ಗ್ರಂಥಾಲಯಗಳು
ಗೋಚರ
ಗ್ರಂಥಾಲಯಗಳು[೨] ಅರಿವಿನ ಜ್ಞಾನದೀವಿಗೆಗಳು. ಇಷ್ಟಪಟ್ಟು ಓದಲು ಬರುವವರಿಗೆ, ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷಯ ಭಂಡಾರಗಳಾಗಿವೇ. ಗ್ರಂಥಾಲಯಗಳ ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿಹೋಗುವುದಿಲ್ಲ. ಪ್ರಾಚೀನ ಕಾಲದಲ್ಲಿ ಮುದ್ರಾಣಾಲಯಗಳಿರಲಿಲ್ಲ. ಆದ್ದರಿಂದ ಜ್ಞಾನವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತಿತ್ತು. ಈಗ ಗ್ರಂಥಗಳು ನಮಗೆ ಬೇಕಾದ ವಿಷಯಗಳನ್ನು ತಿಳಿಸಲು ಸಿದ್ಧವಿರುವುವು. ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಬೇಕಾದ ಗ್ರಂಥಗಳನ್ನು ಓದಿ ಜ್ಞಾನ ಪಡೆಯಬಹುದು.
ಇತಿವೃತ್ತ
[ಬದಲಾಯಿಸಿ]- ಪ್ರಾಚೀನ ಗ್ರಂಥಾಲಯಗಳು ಕೇವಲ ಹಸ್ತಪ್ರತಿ, ತಾಳೇಗರಿ, ಚರ್ಮಪಟ್ಟಿ ಮೊದಲಾದುವುಗಳ ಸಂಗ್ರಹಗಳಾಗಿದ್ದುವು. ಕಾಲಕ್ರಮೇಣ ಅವುಗಳೊಂದಿಗೆ ಮುದ್ರಿತ ಗ್ರಂಥಗಳು ಸೇರಿಕೊಂಡು ಅವುಗಳ ವ್ಯಾಪ್ತಿ ವಿಶಾಲವಾಯಿತು. ಭಾರತದಲ್ಲಿ ೧೯೧೧ರಲ್ಲಿ ಮೊಟ್ಟ ಮೊದಲು ಬರೋಡ ಪ್ರದೇಶದಲ್ಲಿ ಗ್ರಂಥಾಲಯವನ್ನು ಬರೋಡ ಮಹಾರಾಜರಾದ ಸಯ್ಯಾಜಿರಾವ್ ಗಾಯಕ್‍ವಾಡ್ ಆರಂಭಿಸಿದರು.
- ಜೊತೆಗೆ ಅವರು ಗ್ರಂಥಾಲಯ ಶಿಕ್ಷಣವನ್ನು ಆರಂಭಿಸಿ, ಇಲ್ಲಿನ ಗ್ರಂಥಾಲಯಕ್ಕೆ ಅಮೆರಿಕಾದ ಗ್ರಂಥಪಾಲಕರಾದ ಬೋರ್ಡೆನ್, ವಿಲಿಯಂ, ಅಲಾನ್ಸನ್ ಮತ್ತು ಡಿಕೆನ್ಸನ್ ಮೊಟ್ಟ ಮೊದಲು ಗ್ರಂಥಾಲಯ ವಿಜ್ಞಾನವನ್ನು ಬೋದಿಸುವ ಶಿಕ್ಷಕರಾಗಿ ಭಾರತಕ್ಕೆ ಬಂದು ಸೇವೆ ಸಲ್ಲಿಸಿದ್ದಾರೆ. ಏಕೆಂದರೆ ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಗ್ರಂಥಾಲಯಗಳ ಪಾತ್ರ ಬಹಳ ಪ್ರಮುಖವಾದುದು. ಗ್ರಂಥಾಲಯಗಳು ಜ್ಞಾನದಾನದ ಕೇಂದ್ರಗಳು.
