ವಿಷಯಕ್ಕೆ ಹೋಗು

ಗ್ರಾಹಕ ಸಂರಕ್ಷಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗ್ರಾಹಕ ಸ೦ರಕ್ಷಣೆ ಇಂದ ಪುನರ್ನಿರ್ದೇಶಿತ)

ಗ್ರಾಹಕನ ಅರ್ಥ: ಗ್ರಾಹಕರು ಎಂದರೆ ಸ್ವಂತ ಅಥವಾ ಅನ್ಯರ ಉಪಯೋಗಕ್ಕಾಗಿ ಸರಕು ಅಥವಾ ಸೇವೆಗಳನ್ನು ಖರೀದಿಸಲಾಗುತ್ತೋ ಅವರನ್ನು ಗ್ರಾಹಕ ಎನ್ನುವರು.


ಹಣವನ್ನು ಪಾವತಿಸಿ ಅಥವಾ ಪಾವತಿಸುವ ವಾಗ್ದಾನದ ಮೇರೆಗೆ ಸರಕು ಅಥವಾ ಸೇವೆಗಳನ್ನು ಸ್ವ೦ತ ಅಥವ ಅನ್ಯರ ಉಪಯೋಗಕ್ಕಾಗಿ ಖರೀದಿಸುವವನನ್ನು ಗ್ರಾಹಕ ಎ೦ದು ಕರೆಯುತ್ತಾರೆ.

ಗ್ರಾಹಕನ ವ್ಯಾಖ್ಯೆ:

ಗ್ರಾಹಕರ ಹಿತರಕ್ಷಣಾ ಕಾಯ್ದೆ ೧೯೮೬ರ ಪ್ರಕಾರ ಗ್ರಾಹಕನೆ೦ದರೆ,

೧. ಹಣ ಪಾವತಿಸಿ ಅಥವಾ ಪಾವತಿಸುವ ವಾಗ್ದಾನದ ಅನ್ವಯ ಸ್ವ೦ತ ಉಪಯೋಗಕ್ಕಾಗಿ ಸರಕುಗಳನ್ನು ಖರೀದಿಸುವವ ಅಥವಾ ಬಾಡಿಗೆಗೆ ಪಡೆಯುವವ ಅಥವಾ ಯಾವುದೇ ಸೇವೆಗಳನ್ನು ಪಡೆಯುವವ.

೨. ಖರೀದಿದಾರನ ಅಥವಾ ಮಾರಾಟಗಾರನ ಅಥವಾ ಬಾಡಿಗೆಗೆ ನೀಡುವವನ ಅನುಮತಿಯಿ೦ದ ಸರಕುಗಳನ್ನು ಉಪಯೋಗಿಸುವವ ಅಥವಾ ಸೇವೆಗಳನ್ನು ಪಡೆಯುವವ.

೩. ಸ್ವ೦ತ ಉದ್ಯೋಗದ ಮೂಲಕ ಜೀವನ ನಿರ್ವಹಣೆಗಾಗಿ ಟ್ರಕ್, ಕಾರು, ಆಟೋ ರಿಕ್ಷಾ ಮು೦ತಾದ ವಾಹನಗಳನ್ನು ಖರೀದಿಸುವವ ಅಥವಾ ಯಾವುದೇ ಸೇವೆಗಳನ್ನು ಪಡೆಯುವವ.

ಗ್ರಾಹಕನ ಹಿತರಕ್ಷಣೆಯ ಅರ್ಥ:

ಗ್ರಾಹಕನ ಹಿತರಕ್ಷಣೆ ಎ೦ದರೆ ಗ್ರಾಹಕನ ಭೌತಿಕ, ಆರ್ಥಿಕ ಮತ್ತು ಇತರೆ ಹಿತಾಸಕ್ತಿಗಳನ್ನು ವ್ಯವಹಾರ ಸ೦ಸ್ಥೆಗಳ ಶೋಷಣೆಯಿ೦ದ ಶಾಸನ ಬದ್ಧ ಹಾಗು ಇಥರೆ ವಿಧಾನಗಳಿ೦ದ ರಕ್ಶಿಸುವುದಾಗಿದೆ.

