ಚಿತ್ರ:Gol gumbaz Bijaur.jpg

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೂಲ ಕಡತ(೯೬೦ × ೭೨೦ ಚಿತ್ರಬಿಂದು, ಫೈಲಿನ ಗಾತ್ರ: ೨೯೧ KB, MIME ಪ್ರಕಾರ: image/jpeg)

ಸಾರಾಂಶ

ವಿವರ
ಕನ್ನಡ: ಇದು ಮಹಮದ್ ಆದಿಲ್ ಶಾ (ಆಳ್ವಿಕೆ: ೧೬೨೭-೧೬೫೭)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು ೧೬೫೯ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಗಳಾದ ಯಾಕುತ್ ಮತ್ತು ದಬೂಲ್ರವರು ನಿರ್ಮಿಸಿದ್ದಾರೆ. ಇದರ ಉದ್ದ ಮತ್ತು ಅಗಲ ೫೦ ಮೀ , ಹೊರಗಡೆ ಎತ್ತರ ೧೯೮ ಅಡಿ ಮತ್ತು ಒಳಗಡೆ ಎತ್ತರ ೧೭೫ ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ ೩೯ ಮೀ (೧೨೪ ಅಡಿ) ವ್ಯಾಸ ಹೊಂದಿದೆ.ಅದರಂತೆ ೮ ಅಂತಸ್ತುಗಳಿವೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ (ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ - ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್). ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ!ಹಾಗೆಯೆ ಇಲ್ಲಿರುವ "ಪಿಸುಗುಟ್ಟುವ ಶಾಲೆ"ಯಲ್ಲಿ ಅತಿ ಸಣ್ಣ ಶಬ್ದವೂ ೩೭ ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿಬರುತ್ತದೆ. ಇದರ ಹತ್ತಿರ ಬಿಜಾಪುರ ಆದಿಲ್ ಶಾಹಿಗಳಿಗೆ ಸಂಭದಿಸಿದ ವಸ್ತು ಸಂಗ್ರಾಹಾಲಯವು ಇದೆ.

ಗೋಲ ಗುಮ್ಮಟ ಬಿಜಾಪುರದಲ್ಲಿ ಸ್ಥಿತವಾಗಿರುವ ಮೊಹಮ್ಮದ್ ಆದಿಲ್ ಶಾ (೧೬೨೭ - ೧೬೫೭) ಅವರ ಸಮಾಧಿ. ಬಿಜಾಪುರವಲ್ಲದೆ ಬೀದರ, ಗೊಲ್ಕೊಂಡ, ಗುಲ್ಬರ್ಗಾಗಳನ್ನೊಳಗೊಳ್ಳುವ

ಗೋಲ್ ಗುಂಬಜ್ ಬಿಜಾಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು. ಅದರ ಕಟ್ಟುವಿಕೆಯ ಹೊಣೆ ಹೊತ್ತವನು, ದಾಬುಲ್ ನ ಪ್ರಸಿದ್ಧ ವಾಸ್ತುಶಿಲ್ಪಯಾದ ಯಾಕುಬ್. ಗೋಲ್ ಗುಂಬಜ್ ನ ತಳಹದಿಯು 205 ಅಡಿಗಳ ಚಚ್ಚೌಕ. ಅದರ ಸುತ್ತಲೂ ಇರುವ ಗೋಡೆಗಳು 198 ಅಡಿ ಎತ್ತರವಾಗಿವೆ. ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ(ಹಾಲ್) ವಿಸ್ತೀರ್ಣವು 1833767 ಚದುರಡಿಗಳು. ಗೋಲ್ ಗುಂಬಜ್, ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ಸಿಂಗಲ್ ಛೇಂಬರ್ ಸ್ಟ್ರಕ್ಚರ್ ಗಳಲ್ಲಿ ಒಂದು. ಇಲ್ಲಿರುವ ಗೋಡೆಗಳಲ್ಲಿ ಪ್ರತಿಯೊಂದರಲ್ಲಿಯೂ ಮೂರು ಕಮಾನುಗಳನ್ನು ರಚಿಸಲಾಗಿದೆ. ಗೋಲ್ ಗುಂಬಜ್ ನ ಮಧ್ಯದಲ್ಲಿರುವ ಗೋಳಾಕೃತಿಯ ಶಿಖರವು ಯಾವುದೇ ಕಂಬ ಅಥವಾ ರಚನೆಯನ್ನು ಆಧರಿಸಿ ನಿಂತಿಲ್ಲ. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದು. ಈ ಡೋಮ್ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ. ಭಾರತದಲ್ಲಿ ಬೇರೆಲ್ಲಿಯೂ ಈ ಬಗೆಯ ರಚನೆಯಿಲ್ಲ.