- ಓದಲು ಆಕರ ಗ್ರಂಥಗಳಾಗಿ ಬಳಸಲು ಪುಸ್ತಕಗಳನ್ನು ಎರವಲು ರೂಪದಲ್ಲಿ ಪಡೆದು ಓದಲು ಬೇಕಾದ ಪುಸ್ತಕಗಳನ್ನು ಹೊಂದಿರುವ ಸ್ಥಳ. ಮಧ್ಯಯುಗದಲ್ಲಿ ಮಠಗಳಲ್ಲಿ ಗ್ರಂಥಾಲಯಗಳು ಕಾಣಿಸಿಕೊಂಡವು. ಗ್ರಂಥಾಲಯದಲ್ಲಿ ಅನೇಕ ಭಾಷೆಯ ಪುಸ್ತಕಗಳು ಹಾಗೂ ಅದರ ವಿಷಯಗಳು ಸಿಗುತ್ತವೆ. ಈ ಗ್ರಂಥಾಲಯಗಳನ್ನು ನಗರದಲ್ಲಿ ಶಾಲಾ ಕಾಲೇಜಿನಲ್ಲಿ ಸ್ಥಾಪಿಸಲಾಗಿದ
- ಗ್ರಂಥಾಲಯದ ಅವಶ್ಯಕತೆ
- ನಾವು ಗ್ರಂಥಾಲಯಕ್ಕೆ ಹೋದಾಗಲೆಲ್ಲಾ ನಾವು ಗ್ರಂಥಾಲಯದ ವಾತಾವರಣದಲ್ಲಿ ಮೌನವನ್ನು ಪಡೆಯುತ್ತೇವೆ. ಅನೇಕ ಓದುಗರು ಅಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಮತ್ತು ನಾವು ಒಬ್ಬರ ಖಾತೆಯಲ್ಲಿ ಪುಸ್ತಕಗಳನ್ನು ಓದುವ ಬಯಕೆಯನ್ನು ಸ್ವಾಭಾವಿಕವಾಗಿ ಬೆಳೆಸಿಕೊಳ್ಳುತ್ತೇವೆ. ಸಾಮಾನ್ಯ ಓದುಗರಲ್ಲಿ ಗ್ರಂಥಾಲಯದ ಅಭ್ಯಾಸವನ್ನು ರಚಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಪುಸ್ತಕಗಳನ್ನು ತಮ್ಮ ಜ್ಞಾನಕ್ಕಾಗಿ ಬಳಸುತ್ತಿರುವ ಬಳಕೆದಾರರ ಗ್ರಂಥಾಲಯ ಮತ್ತು ಅಭ್ಯಾಸಕ್ಕೆ ಇದು ವ್ಯಾಪಕ ಬೇಡಿಕೆಯಾಗಿದೆ.
- ಗ್ರಂಥಪಾಲಕರು
- ಗ್ರಂಥಪಾಲಕ ಎಂದರೆ ಗ್ರಂಥಾಲಯದಲ್ಲಿ ಕೆಲಸ ಮಾಡುವ ವ್ಯಕ್ತಿ. ಪುಸ್ತಕಗಳು ಮತ್ತು ಮಾಹಿತಿಯನ್ನು ಹುಡುಕಲು ಗ್ರಂಥಪಾಲಕರು ಜನರಿಗೆ ಸಹಾಯ ಮಾಡುತ್ತಾರೆ. ಅವರು ಪುಸ್ತಕಗಳನ್ನು ಹುಡುಕುವುದು ಮತ್ತು ಗ್ರಂಥಾಲಯವನ್ನು ಹೇಗೆ ಬಳಸುವುದು ಎಂದು ಜನರಿಗೆ ಕಲಿಸಬಹುದು. ವೃತ್ತಿಪರ ಗ್ರಂಥಪಾಲಕ ಎಂದರೆ ಗ್ರಂಥಾಲಯ ವಿಜ್ಞಾನವನ್ನು ಅಧ್ಯಯನ ಮಾಡಲು ಶಾಲೆಗೆ ಹೋದ ವ್ಯಕ್ತಿ. ಅವರು ಗ್ರಂಥಾಲಯ ವಿಜ್ಞಾನದಲ್ಲಿ ಮಾಸ್ಟರ್ಸ್ ಎಂಬ ಪದವಿಯನ್ನು ಗಳಿಸಬಹುದು.