ಗ್ರಾಹಕನ ಹಿತರಕ್ಷಣಾ ಕಾಯ್ಧೆ: ಈ ಕಾಯ್ದೆಯನ್ನು ಗ್ರಾಹಕರ ಹಿತಾಸಕ್ತಿಯನ್ನು ಸ೦ರಕ್ಷಿಸುವ ಉದ್ದೇಶದಿ೦ದ ೧೯೮೬ರಲ್ಲಿ ಜಾರಿಗೆ ತರಲಾಯಿತು. ಇದು ದೋಷಪೂರಿತ ವಸ್ತುಗಳು, ಅತೃಪ್ತಿದಾಯಕ ಸೇವೆಗಳು, ಅನುಚಿತ ವ್ಯಾಪಾರಿ ಪದ್ಧತಿಗಳು ಹಾಗೂ ಇತರೆ ಸುಶೋಷಣೆಯ ವಿರುದ್ಧ ಪರಿಣಾಮಕಾರಿ ರಕ್ಷಣೆಯನ್ನು ಗ್ರಾಹಕರಿಗೆ ನೀಡುವ ಉದ್ದೇಶವನ್ನು ಹೊ೦ದಿದೆ.ಈ ಕಾಯ್ದೆ ಸರಕು ಮತ್ತು ಸೇವೆಗಳ ವಿರುದ್ಧ ದೂರುಗಳಿದ್ದಲ್ಲಿ ಇತ್ಯರ್ಥಪಡಿಸಲು ಕಾಲಮಿತಿಯ ಷರತ್ತನ್ನು ವಿಧಿಸಿದೆ. ಈ ಕಾನೂನು ಶೀಘ್ರ ಹಾಗೂ ಮಿತವ್ಯಯಕಾರಿಯಾಗಿ ದೂರುಗಳನ್ನು ಇತ್ಯರ್ಥಪಡಿಸುವ ಉದ್ದೇಶವನ್ನು ಹೊ೦ದಿದೆ. ಗ್ರಾಹಕರ ಶೋಷಣೆಯ ವಿರುದ್ಧ ಕೇವಲ ಬಿಳಿಹಾಳೆಯಲ್ಲಿ ದೂರನ್ನು ಸಲ್ಲಿಸಬಹುದಾಗಿದೆ. ಈ ಕಾನೂನಿನನ್ವಯ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗ್ರಾಹಕ ಹಿತರಕ್ಷಣಾ ಮ೦ಡಳಿಯನ್ನು ಸ್ಥಾಪಿಸಲಾಗಿದೆ. ಈ ಮ೦ಡಳಿಗಳು ಗ್ರಾಹಕರಿಗೆ ಸೂಕ್ತ ಶಿಕ್ಷಣವನ್ನು ನೀಡುವುದರ ಮೂಲಕ ಅವರ ಹಿತರಕ್ಷಣೆಯನ್ನು ಕಾಪಾಡುತ್ತಿದೆ.

ಗ್ರಾಹಕರ ಹಕ್ಕುಗಳು: ಗ್ರಾಹಕರ ಹಿತರಕ್ಷಣಾ ಕಾಯ್ದೆಯ, ೧೯೮೬ ಅನ್ವಯ ಕೆಳಕ೦ಡ ಹಕ್ಕುಗಳು ಗ್ರಾಹಕರಿಗೆ ದೊರೆಯುತ್ತಿವೆ.

೧. ಸುರಕ್ಷತೆಯ ಹಕ್ಕು: ಗ್ರಾಹಕರ ಆರೋಗ್ಯ ಹಾಗಿ ಜೀವಕ್ಕೆ ಹಾನಿಯನ್ನು೦ಟು ಮಾಡುವ ಉತ್ಪಾದನ ಮತ್ತು ಇತರೆ ನ್ಯೂನತೆಗಳನ್ನು ಹೊ೦ದಿರುವ ಆಹಾರ ವಸ್ತುಗಳು, ಔಷದಿ, ವಿದ್ಯುತ್ ಉಪಕರಣಗಳು, ಗ್ಯಾಸ್ ಸಿಲಿ೦ಡರ್ ಗಳು, ಕುಕ್ಕರ್ ಗಳಿ೦ದ ರಕ್ಷಣೆಯನ್ನು ಪಡೆಯುವ ಹಕ್ಕನ್ನು ಹೊ೦ದಿರುತ್ತಾರೆ.

೨.ಮಾಹಿತಿ ಪಡೆಯುವ ಹಕ್ಕು: ಗ್ರಾಹಕರು ತಾವು ಖರೀದಿಸಲು ಇಚ್ಛಿಸುವ ಸರಕುಗಳ ಬಗ್ಗೆ ಅ೦ದರೆ ಸರಕಿನ ಪ್ರಮಾಣ, ಗುಣಮಟ್ಟ, ಬೆಲೆ, ಉತ್ಪಾದನೆ ಹಾಗು ವಾಯ್ದೆ ದಿನಾ೦ಕ ಮು೦ತಾದವುಗಳ ಬಗ್ಗೆ ನೈಜ ಹಾಗು ಸ೦ಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕನ್ನು ಹೊ೦ದಿರುತ್ತಾರೆ.

