ಆರ್. ಎಲ್. ಎನ್. ಅಯ್ಯಂಗಾರ್
ಡಾ.ಆರ್.ಎಲ್.ಎನ್.ಅಯ್ಯಂಗಾರ್ (ಜನವರಿ, ೧೯೫೭-ಸೆಪ್ಟೆಂಬರ್,೧೯೬೬) ಎಂದು ಮುಂಬಯಿನ ತಮ್ಮಗೆಳೆಯರಿಗೆ ಮತ್ತು ತಮ್ಮ ಜೊತೆ ದುಡಿಯುತ್ತಿದ್ದ ಸಹ ಕರ್ಮಿಗಳಿಗೆ, ಹೆಸರಾಗಿದ್ದ ಅವರ ಮನೆಯ ಹೆಸರು,ರಾಮಸ್ವಾಮಿ ಲಕ್ಷ್ಮೀನರಸಿಂಹ ಅಯ್ಯಂಗಾರ್ ಎಂದು. ಅವರು ಮೂಲಭೂತ ಹತ್ತಿ ಸಂಶೋಧನೆಯ ವಲಯದಲ್ಲಿ ದೇಶವಿದೇಶಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಟೆಕ್ನೊಲಾಜಿಕಲ್ ಲ್ಯಾಬೋರೇಟೊರಿಯಲ್ಲಿ ಕೆಲಸಮಾಡುತ್ತಿದ್ದ ಹಿರಿಯ ವಿಜ್ಞಾನಿ, ಹರಿರಾವ್ ನವಕಲ್ ನಿವೃತ್ತರಾದ ನಂತರ ಜನವರಿ ೧೯೫೭ ರಲ್ಲಿ ನಿರ್ದೇಶಕರಾಗಿ ನೇಮಿಸಲ್ಪಟ್ಟರು.ಆರ್.ಎಲ್.ಎನ್.ಅಯ್ಯಂಗಾರ್ ಅವರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
- ಮೈಸೂರ್ ಅಸೋಸಿಯೇಷನ್, ಮಾಟುಂಗ, ಮುಂಬಯಿ.
- ನ್ಯಾಶನಲ್ ಕನ್ನಡ ಎಜುಕೇಶನ್ ಸೊಸೈಟಿ, ವಡಾಲ, ಮುಂಬಯಿ
- ಮೈಸೂರ್ ಹೌಸಿಂಗ್ ಕಾಲೋನಿ, ಚೆಂಬೂರ್, ಮುಂಬಯಿ
- ಟೆಕ್ಸ್ ಟೈಲ್ ಅಸೋಸಿಯೇಷನ್,ಮುಂಬಯಿ, ದಾದರ್, ಮುಂಬಯಿ
- ಕನ್ನಡ ಸಂಘ, ಮಾಟುಂಗ, ಮುಂಬಯಿ ಇತ್ಯಾದಿ.
ವಿದ್ಯಾಭ್ಯಾಸ, ವೃತ್ತಿಜೀವನ
[ಬದಲಾಯಿಸಿ]ಅಯ್ಯಂಗಾರರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್.ಸಿ.ಪದವಿಯನ್ನು ಗಳಿಸಿದ್ದರು. ಅವರ ವಿದ್ಯಾಭ್ಯಾಸ ಪ್ರತಿಹಂತದಲ್ಲಿಯೂ ವಿದ್ಯಾರ್ಥಿ ವೇತನ ಮತ್ತು ಹಲವಾರು ಪಾರಿತೋಷಕಗಳನ್ನು ಗಳಿಸಿದರು. ನಂತರ ಮುಂಬಯಿ ನಗರಕ್ಕೆ ಬಂದು ೧ ಏಪ್ರಿಲ್ ೧೯೨೭ ರಲ್ಲಿ ರಿಸರ್ಚ್ ಸ್ಕಾಲರ್ ಆಗಿ, ಟೆಕ್ನೋಲಾಜಿಕಲ್ ಲ್ಯಾಬೋರೇಟೊರಿಗೆ ಸೇರಿದರು. ೧೯೨೪ ರಲ್ಲಿ ಸ್ಥಾಪನೆಯಾದ ಟೆಕ್ನೊಲಾಜಿಕಲ್ ಲ್ಯಾಬೋರೇಟೋರಿಯಲ್ಲಿ ಇಂಗ್ಲೆಂಡಿನಿಂದ ಬಂದ ಆರ್ಥರ್ ಜೇಮ್ಸ್ ಟರ್ನರ್ ಎಂಬ ವಿಜ್ಞಾನಿ ನಿರ್ದೇಶಕರಾಗಿದ್ದರು. ನಿರ್ದೇಶಕ ಟರ್ನರ್ ಅವರು ಅಯ್ಯಂಗಾರ್ ರವರ ಕೆಲಸವನ್ನು ಮೆಚ್ಚಿ, ಕೊಯಂಬತ್ತೋರ್ ಶಾಖೆಗೆ ಹತ್ತಿ ಬೆಳೆಯ ಹೆಚ್ಚಿನ ಶೋಧ ಕಾರ್ಯಕ್ಕಾಗಿ ಶಿಫಾರಿಸ್ ಮಾಡಿದ್ದರಿಂದ ಸೆಂಟ್ರೆಲ್ ಕಾಟನ್ ಕಮಿಟಿಯ ಸೆಕ್ರೆಟರಿಯವರು ಮದ್ರಾಸ್ ರಾಜ್ಯದ ಕೊಯಂಬತ್ತೋರಿಗೆ ಅವರನ್ನು ಕಳುಹಿಸಿಕೊಟ್ಟರು. ಅಯ್ಯಂಗಾರ್ ಅವರು ಬಹಳ ಶ್ರದ್ಧೆಯಿಂದ ತಮಗೆ ವಹಿಸಿದ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದರು. ಅವರ ಶೋಧಕಾರ್ಯ ಆಗಿನ ಮದ್ರಾಸ್ ಸರಕಾರಕ್ಕೆ ಬಹಳ ಮೆಚ್ಚುಗೆಯಾಗಿ,ಅಯ್ಯಂಗಾರ್ ರವರಿಗೆ ಡಿ.ಎಸ್ಸಿ. ಪದವಿಯನ್ನು ಪ್ರದಾನಮಾಡಿದರು. ೧೯೪೧ ರಲ್ಲಿ ಮುಂಬಯಿನ ಪ್ರಮುಖ ಕಚೇರಿಗೆ ವಾಪಸ್ಸಾದರು.
- ೧೯೪೧ ರಲ್ಲಿ ಜೂನಿಯರ್ ರಿಸರ್ಚ್ ಆಫಿಸರ್
- ೧೯೫೩ ರಲ್ಲಿ ಸೀನಿಯರ್ ರಿಸರ್ಚ್ ಆಫಿಸರ್
- ೧೯೫೭ ರಲ್ಲಿ ನಿರ್ದೇಶಕರಾಗಿ [೧]
ಆರ್.ಎಲ್.ಎನ್.ಅಯ್ಯಂಗಾರರು, [೧] 'ಬೊಂಬಾಯಿನ ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ'ಯಲ್ಲಿ 'ಸಂಶೋಧಕ'ರಾಗಿ ಸೇರಿದ್ದರು. (ಜನವರಿ, ೧೯೫೭-ಸೆಪ್ಟೆಂಬರ್, ೧೯೬೬) ವರೆಗೆ'ಟೆಕ್ನೊಲಾಜಿಕ ಲ್ಯಾಬೊರೇಟೊರಿ' ಯ, ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಹತ್ತಿಯ ಆಂತರಿಕ ರಚನೆ ಹಾಗೂ ಅದರ ಪರಿಣಾಮ ದಾರ ಬಟ್ಟೆಗಳ ಮೇಲೆ ಹೇಗೆ ಅವಲಂಭಿಸಿದೆ ಎನ್ನುವುದನ್ನು ಸಮಕ್ಷಮವಾಗಿ ಪ್ರತಿಪಾದಿಸಿದರು. ಜಿನ್ನಿಂಗ್ ಕಾರ್ಯದಲ್ಲಿ ಯಂತ್ರಗಳಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿಸಿ ಕೊಟ್ಟು