ಗ್ರಂಥಾಲಯಗಳ ವಿಧಗಳು
[ಬದಲಾಯಿಸಿ]ವಿಶ್ವದ ಗ್ರಂಥಾಲಯಗಳನ್ನು ಆರು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೇಂದರೆ-
- ರಾಷ್ಟ್ರೀಯ ಗ್ರಂಥಾಲಯಗಳು[೩]: ವಿಶ್ವ ಮಟ್ಟದ ಲೇಖಕರ ಗ್ರಂಥಗಳನ್ನು, ಬರಹಗಳನ್ನು ಓದುವ ಅವಕಾಶವನ್ನು ಓದುಗರಿಗೆ ಕಲ್ಪಿಸುತ್ತವೆ.
- ಸಾರ್ವಜನಿಕ ಗ್ರಂಥಾಲಯಗಳು[೪][೫]: ಓದುವ ಆಸಕ್ತಿಯುಳ್ಳ ಪ್ರತಿಯೊಬ್ಬರಿಗೂ ನೆರವನ್ನು ನೀಡುತ್ತವೆ.
- ಸಂಚಾರಿ ಗ್ರಂಥಾಲಯಗಳು : ಸಾರ್ವಜನಿಕ ಗ್ರಂಥಾಲಯಗಳು ತಮ್ಮ ಸೇವಾ ಕ್ಷೇತ್ರವನ್ನು ದೂರ ಪ್ರದೇಶಗಳಿಗೆ ವಿಸ್ತರಿಸಿದಾಗ ಸಂಚಾರಿ ಗ್ರಂಥಾಲಯಗಳು ೧೯೩೧ರಲ್ಲಿ ಅಸ್ತಿತ್ವಕ್ಕೆ ಬಂದುವು. ಇದರ ಜನಕ ಮದ್ರಾಸ್ ಪ್ರಾಂತ್ಯದ, ತಂಜಾವೂರು ಜಿಲ್ಲೆಯ ಮನ್ನಾಗುಡಿಯ ಎನ್,ವಿ.ಕನಗಸಭೈಪಿಳ್ಳೆ.
- ಮಕ್ಕಳ ಗ್ರಂಥಾಲಯಗಳು : ಮಕ್ಕಳಲ್ಲಿ ಓದುವ ಜ್ಞಾನವನ್ನು ಬೆಳೆಸುವ ಸಲುವಾಗಿ ಶಾಲಾ-ಕಾಲೇಜುಗಳಲ್ಲಿ ಪ್ರಾರಂಭಗೊಂಡುವು.
- ಖಾಸಗಿ ಗ್ರಂಥಾಲಯಗಳು : ಸಮಾಜದ ಋಣವನ್ನು ತೀರಿಸುವ ಸಲುವಾಗಿ ಸಹೃದಯ ಓದುಗರು ತೆರೆದವುಗಳಾಗಿವೆ.
- ಆಧುನಿಕ ಗ್ರಂಥಾಲಯಗಳು[೬] : ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ಅಂತರ್ಜಾಲದಿಂದ ಎಲೆಕ್ಟಾನಿಕ್ ಸಂಪನ್ಮೂಲಗಳನ್ನು ಗ್ರಂಥಾಲಯ ಸೇವೆಗಳಲ್ಲಿ ಬಳಸಗುತ್ತಿದೆ. ಅವುಗಳಲ್ಲಿ ಪ್ರಮುಖವಾದುವುಗಳೆಂದರೆ-
- mopac- ಇದು ಅಂತರ್ಜಾಲದ ಮೂಲಕ ಓದುಗನಿಗೆ ಬೇಕಾದ ಗ್ರಂಥವನ್ನು ಕ್ಷಣ ಮಾತ್ರದಲ್ಲಿ ಹುಡುಕಿ ಕೊಡುತ್ತದೆ.
- kiosk- ಇದು ಬಳಕೆದಾರರ ಅಂತರ್ ಸಂಪರ್ಕಕ್ಕೆ ಕಾರಣವಾಗುತ್ತದೆ.