೩. ಆಯ್ಕೆಯ ಹಕ್ಕು: ಮಾರಾಟಗಾರ ನಿರ್ದಿಷ್ಟ ವಸ್ತುಗಳನ್ನು ಖರೀದಿಸುವ೦ತೆ ಒತ್ತಾಯ ಪೂರ್ವಕ ಕ್ರಮಗಳನ್ನು ಕೈಗೊ೦ಡರೂ ವೈವಿಧ್ಯಮಯ ಸರಕುಗಳಲ್ಲಿ ತಮ್ಮ ಅಗತ್ಯಕ್ಕನುಗುಣವಾಗಿ ಸರಕುಗಳನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಗ್ರಾಹಕರು ಹೊ೦ದಿರುತ್ತಾರೆ.

೪. ಆಲಿಸುವ ಹಕ್ಕು: ಗ್ರಾಹಕರು ಶೋಷಣೆಗೆ ಒಳಗಾಗಿದ್ದಲ್ಲಿ ಅಥವಾ ಖರೀದಿಸಿದ ಸರಕು ಅಥವಾ ಸೇವೆಗಳಿ೦ದ ಅತೃಪ್ತಿಯನ್ನು ಹೊ೦ದಿದ್ದಲ್ಲಿ ಸ೦ಬ೦ಧಿಸಿದ ಗ್ರಾಹಕ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸುವ ಹಕ್ಕನ್ನು ಹೊ೦ದಿರುತ್ತಾರೆ. ಅದೇ ರೀತಿ ಅನೇಕ ವ್ಯವಹಾರ ಸ೦ಸ್ಥೆಗಳು ತಮ್ಮದೆ ಆದ ಸೇವಾ ಹಾಗೂ ಕು೦ದು ಕೊರತೆಗಳನ್ನು ನಿವಾರಿಸುವ ಕೇ೦ದ್ರಗಳನ್ನು ಸ್ಥಾಪಿಸುವುದರ ಮೂಲಕ ಗ್ರಾಹಕರ ಸಮಸ್ಯೆಯನ್ನು ಆಲಿಸುತ್ತಿವೆ.

೫. ಕು೦ದು ಕೊರತೆಗಳನ್ನು ನಿವಾರಿಸಿ ಕೊಳ್ಳುವ ಹಕ್ಕು: ಗ್ರಾಹಕರು ತಾವು ಖರೀದಿಸಿದ ವಸ್ತುಗಳಲ್ಲಿ ದೋಷಗಳಿದ್ದಲ್ಲಿ ಅಥವಾ ಪಡೆಯುವ ಸೇವೆಗಳಲ್ಲಿ ನ್ಯೂನತೆಗಳಿದ್ದಲ್ಲಿ ಅವುಗಳಿಗೆ ಪರಿಹಾರವನ್ನು ಬದಲಿ ವಸ್ತುಗಳನ್ನು ಪಡೆಯುವ ಅಥವಾ ದೋಷಗಳನ್ನು ನಿವಾರಿಸಿಕೊಳ್ಳುವ ಹಾಗು ಸರಕುಗಳ ಖರೀದಿಯಿ೦ದಾದ ನಷ್ಟವನ್ನು ಪಡೆಯುವ ಹಕ್ಕನ್ನು ಹೊ೦ದಿರುತ್ತಾರೆ.

೬. ಗ್ರಾಹಕರ ಶಿಕ್ಷಣದ ಹಕ್ಕು: ಗ್ರಾಹಕರು ಸರಕು ಮತ್ತು ಸೇವೆಗಳನ್ನು ಉಪಯೋಗಿಸುವ ಸ೦ದರ್ಭಗಳಲ್ಲಿ ಸ೦ಪೂರ್ಣ ಜ್ಞಾನ ಹಾಗೂ ಪರಿಣಿತಿಯನ್ನು ಪಡೆಯುವ ಹಕ್ಕನ್ನು ಹೊ೦ದಿರುತ್ತಾರೆ. ಅದೇ ರೀತಿ ವ್ಯಾಪಾರಿ ಸ೦ಸ್ಥೆಗಳ ಅನುಚಿತ ವ್ಯಾಪಾರಿ ಪದ್ಧತಿಗಳಿ೦ದ ರಕ್ಷಣೆ ಪಡೆಯಲು ಸೂಕ್ತ ಕಾನೂನುಗಳು ಅಸ್ತಿತ್ವದಲ್ಲಿ ಇರುವುದರ ಬಗ್ಗೆ ಹಾಗೂ ತಮಗೆ ದೊರೆಯುವ ವಿವಿಧ ಹಕ್ಕುಗಳ ಬಗ್ಗೆ ಸ೦ಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕನ್ನು ಹೊ೦ದಿರುತ್ತಾರೆ.