ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ
ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ | |
---|---|
ಶೈಲಿ | |
ರಚನಾಕಾರರು | |
ಬರೆದವರು |
|
ನಿರ್ದೇಶಕರು |
|
ನಿರೂಪಣಾ ಗೀತೆ | ತಾರಕ್ ಮೆಹ್ತಾ ಕಾ ಉಲ್ತಾ ಚಶ್ಮಾ |
ದೇಶ | ಭಾರತ |
ಭಾಷೆ(ಗಳು) | ಹಿಂದಿ |
ಒಟ್ಟು ಸರಣಿಗಳು | 1 |
ಒಟ್ಟು ಸಂಚಿಕೆಗಳು | 3981+ |
ನಿರ್ಮಾಣ | |
ನಿರ್ಮಾಪಕ(ರು) |
|
ಸಮಯ | 20-22 ನಿಮಿಷಗಳು |
ನಿರ್ಮಾಣ ಸಂಸ್ಥೆ(ಗಳು) | ನೀಲಾ ಟೆಲಿ ಫಿಲ್ಮ್ಸ್ |
ವಿತರಕರು | ನೀಲಾ ಟೆಲಿ ಫಿಲ್ಮ್ಸ್ |
ಪ್ರಸಾರಣೆ | |
ಮೂಲ ವಾಹಿನಿ | ಸೋನಿ ಸಬ್ |
ಮೂಲ ಪ್ರಸಾರಣಾ ಸಮಯ | 28 ಜುಲೈ 2008 | – ಪ್ರಸ್ತುತ
ಹೊರ ಕೊಂಡಿಗಳು | |
ತಾಣ |
ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ, ಹಿಂದೀ ಭಾಷೆಯ ಒಂದು ಜನಪ್ರಿಯ ಹಾಸ್ಯ ಧಾರಾವಾಹಿ.[೧] ಮೊದಲ ಸಂಚಿಕೆ ಜುಲೈ 28, 2008 ರಂದು ಪ್ರಸಾರವಾಯಿತು. ಇದು ಸಬ್ ಟಿವಿ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತದೆ. ಈ ಧಾರಾವಾಹಿಯು ಚಿತ್ರಲೇಖ ಸಾಪ್ತಾಹಿಕದಲ್ಲಿನ ಗುಜರಾತಿ ಪತ್ರಕರ್ತ ತಾರಕ್ ಮೆಹ್ತಾ ರವರ ದುನಿಯಾ ನೆ ಊಂಧಾ ಚಶ್ಮಾ ಎಂಬ ಅಂಕಣದ ಆಧಾರವಾಗಿದೆ.
ಕಥಾ ವಸ್ತು
[ಬದಲಾಯಿಸಿ]ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ, ಹಿಂದಿ ಧಾರಾವಾಹಿ ಸೀರಿಯಲ್, ಮುಂಬಯಿ ನಗರದ ಗೋರೆಗಾವ್ ಉಪನಗರದ 'ಪೌಡರ್ ಗಲ್ಲಿ'ಯಲ್ಲಿರುವ ಗೋಕುಲ್ ಧಾಮ್ ಹೌಸಿಂಗ್ ಕೋ. ಆಪ್. ಸೊಸೈಟಿ,ಯ ನಿವಾಸಿಗಳ ಜೀವನದ ಮೇಲೆ ಆಧರಿಸಿ ರಚಿಸಲಾದ ಕಥೆಯಾಗಿದೆ. ಈ ಸೊಸೈಟಿಯಲ್ಲಿ ೪ ವಿಂಗ್ ಗಳಿವೆ. ೧. ಎ. ವಿಂಗ್, ೨. ಬಿ. ವಿಂಗ್, ೩. ಸಿ. ವಿಂಗ್, ೪. ಡಿ. ವಿಂಗ್. ಹೌಸಿಂಗ್ ಸೊಸೈಟಿಯಲ್ಲಿ ಒಟ್ಟಾರೆ ೫೦ ಫ್ಲ್ಯಾಟ್ ಗಳಿದ್ದಾಗ್ಯೂ, ಧಾರಾವಾಹಿಯಲ್ಲಿ [೨] ಕಥೆಯ ಪಾತ್ರಗಳು ಸನ್ನಿವೇಶಗಳು ಸೊಸೈಟಿಯ ಕೇವಲ ೮ ಪರಿವಾರಗಳ ಜೀವನದ ಕಥೆಯನ್ನು ಹೆಚ್ಚಾಗಿ ಒಳಗೊಂಡಿವೆ.
