ಡೊಂಬರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡೋಂಬರ ಇಂದ ಪುನರ್ನಿರ್ದೇಶಿತ)

ಪರಿವಿಡಿ[ಬದಲಾಯಿಸಿ]

ಪ್ರವೇಶ[ಬದಲಾಯಿಸಿ]

ಕುಟುಂಬ ಮತ್ತು ಬಳಿ[ಬದಲಾಯಿಸಿ]

ಭಾಷೆ ಮತ್ತು ಸಾಕ್ಷರತೆ[ಬದಲಾಯಿಸಿ]

ಜೀವನಾವರ್ತ ಆಚರಣೆಗಳು[ಬದಲಾಯಿಸಿ]

ಮೈನೆರೆಯುವಿಕೆ[ಬದಲಾಯಿಸಿ]

ವಿವಾಹ[ಬದಲಾಯಿಸಿ]

ಅಂತಿಮ ಸಂಸ್ಕಾರ[ಬದಲಾಯಿಸಿ]

ಜನಸಂಖ್ಯೆ[ಬದಲಾಯಿಸಿ]

ವಸತಿ[ಬದಲಾಯಿಸಿ]

ಆಹಾರ[ಬದಲಾಯಿಸಿ]

ವೃತ್ತಿ[ಬದಲಾಯಿಸಿ]

ಹಬ್ಬಗಳು[ಬದಲಾಯಿಸಿ]

ಶ್ರೇಣೀಕೃತ ಜಾತಿ ವ್ಯವಸ್ಥೆ[ಬದಲಾಯಿಸಿ]

ಜಾತಿ ಪಂಚಾಯಿತಿ[ಬದಲಾಯಿಸಿ]

ಸಾಮಾಜಿಕ ಸ್ಥಿತಿಗತಿ[ಬದಲಾಯಿಸಿ]

ಡೊಂಬರು ಎಂಬ ಪದ ಓರಿಯಾ ಭಾಷೆಯ ಮೂಲ ಪದ ಡಂಬ ಎಂಬ ಪದದಿಂದ ಬಂದಿದೆ. ಥರ್ಸ್ಟನ್‌ರವರು ಹೇಳುವಂತೆ, ಡೊಂಬರು ಬಹಿಷ್ಕೃತ ಜಾತಿಯವರಾಗಿದ್ದು, ಇವರು ಊರ ಹೊರಗಡೆ ಅಥವಾ ಕಾಡಿನಲ್ಲಿ ವಾಸಿಸುತ್ತಾರೆ. ಡೊಂಬರರಿಗೆ ೧೩ ಉಪನಾಮಗಳಿವೆ ಅವುಗಳಲ್ಲಿ ಡೋಮ್, ಡೊಂಬರ, ಡಾರ, ಡೊಂಬನ, ದೊಮ್ಮಾರ, ಪೈದಿಗಳು ಸಹ ಒಂದು. ಕೇರಳದಲ್ಲಿ ಡೊಂಬರನ್ನು ಡೊಂಬನ್ ಮತ್ತು ನಾಯ್ಕ್ ಎಂದು ಕರೆಯುತ್ತಾರೆ ಅಲ್ಲದೆ ನಾಯ್ಡು ಮತ್ತು ರೆಡ್ಡಿ ಉಪನಾಮಗಳು ಡೊಂಬರಿಗಾಗಿ ಬಳಸಲಾಗುತ್ತದೆ. ತಮಿಳುನಾಡಿನಲ್ಲಿ ಇವರು ಕುಡಿ ಡೊಂಬಾರ, ಪಾರಾ ಡೊಂಬಾರ, ರೆಡ್ಡಿ ಡೊಂಬಾರ ಎಂಬ ಉಪಪಂಗಡಗಳಿವೆ. ಆಂದ್ರಪ್ರದೇಶದಲ್ಲಿ ಪಮಾಡಿ ಎಂಬ ಜಾತಿಯನ್ನು ಪ್ರತ್ಯೇಕವಾದ ಪರಿಶಿಷ್ಠ ಜಾತಿಯೆಂದು ಅಧಿಸೂಚಿಸಲಾಗಿದೆ. ಪಮಾಡಿಗಳಿಗೆ ಪೈದಿ ಎಂಬ ಹೆಸರೂ ಇದೆ. ಕೊಲ್ಹಟಿ ಸಮುದಾಯವು ಕರ್ನಾಟಕದ ಉತ್ತರ ಜಿಲ್ಲೆಗಳಲ್ಲಿ ವಿರಳವಾಗಿ ಕಂಡುಬರುತ್ತಾರೆ. ಇವರು ಮೂಲತಃ ಮಹಾರಾಷ್ಟ್ರದವರಾಗಿದ್ದು, ಕರ್ನಾಟಕಕ್ಕೆ ವಲಸೆ ಬಂದವರಾಗಿದ್ದಾರೆ. ಕೊಲ್ಲಟಿಗಳನ್ನು ಕರ್ನಾಟಕದಲ್ಲಿ ದೊಂಬರಿಗಳೆAದು, ಮಹಾರಾಷ್ಟ್ರದಲ್ಲಿ ಕೇಲ್ಕರಿಗಳೆಂದು ಕರೆಯುತ್ತಾರೆ. ಇವರ ಮಾತೃ ಭಾಷೆ ಮರಾಠಿ, ವ್ಯಾವಹಾರಿಕವಾಗಿ ಕನ್ನಡ ಬಳಸುತ್ತಾರೆ.

