ಠೇವಣಿ
ಗೋಚರ
(ಠೇವಣಾತಿ ಇಂದ ಪುನರ್ನಿರ್ದೇಶಿತ)
ಠೇವಣಿ ಎಂದರೆ ಯಾವುದೇ ಸಂಸ್ಥೆಯಲ್ಲಿ ಇರಿಸಲಾದ ವಿತ್ತೀಯ ಮೊತ್ತ.
ಠೇವಣಿಯು ಯಾರಿಂದ ಇರಿಸಲ್ಪಟ್ಟಿರುತ್ತದೆಯೊ ಆ ಪಕ್ಷದ (ವ್ಯಕ್ತಿ ಅಥವಾ ಸಂಸ್ಥೆ) ಜಮಾ ಆಗಿರುತ್ತದೆ, ಮತ್ತು ಅದನ್ನು ಹಿಂದೆ ತೆಗೆದುಕೊಳ್ಳಬಹುದು (ವಾಪಸು ತೆಗೆದುಕೊಳ್ಳುವುದು), ಯಾವುದೋ ಇತರ ಪಕ್ಷಕ್ಕೆ ಹಸ್ತಾಂತರಿಸಬಹುದು, ಅಥವಾ ಮುಂದಿನ ದಿನಾಂಕದಲ್ಲಿ ಖರೀದಿಗೆ ಬಳಸಬಹುದು.
ಈ ಹಣಕಾಸು ಪರಿಕಲ್ಪನೆಯನ್ನು ಹಲವುವೇಳೆ ಬ್ಯಾಂಕ್‍ಗಳ ಸಂಬಂಧ ಬಳಸಲಾಗುತ್ತದೆ, ಏಕೆಂದರೆ ಬ್ಯಾಂಕ್‍ಗಳಲ್ಲಿ ಠೇವಣಿಗಳು ಸಾಮಾನ್ಯವಾಗಿ ಹಣ ಬರುವ ಮುಖ್ಯ ಮೂಲವಾಗಿರುತ್ತವೆ.
ಬಗೆಗಳು
[ಬದಲಾಯಿಸಿ]ಠೇವಣಿಗಳ ಬಗೆಗಳೆಂದರೆ:
- ವಹಿವಾಟು ಖಾತೆ (ದೇಶದನುಸಾರ ಚೆಕಿಂಗ್ ಖಾತೆ ಅಥವಾ ಚಾಲ್ತಿ ಖಾತೆ), ಠೇವಣಿದಾರನಿಗೆ ಹಣವನ್ನು ಯಾವುದೇ ಸಮಯದಲ್ಲಿ ಬಳಸಲು ಹಕ್ಕಿರುತ್ತದೆ, ಕೆಲವೊಮ್ಮೆ ಅಲ್ಪ ನೋಟೀಸು ಅವಧಿಗಳಿಗೆ ಒಪ್ಪಲಾಗುತ್ತದೆ; ಕಾಲ್ ಡಿಪಾಸಿಟ್ ಅಥವಾ ಸೈಟ್ ಡಿಪಾಸಿಟ್ ಎಂದೂ ಕರೆಯಲ್ಪಡುತ್ತದೆ
- ಸ್ಥಿರಾವಧಿಯ ಠೇವಣಿ (ಅಥವಾ ಕಾಲ ಠೇವಣಿ), ಇವು ನಿಶ್ಚಿತ ಅವಧಿ ಮತ್ತು ನಿರ್ದಿಷ್ಟ ಬಡ್ಡಿ ದರವನ್ನು ಹೊಂದಿರುತ್ತವೆ[೧]
- ನಿಶ್ಚಿತ ಠೇವಣಿ (ಭಾರತದಲ್ಲಿ ಫಿಕ್ಸೆಡ್ ಡಿಪಾಸಿಟ್) [೨]
- ಠೇವಣಿ ಪ್ರಮಾಣಪತ್ರ ಅಮೇರಿಕಾ ಮತ್ತು ಕ್ಯಾನಡಾದಲ್ಲಿ
- ರಾತ್ರೋರಾತ್ರಿಯ ಸಾಲ, ಸಾಮಾನ್ಯವಾಗಿ ಮಧ್ಯಾಹ್ನದಿಂದ ಮಧ್ಯಾಹ್ನದ ವರೆಗೆ ನಡೆಯುತ್ತದೆ, ಮತ್ತು ವಿಶೇಷ ದರವನ್ನು ಬಳಸುತ್ತದೆ. ಇದರ ಮುಖ್ಯ ಉದ್ದೇಶ ಭದ್ರತೆಯಾಗಿ ಒದಗಿಸುವುದು ಅಥವಾ ಭಾಗಶಃ ಪಾವತಿಯಾಗಿ ಒದಗಿಸುವುದು.
ಉಲ್ಲೇಖಗಳು
[ಬದಲಾಯಿಸಿ]- ↑ term deposit, Investopedia, accessed 2012-05-14.
- ↑ [೧], Deposit your trust in Fixed Deposits, siliconindia.com