ಜಿನ್ನಿಂಗ್ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳಬಹುದಾದ ಪದ್ಧತಿಗಳನ್ನು ಪ್ರಚುರಪಡಿಸಿದರು. ಹತ್ತಿಯ ತಂತುಗಳು ಅವುಗಳ ಬೀಜವನ್ನು ಕಚ್ಚಿ ಹಿಡಿದಿರುತ್ತವೆ. ನಾಲ್ಕೂ ಹತ್ತಿಯ ಪ್ರಜಾತಿಗಳ ತಂತುಗಳೂ('ಬಾರ್ಬಡೆನ್ಸಿ','ಹರ್ಸುಟಮ್','ಹರ್ಬೇಸಿಯಮ್'ಮತ್ತು 'ಅರ್ಬೋರಿಯಮ್' ತಳಿಗಳೂ) ತಮ್ಮದೇ ಆದ ಶಕ್ತಿಯನ್ನು ಹೊಂದಿರುವುದರಿಂದ ಬೀಜದಿಂದ ಹತ್ತಿಯನ್ನು ಬೇರ್ಪಡಿಸುವಾಗ ಈ ಗುಣಾವಗುಣಗಳು ಹೆಚ್ಚು ಕೆಲಸಕ್ಕೆ ಬರುತ್ತವೆ. 'ಆರ್.ಎಲ್.ಎನ್'ರವರ ಈ ಕೊಡುಗೆ ಮುಂದೆ ನಿರ್ಮಿಸಲಾದ ಹಲವಾರು ಹೊಸ ಮಾದರಿಯ 'ಜಿನ್ನಿಂಗ್ ಮೆಶಿನ್' ಗಳ ಕಾರ್ಯ ವಿಧಾನಗಳನ್ನು ನಿಯಂತ್ರಿಸುವಲ್ಲಿ ಸಹಾಯವಾಯಿತು. 'ಜಿನ್ನಿಂಗ್' ಪ್ರಕ್ರಿಯೆಯ ಬಗ್ಗೆ 'ವಿಶ್ವದ ಹತ್ತಿ ಬೆಳೆ ತಂತ್ರಜ್ಞರು', ಹಾಗೂ 'ಹತ್ತಿ ವಿಜ್ಞಾನಿಗಳು' ಆರ್.ಎಲ್.ಎನ್. ಅಯ್ಯಂಗಾರ್ ರವರ ಸಂಶೋಧನೆಯ ಕಾಣಿಕೆಗಳನ್ನು ನೆನೆಯುತ್ತಾರೆ.[೨]ಉಲ್ಲೇಖಗಳು
ನಿರ್ದೇಶಕರುಗಳು
[ಬದಲಾಯಿಸಿ]ಇಂಡಿಯನ್ ಸೆಂಟ್ರೆಲ್ ಕಾಟನ್ ಕಮಿಟಿಯ ಆಡಿಯಲ್ಲಿ ಅದರ ಸೆಕ್ರೆಟರಿಗಳಿಂದ ನೇಮಿಸಲ್ಪಟ್ಟ ನಿರ್ದೇಶಕರು
[ಬದಲಾಯಿಸಿ]- ಎ.ಜೆ.ಟರ್ನರ್ (ಜನವರಿ ೧೯೨೪-ಡಿಸೆಂಬರ್ ೧೯೩೦)
- ಡಾ.ನಾಸಿರ್ ಅಹ್ಮೆದ್ (ಡಿಸೆಂಬರ್ ೧೯೩೦-ಅಕ್ಟೋಬರ್ ೧೯೪೫)
- ಡಾ.ಡಿ.ಎಲ್.ಸೇನ್, (ಅಕ್ಟೋಬರ್ ೧೯೪೫-ಮಾರ್ಚ್ ೧೯೫೧)
- ಡಾ. ಸಿ.ನಂಜುಂಡಯ್ಯ(ಮಾರ್ಚ್ ೧೯೫೧-ಸೆಪ್ಟೆಂಬರ್ ೧೯೫೬)
- ಹರಿರಾವ್ ನವಕಲ್(ಸೆಪ್ಟೆಂಬರ್ ೧೯೫೬-ಜನವರಿ ೧೯೫೭)
- ಡಾ.ಆರ್.ಎಲ್.ಎನ್.ಅಯ್ಯಂಗಾರ್ (ಜನವರಿ ೧೯೫೭-ಸೆಪ್ಟೆಂಬರ್ ೧೯೬೬)
(ಡಾ. ಆರ್.ಎಲ್.ಎನ್.ಅಯ್ಯಂಗಾರ್ ಸೆಂಟ್ರೆಲ್ ಕಾಟನ್ ಕಮಿಟಿಯ ಆಡಳಿತದಲ್ಲಿ ದುಡಿದ ಕೊನೆಯ ನಿರ್ದೇಶಕರು)