ಕುಟುಂಬ ಮತ್ತು ಬಳಿ : ೧೮೯೧ರ ಮದ್ರಾಸ್ ವರದಿಯ ಪ್ರಕಾರ ಡೊಂಬರಲ್ಲಿ ಕೊಹಾರ, ಮಂದಿರಿ, ಮರ‍್ಗಾಮ್, ಮಿರಿಗಣಿ ಓನಮೂಲ, ಆಂದಿನಿಯ, ಸೊಡಬಿಸಿಯ ಎಂಬ ಉಪಜಾತಿಗಳಿವೆ. ಓಡಿಯರಲ್ಲಿ ಬಾಗ್(ಹುಲಿ), ಭಾಲು (ಕರಡಿ), ನಾಗ್ (ನಾಗರ), ಹನುಮಾನ್ (ಮಂಗ), ಕೊಚಿಪು (ಆಮೆ), ಜಾಕೊಂಡ (ಹಲ್ಲಿ) ಬೇಂಗ್ರೀ (ಕಪ್ಪೆ) ಎಂಬ ಮತ್ತಷ್ಟು ಉಪಪಂಗಡಗಳಿವೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಕರ್ನಾಟಕ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳು ಎಂಬ ಗ್ರಂಥದ ಪ್ರಕಾರ ಡೊಂಬರಲಿ ಐಸರಪೋಳ್ಳು, ಭೂಪತಿವಾಳ್ಳು, ಗಂಧಪುರಜುವಾಳ್ಳು, ಗೊಪುಡಸುವಾಳ್ಳು, ಜಟ್ಟಿವಾಳ್ಳು, ಕಗ್ಗಡಿವಾಳ್ಳು, ಕಲಬಂಡಿವಾಳ್ಳು, ಕನಕರೆಡ್ಡಿವಾಳ್ಳು, ಕಸೇರೂಪವಾಳು, ಕಸ್ತೂರಿವಾಳ್ಳು, ಕೂಟರವಾಳ್ಳು, ಮಲ್ಲೇಪೂವಾಳ್ಳು, ಮಣ್ಣಿಪುಲವಾಳ್ಳು, ಮತ್ಥವಾಳ್ಳು, ಮುರಾರಿವಾಳ್ಳು, ನಾಡುಮೂಲೇನಿವಾಳ್ಳು, ನಾಟಕರಾಯನಿವಾಳ್ಳು, ಪಲ್ಲೆಕೊಂಡಾಲವಾಳ್ಳು, ಸೋಮಲರಾಜುವಾಳ್ಳು, ಸೊಂಡೂರುವಾಳ್ಳು, ತೋಲಂಗಿವಾಳ್ಳು, ಉಪ್ಪುವಾಳ್ಳು ಇತ್ಯಾದಿ ಬಳಿಗಳು ಕಂಡು ಬರುತ್ತವೆ.

