ತಿಳಿವಳಿಕೆ
ತಿಳಿವಳಿಕೆ ವ್ಯಕ್ತಿ, ಪರಿಸ್ಥಿತಿ, ಅಥವಾ ಸಂದೇಶದಂತಹ ಅಮೂರ್ತ ಅಥವಾ ಭೌತಿಕ ವಸ್ತುವಿಗೆ ಸಂಬಂಧಿಸಿದ ಒಂದು ಮಾನಸಿಕ ಪ್ರಕ್ರಿಯೆ ಮತ್ತು ಆ ಮೂಲಕ ಒಬ್ಬರು ಅದರ ಬಗ್ಗೆ ಯೋಚಿಸುವುದು ಮತ್ತು ಆ ವಸ್ತುವನ್ನು ಸಮರ್ಪಕವಾಗಿ ನಿಭಾಯಿಸಲು ಪರಿಕಲ್ಪನೆಗಳನ್ನು ಬಳಸುವುದು ಸಾಧ್ಯವಾಗುತ್ತದೆ. ತಿಳಿವಳಿಕೆಯು ತಿಳಿಯುವವನು ಮತ್ತು ತಿಳಿವಳಿಕೆಯ ವಸ್ತುವಿನ ನಡುವಿನ ಸಂಬಂಧ. ತಿಳಿವಳಿಕೆಯು ಬುದ್ಧಿವಂತ ವರ್ತನೆಯನ್ನು ಆಧರಿಸಲು ಸಾಕಾಗುವಷ್ಟಾದ ಜ್ಞಾನದ ವಸ್ತುವಿಗೆ ಸಂಬಂಧಿಸಿದಂತೆ ಸಾಮರ್ಥ್ಯಗಳು ಮತ್ತು ಸ್ವಭಾವಗಳನ್ನು ಸೂಚಿಸುತ್ತದೆ.[೧]
ತಿಳಿವಳಿಕೆಯು ಹಲವುವೇಳೆ, ಆದರೆ ಯಾವಾಗಲೂ ಅಲ್ಲ, ಕಲಿಕೆಯ ಪರಿಕಲ್ಪನೆಗಳಿಗೆ, ಮತ್ತು ಕೆಲವೊಮ್ಮೆ ಆ ಪರಿಕಲ್ಪನೆಗಳಿಗೆ ಸಂಬಂಧಿಸಿದ ಸಿದ್ಧಾಂತ ಅಥವಾ ಸಿದ್ಧಾಂತಗಳಿಗೆ ಸಂಬಂಧಿಸಿರುತ್ತದೆ. ಆದರೆ, ಒಬ್ಬ ವ್ಯಕ್ತಿಯು ಒಂದು ವಸ್ತು, ಪ್ರಾಣಿ ಅಥವಾ ವ್ಯವಸ್ಥೆಯ ವರ್ತನೆಯನ್ನು ಊಹಿಸುವ ಉತ್ತಮ ಸಾಮರ್ಥ್ಯವನ್ನು ಹೊಂದಿರಬಹುದು ಮತ್ತು ಹಾಗಾಗಿ ಆ ವಸ್ತು, ಪ್ರಾಣಿ ಅಥವಾ ವ್ಯವಸ್ಥೆಗೆ ಸಂಬಂಧಿಸಿದ ಪರಿಕಲ್ಪನೆಗಳು ಅಥವಾ ಸಿದ್ಧಾಂತಗಳ ಪರಿಚಯ ಅಗತ್ಯವಾಗಿಲ್ಲದಿದ್ದರೂ ಸ್ವಲ್ಪ ಅರ್ಥದಲ್ಲಿ ಅದನ್ನು ಅರ್ಥಮಾಡಿಕೊಳ್ಳಬಹುದು. ಅವರು ನಿಜಕ್ಕೂ ತಮ್ಮ ಸ್ವಂತ ವಿಶಿಷ್ಟ ಪರಿಕಲ್ಪನೆಗಳು ಮತ್ತು ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸಿಕೊಂಡಿರಬಹುದು ಮತ್ತು ಇವು ಅವುಗಳ ಸಂಸ್ಕೃತಿಯ ಗುರುತಿಸಲ್ಪಟ್ಟ ಪ್ರಮಾಣಕ ಪರಿಕಲ್ಪನೆಗಳು ಮತ್ತು ಸಿದ್ಧಾಂತಗಳಿಗೆ ಸಮಾನ ಅಥವಾ ಅವುಗಳಿಗಿಂತ ಹೆಚ್ಚು ಉತ್ತಮ ಅಥವಾ ಹೆಚ್ಚು ಕೆಟ್ಟದಾಗಿರಬಹುದು.