ಹತ್ತಿಯ ಜಾತಿಗಳು
[ಬದಲಾಯಿಸಿ]ಹತ್ತಿಯ ತಂತುಗಳ ಆಂತರಿಕ ರಚನೆ, ಹಾಗೂ ಅದರ ಪರಿಣಾಮ ದಾರ-ಬಟ್ಟೆಗಳ ಮೇಲಾಗುವ ರೀತಿಗಳನ್ನು ಪ್ರಚುರಪಡಿಸಿದರು. ಹತ್ತಿಯ ತಂತುಗಳು ಅವುಗಳ ಬೀಜವನ್ನು ಕಚ್ಚಿ ಹಿಡಿದಿರುತ್ತವೆ. ನಾಲ್ಕೂ ಹತ್ತಿಯ ಪ್ರಜಾತಿಗಳ ತಂತುಗಳು ಈ ಪ್ರಕಾರವಿವೆ.
- 'ಬಾರ್ಬಡೆನ್ಸಿ',
- 'ಹರ್ಸುಟಮ್',
- 'ಹರ್ಬೇಸಿಯಮ್'
- 'ಅರ್ಬೋರಿಯಮ್'
ಈ ತಳಿಗಳು ತಮ್ಮದೇ ಆದ ವೈವಿಧ್ಯಮಯ ಗುಣಗಳು ಮತ್ತು ಶಕ್ತಿಯನ್ನು ಹೊಂದಿರುವುದರಿಂದ ಬೀಜದಿಂದ ಹತ್ತಿಯನ್ನು ಬೇರ್ಪಡಿಸುವಾಗ ಈ ಗುಣಾವಗುಣಗಳು ಹೆಚ್ಚು ಕೆಲಸಕ್ಕೆ ಬರುತ್ತವೆ. 'ಆರ್.ಎಲ್.ಎನ್'ರವರ ಈ ಕೊಡುಗೆ ಮುಂದೆ ನಿರ್ಮಿಸಲಾದ ಹಲವಾರು ಹೊಸ ಮಾದರಿಯ 'ಜಿನ್ನಿಂಗ್ ಮೆಶಿನ್' ಗಳ ಕಾರ್ಯ ವಿಧಾನಗಳನ್ನು ನಿಯಂತ್ರಿಸುವಲ್ಲಿ ಸಹಾಯವಾಯಿತು. 'ಜಿನ್ನಿಂಗ್' ಪ್ರಕ್ರಿಯೆಯ ಬಗ್ಗೆ 'ವಿಶ್ವದ ಹತ್ತಿ ಬೆಳೆ ತಂತ್ರಜ್ಞರು', ಹಾಗೂ 'ಹತ್ತಿ ವಿಜ್ಞಾನಿಗಳು' ಆರ್.ಎಲ್.ಎನ್. ಅಯ್ಯಂಗಾರ್ ರವರ ಸಂಶೋಧನೆಯ ಕಾಣಿಕೆಗಳನ್ನು ನೆನೆಯುತ್ತಾರೆ. [೨] ತಂತು ಗುಣಗಳು ತಯಾರಾಗುವ ನೂಲು ಹಾಗೂ ಅದರಿಂದ ನಿರ್ಮಾಣವಾಗುವ ಬಟ್ಟೆಗಳ ಗುಣಗಳನ್ನು ನಿಯಂತ್ರಿಸುವಲ್ಲಿ ಹೇಗೆ ಅವಲಂಭಿಸಿದೆ ಎನ್ನುವುದನ್ನು ಕುಲಂಕುಶವಾಗಿ ಪ್ರತಿಪಾದಿಸಿದರು. ಜಿನ್ನಿಂಗ್ ಕಾರ್ಯದಲ್ಲಿ ಯಂತ್ರಗಳ ಸೆಟ್ಟಿಂಗ್ಸ್ ನಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿಸಿ ಕೊಟ್ಟು ತಂತುಗಳು ಹರಿಯದಂತೆ ಜಿನ್ನಿಂಗ್ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳಬಹುದಾದ ಪದ್ಧತಿಗಳನ್ನು ಸಿದ್ಧಪಡಿಸಿದರು.
