ಟಿ. ಎಸ್. ಸತ್ಯವತಿ
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. |
ಡಾ. ಸತ್ಯವತಿ, | |
---|---|
ಚಿತ್ರ:Dr. TSS.jpg | |
ಜನನ | ಸತ್ಯವತಿ 30th June 1954 |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಸಂಸ್ಕೃತದಲ್ಲಿ ಎಂ.ಎ, ಎಂ.ಫಿಲ್, ಮತ್ತು ಪಿಎಚ್.ಡಿ. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಶಿಕ್ಷಣ [ಸಾಕ್ಷ್ಯಾಧಾರ ಬೇಕಾಗಿದೆ] |
ವೃತ್ತಿ | ಸಂಗೀತ ವಿದ್ವಾಂಸರು |
ಪೋಷಕ(ರು) | ಟಿ.ಎಸ್.ಶ್ರೀನಿವಾಸಮೂರ್ತಿ, ಮತ್ತು ರಂಗಲಕ್ಷ್ಮಿ |
ಗಾನಕಲಾಶ್ರೀ ಡಾ.ಟಿ.ಎಸ್.ಸತ್ಯವತಿ ಯವರು ಕರ್ನಾಟಕ ಸಂಗೀತ, ಸಂಸ್ಕೃತ ಮತ್ತು ಸಾಂಸ್ಕೃತಿಕ ಪರಿಸರದಲ್ಲಿ ಹೆಸರಾಂತ ವ್ಯಕ್ತಿಯಾಗಿದ್ದಾರೆ.
ಬಾಲ್ಯ ಹಾಗೂ ಪ್ರಾರಂಭಿಕ ಜೀವನ
[ಬದಲಾಯಿಸಿ]ಸತ್ಯವತಿ, ಯವರು ೩೦ ಜೂನ್, ೧೯೫೪ ರಲ್ಲಿ [ಸಾಕ್ಷ್ಯಾಧಾರ ಬೇಕಾಗಿದೆ] ಟಿ.ಎಸ್.ಶ್ರೀನಿವಾಸಮೂರ್ತಿ ಮತ್ತು ರಂಗಲಕ್ಷ್ಮಿ ಅವರ ಪುತ್ರಿಯಾಗಿ[ಸಾಕ್ಷ್ಯಾಧಾರ ಬೇಕಾಗಿದೆ] ಜನಿಸಿದರು. ಅವರು ಸಂಗೀತ ವಿದ್ವಾಂಸರಲ್ಲದೆ ಸಂಸ್ಕೃತ ಸಾಹಿತ್ಯದಲ್ಲಿ ಪ್ರಾವೀಣ್ಯತೆಯನ್ನು ಗಳಿಸಿ ಸಂಸ್ಕೃತದಲ್ಲಿ ಎಂ.ಎ; ಎಂ.ಫಿಲ್, ಮತ್ತು ಪಿಎಚ್.ಡಿ. ಸಾಧನೆಗಳನ್ನು ಮಾಡಿದ್ದಾರೆ. ನಂತರ, ಅವರು, 'ಬೆಂಗಳೂರಿನ ವಿದ್ಯಾವರ್ಧಕ ಸಂಘದ ಮಹಿಳಾ ಪ್ರಥಮ ದರ್ಜೆ ಕಾಲೇಜಿ'ನಲ್ಲಿ ಕಳೆದ ಮೂರು ದಶಕಗಳಿಂದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಕಲಾಶ್ರೀ, ವಿದುಷಿ ವಸಂತ ಮಾಧವಿಯವರಿಂದಲೂ ಮತ್ತು ಪದ್ಮಭೂಷಣ ಆರ್. ಕೆ.ಶ್ರೀಕಂಠನ್ ರವರಿಂದಲೂ ಸಂಗೀತ ಗಾಯನ ಶಿಕ್ಷಣವನ್ನು ಪಡೆದರು. ಮುಂದುವರೆದು, ಸಂಗೀತ ಕಲಾರತ್ನ ಬಿ.ವಿ.ಕೆ ಶಾಸ್ತ್ರಿ ಅವರಿಂದ ಸಂಗೀತ ಶಾಸ್ತ್ರ ಶಿಕ್ಷಣವನ್ನೂ ಮತ್ತು ಸಂಗೀತ ಕಲಾ ರತ್ನ ವಿದ್ವಾನ್ ಬೆಂಗಳೂರು ಕೆ.ವೆಂಕಟರಾಮ್ ಅವರಿಂದ ಮೃದಂಗವಾದನವನ್ನೂ ಅಭ್ಯಾಸ ಮಾಡಿದ್ದಾರೆ.
