ಟೊರಾಂಟೋ ಮೆಕಾನಿಕ್ಸ್ ಇನ್ ಸ್ಟಿ ಟ್ಯೂಟ್

ವಿಕಿಪೀಡಿಯ ಇಂದ
Jump to navigation Jump to search
'ಟೊರಾಂಟೋನಗರದ ಮೊಟ್ಟಮೊದಲ ಪಬ್ಲಿಕ್ ಲೈಬ್ರರಿಯಾದ ಕಟ್ಟಡ'

ಉತ್ತರ ಅಮೆರಿಕದ, 'ಕೆನಡಾ ರಾಷ್ಟ್ರ'ದಲ್ಲಿ ಮೊದಲು ಯಾರ್ಕ್ ಮೆಕಾನಿಕ್ಸ್ ಇನ್ ಸ್ಟಿ ಟ್ಯೂಟ್ ಎಂದು ಕರೆಯಲಾಗುತ್ತಿದ್ದ ವಿದ್ಯಾಸಂಸ್ಥೆ, ನಂತರ, ಟೊರಾಂಟೋ ಮೆಕಾನಿಕ್ಸ್ ಇನ್ ಸ್ಟಿ ಟ್ಯೂಟ್ ಎಂದು ಬದಲಾಯಿತು. ಇದು ಮುಂದೆ ಬೆಳೆದು, ೧೯ ನೆಯ ಶತಮಾನದ ಮೊಟ್ಟಮೊದಲ 'ಪಬ್ಲಿಕ್ ಲೈಬ್ರರಿ'ಯಾಯಿತು. 'ಮೆಕಾನಿಕ್ಸ್ ಇನ್ ಸ್ಟಿ ಟ್ಯೂಟ್' ಗಳ ಬೆಳವಣಿಗೆ, ರೈಲ್ವೆ ಪ್ರಯಾಣದ ಆರಂಭವಾದಾಗ, ಯಂತ್ರಗಳ ರಿಪೇರಿ,ಮೊದಲಾದ ಕೆಲಸಗಳನ್ನು ಸುವ್ಯವಸ್ಥಿತಗೊಳಿಸಲು, ಮೊದಲು 'ಬ್ರಿಟನ್' ನಲ್ಲಿ ಶುರುವಾಗಿ ಬೆಳೆದು ಮುಂದುವರೆಯಿತು. ಮುಂದೆ, ವಿಶ್ವದಲ್ಲಿ ಬೊಂಬಾಯಿಯೂ ಸೇರಿದಂತೆ ಹಲವಾರು 'ಮೆಕಾನಿಕ್ ಇನ್ ಸ್ಟಿ ಟ್ಯೂಟ್' ಗಳ ಹೆಸರುಗಳು ಈ ಪಟ್ಟಿಯಲ್ಲಿ ಸೇರಿದವು. 'ಟೊರಾಂಟೋ ಮೆಕಾನಿಕ್ಸ್ ಇನ್ ಸ್ಟಿ ಟ್ಯೂಟ್,' ನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ, ೧೮೩೦ ರಲ್ಲಿ ಸ್ಥಾಪಿಸಿತು. ಸ್ಥಾನೀಯ ವಯಸ್ಕರಿಗೆ, ಸಾಮಾನ್ಯ ವಿದ್ಯಾಭ್ಯಾಸ, ಹಾಗೂ ತಾಂತ್ರಿಕ ವಿದ್ಯಾಭ್ಯಾಸಗಳ ಸೌಲಭ್ಯಗಳನ್ನು ಕೊಡಲು ಆರಂಭವಾಗಿದ್ದು ಇಲ್ಲಿಂದಲೇ.