ಅಯ್ಯಂಗಾರ್ ಅವರ ಶೋಧಕಾರ್ಯಗಳು
[ಬದಲಾಯಿಸಿ]ಕೃಷಿ ಭಾರತದ ಮೂಲ ಉದ್ಯೋಗಗಳಲ್ಲೊಂದು. ೧೮ ನೆಯ ಶತಮಾನದಲ್ಲಿ ಇಂಗ್ಲೆಂಡ್ ದೇಶದಲ್ಲಿ ಔದ್ಯೋಗಿಕ ಕ್ರಾಂತಿ ಶುರುವಾಯಿತು. ಹತ್ತಿಯಿಂದ ನೂಲು ನಿರ್ಮಿಸಲು ಸೃಷ್ಟಿಸಿದ Spinning Jenny ಮತ್ತು Mule ಯಂತ್ರಗಳಿಂದ ಆರಂಭವಾಯಿತು. ಈ ಯಂತ್ರಕ್ಕೆ ಬೇಕಾದ ಹತ್ತಿನಾರಿನ ಗುಣಗಳನ್ನು ಪಡೆಯಲು ಹತ್ತಿ ಬೆಳೆಯ ಗುಣ ಸಂವರ್ಧನೆಬಹಳ ಆವಶ್ಯಕತೆಯಾಯಿತು. ಈ ನಿಟ್ಟಿನಲ್ಲಿ ತಳಿ ತಾಂತ್ರಿಕತೆಯಲ್ಲಿ ವಿಶ್ವದ ಇಂಗ್ಲೆಂಡ್, ಈಜಿಪ್ಟ್, ಅಮೆರಿಕಾ, ಆಸ್ಟ್ರೇಲಿಯ ಸೋವಿಯೆಟ್ ಯೂನಿಯನ್ ರಷ್ಯಾ. ಭಾರತ ಮೊದಲಾದ ರಾಷ್ಟ್ರಗಳು ಭಾಗವಹಿಸಿವೆ. ಇದರಲ್ಲಿ ಡ. ಡಬ್ಲ್ಯು ಎಲ್.ಬಾಲ್ಸ್ ಎಂಬ ಬ್ರಿಟಿಷ್ ವಿಜ್ಞಾನಿ ಮುಂಚೂಣಿಯಲ್ಲಿ ಕೆಲಸಮಾಡಿದ್ದಾರೆ. ಅವರು ತಮ್ಮ ಸಸ್ಯವಿಜ್ಞಾನದ ಪರಿಣತಿಯಿಂದ ಈಜಿಪ್ಟ್ ರಾಷ್ಟ್ರದ ಹತ್ತಿ ಹೊಲಗಳಲ್ಲಿ ನಿರಂತರವಾಗಿ ತಮ್ಮ ಸಂಶೋಧನೆಗಳನ್ನು ನಡೆಸಿ ಹತ್ತಿಯ ತಂತುಗಳಲ್ಲಿ ಶಕ್ತಿ, ಮಹೀನತೆ,ತಂತುಗಳಲ್ಲಿ ಉದ್ದದಲ್ಲಿ ವೃದ್ಧಿ ಮೊದಲಾದ ಗುಣಗಳನ್ನು ಹಾಸಿಲ್ ಮಾಡುವಲ್ಲಿ ಯಶಸ್ವಿಯಾದರು. ಹತ್ತಿ ಉತ್ಪಾದನೆಯನ್ನು ವರ್ಧಿಸಲು ಉತ್ತಮ ನೀರಾವರಿ ವ್ಯವಸ್ಥೆ,ರಸಗೊಬ್ಬರದ ಪೂರೈಕೆ,ಕೀಟನಾಶಕಗಲ ಉಪಯೋಗ. ಮುಂದೆ ಜೈವಿಕ ತಂತ್ರಜ್ಞಾನದ ಬಳಕೆಯಿಂದ ಹೆಚ್ಚಿನ ಉತ್ಪಾದನೆ ಸಾಧ್ಯವಯಿತು.