ಕಾರ್ಡೋಬಾದಲ್ಲಿರುವ ಬೃಹತ್ ಮಸೀದಿಯಲ್ಲಿ ಮಾತ್ರ ಇಂತಹ ರಚನೆಯನ್ನು ಬಳಸಲಾಗಿದೆ. ಎತ್ತರದ ಬಿಂದುವಿನಲ್ಲಿ ಕೊನೆಯಾಗುವ ಎಂಟು ಕಮಾನುಗಳು, ನಿಯತವಾದ ಜಾಗಗಳಲ್ಲಿ ಒಂದನ್ನೊಂದು ಅರ್ಧಿಸುತ್ತವೆ. ಈ ಗುಂಬಜ್ ನಲ್ಲಿರುವ ಪ್ರತಿಧ್ವನಿಗುಣವು ಅದರ ವಿಶೇಷ ಲಕ್ಷಣಗಳಲ್ಲಿ ಒಂದು. ಇಲ್ಲಿ ಆಡಿದ ಮಾತು ಅಥವಾ ಮಾಡಿದ ಶಬ್ದವು ಹನ್ನೊಂದು ಬಾರಿ ಪ್ರತಿಧ್ವನಿಸುತ್ತದೆ. ಅದನ್ನು ಮೂವತ್ತೇಳು ಕಿಲೋಮೀಟರುಗಳ ದೂರದಿಂದ ಕೇಳಬಹುದು. ಹಾಲ್ ನಿಂದ 33.22 ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ. ಇದು ಗುಂಬಜಿನ ಒಳ ಪರಿಧಿಯ ಸುತ್ತಲೂ ವೃತ್ತಾಕಾರವಾಗಿ ಹರಡಿಕೊಂಡಿದೆ. ಇದನ್ನು ‘ಪಿಸುಗುಟ್ಟುವ ಗ್ಯಾಲರಿ’(ವಿಷ್ಪರಿಂಗ್ ಗ್ಯಾಲರಿ) ಎಂದು ಕರೆಯುತ್ತಾರೆ. ಏಕೆಂದರೆ, ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು. ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು ಹತ್ತು ಸಲ ಪ್ರತಿಧ್ವನಿಸುತ್ತದೆ. ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ನೋಡಬಹುದು. ಹಾಲಿನ ಮಧ್ಯದಲ್ಲಿರುವ ವೇದಿಕೆಯ ಮೇಲೆ, ಮುಹಮ್ಮದ್ ಆದಿಲ್ ಷಾ ಮತ್ತು ಅವನ ಬಂಧುಗಳ ಕೃತಕವಾದ ಸಮಾಧಿಗಳಿವೆ. ನಿಜವಾದ ಸಮಾಧಿಗಳು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿವೆ.
ದಿನಾಂಕ
ಆಕರ ಸ್ವಂತ ಕೆಲಸ
ಕರ್ತೃ Prashant Janangond
Camera location೧೬° ೪೯′ ೪೯.೦೮″ N, ೭೫° ೪೪′ ೦೯.೯೬″ E Kartographer map based on OpenStreetMap.View this and other nearby images on: OpenStreetMapinfo