- opac- ಇದು ರಾಷ್ಟ್ರೀಯ ಗ್ರಂಥಗಳನ್ನು ಹುಡುಕಿಕೊಡುತ್ತದೆ.
- etdp- ಇದರಲ್ಲಿ ಯಾವುದೇ ವಿಶ್ವವಿದ್ಯಾನಿಲಯದ ೨೧೮೫ ಮಹಾಪ್ರಬಂಧಗಳನ್ನು ಅಪ್ಲೊಡ್ ಮಾಡಬಹುದು.
- ir- ಸಾಂಸ್ಥಿಕ ಭಂಡಾರವನ್ನು ಮುಕ್ತ ಸಂಪನ್ಮಾಲ ತಂತ್ರಾಂಶವನ್ನು ಬಳಸಿ ನಿರ್ಮಿಸಲಾಗಿದೆ. ಈ ಭಂಡಾರದಲ್ಲಿ ಒಟ್ಟು ೧,೧೦,೧೦೦ರಷ್ಟು ಪ್ರಾಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳ ಬರಹಗಳನ್ನು ಕ್ರೋಢಿಕರಿಸಿ ಇಡಬಹುದು.
ಆಧುನಿಕ ಗ್ರಂಥಾಲಯಗಳ ದುರಂತವೆಂದರೆ ಕೃತಿಗಳೇ ಓದುಗರಿಂದ ಶೋಷಣೆಗೆ ಒಳಗಾಗುವುದು. ಇದನ್ನು ಮೂರು ಹಂತಗಳಲ್ಲಿ ಪತ್ತೆ ಹಚ್ಚಬಹುದು.
- ಗ್ರಂಥಗಳ ಸ್ಥಾನ ಪಲ್ಲಟ-ಸ್ವಾರ್ಥ ಮನೋಭಾವದ ಓದುಗರು ಗ್ರಂಥಗಳನ್ನು ಮುಚ್ಚುಮರೆಯಿಂದ ಕಾದಿರಿಸಿಕೊಳ್ಳುವ ತಂತ್ರ.
- ಗ್ರಂಥಗಳ ಒಳಭಾಗಗಳ ಕಳವು- ಓದುಗರ ಕೆಟ್ಟ ಹವ್ಯಾಸಗಳಲ್ಲಿ ಇದು ಪ್ರಮುಖವಾದುದು. ಎಷ್ಟೋ ಕೃತಿಗಳಲ್ಲಿ ಒಳಗಿನ ಹಾಳೆಗಳೇ ಇರುವುದಿಲ್ಲ.
- ಪಡೆದ ಗ್ರಂಥಗಳನ್ನು ಹಿಂತಿರುಗಿಸದೇ ಇರುವುದು-ತಾವು ಓದಲು ತೆಗೆದುಕೊಂಡು ಹೋದ ಗ್ರಂಥಗಳನ್ನು ಸರಿಯಾದ ಸಮಯಕ್ಕೆ ಹಿಂದಿರುಗಿಸದೆ ಇರುವುದು.ಅವು ಒಂದೊಂದೇ ಪ್ರತಿಗಳಿದ್ದರೆ ಇನ್ನೂ ಕಷ್ಟ.
ಏನಿದು ಕೃತಿಚೌರ್ಯ?