ಭಾಷೆ ಮತ್ತು ಸಾಕ್ಷರತೆ; ಈ ಹಿಂದೆ ಡೊಂಬಿ ಭಾಷೆ ಪ್ರಚಲಿತದಲ್ಲಿತ್ತೆಂದು ಹೇಳಲಾಗಿದೆ. ಆಂದ್ರಪ್ರದೇಶದಲ್ಲಿ ತೆಲುಗು, ತಮಿಳುನಾಡಿನಲ್ಲಿ ತಮಿಳು, ಕರ್ನಾಟಕದಲ್ಲಿ ಕನ್ನಡ ಮತ್ತು ಕೇರಳದಲ್ಲಿ ಮಲಯಾಳಂ ಭಾಷೆ ಮಾತನಾಡುತ್ತಾರೆ. ಇವರು ಮರಗು ಭಾಷೆ ಮಾತನಾಡುತ್ತಿದ್ದರು. ಪ್ರಾದೇಶಿಕವಾಗಿ ಇವರು ತೆಲುಗು, ಮರಾಠಿ, ಕನ್ನಡ ಮಾತನಾಡುತ್ತಾರೆ. ೨೦೦೧ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಪುರುಷರು ಶೇ ೧.೩೮ ಮತ್ತು ಶೇ ೦.೯೨ ಮಹಿಳೆಯರು ಅಕ್ಷರಜ್ಞಾನ ಹೊಂದಿದ್ದಾರೆಂದು ನಮೂದಿಸಲಾಗಿದೆ.

ಜೀವನಾವರ್ತ ಆಚರಣೆಗಳು: ಡೋಂಬರಲ್ಲಿ ಮೊದಲ ಹೆರಿಗೆ ತವರು ಮನೆಯಲ್ಲಿಯೇ ನೆರವೇರುತ್ತದೆ ಮತ್ತು ನಂತರದ ಹೆರಿಗೆಗಳು ಗಂಡನ ಮನೆಯಲ್ಲಿಯೇ ನೆಡೆಯುತ್ತವೆ. ಮಗು ಹುಟ್ಟಿದ ತಕ್ಷಣ ಜೋರಾಗಿ ಸದ್ದು ಮಾಡಿದರೆ ದೆವ್ವಗಳು ಮಗುವಿನ ಬಳಿ ಸುಳಿದಾಡುವುದಿಲ್ಲವೆಂದು ನಂಬಿದ್ದಾರೆ. ಹೊಕ್ಕಳು ಬಳ್ಳಿ ಕುರಿತಾಗಿ ಡೊಂಬರಲ್ಲಿ ಕೆಲವು ನಂಬಿಕೆಗಳಿವೆ. ಹುಟ್ಟಿದ ಮಗುವಿನ ಹೊಕ್ಕಳು ಬಳ್ಳಿ ಕುತ್ತಿಗೆಗೆ ಸುತ್ತು ಹಾಕಿಕೊಂಡಿದ್ದರೆ ಆ ಮಗು ದೈವಬಕ್ತನಾಗುತ್ತಾನೆಂದು ಹೇಳುತ್ತಾರೆ. ಹುಟ್ಟಿದ ಮೂರು ದಿನಗಳೊಳಗೆ ಹೊಕ್ಕಳು ಬಳ್ಳಿ ಒಣಗಿ ಹೋದರೆ, ಅ ಮಗು ಅಧೃಷ್ಟಶಾಲಿಯಾಗಿ, ಆರೋಗ್ಯವಂತನಾಗಿ ಮತ್ತು ಶಕ್ತಿವಂತನಾಗಿ ಬೆಳೆಯುತ್ತಾನೆಂಬ ನಂಬಿಕೆಯಿದೆ. ಐದಾರು ದಿನದ ನಂತರ ಒಣಗಿದರೆ ಆ ಮಗುವಿನ ಬದುಕಿನಲ್ಲಿ ಸಂತೋಷವಿರುವುದಿಲ್ಲವೆAದು ಹೇಳುತ್ತಾರೆ. ಮಗು ಹುಟ್ಟಿದ ೮ ದಿನಗಳವರೆಗೆ ಮನೆಯಲ್ಲಿ ಸೂತಕವಿರುತ್ತದೆ. ಹೆರಿಗೆಯಾದ ಹತ್ತು ದಿನಗಳವರೆಗೆ ಗರ್ಭೀಣಿಗೆ ಗಸಗಸೆ, ಶುಂಠಿ, ಬೆಳ್ಳುಳ್ಳಿ, ಸಾಸಿವೆ, ಲವಂಗ ಮತ್ತು ಅಕ್ಕಿಯನ್ನು ಪುಡಿ ಮಾಡಿ ಅದರ ಕಶಾಯ ಕುಡಿಸಲಾಗುತ್ತದೆ. ೯ನೇ ದಿನ ಮಗು ಮತ್ತು ತಾಯಿ ಇಬ್ಬರಿಗೂ ಸ್ನಾನ ಮಾಡಿಸಿ ನಾಮಕರನ ಶಾಸ್ತç ಮಾಡುತ್ತಾರೆ. ಅಂದಿನ ದಿನ ಸೂಲಗಿತ್ತಿಗೆ ಊಟ ಮತ್ತು ಸೇಂದಿಯನ್ನು ಉಡುಗೊರೆಯಾಗಿ ನೀಡುತ್ತಾರೆ. ಬಾತುಕೋಳಿ ಕೊಯ್ದು ಎಲ್ಲರಿಗೂ ಊಟ ಬಡಿಸುತ್ತಾರೆ. ಒಂದು ತಿಂಗಳ ನಂತರ ಜವಳ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ.