ವೃತ್ತಿ
[ಬದಲಾಯಿಸಿ]- ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ, *ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಹರಿದಾಸ ಹಾಗೂ ವಚನಗಳ ಧ್ವನಿ ಸುರುಳಿಗಳ ನಿರ್ದೇಶಕಿಯಾಗಿ,[ಸಾಕ್ಷ್ಯಾಧಾರ ಬೇಕಾಗಿದೆ]
- ಇಂದಿರಾಗಾಂಧೀ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ ಸಂಘಟನೆಯ ದಕ್ಷಿಣ ವಲಯದ ಸಂಪನ್ಮೂಲ ವ್ಯಕ್ತಿಯಾಗಿ,[ಸಾಕ್ಷ್ಯಾಧಾರ ಬೇಕಾಗಿದೆ]
- ಬೆಂಗಳೂರು ವಿಶ್ವವಿದ್ಯಾಲಯದ ಬೋರ್ಡ್ ಆಫ್ ಸ್ಟಡೀಸ್ ನ ಸದಸ್ಯೆಯಾಗಿ, [ಸಾಕ್ಷ್ಯಾಧಾರ ಬೇಕಾಗಿದೆ]
- ಬೆಂಗಳೂರು ವಿಶ್ವವಿದ್ಯಾಲಯದ BOE ವಿಭಾಗದ ಅಧ್ಯಕ್ಷೆಯಾಗಿ, [ಸಾಕ್ಷ್ಯಾಧಾರ ಬೇಕಾಗಿದೆ]
- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಶಾಸನ ಸಮಿತಿಯ ಸದಸ್ಯೆಯಾಗಿ, [ಸಾಕ್ಷ್ಯಾಧಾರ ಬೇಕಾಗಿದೆ]
- ದಿಶಾ ವ್ಯಕ್ತಿತ್ವ ವಿಕಸನ ಕೇಂದ್ರದ ಮಾರ್ಗದರ್ಶನ ಸಮಿತಿ ಸದಸ್ಯೆಯಾಗಿ, [ಸಾಕ್ಷ್ಯಾಧಾರ ಬೇಕಾಗಿದೆ]
- ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳ ಸಂಪನ್ಮೂಲ ವ್ಯಕ್ತಿಯಾಗಿ, [ಸಾಕ್ಷ್ಯಾಧಾರ ಬೇಕಾಗಿದೆ]
- ಸಂಗೀತದ ಬಗ್ಗೆ ವಿದ್ವತ್ಪೂರ್ಣ ಪ್ರವಚನಕೊಡುತ್ತಾರೆ.[ಸಾಕ್ಷ್ಯಾಧಾರ ಬೇಕಾಗಿದೆ]
ವಿಶ್ವದಾದ್ಯಂತ ಸಂಗೀತ
[ಬದಲಾಯಿಸಿ]ಸತ್ಯವತಿಯವರು ಕೇವಲ ಎರಡು ವರ್ಷದ ಮಗುವಾಗಿರುವಾಗಲೇ ಮೈಸೂರಿನ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿಯವರ ಸಮ್ಮುಖದಲ್ಲಿ ಗಾಯನಕ್ಕಾಗಿ ಪ್ರಶಂಸೆ ಪಡೆದ ಬಾಲ ಪ್ರತಿಭೆ. ತಮ್ಮ ಹದಿನಾರನೆಯ ವಯಸ್ಸಿನಲ್ಲಿ 'ಕರ್ನಾಟಕ ಗಾನಕಲಾ ಪರಿಷತ್ತಿ'ನಲ್ಲಿ ಅವರು ಮೊದಲ ಸಭಾಕಛೇರಿ ನಡೆಸಿದರು. ದೇಶದ ವಿವಿಧ ವೇದಿಕೆಗಳಲ್ಲಿ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿರುವುದರ ಜೊತೆಗೆ ಅವರು 'ಸಾರ್ಕ್ ಶೃಂಗ ಸಭೆ ೧೯೮೫', 'ಅಕ್ಕ ವಿಶ್ವ ಸಮ್ಮೇಳನ ೨೦೧೦' ಸೇರಿದಂತೆ ವಿವಿಧ ರಾಷ್ಟ್ರಗಳ ಹಲವಾರು ವೇದಿಕೆಗಳಲ್ಲೂ ತಮ್ಮ ಸಂಗೀತ ರಸದೌತಣವನ್ನು ಅವರು ಶ್ರೋತೃಗಳಿಗೆ ನೀಡಿದ್ದಾರೆ.