ಹತ್ತಿಯಿಂದ ನೂಲು ತಯಾರಿಸುವ ಯಂತ್ರಗಳ ಉಪಯೋಗ
[ಬದಲಾಯಿಸಿ]ಟೆಕ್ನೋಲೊಜಿಕಲ್ ಲ್ಯಾಬೋರೇಟೋರಿಯಲ್ಲಿ ಅತ್ಯುತ್ತಮ ಹವಾನಿಯಂತ್ರಿತ ಹತ್ತಿಯ ನಾರಿನಿಂದ ದಾರ ಮಾಡುವ ಯಂತ್ರಗಳನ್ನು ೧೯೨೫ ರಲ್ಲೇ ಸ್ಥಾಪಿಸಲಾಗಿತ್ತು. ಇದಕ್ಕೆ ಸಂಬಂಧ ಪಟ್ಟ ಹಲವಾರು ಯಂತ್ರಗಳೂ ಲಭ್ಯವಿವೆ. ಹತ್ತಿಯ ನಾರಿನಿಂದ ಹೆಚ್ಚಿನ ಕೌಂಟ್ ನ ದಾರವನ್ನು ನೂಲುವುದು ಸಾಧ್ಯವಾದರೆ ಅದರಿಂದ ತಯಾರುಮಾಡಬಹುದಾದ ಬಟ್ಟೆಯ ಗುಣವೂ ಶ್ರೇಷ್ಟ ವಾಗಿರುತ್ತದೆ.
ಹತ್ತಿಯ ಹೊಲಗಳಲ್ಲಿ ಸಂಶೋಧನ ಕ್ರಿಯೆ
[ಬದಲಾಯಿಸಿ]ಹತ್ತಿ ಬೆಳೆಯ ದೊಡ್ಡ ಹೊಲಗಳಲ್ಲಿ ವಿಜ್ಞಾನಿಗಳು ಹತ್ತಿ ಹೂಬಿಡುವಕಾಲದಲ್ಲಿ ಕಾದಿದ್ದು, ಬೆಳಗ್ಯೆ ಪರಾಗ ಸ್ಪರ್ಷ ಕ್ರಿಯೆ ನಡೆಸಿ ಪಾಲಿಥೀನ್ ಚೀಲವನ್ನು ಅದರ ಸುತ್ತಲೂ ಕಟ್ಟುತ್ತಾರೆ. ಇದರಿಂದ ಚಿಕ್ಕ ನೊಣಗಳು ಮತ್ತು ಹಾರುವ ಹುಳಗಳು ಪರಾಗಸ್ಪರ್ಷ ಕ್ರಿಯೆ ಮಾಡದಿರಲೆಂದು. ಈ ಪದ್ಧತಿಯ ಸಹಾಯದಿಂದ ಹತ್ತಿಯ ತಂತುಗಳಲ್ಲಿ ತಮಗೆ ಬೇಕಾದ ಗುಣಗಳನ್ನು ಪಡೆಯಲು ಸಾಧ್ಯವಿದೆ. ಇದು ನಿರಂತರವಾಗಿ ಹೊಲಗಳಲ್ಲಿ ಬೆಳೆ ವಿಜ್ಞಾನಿಗಳು ಸದಾ ವರ್ಷಗಟ್ಟಲೆ ಕಾರ್ಯನಿರತರಾಗಿರಬೇಕು, ಆಗ ಒಳ್ಳೆಯ ತಂತು ಗುಣಗಳನ್ನು ನಿರೀಕ್ಷಿಸಲು ಸಾಧ್ಯ. ಇದು ಒಂದು ಪ್ರಕ್ರಿಯೆಯಾದರೆ, ಆ ಹತ್ತಿಯನ್ನು ಟೆಕ್ನೊಲಾಜಿಕಲ್ ಲ್ಯಾಬೋರೇಟೊರಿಯಲ್ಲಿ ವಿಜ್ಞಾನಿಗಳು ಹವಾನಿಯಂತ್ರಿತ ಕೋಣೆಯಲ್ಲಿ ಹತ್ತಿ ತಂತುಗಳ, ತದನಂತರ ಮಾಡುವ ನೂಲಿನ ಪರೀಕ್ಷಣ ಕ್ರಿಯೆಗಳು ಅತಿ ಮುಖ್ಯವಾದವುಗಳು.