ಕೆಲವು ಉದಾಹರಣೆಗಳು:
- ಒಬ್ಬನಿಗೆ ಊಹಿಸಲು ಸಾಧ್ಯವಿದ್ದರೆ (ಉದಾ. ಬಹಳ ಮೋಡ ಕವಿದಿದ್ದರೆ, ಮಳೆಯಾಗಬಹುದು) ಮತ್ತು/ಅಥವಾ ಅದರ ಲಕ್ಷಣಗಳು, ಇತ್ಯಾದಿಗಳಲ್ಲಿ ಕೆಲವುಗಳ ಬಗ್ಗೆ ವಿವರಣೆ ನೀಡಲು ಸಾಧ್ಯವಿದ್ದರೆ ಅವನಿಗೆ ಹವಾಮಾನದ ಬಗ್ಗೆ ತಿಳಿದಿರುತ್ತದೆ.
- ಒಬ್ಬ ಮನೋವೈದ್ಯನು ಒಬ್ಬ ವ್ಯಕ್ತಿಯ ಆತಂಕಗಳು, ಅವುಗಳ ಕಾರಣಗಳನ್ನು ತಿಳಿದಿದ್ದರೆ, ಮತ್ತು ಆತಂಕವನ್ನು ಹೇಗೆ ನಿಭಾಯಿಸಬೇಕು ಎಂಬುವುದಕ್ಕೆ ಉಪಯುಕ್ತ ಸಲಹೆ ನೀಡಬಲ್ಲವನಾಗಿದ್ದರೆ ಆ ವ್ಯಕ್ತಿಯ ಆತಂಕಗಳನ್ನು ಅರ್ಥಮಾಡಿಕೊಳ್ಳುತ್ತಾನೆ.
- ಅವನು ಸಂದೇಶದಿಂದ ಸಾಗಿಸಲಾದ ಮಾಹಿತಿ ವಿಷಯವನ್ನು ಪ್ರಜ್ಞಾಪೂರ್ವಕವಾಗಿ ಪುನರುತ್ಪಾದಿಸಬಲ್ಲವನಾಗಿದ್ದರೆ ಅವನು ತರ್ಕ ಅಥವಾ ವಾದದ ಒಂದು ತುಣುಕನ್ನು ಅರ್ಥಮಾಡಿಕೊಳ್ಳುತ್ತಾನೆ.
- ಒಂದು ಭಾಷೆಯಲ್ಲಿನ ವಿಶಾಲ ವ್ಯಾಪ್ತಿಯ ಮಾತಾಡಲಾದ ಹೇಳಿಕೆಗಳು ಅಥವಾ ಬರೆಯಲ್ಪಟ್ಟ ಸಂದೇಶಗಳಿಂದ ಸಾಗಿಸಲಾದ ಮಾಹಿತಿ ವಿಷಯವನ್ನು ಪುನರುತ್ಪಾದಿಸುವಷ್ಟು ಮಟ್ಟಿಗೆ ಒಬ್ಬನು ಒಂದು ಭಾಷೆಯನ್ನು ತಿಳಿದುಕೊಂಡಿರುತ್ತಾನೆ.
ಉಲ್ಲೇಖಗಳು
[ಬದಲಾಯಿಸಿ]- ↑ Bereiter, Carl. "Education and mind in the Knowledge Age". Archived from the original on 2006-02-25. Retrieved 2017-10-03.