ಪರವಾನಗಿ

I, the copyright holder of this work, hereby publish it under the following license:
w:en:Creative Commons
ವೈಶಿಷ್ಟ್ಯ ಇರುವುದರಂತೆಯೇ ಹಂಚು
This file is licensed under the Creative Commons Attribution-Share Alike 4.0 International license.
ನೀವು ಮುಕ್ತ:
  • ಹಂಚಿಕೆಗೆ – ಕೆಲಸವನ್ನು ನಕಲು ಮಾಡಲು, ವಿತರಣೆ ಮತ್ತು ಸಾಗಿಸಲು
  • ರೀಮಿಕ್ಸ್ ಮಾಡಲು – ಕೆಲಸವನ್ನು ಬಳಸಿಕೊಳ್ಳಲು
ಈ ಕೆಳಗಿನ ಷರತ್ತುಗಳಲ್ಲಿ:
  • ವೈಶಿಷ್ಟ್ಯ – ನೀವು ಸೂಕ್ತವಾದ ಕ್ರೆಡಿಟ್ ನೀಡಬೇಕು, ಪರವಾನಗಿಗೆ ಲಿಂಕ್ ಅನ್ನು ಒದಗಿಸಬೇಕು ಮತ್ತು ಯಾವುದೇ ಬದಲಾವಣೆಗಳನ್ನು ಮಾಡಿದ್ದರೆ ಸೂಚಿಸಬೇಕು. ನೀವು ಯಾವುದೇ ಸಮಂಜಸವಾದ ರೀತಿಯಲ್ಲಿ ಮಾಡಬಹುದು, ಆದರೆ ಪರವಾನಗಿದಾರರು ನಿಮ್ಮನ್ನು ಅಥವಾ ನಿಮ್ಮ ಯಾವುದೇ ಬಳಕೆಯನ್ನು ಅನುಮೋದಿಸಿದಂತೆ ರೀತಿಯಲ್ಲಿ ಉಪಯೋಗಿಸಬಾರದು.
  • ಇರುವುದರಂತೆಯೇ ಹಂಚು – ನೀವು ರೀಮಿಕ್ಸ್ ಮಾಡಿದರೆ, ರೂಪಾಂತರಗೊಳಿಸಿದರೆ ಅಥವಾ ವಸ್ತುವಿನ ಮೇಲೆ ನಿರ್ಮಿಸಿದರೆ, ನಿಮ್ಮ ಕೊಡುಗೆಗಳನ್ನು ನೀವು ಮೂಲದಂತೆ ಅದೇ ಅಥವಾ ಹೊಂದಾಣಿಕೆಯ ಪರವಾನಗಿ ಅಡಿಯಲ್ಲಿ ವಿತರಿಸಬೇಕು.


Captions

Add a one-line explanation of what this file represents

Items portrayed in this file

depicts ಇಂಗ್ಲಿಷ್

some value

Wikimedia username ಇಂಗ್ಲಿಷ್: Prashant Janangond
author name string ಇಂಗ್ಲಿಷ್: Prashant Janangond
object has role ಇಂಗ್ಲಿಷ್: photographer ಇಂಗ್ಲಿಷ್

copyright status ಇಂಗ್ಲಿಷ್

copyrighted ಇಂಗ್ಲಿಷ್

೩ ಸೆಪ್ಟೆಂಬರ್ 2018

coordinates of the point of view ಇಂಗ್ಲಿಷ್

16°49'49.1"N, 75°44'10.0"E

source of file ಇಂಗ್ಲಿಷ್

original creation by uploader ಇಂಗ್ಲಿಷ್

participant in ಇಂಗ್ಲಿಷ್

Wiki Loves Monuments 2018 ಇಂಗ್ಲಿಷ್

Wiki Loves Monuments 2018 in India ಇಂಗ್ಲಿಷ್

ಕಡತದ ಇತಿಹಾಸ

ದಿನ/ಕಾಲ ಒತ್ತಿದರೆ ಆ ಸಮಯದಲ್ಲಿ ಈ ಕಡತದ ವಸ್ತುಸ್ಥಿತಿ ತೋರುತ್ತದೆ.

ದಿನ/ಕಾಲಕಿರುನೋಟಆಯಾಮಗಳುಬಳಕೆದಾರಟಿಪ್ಪಣಿ
ಪ್ರಸಕ್ತ೧೨:೪೬, ೩ ಸೆಪ್ಟೆಂಬರ್ ೨೦೧೮೧೨:೪೬, ೩ ಸೆಪ್ಟೆಂಬರ್ ೨೦೧೮ ವರೆಗಿನ ಆವೃತ್ತಿಯ ಕಿರುನೋಟ೯೬೦ × ೭೨೦ (೨೯೧ KB)Prashant JanangondUser created page with UploadWizard

ಈ ಕೆಳಗಿನ ಪುಟವು ಈ ಚಿತ್ರಕ್ಕೆ ಸಂಪರ್ಕ ಹೊಂದಿದೆ:

"https://kn.wikipedia.org/wiki/ಚಿತ್ರ:Gol_gumbaz_Bijaur.jpg" ಇಂದ ಪಡೆಯಲ್ಪಟ್ಟಿದೆ