ವಿಷಯಕ್ಕೆ ಹೋಗು

ರಾಬಟ್ ರಾಲೋ ಗಿಲೆಸ್ಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗಿಲೆಸ್ಪಿ, ರಾಬಟ್ ರಾಲೋ ಇಂದ ಪುನರ್ನಿರ್ದೇಶಿತ)

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

1766-1814. ಬ್ರಿಟಿಷ್ ಸೈನಿಕ. 1783 ರಲ್ಲಿ ಐರಿಷ್ ಅಶ್ವಸೈನ್ಯವನ್ನು ಸೇರಿ ಜಮೈಕ (1794) ಸೇಂಟ್ ಡೊಮಿಂಗೊಗಳಲ್ಲಿ ಕಾರ್ಯಚರಣೆಗಳಲ್ಲಿ ಭಾಗವಹಿಸಿ ಏಕಾಕಿಯಾಗಿ ಆರು ಜನ ಡಕಾಯಿತರನ್ನು ಕೊಂದು ಪ್ರಸಿದ್ಧನಾದ. 1806ರಲ್ಲಿ ವೆಲ್ಲೂರಿನಲ್ಲಿ ದಂಗೆ ಸಂಭವಿಸಿದಾಗ ಆರ್ಕಾಟಿನಲ್ಲಿ ಬ್ರಿಟಿಷ್ ಸೈನ್ಯದ ದಳಪತಿಯಾಗಿದ್ದ ಗಿಲೆಸ್ಪಿ ಆ ದಂಗೆಯನ್ನು ಅಡಗಿಸಲು ವೆಲ್ಲೂರಿನ ಮೇಲೆ ಉಗ್ರವಾದ ದಾಳಿ ಮಾಡಿದ. 1811ರಲ್ಲಿ ಜಾವದಲ್ಲೂ ಮರುವರ್ಷ ಸುಮಾತ್ರದಲ್ಲೂ ನಡೆದ ಕದನಗಳಲ್ಲಿ ಬ್ರಿಗೇಡಿಯರ್- ಜನರಲ್ ಆಗಿ ಭಾಗವಹಿಸಿದ್ದ. ಆ ಕದನಗಳೂ ಇವನಿಗೆ ಕೀರ್ತಿ ತಂದುವು. ಗೂರ್ಖರ ಪ್ರಾಂತ್ಯದ ಅಂಚಿನಲ್ಲಿದ್ದ ಗೋರಖ್ಪುರವು ಗೂರ್ಖರು ಮತ್ತು ಬ್ರಿಟಿಷರ ಯುದ್ಧಕ್ಕೆ ಕಾರಣವಾಗಿತ್ತು. 1814ರಲ್ಲಿ ನಡೆದ ಸೈನ್ಯ ತುಕಡಿಯೊಂದರ ನಾಯಕತ್ವವನ್ನು ವಹಿಸಿ, ಗೂರ್ಖ ಪ್ರಬಲ ನೆಲೆಯೊಂದರ ಮೇಲೆ ಮುತ್ತಿಗೆಯಲ್ಲಿ ತೊಡಗಿದ್ದಾಗ ಈತ ಹತನಾದ. ಈ ಪರಾಭವದಿಂದಾಗಿ ಬ್ರಿಟಿಷರ ಮರ್ಯಾದೆಗೆ ಕೆಲಕಾಲ ಭಂಗ ಬಂದಿತು. ಗಿಲೆಸ್ಪಿಗೆ ಬ್ರಿಟಿಷ್ ದೊರೆಯಿಂದ ಮರೋಣೋತ್ತರ ಕೆ.ಸಿ.ಬಿ. ಪ್ರಶಸ್ತಿ ದೊರಕಿತು.