ಎಚ್. ಎಂ. ಮರುಳಸಿದ್ದಯ್ಯ

ವಿಕಿಪೀಡಿಯ ಇಂದ
(ಡಾ. ಎಚ್. ಎಂ. ಮರುಳಸಿದ್ದಯ್ಯ ಇಂದ ಪುನರ್ನಿರ್ದೇಶಿತ)
Jump to navigation Jump to search

ಡಾ. ಎಚ್. ಎಂ. ಮರುಳಸಿದ್ದಯ್ಯ :- (ಜನನ: 29 ಜುಲೈ 1931) ನಿವೃತ್ತ ಪ್ರಾಧ್ಯಾಪಕ, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ.

ಪರಿಚಯ :[ಬದಲಾಯಿಸಿ]

ಅಧ್ಯಾಪಕ, ಸಂಶೋಧನ, ಮಾರ್ಗದರ್ಶನ, ಲೇಖಕ, ಪ್ರಯೋಗಶೀಲ, ಹಿರಿಯ ಸಮಾಜಕರ್ತರಾದ ಮರುಳಸಿದ್ದಯ್ಯನವರು ಕನ್ನಡದಲ್ಲಿ ಸಮಾಜಕಾರ್ಯ ಸಾಹಿತ್ಯ ಸೃಜಿಸುವಲ್ಲಿ ಎಕೈಕರಾಗಿದ್ದಾರೆ. ಕಳೆದ ಆರು ದಶಕಗಳಿಂದ ಸಮಾಜಕಾರ್ಯ, ಶಿಕ್ಷಣ, ಕ್ಷೇತ್ರಕಾರ್ಯ, ಸಂಘಟನೆ, ಸಾಹಿತ್ಯ ರಚನೆ, ಇತ್ಯಾದಿಗಳಲ್ಲಿ ತೊಡಗಿಕೊಂಡ ಮಹಾನ್ ಜೀವಿ, ನಿರ್ಮಲ ಕರ್ನಾಟಕ, ಪಂಚಮುಖಿ ಅಭ್ಯುದಯ ಮಾರ್ಗ, ಸ್ವಸ್ತಿ ಗ್ರಾಮ ಯೋಜನೆ, ಹಲವು ಕಾರ್ಯ ಯೋಜನೆಗಳ ಮೂಲಕ ಎಚ್. ಎಮ್. ಎಮ್. ಸಮಾಜ ಕಾರ್ಯಕ್ಕೆ ಹೊಸದೊಂದು ಆಯಾಮವನ್ನು ಒದಗಿಸಿದ್ದಾರೆ.

ಶಿಕ್ಷಣ :[ಬದಲಾಯಿಸಿ]

ಡಾ. ಎಚ್.ಎಂ. ಮರುಳಸಿದ್ದಯ್ಯ ಅವರು ಸಮಾಜಶಾಸ್ತ್ರ (ಮೈಸೂರು ವಿ ವಿ) ಮತ್ತು ಸಮಾಜಕಾರ್ಯ (ದಿಲ್ಲಿ ವಿಶ್ವವಿದ್ಯಾಲಯ) ಎಮ್. ಎ. ಪಡೆದಿರುವದಲ್ಲದೆ ಸಮಾಜಕರ್ಯದಲ್ಲಿ ವಾರನಾಶಿಯ ಮಹಾತ್ಮ ಗಾಂಧೀ ಕಾಶಿ ವಿದ್ಯಾ ಪೀಠ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದ್ದಾರೆ.

ವೃತ್ತಿ ಜೀವನ :[ಬದಲಾಯಿಸಿ]

ಡಾ. ಎಚ್.ಎಂ. ಮರುಳಸಿದ್ದಯ್ಯ ಅವರು ಸಮಾಜಕಾರ್ಯ, ಸಮಾಜಶಾಸ್ತ್ರ ಮತ್ತು ಮಾನವ ಶಾಸ್ತ್ರ ಇವುಗಳ ಅಧ್ಯಾಪನವನ್ನು ಮದ್ರಾಸ್, ಕರ್ನಾಟಕ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾದಿದ್ದಾರೆ. ಮಾಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ತಮ್ಮ ಭೋದನೆ ವೃತ್ತಿಯಿಂದ 1994ರಲ್ಲಿ ನಿವೃತ್ತರಾದರು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವಿಶ್ವವಿದ್ಯಾಲಯಗಳ ಆಹಾನ್ವಿತ ಉಪನ್ಯಾಸಕರಾಗಿ ಅಂತಾರಾಷ್ಟ್ರೀಯ ಉಪನ್ಯಾಸಕರಾಗಿ, ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಭಂದನ ಮಂಡನಕಾರರಾಗಿ ಭಾಗವಹಿಸಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡ ಬಾಷೆಗಳಲ್ಲಿ ಸುಮಾರು ನಲವತ್ತು ಕೃತಿಗಳನ್ನು ಹೊರತಂದಿದ್ದಾರೆ.

ಕೃತಿಗಳು :[ಬದಲಾಯಿಸಿ]

  • ಪಾಶ್ಚಾತ್ಯ ಚಿಂತಕರ ದೃಷ್ಟಿಯಲ್ಲಿ ಭಾರತೀಯ ಸಮಾಜ
  • ಧಿಗ್ಭ್ರಾಂತ ಸಮಾಜಕ್ಕೆ ಬೆಳಕಿನ ದಾರಿ
  • ಸಮಾಜ ಶಾಸ್ತ್ರ: ಕೆಲವು ಒಳನೋಟಗಳು
  • ಬಿದ್ದುದು ಗರಿಯಲ್ಲ, ಹಕ್ಕಿಯೇ
  • ಪಂಚಮುಖಿ ಅಭ್ಯುದಯ ಮಾರ್ಗ
  • ನಿರ್ಮಲ ಕರ್ನಾಟಕ
  • ವಚನಗಳಲ್ಲಿ ಅಂತರಂಗ ಬಹಿರಂಗ ಶುದ್ಧಿ
  • ಕಪ್ಪು ಮೋಡದಲ್ಲೊಂದು ಬೆಳ್ಳಿರೇಖೆ

ಪ್ರಶಸ್ತಿ/ಪುರಸ್ಕಾರಗಳು :[ಬದಲಾಯಿಸಿ]

References[ಬದಲಾಯಿಸಿ]

http://www.hindu.com/2009/07/20/stories/2009072059440400.htm