ತಕನಿಕಿ ಪರೀಕ್ಷಣ ಕ್ರಿಯೆ
[ಬದಲಾಯಿಸಿ]ಕೃಷಿಯ ಉತ್ಪಾದನೆಯಾದ ಹತ್ತಿ ಬಟ್ಟೆ ತಯಾರಿಸಲು ಬಳಸಲಾಗುತ್ತಿದೆ. ಆದರೆ ಈಜಿಪ್ಟ್, ಅಮೆರಿಕ ಮೊದಲಾದ ದೇಶಗಳಲ್ಲಿ ಬೆಳೆಯುವ ಹತ್ತಿಯ ಗುಣಮಟ್ಟ ಭಾರತದ ಹತ್ತಿಬೆಳೆಯಲ್ಲಿಲ್ಲ. ಪ್ರಮುಖವಾಗಿ ಹತ್ತಿಯ ತಂತುಗಳ ಉದ್ದ, ಮಹೀನತೆ ಮತ್ತು ಶಕ್ತಿ, ಉತ್ತಮ ಬಟ್ಟೆ ತಯಾರಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮುಂಬಯಿಯ ಲ್ಯಾಬೋರೇಟೊರಿ ಭಾರತದೇಶದ ವಿವಿಧ ಪ್ರದೇಶಗಳ ಹತ್ತಿ ಬೆಳೆಯನ್ನು ಲಾಗುವುದು. ಹತ್ತಿಯಗುಣ ಸುಧಾರಿಕೆಯಲ್ಲಿ ಸಂಶೋಧನೆಯನ್ನು ಶುರುಮಾಡಿ ಪ್ರತಿವರ್ಷವೂ ರಾಷ್ಟ್ರದ ಹತ್ತಿ ಉತ್ಪಾದನಾ ಹೊಲಗಳಿಂದ ನಮೂನೆಗಳನ್ನು ತರಿಸಿಕೊಳ್ಳಲಾಗುತ್ತಿದೆ. ವಿಜ್ಞಾನಿ ಆರ್.ಎಲ್.ಎನ್.ಅಯ್ಯಂಗಾರ್ ಮಾಡಿ ಕೆಳಗೆ ನಮೂದಿಸಿರುವ ಗುಣಮಾಪಕ ಯಂತ್ರಗಳನ್ನು ನಿರ್ಮಿಸಿದ್ದಾರೆ. ಹತ್ತಿ ವಿಶೇಶವಾಗಿ ಹತ್ತಿಯ ಬೀಜದ ಮೇಲೆ ಬೆಳೆದಿರುವ ತಂತು. ಅದರಿಂದಲೇ ಬಟ್ಟೆಗಳನ್ನು ಮಾಡಲು ಸಾಧ್ಯವಿದೆ. ಡಾ. ಅಯ್ಯಂಗಾರ್ ಹತ್ತಿಯ ಬೀಜದ ಮೇಲೆ ಬೆಳೆದ ತಂತುಗಳಲ್ಲಿ ಇರುವ ವೈವಿಧ್ಯತೆಗಳನ್ನು ಗಮನಿಸಿ ಅದರ ಬಗ್ಗೆ ವಿಸ್ತೃತ ಅಧ್ಯಯನ ಮಾಡಿದರು. ಅವುಗಳು ಹೀಗಿವೆ :
- the study of fiber length variation along the surface of the cotton seed and other fiber properties.
- The investigations on the strength of attachment of the cotton fiber. [೩]
- The improvement in ginning, moisture relations of fiber yarns and fabrics.
