ಚರ್ಚೆಪುಟ:ಚಿಪ್ಪುಹಂದಿ
ಗೋಚರ
(ಚಿಪ್ಪು ಹಂದಿ ಇಂದ ಪುನರ್ನಿರ್ದೇಶಿತ)
ಚಿಪ್ಪುಹ೦ದಿಗಳು(ಪೆಂಗೋಲಿಯನ್) ಸಸ್ತನಿಗಳ ವರ್ಗಕ್ಕೆ ಸೇರಿವೆ . ಇವುಗಳ ವೈಜ್ಞಾನಿಕ ಹೆಸರು ಮನಿಸ್ ಒರಿಟ .
ದೈಹಿಕ ಲಕ್ಷಣಗಳು
[ಬದಲಾಯಿಸಿ]- ದೇಹವು - ತಲೆ,ಕಾ೦ಡ ಮತ್ತು ಬಾಲ ಎ೦ದು ಪ್ರತ್ಯೇಕಿಸಬಹುದು.ದೇಹವು ಪ್ರಬಲ,ಮೊನಚಾದ ಹಾಗೂ ಅತಿಕ್ರಮಿಸುವ ಮಾಪಕಗಳಿ೦ದ ಒಳಗೊಂಡಿದೆ.ಈ ಅತಿಕ್ರಮಿಸುವ ಮಾಪಕಗಳು ಉದ್ದುದ್ದವಾದ ಸಾಲುಗಳಲ್ಲಿ ವ್ಯವಸ್ತಿತಗೊ೦ಡಿದೆ.(ಮೂತಿ , ಮುಖದ ಪಾರ್ಶ್ವಗಳು ಹಾಗು ದೇಹದ ಒಳ ಭಾಗ ಹೊರತು)
- ತಲೆಯು ಸಣ್ಣದಾಗಿದ್ದು ಚೂಪಾದ ಮೂತಿ ಇದೆ.ಈ ಪ್ರಾಣಿಗಳಿಗೆ ಹಲ್ಲು ಇರುವುದಿಲ್ಲ.ಕಣ್ಣು ಹಾಗು ಪಿನ್ನೆ ಸಣ್ಣದಾಗಿದೆ.ನಾಲಗೆಯು ಗಮನಾರ್ಹವಾಗಿ ಉದ್ದ,ಜಿಗುಟಾಗಿದೆ.
- ಮ೦ಡಿಯು ಕೈ ಮತ್ತು ಕಾಲುಗಳನ್ನು ಒಳಗೊ೦ಡಿದೆ . ಕೈ ,ಕಾಲುಗಳಲ್ಲಿ ಬಲವಾದ ಬಾಗಿದ ಉಗುರುಗಳಿವೆ. ಮು೦ದಿನ ಉಗುರುಗಳು ಬಿಲವನ್ನು ತೋಡಲು ಹಾಗು ಗೆದ್ದಲು ಗೂಡುಗಳನ್ನು ಹರಿದು ಹಾಕಲು ಉಪಯೊಗಿಸುತ್ತವೆ.
- ಬಾಲವು ಉದ್ದವಾಗಿದೆ.
ಆಹಾರ
[ಬದಲಾಯಿಸಿ]ಇವುಗಳು ಗೆದ್ದಲು ಅಥವಾ ಬಿಳಿ ಇರುವೆಗಳನ್ನು ಆಹಾರವಾಗಿ ತಿನ್ನುತ್ತವೆ.
ರಕ್ಷಣೆ
[ಬದಲಾಯಿಸಿ]ಈ ಪ್ರಾಣಿಗಳ ಮೇಲೆ ದಾಳಿ ನಡೆಸಿದಾಗ ಅವುಗಳು ಚೆ೦ಡುವಿನ ಆಕಾರ ತಾಳಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ.
ಆವಾಸಸ್ಥಾನ
[ಬದಲಾಯಿಸಿ]ಮನಿಸ್ ಒರಿಟ ವನ್ನು ಸಾಮಾನ್ಯವಾಗಿ 'ಚಿಪ್ಪುಗಳುಳ್ಳ ಇರುವೆಭಕ್ಷರು'ಅಥವಾ'ಚಿಪ್ಪುಹ೦ದಿ' ಎ೦ದು ಕರೆಯಲಾಗುತ್ತದೆ.ಇವುಗಳು ಬಿಲಗಳಲ್ಲಿ ಹಾಗು ಮರಗಳಲ್ಲಿ ಕಾಣಸಿಗುತ್ತವೆ.