[ಬದಲಾಯಿಸಿ]- ಸಂಶೋಧನಾ ಸಂದರ್ಭದಲ್ಲಿ ನಿಯೋಜಿತ ಪ್ರಬಂಧಗಳು, ಲಘು ಪ್ರಬಂಧಗಳು ಹಾಗೂ ಮಹಾಪ್ರಬಂಧಗಳನ್ನು ಬೆರೆಯುವ ಸಮಯದಲ್ಲಿ, ಬೇರೊಬ್ಬರ ಬರಹಗಳನ್ನು ಯಥಾವತ್ತಾಗಿ ನಕಲು ಮಾಡಿ ತಮ್ಮ ಹೆಸರನ್ನು ಹಾಕಿಕೊಂಡು ತಮ್ಮದೇ ಎಂಬಂತೆ ಬಿಂಬಿಸುವುದು. ಕೃತಿಚೌರ್ಯ ಅಥವಾ ನಕಲು ಒಂದು ಶಿಕ್ಷಾರ್ಹ ಅಪರಾಧ. ಇದನ್ನು ಸಂಶೋಧನಾ ದುರ್ನಡತೆ ಎಂಬುದಾಗಿ ಪರಿಗಣಿಸಲಾಗಿದೆ. ಇಂತಹ ದುರ್ನಡತೆಯಿಂದ ಸಂಶೋಧಕರು, ಸಂಶೋಧನಾ ಸಂಸ್ಥೆಗಳು ಭಾರಿ ಬೆಲೆ ತೆರಬೇಕಾಗುತ್ತದೆ. * ಇಂತಹ ಕೃತಿಚೌರ್ಯದಿಂದ ಸಂಶೋಧನಾ ಗುಣಮಟ್ಟ ಕುಂಠಿತವಾಗುತ್ತದೆ. ಇದರಿಂದ ಧನಸಹಾಯ ಮಾಡಿದ ಸಂಸ್ಥೆಗಳಿಗೆ ಕೆಟ್ಟ ಹೆಸರು ಪ್ರಾಪ್ತವಾಗುತ್ತದೆ. ೧೯೯೩ರಲ್ಲಿ ಅಮೆರಿಕಾದ ಹಾವರ್ಡ್ ವಿಶ್ವವಿದ್ಯಾನಿಲಯದಲ್ಲಿ ಮೊಟ್ಟ ಮೊದಲ ಬಾರಿಗೆ ಈ ತಂತ್ರಾಂಶವನ್ನು ಬಳಸಲಾಯಿತು. ಕೃತಿಚೌರ್ಯ ಪತ್ತೆ ಹಚ್ಚುವ ತಂತ್ರಾಂಶಕ್ಕೆ ಯಾವುದೇ ಸಂಶೋಧನಾ ಬರಹಗಳನ್ನು ಒಳಪಡಿಸಿದಾಗ ಆ ಬರಹವು word, Html, Pdf, Xml, Corel Word Perfect, Rich text format, Abode postscript, plain text-tax ಮೊದಲಾದ ಫೈಲುಗಳನ್ನು ಪರಿಶೀಲನೆಯ ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತದೆ.
- ಆದರೆ ಈ ತಂತ್ರಾಂಶವು ಗ್ರಾಫ್ಗಳು, ಚಿತ್ರಗಳು, ಫೋಟೋಗಳನ್ನು, ವಾಟರ್‍ಮಾರ್ಕ್‍ಗಳು, ಲೈಟ್‍ಕಲರಿಂಗ್‍ಗಳನ್ನು ಪರಿಶೀಲಿಸುವುದಿಲ್ಲ. ಈ ತಂತ್ರಾಂಶವು ಅಧಿಕ ಸಂಖ್ಯೆಯ ದತ್ತಾಂಶಮೂಲಗಳನ್ನು, ಗಣಕಜಾಲಗಳನ್ನು ಪರಿಶೀಲಿಸಿ ಸಂಶೋಧನಾ ಸಾಹಿತ್ಯದಲ್ಲಿ ಆಗಿರುವ ನಕಲಿ ಪ್ರಾಣವನ್ನು ಪತ್ತೇ ಹಚ್ಚುತ್ತದೆ. ಸಂಶೋಧನಾ ಪ್ರಬಂಧಗಳಲ್ಲಿ ನಕಲಿನ ಪ್ರಮಾಣ ಹೆಚ್ಚಾಗಿದ್ದರೆ ಅಂತಹ ಪ್ರಬಂಧಗಳು ತಿರಸ್ಕೃತವಾಗುತ್ತವೆ.