ವೈವಿಧ್ಯಪೂರ್ಣ ಸಾಧನೆ
[ಬದಲಾಯಿಸಿ]ಗಾಯನ ಕಾರ್ಯಕ್ರಮಗಳಷ್ಟೇ ಅಲ್ಲದೆ ಸತ್ಯವತಿಯವರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಉಪನ್ಯಾಸ ಪ್ರಾತ್ಯಕ್ಷಿಕೆಗಳನ್ನು ನಿರ್ವಹಿಸಿದ್ದಾರೆ. ಮೈಸೂರ್ ಅಸೋಸಿಯೇಷನ್, ಮುಂಬೈನಲ್ಲಿ ಪ್ರಾತ್ಯಕ್ಷಿಕೆಗಳ ಸಹಿತ ಸಂಗೀತ ಕಾರ್ಯಾಗಾರವನ್ನು ನಡೆಸಿ ಹಲವಾರು ಯುವಪ್ರತಿಭೆಗಳನ್ನು ಬೆಳಕಿಗೆ ತಂದಿದ್ದಾರೆ. ಅನೇಕ ವಾಗ್ಗೇಯಕಾರರು, ದಾಸರು, ಕವಿಗಳ ಕುರಿತಾಗಿ ಪ್ರತ್ಯೇಕವಾಗಿ ಅವರು ನಡೆಸಿಕೊಡುತ್ತಿರುವ ವಿಶೇಷ ಕಾರ್ಯಗಾರಗಳು ವಿಶ್ವದಾದ್ಯಂತ ಪ್ರಶಂಸೆ ಪಡೆದಿವೆ. ಅತ್ಯಂತ ಕ್ಲಿಷ್ಟವಾದ “ರಾಗಮಾಲಿಕಾ ತಾಳಾವಧಾನ” ಪಲ್ಲವಿಗಳ ರಚನೆ, ಗಾಯನ ಮತ್ತು ಪ್ರಾತ್ಯಕ್ಷಿಕೆಗಳನ್ನು ಅವರು ನಿರ್ವಹಿಸಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಹಲವಾರು ಕಾರ್ಯಕ್ರಮಗಳ ನಿರ್ದೇಶನ ಮಾಡಿದ್ದಾರೆ. ದಕ್ಷ ಯಜ್ಞ, ಗೀತ ಗೋವಿಂದ, ಅಭಿಜ್ಞಾನ ಶಾಕುಂತಲ ಮುಂತಾದ ನೃತ್ಯ ರೂಪಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸತ್ಯವತಿಯವರ ಅನೇಕ ಧ್ವನಿ ಸುರಳಿಗಳು ಬಿಡುಗಡೆಯಾಗಿವೆ. ಅನೇಕ ವಿದ್ವತ್ ಪೂರ್ಣ ಲೇಖನಗಳನ್ನೂ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಹಲವಾರು ವಿದಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರು ಕಲಾವಿದರಾಗಿ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ಅನೇಕ ವೇದಿಕೆಗಳಿಂದ ಕಾರ್ಯಕ್ರಮಗಳನ್ನು ನೀಡುತ್ತಿರುವ ಹದಿನೈದಕ್ಕೂ ಹೆಚ್ಚು ಮಂದಿ ಅವರ ಶಿಷ್ಯರು ನಾಡಿಗೆ ಹೆಮ್ಮೆ ತಂದಿದ್ದಾರೆ.