ಮೈನೆರೆಯುವಿಕೆ : ಮೊದಲಬಾರಿ ಋತುಮತಿಯಾಗುವದನ್ನು ಇವರ ಭಾಷೆಯಲ್ಲಿ ಮಿನಾರು ತೀರುತ ಎಂದು ಕರೆಯುತ್ತಾರೆ. ಹುಡುಗಿ ಋತುಮತಿಯಾದಾಗ ಮನೆಯ ಹೊರಗಡೆ ಅವಳಿಗೆ ಪ್ರತ್ಯೇಕ ಚಪ್ಪರ ಹಾಕಿ ೯ ದಿನಗಳ ತನಕ ಸೂತಕ ಆಚರಿಸುತ್ತಾರೆ. ಹತ್ತನೇ ದಿನ ಇವರ ಸಮುದಾಯದ ಪೂಜಾರಿಯನ್ನು ಕರೆಯಿಸಿ ಮನೆಯಲ್ಲಿ ಪೂಜೆ ಮಾಡಿಸುತ್ತಾರೆ. ೯ ದಿನಗಳ ತನಕ ಋತುಮತಿಯು ಪಾತ್ರೆಗಳನ್ನು ಮುಟ್ಟವಂತಿಲ್ಲ ಮತ್ತು ಅಡುಗೆ ಮನೆಗೆ ಕಾಲಿಡುವಂತಿಲ್ಲ.

ವಿವಾಹ: ವಿವಾಹ ಕಾರ್ಯಗಳು ಸಾಮಾನ್ಯವಾಗಿ ಕುಲದೇವತೆಯಾದ ಯಲ್ಲಮ್ಮನ ಸನ್ನಿಧಿಯಲ್ಲಿ ಯಾಜಮಾನನ ಉಸ್ತುವಾರಿಕೆ ಮತ್ತು ಮಾರ್ಗದರ್ಶನದಲ್ಲಿ ನಡೆಯುತ್ತವೆ. ಇವರಲ್ಲಿ ತೆರ' ಕೊಡುವ ಪದ್ಧತಿಯಿದ್ದು, ಅದು ೫೨/- ರೂಪಾಯಿ ಆಗಿರುತ್ತದೆ. ಕೆಲವು ಸಂದರ್ಭದಲ್ಲಿ ಅದನ್ನು ೨೪/- ರೂಪಾಯಿಗೆ ಕಡಿಮೆಗೊಳಿಸಲಾಗುತ್ತದೆ. ತೆರ ಪಾವತಿಸುವುದು ಮಾತ್ರ ಕಡ್ಡಾಯವಾಗಿರುತ್ತದೆ. ಈ ಸಮುದಾಯದಲ್ಲಿ ಮದುವೆಗಳು ಅತ್ಯಂತ ಸರಳವಾಗಿರುತ್ತವೆ. ವಧುದಕ್ಷಿಣೆ ಪದ್ದತಿ ಅಸ್ತಿತ್ವದಲ್ಲಿದೆ. ಸಾಮಾನ್ಯವಾಗಿ ಇವರು ಹೆಣ್ಣುಮಕ್ಕಳು ಮೈನೆರೆಯುವ ಮುನ್ನ ಮದುವೆ ಮಾಡುತ್ತಾರೆ. ವಿಧವಾ ವಿವಾಹಗಳಿಗೆ ಅನುಮತಿಯಿದೆ. ವಿಚ್ಛೇದನೆಗೂ ಅವಕಾಶವಿದೆ.