ಪುಸ್ತಕ/ಸಮಸ್ಯೆಗಳು
[ಬದಲಾಯಿಸಿ]- ಕೆಲವು ಮಕ್ಕಳಿಗೆ ಪುಸ್ತಕಗಳನ್ನು ಕೊಂಡು ಕೊಳ್ಳಲು ಹಣವಿರುವುದಿಲ್ಲ. ಆಗ ಅವರು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಓದಬಹುದು. ನಮಗೆ ಬೇಕಾದ ವಿಷಯಗಳನ್ನು ಗ್ರಂಥಗಳಿಂದ ಅರಿತುಕೊಳ್ಳಬಹುದು. ಹೀಗೆ ಗ್ರಂಥಾಲಯವು ಜ್ಞಾನಾಭಿವೃದ್ಧಿಯ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಂಶೋಧಕರಿಗೂ, ಲೇಖಕರಿಗೂ, ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಗ್ರಂಥಾಲಯಗಳಿಲ್ಲದೇ ನಡೆಯುವಂತಿಲ್ಲ.
- ಸರಕಾರದವರು ಜನರ ಜ್ಞಾನದ ಮಟ್ಟವನ್ನು ಹೆಚ್ಚಿಸುವುದಕ್ಕಾಗಿ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿರುವರು. ಪ್ರತಿಯೊಂದು ಶಾಲೆಗೆ ಹಾಗೂ ಕಾಲೇಜುಗಳಿಗೆ ಗ್ರಂಥಾಲಯದ ಅವಶ್ಯಕತೆ ಇರುವುದು.ನಾವು ಎಷ್ಟೇ ಶ್ರೀಮಂತ ರಾಗಿದ್ದರೂ ನಮಗೆ ಬೇಕಾಗುವ ಎಲ್ಲ ಗ್ರಂಥಗಳನ್ನು ಕೊಂಡುಕೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ ಪುಸ್ತಕದ ಪ್ರೇಮಿಗಳು ಗ್ರಂಥಾಲಯಗಳನ್ನು ಅವಲಂಬಿಸಬೇಕಾಗುವುದು. ನಮಗೆ ಬೇಕಾದ ಗ್ರಂಥಗಳು ಗ್ರಂಥಾಲಯಗಳಲ್ಲಿ ದೊರೆಯುವುವು.
- ಒಂದು ವಿಷಯದ ಬಗ್ಗೆ ಅನೇಕ ಗ್ರಂಥಗಳನ್ನು ನೋಡಬೇಕಾದರೆ ನಾವು ಗ್ರಂಥಾಲಯಗಳಿಗೆ ಹೋಗಬೇಕು. ಗ್ರಂಥಾಲಯವೆಂದರೆ ಅಲ್ಲಿ ಎಲ್ಲ ಭಾಷೆಯ ಸಮೃದ್ಧ ಭಾಷೆಯಾಗಿದೆ. ಯಾವ ವಿಷಯವನ್ನು ತಿಳಿದುಕೊಳ್ಳಬೇಕಾದರೂ ನಮಗೆ ಗ್ರಂಥಗಳೂ ಇರಬೇಕು. ಜಗತ್ತಿನಲ್ಲಿ ಇಂಗ್ಲೀಷ್ ಭಾಷೆಯು ಸಮೃದ್ಧ ಭಾಷೆಯಾಗಿದೆ. ಯಾವ ವಿಷಯವನ್ನು ತಿಳಿದುಕೊಳ್ಳಬೇಕಾದರೂ ನಮಗೆ ಗ್ರಂಥಗಳು ಇಂಗ್ಲೀಷ್ ಭಾಷೆಯಲ್ಲಿ ದೊರೆಯುವುವು.
- ಎಷ್ಟೋ ಶಾಲೆಗಳಲ್ಲಿ ಗ್ರಂಥಗಳಿರುತ್ತವೆ. ಆದರೆ ಅವುಗಳನ್ನು ವಿದ್ಯಾರ್ಥಿಗಳಿಗೆ ಕೊಡುವ ವ್ಯವಸ್ಥೆ ಇರುವುದಿಲ್ಲ. ಹೀಗಾದರೆ ವಿದ್ಯಾರ್ಥಿಗಳಲ್ಲಿ ವಾಚನಾಭಿರುಚಿಯು ಬೆಳೆಯಲಾರದು. ವಾಚನಾಭಿರುಚಿ ಇಲ್ಲದಿದ್ದರೆ ಅವರ ಜ್ಞಾನವು ಬೆಳೆಯಲಾರದು.
