ಜುಗುಪ್ಸೆ
ಜುಗುಪ್ಸೆ ಮನನೋಯಿಸುವ, ಅಸಹ್ಯಕರ, ಅಥವಾ ಅಹಿತಕರವೆಂದು ಪರಿಗಣಿಸಲಾದ ಯಾವುದಕ್ಕಾದರೂ ಒಂದು ಭಾವನಾತ್ಮಕ ಪ್ರತಿಕ್ರಿಯೆ. ಜುಗುಪ್ಸೆ ಏನಾದರೂ ಹೇಸಿಗೆ ಉಂಟುಮಾಡುವಂಥದ್ದನ್ನು ಸೂಚಿಸುವ ಒಂದು ಸಂವೇದನೆ. ಜುಗುಪ್ಸೆಯನ್ನು ಮುಖ್ಯವಾಗಿ ರುಚಿಯ ಅರ್ಥದ (ಗ್ರಹಿಸಿದ ಅಥವಾ ಕಲ್ಪಿಸಿಕೊಂಡ) ಸಂಬಂಧದಲ್ಲಿ ಅನುಭವಿಸಲಾಗುತ್ತದೆ, ಮತ್ತು ಗೌಣವಾಗಿ ವಾಸನೆ, ಸ್ಪರ್ಶ, ಅಥವಾ ದೃಷ್ಟಿಯ ಇಂದ್ರಿಯದಿಂದ ಹೋಲುವ ಅನಿಸಿಕೆಯನ್ನು ಉಂಟುಮಾಡುವ ಯಾವುದರದ್ದಾದರೂ ಸಂಬಂಧದಲ್ಲಿ ಅನುಭವಿಸಲಾಗುತ್ತದೆ. ಸಂಗೀತಕ್ಕೆ ಸಂವೇದನಾಶೀಲರಾದ ಜನರು ಸಮರಸವಿಲ್ಲದ ಧ್ವನಿಗಳ ಕರ್ಕಶತೆಯಿಂದ ಕೂಡ ಅಸಹ್ಯಪಡಬಹುದು. ಸಂಶೋಧನೆಯು ನಿರಂತರವಾಗಿ ಜುಗುಪ್ಸೆ ಮತ್ತು ಆತಂಕ ಕಾಯಿಲೆಯ (ಉದಾ. ಜೇಡಭೀತಿ, ಸೂಜಿಮದ್ದಿನ ಗಾಯಗಳಂತಹ ಭೀತಿಗಳು, ಮತ್ತು ಮಾಲಿನ್ಯ ಭಯ ಸಂಬಂಧಿತ ಗೀಳು ನಿರ್ಬಂಧಿತ ಕಾಯಿಲೆ) ನಡುವೆ ಸಂಬಂಧವನ್ನು ಸಾಬೀತುಪಡಿಸಿದೆ.[೧]
ಜುಗುಪ್ಸೆಯ ಭಾವನೆಯು ಜೀವಿಗೆ ಹಾನಿ ಉಂಟುಮಾಡಬಹುದಾದ ಮನನೋಯಿಸುವ ಆಹಾರಗಳಿಗೆ ಪ್ರತಿಕ್ರಿಯೆಯಾಗಿ ವಿಕಸನಗೊಂಡಿದೆ ಎಂದು ನಂಬಲಾಗಿದೆ. ಇದರ ಒಂದು ಸಾಮಾನ್ಯ ಉದಾಹರಣೆಯನ್ನು ಮಾನವರಲ್ಲಿ ಕಾಣಬಹುದು. ಮಾನವರು ಬೂಷ್ಟು ಇರುವ ಹಾಲು ಅಥವಾ ಕಲುಷಿತ ಮಾಂಸಕ್ಕೆ ಜುಗುಪ್ಸೆಯ ಪ್ರತಿಕ್ರಿಯೆಗಳನ್ನು ತೋರಿಸುತ್ತಾರೆ. ಜುಗುಪ್ಸೆಯು ರೋಗಸೂಚಕ ಗುಣಗಳನ್ನು ಹೊಂದಿರುವ ವಸ್ತುಗಳಿಂದ ಅಥವಾ ಜನರಿಂದ ಪ್ರಚೋದಿತವಾಗುತ್ತದೆ ಎಂದು ಕಾಣುತ್ತದೆ.
ಈ ಮುಂದಿನವುಗಳು ಜುಗುಪ್ಸೆಯನ್ನು ಹೊರಹೊಮ್ಮಿಸುತ್ತವೆ ಎಂದು ಸ್ವ-ವರದಿ ಮತ್ತು ವರ್ತನ ಅಧ್ಯಯನಗಳು ಕಂಡುಕೊಂಡವು: ಶಾರೀರಿಕ ಉತ್ಪನ್ನಗಳು (ಮಲ, ಮೂತ್ರ, ವಾಂತಿ, ಲೈಂಗಿಕ ದ್ರವಗಳು, ಎಂಜಲು, ಮತ್ತು ಸಿಂಬಳ); ಆಹಾರಗಳು (ಕೊಳೆತ ಆಹಾರಗಳು); ಪ್ರಾಣಿಗಳು (ಚಿಗಟಗಳು, ಉಣ್ಣಿ, ಹೇನು, ಜಿರಲೆಗಳು, ಹುಳುಗಳು, ನೊಣಗಳು, ಇಲಿಗಳು); ಸ್ವಚ್ಛತೆ (ಕಾಣುವ ಕೊಳೆ ಮತ್ತು ಅನುಚಿತ ಕ್ರಿಯೆಗಳು (ಉದಾ., ಕ್ರಿಮಿಶುದ್ಧೀಕರಣಮಾಡದ ಶಸ್ತ್ರಚಿಕಿತ್ಸಾ ಉಪಕರಣವನ್ನು ಬಳಸುವುದು); ದೇಹದ ಹೊದಿಕೆಯ ಉಲ್ಲಂಘನೆಗಳು (ರಕ್ತ, ಹೆಪ್ಪುಗಟ್ಟಿದ ನೆತ್ತರು, ಮತ್ತು ಅಂಗಚ್ಛೇದ); ಸಾವು (ಹೆಣಗಳು ಮತ್ತು ಸಾವಯವ ಕೊಳೆತ); ಸೋಂಕಿನ ಗೋಚರ ಚಿಹ್ನೆಗಳು.
ಉಲ್ಲೇಖಗಳು
[ಬದಲಾಯಿಸಿ]- ↑ Cisler, J.M.; Olatunji, B.O.; Lohr, J.M.; Williams, N.L. (2009). "Attentional bias differences between fear and disgust: Implications for the role of disgust in disgust-related anxiety disorders". Cognition and Emotion. 23 (4): 675–687. doi:10.1080/02699930802051599. PMC 2892866. PMID 20589224.