ಹತ್ತಿಯ ಗುಣಮಾಪಕ ಯಂತ್ರಗಳು
[ಬದಲಾಯಿಸಿ]ಡಾ. ಆರ್.ಎಲ್.ಎನ್, ಅಯ್ಯಂಗಾರ್ ಅವರು ಹಲವಾರು ಹತ್ತಿ ಗುಣಮಾಪಕ ಯಂತ್ರಗಳನ್ನು ನಿರ್ಮಿಸಿದರು.
- Leaf vein tester,
- Toughness tester,
- Photo electric mean diameter tester,
- Strength tester,
- Impact tester,
೧೯೬೫ ರಲ್ಲಿ ಲಂಡನ್ ನಲ್ಲಿ ಆಯೋಜಿಸಿದ ISO ಮೀಟಿಂಗ್ ನಲ್ಲಿ ಭಾರತ ಸರ್ಕಾರ, ಆರ್.ಎಲ್.ಎನ್.ಅಯ್ಯಂಗಾರ್ ರನ್ನು ಡೆಲಿಗೇಟ್ ಆಗಿ ನೇಮಿಸಿ ಕಳುಹಿಸಿಕೊಟ್ಟರು.
ನಿವೃತ್ತಿ
[ಬದಲಾಯಿಸಿ]ಅಕ್ಟೋಬರ್, ೧೯೬೬ ರಲ್ಲಿ ನಿವೃತ್ತರಾದರು. ೧೯೬೬-೭೨ ರ ವರೆವಿಗೂ ಪಿ.ಎಚ್.ಡಿ.ಪದವಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು.
ನಿಧನ
[ಬದಲಾಯಿಸಿ]ಮುಂಬಯಿನಿಂದ ಬೆಂಗಳೂರಿಗೆ ಹೋಗಿ ನೆಲೆಸಿದ್ದ ಅಯ್ಯಂಗಾರ್ ಅವರು ೧೮ ಸೆಪ್ಟೆಂಬರ್, ೧೯೯೨ ರಂದು ವೃದ್ಧಾಪ್ಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ನರಳುತ್ತಿದ್ದು ನಿಧನರಾದರು.
ಇಂದಿಗೂ CIRCOT ನಲ್ಲಿ ಬಳಸಲಾಗುತ್ತಿರುವ ಪುಸ್ತಕದ ರಚನೆ
[ಬದಲಾಯಿಸಿ]ಆಗ ನಿರ್ದೇಶಕರಾಗಿದ್ದ ಅಯ್ಯಂಗಾರ್ ಅವರು ಹಲವಾರು ಸಂಶೋಧನಾ ಪತ್ರಗಳನ್ನು ಪ್ರಸ್ತುತಪಡಿಸಿ ಅವನ್ನು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಆ ಕೆಲಸಗಳಲ್ಲಿ ಇನ್ನೊಂದು ಪ್ರಮುಖ ಕಾರ್ಯವೆಂದರೆ, 'Methods of test for Cotton Cotton Yarn Fabrics,' ಎಂಬ ಪುಸ್ತಕದ ಪ್ರಕಟಣೆ. ಇದು ಲ್ಯಾಬೋರೇಟೊರಿಯ ದಿನನಿತ್ಯದ ಟೆಸ್ಟಿಂಗ್ ಕೆಲಸಗಳಲ್ಲಿ ಬಹಳ ಉಪಯೋಗಕಾರಿಯಾಗಿದೆ.
- Methods of test for Cotton Cotton Yarn Fabrics-Dr. R.L.N.Iyengar & Dr.V.Sundaram
ಉಲ್ಲೇಖಗಳು
[ಬದಲಾಯಿಸಿ]- ↑ "Dr. R.L.N.Iyengar, (Jan, 1957 to Sept, 1966), News, pub, Former, Directors". Archived from the original on 2019-11-10. Retrieved 2019-11-19.
- ↑ 'My Spin Lab,'ಭಾರತದಲ್ಲಿ ಹತ್ತಿ ಸಂಶೋಧನೆಯ ಹಲವು ಮಗ್ಗಲುಗಳು-ಎಚ್.ಆರ್.ಎಲ್. ಪುಟ-೩೮
- ↑ Iyengar, R. L. N ; A method for the determination of the strength of attachment of the fibre to the seed and its effect on the ginning behavior of different cottons, Indian Cotton Gr. Rev; 8, 8 (1954) ; Technol. Bul. B-49 (1954)