ಭಂಡಾರಿಗನು ಯಾವ ಪುಸ್ತಕಗಳು ಎಲ್ಲಿರುವುವು ಎಂಬುದನ್ನು ಅರಿತಿರಬೇಕು. ಕಾಲೇಜಿನವರು ಗ್ರಂಥಾಲಯಕ್ಕೆ ಮಹತ್ವವನ್ನು ಕೊಡುತ್ತಿರುವರು.
- ವಿಶ್ವವಿದ್ಯಾನಿಲಯಗಳಲ್ಲಿಯಂತೂ ವಿದ್ಯಾರ್ಥಿಗಳು ತಮ್ಮ ಬಹಳ ವೇಳೆಯನ್ನೆಲ್ಲ ಗ್ರಂಥಾಲಯಗಳಲ್ಲಿಯೇ ಕಳೆಯುವರು.ಗ್ರಂಥಾಲಯಗಳೆಂದರೆ ಸರಸ್ವತಿಯ ಮಂದಿರಗಳಿದ್ದಂತೆ. ನಮಗೆ ಬೇಕಾದ ಜ್ಞಾನವನ್ನು ಕೊಡಲು ಗ್ರಂಥಗಳು ಸಿದ್ಧವಾಗಿರುವುವು. ನಮಗೆ ಜ್ಞಾನವನ್ನು ಪಡೆಯಬೇಕೆಂಬ ಮನಸ್ಸು ಮಾತ್ರ ಬೇಕು.ಮುದ್ರಾಣಾಲಯಗಳ ಶೋಧವಾದಾಗಿನಿಂದ ಜ್ಞಾನ ಪ್ರಸಾರವು ಭರದಿಂದ ಹಬ್ಬುತ್ತಿರುವುದು. ಈ ಕೆಲಸವನ್ನು ಗ್ರಂಥಗಳು ಮಾಡುತ್ತಿರುವುವು.
ಗ್ರಾಮಗಳಲ್ಲಿ ಗ್ರಂಥಾಲಯಗಳ ಕೊರತೆ
[ಬದಲಾಯಿಸಿ]- ಪ್ರತಿಯೊಂದು ಪಟ್ಟಣಗಳಲ್ಲಿಯೂ ವಾಚನಾಲಯಗಳು ಸ್ಥಾಪಿಸಲ್ಪಟ್ಟಿರುವವು. ಹಳ್ಳಿಗಳಲ್ಲಿ ಮಾತ್ರ ಇನ್ನೂ ಗ್ರಂಥಾಲಯಗಳ ಕೊರತೆ ಇರುವುದು.ಜನರಲ್ಲಿ ಜ್ಞಾನವನ್ನು ಪ್ರಸಾರ ಮಾಡುವುದರಲ್ಲಿ ಇವು ಮಹತ್ವದ ಕೆಲಸವನ್ನು ಮಾಡುವವು. ಗ್ರಾಮ ಪಂಚಾಯತಿಗಳು ತಮ್ಮ ಊರಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಬೇಕು.
- ಸಂಚಾರಿ ವಾಚನಾಲಯವೆಂದರೆ ಪ್ರತಿಯೊಂದು ಹಳ್ಳಿಯಲ್ಲಿಯೂ ವಾಚನಾಲಯವನ್ನು ಸ್ಥಾಪಿಸಿ ವರ್ಷಕ್ಕೊಮ್ಮೆ ಅಲ್ಲಿಯ ಪುಸ್ತಕಗಳನ್ನು ಬೇರೆ ಹಳ್ಳಿಗೆ ಕಳಿಸಿ ಅಲ್ಲಿಯ ಪುಸ್ತಕಗಳನ್ನು ತರುವುದು. ಈ ರೀತಿ ಅದಲು ಬದಲು ಮಾಡುವುದರಿಂದ ವಾಚನಾಲಯದಲ್ಲಿ ಹೊಸ ಪುಸ್ತಕಗಳು ಬರಲು ಅವಕಾಶವಾಗುವುದು. ಬುದ್ಧಿಯನ್ನು ಬೆಳೆಸಲು ಗ್ರಂಥಾಲಯಗಳು ಮಾನವನಿಗೆ ಸಹಾಯ ಮಾಡುವುವು.
