ಎನ್.ವಿ. ಅಡ್ಯಂತಾಯ

ವಿಕಿಪೀಡಿಯ ಇಂದ
(ಡಾ. ಎನ್.ವಿ. ಅಡ್ಯಂತಾಯ ಇಂದ ಪುನರ್ನಿರ್ದೇಶಿತ)
Jump to navigation Jump to search

ಮುಂಬಯಿನ 'ಮಲಬಾರ್ ಹಿಲ್ಸ್' ನ 'ಮೌಂಟ್ ಪ್ಲೆಸೆಂಟ್ ರೋಡ್' ನ,'ಎವರೆಸ್ಟ್ ಅಪಾರ್ಟ್ಮೆಂಟ್ ನಿವಾಸಿ',ಡಾ.ಎನ್.ವಿಶ್ವನಾಥ ಅಡ್ಯಂತಾಯ, ಬಂಟ್ ಸಮಾಜದ ಹಿರಿಯ ಮುತ್ಸದ್ಧಿ,'ಸಮಾಜ ಸೇವಕ','ಮುಂಬಯಿ ಬಂಟ್ ಸಂಘದ ಸಂಸ್ಥಾಪಕ'ರಲ್ಲೊಬ್ಬರು.

ಜನನ ಮತ್ತು ವೃತ್ತಿಜೀವನ[ಬದಲಾಯಿಸಿ]

'ಮಂಡ್ಕೂರ್' ನಡಿಗುತ್ತು ಸಿದ್ದು ಶೆಟ್ಟಿ ಮತ್ತು ನಿಟ್ಟೆ ಗುತ್ತು ರುಕ್ಮಿಣಿ ಶೆಟ್ಟಿ ದಂಪತಿಗಳ ಪುತ್ರನಾಗಿ ಸನ್. ೧೯೧೧ ರ ಜೂನ್ ೨೦ ರಂದು ಜನಿಸಿದ ಅಡ್ಯಂತಾಯರು,ಮುಂಬಯಿನ 'ಗಾಂವ್ ದೇವಿ'ಯಲ್ಲಿ ತಮ್ಮಸ್ವಂತ ಚಿಕಿತ್ಸಾಲಯವನ್ನಿಟ್ಟುಕೊಂಡು ವೈದ್ಯವೃತ್ತಿಯಲ್ಲಿ ತುಳು-ಕನ್ನಡಿಗರ ಅಪಾರ ಸೇವೆಮಾಡುತ್ತಿದ್ದರು. 'ಬಂಟ್ ಸಮಾಜದ ಹಿರಿಯ'ರಾಗಿದ್ದ ಡಾ.ಏನ್.ವಿ.ಅಡ್ಯಂತಾಯರು, ಸಂಘಟನಾತ್ಮಕವಾಗಿ 'ಮುಂಬಯಿಬಂಟರ ಸಂಘ'ವನ್ನು ಸ್ಥಾಪಿಸುವಲ್ಲಿ ಮಂಚೂಣಿಯಲ್ಲಿದ್ದರು. ಸನ್.೨೦೧೧ ರಲ್ಲಿ ತಮ್ಮ'ಶತಮಾನೋತ್ಸವ'ವನ್ನು ಅವರು ಆಚರಿಸಿಕೊಂಡಿದ್ದರು.ಅವರ ಪತ್ನಿ,'ಹೀರಾ ಅಡ್ಯಂತಾಯ' ನಿಧನರಾದರು.'ಡಾ.ವಿಶ್ವನಾಥ ಅಡ್ಯಂತಾಯ'ರು, ಪ್ರತಿದಿನ ಬೆಳಿಗ್ಯೆ ಮತ್ತು ಸಾಯಂಕಾಲ,ನಿರಂತರವಾಗಿ ನಡಿಗೆಯನ್ನು ಮುಂದುವರೆಸಿದ್ದರು.

ಡಾ.ಎನ್.ವಿ.ಅಡ್ಯಂತಾಯ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ[ಬದಲಾಯಿಸಿ]