ನಿವಾಸಿಗಳು
[ಬದಲಾಯಿಸಿ]ಎ ವಿಂಗ್ ನಿವಾಸಿಗಳು
[ಬದಲಾಯಿಸಿ]- ಆತ್ಮಾರಾಮ್ ತುಕಾರಾಂ ಭಿಡೆ, ಸೊಸೈಟಿಯ ಸೆಕ್ರೆಟರಿ, ಮನೆಯಲ್ಲೇ ಮಕ್ಕಳಿಗೆ ಪಾಠಹೇಳಿಕೊಡುತ್ತಾರೆ. ಮಹಾರಾಷ್ಟ್ರದ ರತ್ನಗಿರಿಯಿಂದ ಬಂದವರು. ಮಾಧವಿ ಪತ್ನಿ, ಚಿಕ್ಕಪುಟ್ಟ ಲೇವಾದೇವಿ ಮಾಡಬಲ್ಲಳು. ಮಗಳು,ಸೋನು (ಸೋನಾಲಿಕ)
- ಡಾ ಹಂಸ್ರಾಜ್ ಹಾಥಿ, ಒಬ್ಬ ರೆಸಿಡೆಂಟ್ ಡಾಕ್ಟರ್. ಯು.ಪಿ.ಯವರು, ಕೋಮಲ್ ಪತ್ನಿ, ಮಗ ಗೋಲಿ, (ಗುಲಾಬ್ ಕುಮಾರ್),
- ರೋಷನ್ ಸಿಂಗ್ ಸೋಧಿ, ಕಾರ್ ಮೆಕಾನಿಕ್, ಪಂಜಾಬ್ ರಾಜ್ಯದ ಅಮೃತ್ ಸರ್ ನಗರದವರು. ಪಾರ್ಸಿ ಪತ್ನಿ, ರೋಷನ್. ಮಗ ಗೋಗಿ (ಗುರುಚರಣ್)
ಬಿ ವಿಂಗ್ ನಿವಾಸಿಗಳು
[ಬದಲಾಯಿಸಿ]- ಜೇಠ ಲಾಲ್ ಚಂಪಕ್ ಗಡ, ಎಲೆಕ್ಟ್ರಾನಿಕ್ ಶಾಪ್ ಮಾಲೀಕರು. ಗುಜರಾತಿನ ಕಚ್ ಡಿಸ್ಟ್ರಿಕ್ಟ್ ನವರು ಪತ್ನಿ, ದಯಾ, ತಂದೆ, ಚಂಪಕ್ ಲಾಲ್ ಜಯಂತಿಲಾಲ್ ಗಡ ಮಗ, ತಿಪೇಂದ್ರ ಟಪ್ಪು,
- ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮ ಕಥೆಯ ಪಾತ್ರಗಳು ಹಾಗೂ ಸನ್ನಿವೇಶಗಳ ನಿರೂಪಕ, ಹಾಗೂ ಪತ್ರಿಕಾ ಅಂಕಣಕಾರ. ಪತ್ನಿ ಅಂಜಲಿ, ಉತ್ತರ ಭಾರತದವರು.