- ಆನಂದವನ್ನು ಪಡೆಯುವುದಕ್ಕಾಗಿಯೂ, ಜ್ಞಾನಾಭಿವೃದ್ಧಿಗೂ ಗ್ರಂಥಾಲಯಗಳು ಮನುಷ್ಯನಿಗೆ ಉಪಯುಕ್ತವಾಗಿರುವವು. ಮುಂದುವರಿದ ರಾಷ್ಟ್ರಗಳಲ್ಲಿ ಸುಸಜ್ಜಿತವಾದ ಗ್ರಂಥಾಲಯಗಳಿರುವುವು. ಅದೇ ಮಾದರಿಯಲ್ಲಿ ಗ್ರಂಥಾಲಯಗಳನ್ನು ಪ್ರಾರಂಭಿಸುವುದು ಅತ್ಯವಶ್ಯಕವಾಗಿದೆ.
- conclusion
- ಭಾರತದಲ್ಲಿ ಉತ್ತಮ ಗ್ರಂಥಾಲಯಗಳು ವಿರಳವಾಗಿ ಕಂಡುಬರುತ್ತವೆ, ಆದರೆ ಪುಸ್ತಕಗಳನ್ನು ಓದಲು ಆಸಕ್ತಿ ಹೊಂದಿರುವ ಓದುಗರಿಗೆ ಇದು ಅತ್ಯುತ್ತಮ ಸೌಲಭ್ಯವಾಗಿದೆ. ಒಳ್ಳೆಯ ಪುಸ್ತಕಗಳು ಭಾರತದ ಪ್ರತಿಯೊಂದು ಸ್ಥಳದಲ್ಲೂ ಇರಬೇಕು. ಹಳ್ಳಿಗಳಲ್ಲಿ, ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಅವರ ಉತ್ತಮ ಜ್ಞಾನಕ್ಕಾಗಿ ಕನಿಷ್ಠ ಒಂದು ಗ್ರಂಥಾಲಯ ಇರಬೇಕು. ಪ್ರತಿಯೊಬ್ಬ ಆಸಕ್ತ ಓದುಗರಿಗೂ ಇದು ಬಹಳ ಅಗತ್ಯ ಮತ್ತು ಅವಶ್ಯಕವಾಗಿದೆ. ಇದು ಕೆಲವು ಹಳ್ಳಿಗಳಲ್ಲಿ ತೆರೆದರೆ ಮಕ್ಕಳು ಸಾಕ್ಷರರಾಗುತ್ತಾರೆ. ಇದು ಸಮುದಾಯಗಳಿಗೆ ಭಾರಿ ಅಗತ್ಯವಾಗಿದೆ. ಆದ್ದರಿಂದ, ಇದು ಎಲ್ಲರಿಗೂ ಬಹಳ ಅವಶ್ಯಕವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Stradavinisaporifc.it". Stradavinisaporifc.it. Retrieved 7 March 2010.
- ↑ "ಆರ್ಕೈವ್ ನಕಲು". Archived from the original on 2018-08-23. Retrieved 2017-11-21.
- ↑ https://vijaykarnataka.indiatimes.com/topics/%E0%B2%97%E0%B3%8D%E0%B2%B0%E0%B2%82%E0%B2%A5%E0%B2%BE%E0%B2%B2%E0%B2%AF%E0%B2%97%E0%B2%B3%E0%B3%81
- ↑ "ಆರ್ಕೈವ್ ನಕಲು". Archived from the original on 2017-11-18. Retrieved 2017-11-21.
- ↑ "ಆರ್ಕೈವ್ ನಕಲು". Archived from the original on 2017-12-05. Retrieved 2017-11-21.
- ↑ http://www.prajavani.net/news/article/2012/07/06/129447.html[ಶಾಶ್ವತವಾಗಿ ಮಡಿದ ಕೊಂಡಿ]