ಅಂತಿಮ ಸಂಸ್ಕಾರ : ಇವರಲ್ಲಿ ಹೂಳುವ ಮತ್ತು ಸುಡುವ ಎರಡೂ ಪದ್ದತಿಗಳಿವೆ. ಸಹಜ ಸಾವು ಸಂಭವಿಸಿದರೆ ಹೂಳುವುದು ಮತ್ತು ಅಸಹಜ ಸಾವು ಸಂಭವಿಸಿದರೆ ಸುಡುವುದು ಮಾಡುತ್ತಾರೆ. ಸತ್ತವರ ಮನೆಯಲ್ಲಿ ೧೧ ದಿನಗಳ ತನಕ ಸೂತಕವಿರುತ್ತದೆ. ಮೂರನೇ ದಿವಸದ ತಿಥಿಗೆ ಹಂದಿಯನ್ನು ಕೊಯ್ದು ಎಲ್ಲರಿಗೂ ಉಣಬಡಿಸುತ್ತಾರೆ. ಆದರೆ ಈ ಪದ್ದತಿ ಇತ್ತೀಚೆಗೆ ಕಂಡುಬರುತ್ತಿಲ್ಲ. ಈ ಸಮುದಾಯದವರು ಸತ್ತವರಿಗೆ ಸಮಾಧಿ ಕಟ್ಟುವುದಿಲ್ಲ. ಪೈದಿ ಜಾತಿಯವರು ಸತ್ತವರನ್ನು ಹೂಳುತ್ತಾರೆ. ಮೂರನೇ ತಿಥೀಗೆ ಚಿನ್ನ ರೋಜು ಮತ್ತು ಹತ್ತನೇ ದಿನದ ತಿಥಿಗೆ ಪೆದ್ದ ರೋಜು ಎಂದು ಕರೆಯುತ್ತಾರೆ. ವ್ಯಕ್ತಿಯು ಮೃತ ಪಟ್ಟ ಜಾಗದಲ್ಲಿ ಒಂದು ದೊಡ್ಡ ಬಟ್ಟೆಯನ್ನು ಹಾಸಿ ಅದರ ಮೇಲೆ ಅನ್ನ ಹರಡುತ್ತಾರೆ. ಇದಾದ ನಾಲ್ಕು ದಿನಗಳ ನಂತರ ಹಂದಿ ಮಾಂಸದೂಟ ಮಾಡಿ ಎಲ್ಲರಿಗೂ ಬಡಿಸುತ್ತಾರೆ. ಎಣ್ಣೆ ಮತ್ತು ಹರಿಶಿನ ಪುಡಿಯನ್ನು ಕೈಗೆ ಹಚ್ಚಿಕೊಂಡರೆ ಸೂತಕ ಮುಗಿಯುತ್ತದೆ ಎಂದು ನಂಬಿದ್ದಾರೆ.

ಜನಸಂಖ್ಯೆ : ೨೦೧೧ರ ಜನಗಣತಿಯ ಪ್ರಕಾರ ಡೊಮ್, ಡೋಂಬರ, ಪೈಡಿ, ಪಾನೋ ಸಮುದಾಯದ ಒಟ್ಟು ಜನಸಂಖ್ಯೆ ೨೬೩೪೪, ಪುರುಷರು ೧೩೨೬೨ಜನ ಮಹಿಳೆಯರು ೧೩೦೮೨ಜನರು ದಾಖಲಾಗಿದ್ದಾರೆ.