ಬೆಂಗಳೂರು ಶಾಖೆಯ ಭಾರತೀಯ ವಿದ್ಯಾಭವನ
[ಬದಲಾಯಿಸಿ]- ಭಾರತಿಯ ವಿದ್ಯಾ ಭವನವು ಸತ್ಯವತಿ ಅವರ “ಚತುಃಷಷ್ಟಿ ಕಲೆ” ಗ್ರಂಥವನ್ನು ಪ್ರಕಟಿಸಿದೆ. [೧]
- 'ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪಠ್ಯ ಪುಸ್ತಕ ರಚನೆ ಮಾಡಿದ್ದಾರೆ'.
- 'ಇಂದಿರಾಗಾಂಧೀ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯಕ್ಕೆ 'ಸಂಸ್ಕೃತ–ಸಂಸ್ಕೃತಿ ಸರಣಿ ಕಾರ್ಯಕ್ರಮ ನಿರ್ವಹಣೆ' ಮಾಡಿದ್ದಾರೆ.
- 'ಇಂಡಿಯಾ ಫೌಂಡೆಶನ್ ಫಾರ್ ದಿ ಆರ್ಟ್ಸ್ ಪ್ರಾಯೋಜನೆ'ಯಲ್ಲಿ ‘ಅನನ್ಯ’ ಸಂಸ್ಥೆಗಾಗಿ ೨೧ ಕಂತುಗಳಲ್ಲಿ “ಹಾಡು ಹಕ್ಕಿ” – ಮಕ್ಕಳಿಗಾಗಿ ಶಾಸ್ತ್ರೀಯ ಸಂಗೀತಾಭಿರುಚಿ ಕಾರ್ಯಕ್ರಮದ ನಿರ್ದೇಶನ ಹಾಗೂ ನಿರ್ವಹಣೆ ಮಾಡಿದ್ದಾರೆ.'
ಜವಾಬ್ದಾರಿ ನಿರ್ವಹಣೆ
[ಬದಲಾಯಿಸಿ]- ಸತ್ಯವತಿಯವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ, [ಸಾಕ್ಷ್ಯಾಧಾರ ಬೇಕಾಗಿದೆ]
- ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಹರಿದಾಸ ಹಾಗೂ ವಚನಗಳ ಧ್ವನಿ ಸುರುಳಿಗಳ ನಿರ್ದೇಶಕಿಯಾಗಿ, [ಸಾಕ್ಷ್ಯಾಧಾರ ಬೇಕಾಗಿದೆ]
- ಇಂದಿರಾಗಾಂಧೀ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ ಸಂಘಟನೆಯ ದಕ್ಷಿಣ ವಲಯದ ಸಂಪನ್ಮೂಲ ವ್ಯಕ್ತಿಯಾಗಿ, [ಸಾಕ್ಷ್ಯಾಧಾರ ಬೇಕಾಗಿದೆ]
- ಬೆಂಗಳೂರು ವಿಶ್ವವಿದ್ಯಾಲಯದ ಬೋರ್ಡ್ ಆಫ್ ಸ್ಟಡೀಸ್ ನ ಸದಸ್ಯೆಯಾಗಿ, [ಸಾಕ್ಷ್ಯಾಧಾರ ಬೇಕಾಗಿದೆ]
- ಬೆಂಗಳೂರು ವಿಶ್ವವಿದ್ಯಾಲಯದ BOE ವಿಭಾಗದ ಅಧ್ಯಕ್ಷೆಯಾಗಿ,[ಸಾಕ್ಷ್ಯಾಧಾರ ಬೇಕಾಗಿದೆ]
- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಶಾಸನ ಸಮಿತಿಯ ಸದಸ್ಯೆಯಾಗಿ,[ಸಾಕ್ಷ್ಯಾಧಾರ ಬೇಕಾಗಿದೆ]
- 'ದಿಶಾ ವ್ಯಕ್ತಿತ್ವ ವಿಕಸನ ಕೇಂದ್ರದ ಮಾರ್ಗದರ್ಶನ ಸಮಿತಿ ಸದಸ್ಯೆ'ಯಾಗಿ, [ಸಾಕ್ಷ್ಯಾಧಾರ ಬೇಕಾಗಿದೆ]
- ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳ ಸಂಪನ್ಮೂಲ ವ್ಯಕ್ತಿಯಾಗಿ - ಹೀಗೆ ವಿವಿಧ ಜವಾಬ್ಧಾರಿಗಳನ್ನು ಯಶಸ್ವಿಯಾಗಿ ಅವರು ನಿರ್ವಹಿಸುತ್ತಾ ಬಂದಿದ್ದಾರೆ.
- ಸಂದರ್ಶನ.[ಸಾಕ್ಷ್ಯಾಧಾರ ಬೇಕಾಗಿದೆ]
ಪ್ರಶಸ್ತಿ ಗೌರವಗಳು
[ಬದಲಾಯಿಸಿ]ಈ ಮಹಾನ್ ಸಂಗೀತ, ಸಂಸ್ಕೃತ ಮತ್ತು ಸಂಸ್ಕೃತಿ ಸಾಧಕರಾದ ಡಾ.ಟಿ.ಎಸ್.ಸತ್ಯವತಿ ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು :
- ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಿಂದ ಮೂರು ಬಾರಿ ಅತ್ಯುತ್ತಮ ಯುವ ಗಾಯಕಿ ಪ್ರಶಸ್ತಿ [ಸಾಕ್ಷ್ಯಾಧಾರ ಬೇಕಾಗಿದೆ]
- ಕರ್ನಾಟಕ ಗಾನಕಲಾ ಪರಿಷತ್ತಿನ ‘ಗಾನಕಲಾಶ್ರೀ’ ಪ್ರಶಸ್ತಿ, [ಸಾಕ್ಷ್ಯಾಧಾರ ಬೇಕಾಗಿದೆ]
- ಅನನ್ಯ ಪುರಸ್ಕಾರ;[ಸಾಕ್ಷ್ಯಾಧಾರ ಬೇಕಾಗಿದೆ]
- ಗಾನವಿಶಾರದೆ, [ಸಾಕ್ಷ್ಯಾಧಾರ ಬೇಕಾಗಿದೆ]
- ನಾದಜ್ಯೋತಿ,[ಸಾಕ್ಷ್ಯಾಧಾರ ಬೇಕಾಗಿದೆ]
- ಗಾನಚತುರ್ದಂಡೀ,[ಸಾಕ್ಷ್ಯಾಧಾರ ಬೇಕಾಗಿದೆ]
- ಸಂಗೀತ ಸರಸ್ವತಿ [ಸಾಕ್ಷ್ಯಾಧಾರ ಬೇಕಾಗಿದೆ]
- ಕರ್ನಾಟಕ ಸಂಗೀತ ಕಲಾರತ್ನ ಮುಂತಾದ ಅನೇಕ ಬಿರುದುಗಳು; [ಸಾಕ್ಷ್ಯಾಧಾರ ಬೇಕಾಗಿದೆ]
- ಇಸ್ಕಾನ್ ಮತ್ತು ಆವಣಿ ಶಂಕರ ಮಠದ ಆಸ್ಥಾನ ವಿದುಷಿ ಗೌರವ - ಮುಂತಾದ ಹಲವಾರು ಗೌರವಗಳು ಅವರಿಗೆ ಸಂದಿವೆ.[೨]
ವರ್ಷ ೨೦೧೫ ರಲ್ಲಿ
[ಬದಲಾಯಿಸಿ]ಡಾ.ಟಿ.ಎಸ್.ಸತ್ಯವತಿ,ಯವರು, ಮುಂಬಯಿ ನಗರದ ಮೈಸೂರ್ ಅಸೋಸಿಯೇಷನ್ ಸಭಾಂಗಣದಲ್ಲಿ ಏಪ್ರಿಲ್,೩, ೨೦೧೫ ರಂದು, ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. [೩]
ವರ್ಷ ೨೦೨೩ ರಲ್ಲಿ