ದಕ್ಷಿಣ ಕನ್ನಡದ 'ಹೇರಳಕಟ್ಟೆ'ಯಲ್ಲಿರುವ 'ನಿಟ್ಟೆ ವಿಶ್ವವಿದ್ಯಾಲಯದ ಆವರಣ'ದಲ್ಲಿ ಸುಮಾರು ೭೫ ವರ್ಷಗಳಿಂದ ವೈದ್ಯರಾಗಿ ಸೇವೆಸಲ್ಲಿಸುತ್ತಿರುವ ಮುಂಬಯಿನ ಶತಾಯುಷಿ ಡಾ.ಏನ್.ವಿಶ್ವನಾಥ್ ಅಡ್ಯಂತಾಯರು, ತಮ್ಮ ಜನ್ಮದಿನ, ಜೂನ್,೨೦ ರಂದು,'ಡಾ.ಏನ್.ವಿ.ಅಡ್ಯಂತಾಯ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಕೆಂದ್ರದ ಶಿಲಾನ್ಯಾಸ'ನೆರೆವೇರಿಸಿದರು. ತಮ್ಮ ಇಳಿವಯಸ್ಸಿನಲ್ಲೂ ಅತ್ಯಂತ ಶ್ರದ್ಧೆ ಮತ್ತು ಮುಗುಳ್ನಗೆಯಿಂದ ಅವರು ತಮ್ಮ ರೋಗಿಗಳನ್ನು ವಿಚಾರಿಸಿಕೊಳ್ಳುತ್ತಿದರು. ನಿಟ್ಟೆಯ ಈ ರುಗ್ಣಾಲಯ, ರಾಷ್ಟ್ರದ ಅತ್ಯುತ್ತಮ ಮಾನವ ಸಂಪನ್ಮೂಲಗಳನ್ನು ಹೊಂದಿದ್ದು, ಅತ್ಯುತ್ತಮ ಶಿಕ್ಷಣವನ್ನು ಕೊಡುವ ನೆಲೆಯಲ್ಲಿ ತರಪೇತಿಗೊಳ್ಳಬೇಕೆಂಬುದೇ ಅವರ ಆಶೆಯಾಗಿತ್ತು. ಹೇರಳಕಟ್ಟೆಯ ಜಸ್ಟೀಸ್ ಕೆ.ಎಸ್.ಹೆಗ್ಡೆ, ಮೆಡಿಕಲ್ ಕಾಲೇಜು ನಿಟ್ಟೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಡಾ. ಏನ್.ಆರ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಶಿಲಾನ್ಯಾಸ ಸಮಾರಂಭ ನಡೆಯಿತು. ಉಪಕುಲಪತಿ ಡಾ.ಏನ್.ಶಾಂತಾರಾಮ ಶೆಟ್ಟಿಯವರ, ಸ್ವಾಗತ ಭಾಷಣದ ನಂತರ, ಟ್ರಸ್ಟಿ ವಿಶಾಲ್ ಹೆಗ್ಡೆ, ನಿಟ್ಟೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಡೀನ್, ಡಾ.ಅರುಣಾಚಲಂ ಕುಮಾರ್, ಡಾ.ಅಜಿತ್ ಅಡ್ಯಂತಾಯ, ಬಿ.ಆರ್.ಹೆಗ್ಡೆ, ಗುರುಪ್ರಸಾದ್ ಅಡ್ಯಂತಾಯ,ಸಭೆಯಲ್ಲಿ ಹಾಜರಿದ್ದರು.

ಪರಿವಾರ[ಬದಲಾಯಿಸಿ]

ಡಾ.ಅಡ್ಯಂತಾಯರಿಗೆ ೩ ಜನ ಗಂಡುಮಕ್ಕಳು.

  • ಅಜಿತ್,(ಅಮೇರಿಕ)
  • ಡಾ.ರಂಜಿತ್,(ಗಾಂಮ್ ದೇವಿ)
  • ಗುರುಪ್ರಸಾದ
  • ದೀಪಾ ಭಂಡಾರಿ, ಒಬ್ಬ ಮಗಳು.

ನಿಧನ[ಬದಲಾಯಿಸಿ]

'ಡಾ.ವಿಶ್ವನಾಥ ಅಡ್ಯಂತಾಯ'ರು ಸನ್.೨೦೧೩ ರ,ಎಪ್ರಿಲ್ ೫ ರಂದು ತಮ್ಮ ೧೦೧ ರ ವಯಸ್ಸಿನಲ್ಲಿ ನಿಧನ ಹೊಂದಿದರು. ಅವರ ಅಂತ್ಯಕ್ರಿಯೆ ೨೦೧೩ ರ ಎಪ್ರಿಲ್, ೮, ಸೋಮವಾರದಂದು ಮಧ್ಯಾನ್ಹ ೧೨ ಗಂಟೆಗೆ,'ಮೆರೀನ್ ಲೈನ್ಸ್ ನ ಚಂದನ್ ವಾಡಿ ವಿದ್ಯುತ್ ಚಿತಾಗಾರ'ದಲ್ಲಿ ನಡೆಯಲಿದೆ.