ವಸತಿ : ಡೊಂಬರ ಮನೆಗಳು ಬಹುತೇಕ ಗುಡಿಸಲುಗಳು, ಹಂದಿ ಜೋಗಿಗಳು ಮತ್ತು ಕೊರವರು ವಾಸಿಸುವ ಗುಡಿಸಲಿನಂತೆಯೇ ದೊಂಬರ ಗುಡಿಸಲುಗಳು ಇರುತ್ತವೆ. ಗುಡಿಸಲುಗಳನ್ನು ತಾಳೆ ಮರದ ಗರಿಗಳಿಂದ ನಿರ್ಮಿಸುತ್ತಾರೆ. ಗುಡಿಸಲುಗಳನ್ನು ಊರಿನ ಹೊರಗಡೆ ನಿರ್ಮಿಸಿಕೊಳ್ಳುತ್ತಾರೆ. ಗುಡಿಸಲಿನ ಪರಿಕರಗಳನ್ನು ಊರಿಂದ ಊರಿಗೆ ಅಲೆಯುವ ಸಂದರ್ಭದಲ್ಲಿ, ಕತ್ತೆಗಳ ಮೇಲೆ ಹೇರಿಕೊಂಡು ಹೋಗುತ್ತಾರೆ. ಇತ್ತೇಚೆಗೆ ಕೆಲವರು ಸಣ್ಣಪುಟ್ಟ ಮನೆಗಳನ್ನು ಕಟ್ಟಿಕೊಂಡು ನೆಲೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಡೊಂಬರು ತಮ್ಮ ಪಿತ್ತಾರ್ಜಿತ ಆಸ್ತಿಯನ್ನು ಎಲ್ಲ ಮಕ್ಕಳಲ್ಲಿ ಸಮನಾಗಿ ಹಂಚುತ್ತಾರೆ ಆದರೆ ಹಿರಿಯ ಮಗನಿಗೆ ಹೆಚ್ಚಿನÀ ಪಾಲು ದೊರೆಯುತ್ತದೆ. ಏಕೆಂದರೆ ಕುಟುಂಬ ನಿರ್ವಹಣೆ ಈತನ ಜವಾಬ್ದಾರಿಯಾಗಿದೆ. ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಮನೆಯ ಹಿರಿಯ ಮಗನ ಮೇಲೆ ಅವಲಂಬಿತರಾಗಿದ್ದಾರೆ. ಗಂಡು ಸಂತಾನವಿಲ್ಲದಿದ್ದರೆ ತಾಯಿಯ ಹೆಸರಿಗೆ ಪಿತ್ರಾರ್ಜಿತ ಆಸ್ತಿ ಬರೆಯುತ್ತಾರೆ. ಮನೆಯ ಯಜಮಾನನಿಗೆ ಕೇವಲ ಒಬ್ಬಳು ಹೆಣ್ಣು ಮಗಳಿದ್ದರೆ ಆತನ ಆಸ್ತಿಯನ್ನು ಅವನ ಸಂಬAಧಿಕರಲ್ಲಿ ಹಂಚಲಾಗುತ್ತದೆ.

ಆಹಾರ : ಬಿಡಾರ ಹೂಡಿರುವ ಕಡೆ ಬಯಲು ಪ್ರದೇಶದಲ್ಲಿ ಅಡಿಗೆ ಮಾಡಿಕೊಳ್ಳುತ್ತಾರೆ. ಸಾಮೆ, ರಾಗಿ, ಜೋಳ ಇವರ ಪ್ರಧಾನ ಆಹಾರವಾಗಿದ್ದು, ಪಾರಿವಾಳ ಮತ್ತು ಬಾತುಕೋಳಿ ಮಾಂಸ ತಿನ್ನುತ್ತಾರೆ. ಇವರಿಗೆ ಮೀನು ಅತಿ ಪ್ರಿಯವಾದ ಮಾಂಸಾಹಾರ. ಇವರು ಟೆಂಕು ಎಂಬ ಮಾವಿನ ಹಣ್ಣಿನ ಬೀಜವನ್ನು ಪುಡಿ ಮಾಡಿ ಅದರಿಂದ ತಯಾರಿಸಿದ ಪಾನೀಯ ಸೇವಿಸುತ್ತಾರೆ.