ಸಿ.ವಿಂಗ್ ನಿವಾಸಿಗಳು
[ಬದಲಾಯಿಸಿ]- ಕೃಷ್ಣನ್ ಸುಬ್ರಮಣಿಯಂ ಅಯ್ಯರ್, ಚೆನ್ನೈ ತಮಿಳುನಾಡಿನ ಒಬ್ಬ ವಿಜ್ಞಾನಿ. ವೆಸ್ಟ್ ಬೆಂಗಾಲ್ ಕೋಲ್ಕತ್ತಾದ ಬೆಂಗಾಲಿ ಪತ್ನಿ ಬಬಿತಾ.
- ಪೋಪಟ್ ಲಾಲ್ ಪಾಂಡೆ, ಪತ್ರಿಕಾಕಾರ್ 'ತೂಫಾನ್ ಎಕ್ಸ್ ಪ್ರೆಸ್'
- ಭೂಪೆನ್ ಎಂ.ಪಿ;
ಗುಲ್ಮೊಹರ್ ಅಪಾರ್ಟ್ ಮೆಂಟ್ ವಾಸಿ
[ಬದಲಾಯಿಸಿ]- ಪಂಕಜ್ ದಿವಾನ್ ಸಹಾಯ್, (ಪಿಂಕು) ಟಪ್ಪು ಸೇನೆಯ ಒಬ್ಬ ಸದಸ್ಯ. ಬೇರೆ ಸೊಸೈಟಿ,
- ಸುಂದರ್ ಲಾಲ್ ದಯಾಜಿಯವರ ಸೋದರ, ಅಹ್ಮದಾಬಾದ್ ನ ಗುಜರಾತ್ ನವರು. ಗೆಳೆಯರು :
- ಅಬ್ದುಲ್, ಕಿರಾಣಿ ಅಂಗಡಿ ಮಾಲೀಕ ಸೊಸೈಟಿ ಯ ಹೊರಗಡೆ ಹೋಗುವ ಗೇಟ್ ನ ಬಳಿ ತನ್ನ ಶಾಪ್ ನಡೆಸುತ್ತಿದ್ದಾರೆ.
- ರೀಟಾ ಶ್ರೀವಾತ್ಸವ್, ರಿಪೋರ್ಟರ್, 'ಕಲ್ ತಕ್ ನ್ಯೂಸ್ ಚಾನೆಲ್'
- ಇನ್ಸ್ಪೆಕ್ಟರ್ ಚಾಲು ಪಾಂಡೆ, ಅಸಿತ್ ಕುಮಾರ್ ಮೋದಿ ಜೇತಾ
- ಶಾಪ್ ಅಸಿಸ್ಟಂಟ್ಸ್-ನಟ್ವರ್ ಲಾಲ್ ಪ್ರಭಾಶಂಕರ್ ಉಧೈವಾಲಾ, ನಟ್ಟು ಕಾಕ
- ಬಾಗೇಶ್ವರ್ ದಾದು ಉಧೈವಾಲಾ ಬಾಘಾ
- ಬಾಘಾ ನ ಫಿಯಾನ್ಸಿ, ಬಾವಿರಿ ಧೋಂಡು ಲಾಲ್ ಕಾನ್ಪುರಿಯ,
ಸೊಸೈಟಿಯ ಸದಸ್ಯರೆಲ್ಲ ಅನ್ಯೋನ್ಯವಾಗಿ ಒಂದೇ ಪರಿವಾರದ ಸದಸ್ಯರಂತೆ ಪ್ರೀತಿವಿಶ್ವಾಸಗಳಿಂದ ವಾಸಿಸುತ್ತಿದ್ದಾರೆ. ಪ್ರತಿ ಹಬ್ಬ-ಹರಿದಿನಗಳನ್ನು ಒಟ್ಟಾಗಿ ನೆರವೇರಿಸುತ್ತಾ ಬಂದಿದ್ದಾರೆ. ಅಚ್ಚ ಭಾರತೀಯ ಸಮಾಜದ ಸಂಪ್ರದಾಯಗಳನ್ನು ಆಚರಿಸುತ್ತಾರೆ. ಜೇಠಲಾಲ್ ಗಡ ಕೆಲವುವೇಳೆ ತನ್ನ ಅವಿವೇಕಯುತ ಕಾರ್ಯವೈಖರಿಯಿಂದ ಸಮಸ್ಯೆಗಳಿಗೆ ಗ್ರಾಸವಾಗುತ್ತಾನೆ. ಧಾರಾವಾಹಿಯ ಹಾಸ್ಯ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ದಿಶೆಯಲ್ಲಿ ಈ ನಟರೆಲ್ಲಾ ಕಾರ್ಯನಿರ್ವಹಿಸುತ್ತಿದ್ದಾರೆ.
