ತಿ,' ಯ ಸ್ಥಳದಲ್ಲೇ ಹುಟ್ಟಿ ಬೆಳೆದವರಂತೆ. ಈ ಜಾಗ, ಮಳೆಗಾಲದಲ್ಲಿ ಹೆಚ್ಚು ಮಳೆಬಿದ್ದಾಗ, 'ಮಲಬಾರ್ ಹಿಲ್', ಮತ್ತು 'ಕೆಂಪ್ಸ್ ಕಾರ್ನರ್,' ನಿಂದ ಹರಿದುಬರುವ ನೀರಿನಿಂದ, ತುಂಬಿರುತ್ತದೆ. ಎರಡು ಸೇತುವೆಗಳ ನೀರು ಇಲ್ಲಿ ನುಗ್ಗಿ ಬಂದು, ಹರಡಿಕೊಂಡು ನದಿಯಂತೆ ಕಾಣಿಸುತ್ತದೆ.