ವೃತ್ತಿ : ಈ ಸಮುದಾಯದವರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ದೊಂಬರಾಟಗಳನ್ನು ಪ್ರದರ್ಶಿಸಿ ಜೀವನ ಸಾಗಿಸುತ್ತಿದ್ದರು. ದೊಂಬರಾಟದ ಕಲೆಯನ್ನು ಕೌಶಲ್ಯದ ರೂಪದಲ್ಲಿ ಪ್ರದರ್ಶಿಸುವ ಇವರು, ತಂತಿ ಮೇಲಿನ ನಡಿಗೆಗೆ ಹೆಸರಾದವರು. ಕೆಲವರು ದೊಂಬರಾಟ ವೃತ್ತಿಯನ್ನು ಬಿಟ್ಟು ಕಾರ್ಮಿಕರಾಗಿ. ಮತ್ತು ಸಣ್ಣ ಪುಟ್ಟ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ಕುರಿ ಮತ್ತು ಹಂದಿಗಳನ್ನು ಸಾಕಾಣಿಕೆ ಮಾಡುತ್ತಾರೆ. ಇವರು ಹಕ್ಕಿ ಹಿಡಿಯುವುದರಲ್ಲಿ ನಿಷ್ಣಾತರು. ಕೆಲವು ಕಡೆ ನೆಲೆ ನಿಂತ ದೊಂಬರು ಬಾಚಣಿಗೆಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಇವರಲ್ಲಿ ಕೆಲವರು ಹಾವು ಮತ್ತು ಹುಚ್ಚು ನಾಯಿ ಕಡಿತಕ್ಕೆ ಔಷಧಿ ತಯಾರಿಸಿ ಕೊಡುತ್ತಿದ್ದರು.(ಥರ್ಸ್ಟನ್) ಧಾರ್ಮಿಕ ಆಚರಣೆಗಳು: ರಾಮ, ಕೃಷ್ಣ, ನರಸಿಂಹಸ್ವಾಮಿ, ಜಗನಾಥಸ್ವಾಮಿ ಮುಂತಾದ ಹಿಂದು ದೇವರುಗಳನ್ನು ಪೂಜಿಸುತ್ತಾರೆ. ಡೊಂಬರು ತುಕಾರಾಣಿ ಎಂಬ ದೇವತೆಯನ್ನೂ ಸಹ ಪೂಜಿಸುತ್ತಾರೆ.

ಹಬ್ಬಗಳು: ರಾಮ ನವಮಿ, ವಿನಾಯಕ ಚೌಥಿ, ದಸರ, ಸಂಕ್ರಾAತಿ ಹಬ್ಬಗಳನ್ನು ಆಚರಿಸುತ್ತಾರೆ. ಹಬ್ಬಗಳಂದು ಹೊಸ ಬಟ್ಟೆ ತೊಡುತ್ತಾರೆ. ಮಹಿಳೆಯರು ನಾಗರಪಂಚಮಿಯAದು ಉಪವಾಸ ಆಚರಿಸುತ್ತಾರೆ. ಇದಲ್ಲದೆ, ನಂದೆದೇಮುಡು, ಜಾಕರದೇಮುಡು, ಚಿಕ್ಕುದುಕಾಯಲ ಪಂಡುಗ ಮತ್ತು ಕರ‍್ರಕಥ ಪಂಡುಗ ಎಂಬ ಸ್ಥಳೀಯ ಜಾತ್ರೆಗಳನ್ನೂ ಆಚರಿಸುತ್ತಾರೆ.

ಶ್ರೇಣೀಕೃತ ಜಾತಿ ವ್ಯವಸ್ಥೆ: ಬ್ರಾಹ್ಮಣ ಪೂಜಾರಿಗಳು ಇವರ ಯಾವುದೇ ಪೂಜೆಗಳಿಗೆ, ಸಮಾರಂsಭÀಳಿಗೆ ಹೋಗುವುದಿಲ್ಲ. ನಾಯಿಂದರು ಸಹ ಇವರ ಕೂದಲು ಕತ್ತರಿಸಲು ನಿರಾಕರಿಸುತ್ತಾರೆ. ಮಡಿವಾಳರು ಇವರ ಕೊಳೆಯಾದ ಬಟ್ಟೆಗಳನ್ನು ತೊಳೆದರೂ ಸಹ ಅವುಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗುವುದಿಲ್ಲ. ಊರ ಬಾವಿ ಮತ್ತು ಊರ ಗುಡಿಯೊಳಗೆ ಇವರಿಗೆ ಪ್ರವೇಶ ನೀಡುವುದಿಲ್ಲ.