ಟಪ್ಪು ಸೇನಾ
[ಬದಲಾಯಿಸಿ]ಗೋಕುಲ್ ಧಾಮ್ ಹೌಸಿಂಗ್ ಸೊಸೈಟಿಯ, ಒಟ್ಟು ೫ ಜನ ಮಕ್ಕಳು ಗೋಕುಲ್ ಧಾಮ್ ಸೊಸೈಟಿಯಲ್ಲಿ ಗೋಲಿ, ಗೋಗಿ, ಪಿಂಕು, ಸೋನು, ಸೀರಿಯಲ್ ನ ಹಾಸ್ಯ ಪ್ರಸಂಗದಲ್ಲಿ ಇವರ ಪಾತ್ರ ಹೆಚ್ಚಾಗಿದೆ. ಈ ಮಕ್ಕಳ ತುಂಟತನ, ಸೊಸೈಟಿಯ ಇತರ ಸದಸ್ಯರಿಗೆ ಸರಿ ಬರುವುದಿಲ್ಲ. ಕೆಲವು ಸಮಯದಲ್ಲಿ ಇವರ ಕೆಲಸ ಶ್ಲಾಘನೆಗೆ ಒಳಪಡುತ್ತದೆ. ಭಿಡೆಯವರಿಗೆ ಮಾತ್ರ, ಇವರ ಬಗ್ಗೆ ಬೇಸರ. ಸೊಸೈಟಿಯ ಕಾಂಪೌಂಡ್ ಒಳಗೆ ಕ್ರಿಕೆಟ್ ಆಡುವುದು, ಕಿಟಕಿಯ ಗಾಜು ಒಡೆಯುವುದು, ಕೂಗಾಟ, ಮೊದಲಾದ ಕಾರ್ಯಗಳನ್ನು ಶುರುವಿನಿಂದಲೂ ಈ ಮಕ್ಕಳು ಮಾಡುತ್ತಾ ಬಂದಿದ್ದಾರೆ. ಆಗಾಗ, ಏನಾದರೊಂದು ಗೊಂದಲ, ಸಮಸ್ಯೆಗಳಿಗೆ ಗ್ರಾಸವಾಗುವುದು ಇವರ ಸ್ವಭಾವ. ಅವರು ದೊಡ್ಡವರಾದಂತೆ ಅವರ ತುಂಟತನ ಬೇರೆ ತರಹ ಬದಲಾಗುತ್ತಾ ಹೋಗುತ್ತದೆ.