[ಬದಲಾಯಿಸಿ]ಮೈಸೂರು ಅಸೋಸಿಯೇಷನ್ ನ ಬಂಗಾರದ ಹಬ್ಬದ ದತ್ತಿ ಉಪನ್ಯಾಸದ ಆಹ್ವಾನಿತ ಉಪನ್ಯಾಸಕಿಯಾಗಿ ಭಾರತೀಯ ಸಂಗೀತದ ಬೇರು, ಬೆಳವಣಿಗೆ ಮತ್ತು ಮೂಲಗುರಿಯ ಬಗ್ಗೆ ವಿಸ್ತೃತವಾಗಿ ಮಾತಾಡಿದರು. (೪, ಫೆಬ್ರವರಿ, ಮತ್ತು ೫ ಫೆಬ್ರವರಿ, ೨೦೨೩ ರ ದಿನಗಳಂದು) "ಔಚಿತ್ಯವು ಸಂಪೂರ್ಣ ಸೌಂದರ್ಯಕ್ಕೆ ಹೇತುವಾಗುತ್ತದೆ"-ಡಾ.ಟಿ.ಎಸ್.ಸತ್ಯವತಿ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಮತ್ತು ಮೈಸೂರು ಅಸೋಸಿಯೇಷನ್ ಮುಂಬಯಿ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರು ಅಸೋಸಿಯೇಷನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ-೨೦೨೩,ಕರ್ನಾಟಕ ಮಲ್ಲ, ೧೧, ಫೆಬ್ರವರಿ, ೨೦೨೩
ಉಲ್ಲೇಖಗಳು
[ಬದಲಾಯಿಸಿ]- ↑ "'Bangalore International Centre,'Lecture demonstration on 'The niceties and nuances of Karnatak Classical Music' by Dr.T.S.Satyavathi, Prof.in Sanskrit. Mrs.Geetha rao presided over the event, 22nd, Sept, 2007". Archived from the original on 2016-03-07. Retrieved 2015-01-04.
- ↑ The Hindu,Tech talk December 1, 2013
- ↑ 'ಕರ್ನಾಟಕ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದ ೧೦ ನೇ ಸಾಹಿತ್ಯ ಸಮಾವೇಶದ ಅಂಗವಾಗಿ ಡಾ.ಸತ್ಯವತಿಯವರ ಶಾಸ್ತ್ರೀಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು'
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಸಂದರ್ಶನ: [https://venetiaansell.wordpress.com/2009/05/13/music-and-kavya-an-interview-with-dr-ts-sathyavathi/
- Home » News » Vocal concert by T.S. Sathyavathi at Ganabharathi on Oct.26
- Indira Gandhi National Centre for the Arts, Southern Regional Centre, Bengaluru. "Workshop on Mysore Maharaja Compositions by Dr TS Sathyavathi - 1st Day"