ಜಾತಿ ಪಂಚಾಯಿತಿ : ಡೊಂಬರು ತಮ್ಮದೇ ಆದ ಜಾತಿ ಪಂಚಾಯಿತಿ ಹೊಂದಿದೆ. ಪಂಚಾಯಿತಿಯ ಪ್ರಮುಖನನ್ನು ಜಾತಿ ಬೆಹ್ರ ಎಂದು ಕರೆಯುತ್ತಾರೆ. ಇವನಿಗೆ ಕುಲಪೆದ್ದ ಎಂಬ ಮತ್ತೊಂದು ಹೆಸರೂ ಇದೆ. ಇವರು ಯಾವುದೇ ವಿವಾದಗಳಿದ್ದರೂ ಅವುಗಳೆಲ್ಲವನ್ನು ಇವರ ಪಂಚಾಯ್ತಿಯ ಪ್ರಮುಖರೇ ಬಗೆಹರಿಸುತ್ತಾರೆ. ತಪ್ಪೆಸಗಿದವರು ಕುಲ ಜನರಿಗೆ ಹೆಂಡದ ಸಮೇತ ಭೋಜನ ಏರ್ಪಡಿಸಬೇಕೆಂಬ ನಿಯಮಗಳಿವೆ.

ಸಾಮಾಜಿಕ ಸ್ಥಿತಿಗತಿ : ಡೊಂಬರು ಅತಿ ಬಡತನದಲ್ಲಿ ವಾಸಿಸುತ್ತಿರುವುದರಿಂದ ಒಂದು ಹೊತ್ತಿನ ಊಟಕ್ಕೂ ಇವರಿಗೆ ತತ್ವಾರವಿದೆ. ಇವರು ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇವರಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆಯಿದ್ದು, ಇವರ ಮಕ್ಕಳು ಶಾಲೆಗಳಿಗೆ ದಾಖಲಾಗಿಲ್ಲ. ಚಿಕ್ಕ ಪುಟ್ಟ ಕೆಲಸವನ್ನು ಕಲಿತು ಕುಟುಂಬದ ಆದಾಯ ಹೆಚ್ಚಿಸಲು ಪ್ರಯತ್ನ ಪಡುತ್ತಿದ್ದಾರೆ.

ದೊಂಬರ ಸಮುದಾಯದ ಯುವಕ/ಯುವತಿಯರು ತಮ್ಮ ಜೀವನೋಪಾಯಕ್ಕಾಗಿ ಪ್ರರ್ದಶನ ನೀಡುತ್ತಿದ್ದ ದೊಂಬರಾಟ ಕಲೆಯು ಭಿಕ್ಷಾಟನೆ ಕಲೆ ಎಂದು ಪರಿಗಣಿಸಿರುವುದರಿಂದ ಯಾವ ಜಿಮ್ನಾಸ್ಟಿಕ್‌ಗೂ ಕಡಿಮೆ ಇಲ್ಲದಂತಹ ಕಲೆ ಪ್ರದರ್ಶನ ಮಾಡುತ್ತಿದ್ದ ಕಲೆ ಇಂದು ಅಳುವಿನಂಚಿನಲ್ಲಿದೆ. ದೊಂಬರ ಸಮುದಾಯದ ಯುವಕ/ಯುವತಿಯರಿಗೆ ಸರ್ಕಾರ ವಿಶೇಷ ತರಬೇತಿ ನೀಡಿದಲ್ಲಿ ಜಿಮ್ನಾಸ್ಟಿಕ್ ಕಲೆ/ಕ್ರೀಡೆಯಲ್ಲಿ ಇವರಿಗೆ ಅವಕಾಶ ಮಾಡಿಕೊಟ್ಟಲ್ಲಿ ಒಲಂಪಿಕ್ ಕ್ರೀಡೆಯಲ್ಲಿ ಚಾಂಪಿಯನ್ಸ್ಗಳಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ. ಇವರು ಸಮಾಜಿಕವಾಗಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಇವರ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕಿದೆ.

"https://kn.wikipedia.org/w/index.php?title=ಡೊಂಬರು&oldid=1153186" ಇಂದ ಪಡೆಯಲ್ಪಟ್ಟಿದೆ