ಧಾರಾವಾಹಿಯ ಪ್ರಮುಖ ಪಾತ್ರಗಳ ನಿರ್ವಾಹಕರು:
[ಬದಲಾಯಿಸಿ]- 'ದಿಲೀಪ್ ಜೋಶಿ, ಜೆಠಾಲಾಲ್ ಚಂಪಕ್ಲಾಲ್ ಗಡ ಆಗಿ,
- ದಿಶಾ ವಕಾನಿ, ದಯಾ ಜೆಠಾಲಾಲ್ ಚಂಪಕ್ಲಾಲ್ ಗಡ ಆಗಿ,
- ಭವ್ಯಾ ಗಾಂಧಿ, ಟಿಪೇಂದ್ರ ಜೆಥಾಲಾಲ್ ಗಡ ಟಪು (೨೦೧೭ ರಿಂದ ಇದುವರೆವಿಗೆ)
- ರಾಜ್ ಆನಂದ್ ಕತ್ ತಿಪೇಂದ್ರ ಜಥಾಲಾಲ್ ಗಡ (ಟಪ್ಪು) ೨೦೧೭
- ಅಮಿತ್ ಭಟ್, ಚಂಪಕ್ಲಾಲ್ ಜಯಂತಿಲಾಲ್ ಗಡ ಆಗಿ,
- ಶೈಲೇಶ್ ಲೋಧ ತಾರಕ್ ಮೆಹ್ತಾ ಆಗಿ,
- ನೇಹಾ ಮೆಹ್ತಾ ಅಂಜಲಿ ತಾರಕ್ ಮೆಹ್ತಾ ಆಗಿ,
- ತನುಜ್ ಮಹಾಶಬ್ದೆ ಕೃಷ್ಣನ್ ಸುಬ್ರಮಣಿಯನ್ ಅಯ್ಯರ್ ಆಗಿ,
- ಮೂನ್ ಮೂನ್ ದತ್ತ ಬಬಿತಾ ಕೃಷ್ಣಅಯ್ಯರ್ ಆಗಿ,
- ಮಂದಾರ್ ಚಂದಾವಡ್ಕರ್ ಆತ್ಮಾರಾಮ್ ತುಕಾರಾಂ ಭಿಡೆ ಆಗಿ,
- ಸೋನಾಲಿಕ ಜೋಶಿ ಮಾಧ್ವಿ ಆತ್ಮಾರಾಮ್ ಭಿಡೆ ಆಗಿ,
- ಜೀಲ್ ಮೆಹ್ತಾ ಸೋನಾಲಿಕ ಆತ್ಮಾರಾಮ್ ಭಿಡೆ (೨೦೦೮-೨೦೧೨)
- ನಿಧಿ ಭಾನುಶಾಲಿ ಸೋನಾಲಿಕ ಆತ್ಮಾರಾಮ್ ಭಿಡೆ ಸೋನು (೨೦೧೨- ಇದುವರೆಗೂ)
- ಗುರುಚರಣ ಸಿಂಗ್ ರೋಶನ್ ಸಿಂಗ್ ಹರ್ಜಿತ್ ಸೋಧಿ (೨೦೦೮-೨೦೧೩, ೨೦೧೪ ಇದುವರೆಗೂ
- ಲಾಡ್ ಸಿಂಗ್ ಮಾನ್ ರೋಷನ್ ಸಿಂಗ್ ಹರ್ಮಿತ್ ಸಿಂಗ್ ಸೋಧಿ (೨೦೧೩-೨೦೧೪)
- ಜೆನಿಫರ್ ಮಿಸ್ತ್ರಿ ಬಂಸಿವಾಲ್ ರೋಷನ್ ಕೌರ್ ರೋಶನ್ ಸೋಧಿ (೨೦೦೮-೨೦೧೩, ೨೦೧೬-ಇದುವರೆಗೂ )
- ದಿಲ್ ಖುಷ್ ರಿಪೋರ್ಟರ್ ರೋಶನ್ ಕೌರ್ ರೋಶನ್ ಸಿಂಗ್ ಸೋಧಿ (೨೦೧೩-೨೦೧೬)
- ಸಮಯ್ ಶಾ ಗುರುಚರಣ್ ಸಿಂಗ್ ರೋಶನ್ ಸಿಂಗ್ ಸೋಧಿ (ಗೋಗಿ )
- ನಿರ್ಮಲ್ ಸೋನಿ ಡಾ. ಹಂಸ್ ರಾಜ್ ಹಾಥಿ (೨೦೦೮-೨೦೦೯)
- ಆಝಾದ್ ಕವಿ ಡಾ. ಹಂಸ್ರಾಜ್ ಹಾಥಿ (2009–೨೦೧೮)
- ಅಂಬಿಕಾ ರಂಜನ್ ಕರ್ ಕೋಮಲ್ ಹಂಸ್ ರಾಜ್ ಹಾಥಿ ಆಗಿ,
- ಕುಶ್ ಶಾ ಗುಲಾಬ್ ಕುಮಾರ್ ಹಂಸ್ ರಾಜ್ ಹಾಥಿ (ಗೋಲಿ) ಆಗಿ,
- ಶ್ಯಾಮ್ ಪಾಠಕ್ ಪೋಪಟ್ ಲಾಲ್ ಪಾಂಡೆಯಾಗಿ,
- ಶರದ್ ಸಂಕಿಯ ಅಬ್ದುಲ್ ಆಗಿ,
ಕೆಲವು ಸಾಂದರ್ಭಿಕ ಪಾತ್ರಗಳಲ್ಲಿ
[ಬದಲಾಯಿಸಿ]- ತರುಣ್ ಉಪ್ಪಲ್ ಪಿಂಕು (ಪಂಕಜ್ ದಿವಾನ್ ಸಹಾಯ್) ಆಗಿ,
- ಘನಶ್ಯಾಮ್ ನಾಯಕ್ ನಟವರ್ ಲಾಲ್ ಪ್ರಭಾಶಂಕರ್ ಉಧೈವಾಲಾ ನಟ್ಟು ಕಾಕಾ (ನಟ್ಟುಕಾಕ) ಆಗಿ,
- ತನ್ಮಯ್ ವೆಕಾರಿಯ ಬಾಘೆಶ್ವರ್ ದಡುಖ್ ಉಧೈವಾಲಾ (ಬಾಘಾ) ಆಗಿ,
- ಮೋನಿಕಾ ಭಾದೊರಿಯ ಬಾವ್ರಿ ಧೋಂಡುಲಾಲ್ ಕಾನ್ಪುರಿಯ ಆಗಿ,
- ಮಯೂರ್ ವಕಾನಿ ಸುಂದರ್ ಲಾಲ್ ಆಗಿ,
- ಪ್ರಿಯ ಅಹುಜಾ ರಾಜ್ದ ರಿಪೋರ್ಟರ್ ರೀಟಾ ಶ್ರೀವಾಸ್ತವ್ ,ದಯಾ ಶಂಕರ್ ಪಾಂಡೆ ಆಗಿ,
- ಇನ್ಸ್ಪೆಕ್ಟರ್ ಚಾಲು ಪಾಂಡೆ ಆಗಿ,
ನಟ ಕವಿಕುಮಾರ್ ಆಝಾದ್ ನಿಧನ
[ಬದಲಾಯಿಸಿ]ಈ ಧಾರಾವಾಹಿಯಲ್ಲಿ ಡಾ.ಹಂಸ್ರಾಜ್ ಹಾಥಿ ಪಾತ್ರವಹಿಸುತ್ತಿದ್ದ ನಟ, ಕವಿಕುಮಾರ್ ಆಝಾದ್ ೯, ಜುಲೈ, ೨೦೧೮ ರಂದು ಮೀರಾರೋಡಿನ ವೊಕಾರ್ಡ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. [೩][೪]
ಉಲ್ಲೇಖಗಳು
[ಬದಲಾಯಿಸಿ]- ↑ "MUNMUN DUTTA OPENS UP ABOUT THE CONTROVERSY SURROUNDING TAARAK MEHTA KA OOLTAH CHASHMAH; COMES OUT IN SUPPORT OF GURCHARAN SINGH (SODHI)".
- ↑ "तारक मेहता…. के किरदारों की रियल लाइफ जानकर झटका लगेगा, ಮಾರ್ಚ್ ೨೯, ೨೦೧೭, ವರ್ಲ್ಡ್ ನವ್". Archived from the original on 2017-05-14. Retrieved 2018-05-27.
- ↑ [TV Actor Kavi kumar Azad passe away, Indian express, 10th, July, 2018
- ↑ Hathi of Tarak mehta ka oolta chashma ,dies of heart attack, India Times,7th, July, 2018,