ಗಾರ್ಡಿನರ್, ಆಲ್ಫ್ರೆಡ್ ಜಾರ್ಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾರ್ಡಿನರ್, ಆಲ್ಫ್ರೆಡ್ ಜಾರ್ಜ್[ಬದಲಾಯಿಸಿ]

1865-1946. ಆಲ್ಫಾ ಆಫ್ ದ ಪ್ಲೋ ಎಂಬ ಕಾವ್ಯನಾಮದಿಂದ ಪ್ರಸಿದ್ಧನಾದ ಈತ ಪತ್ರಿಕೋದ್ಯಮಿ, ಸಾಹಿತಿ. ಹದಿನೈದು ವರ್ಷ ಕಾಲ ಪ್ರಾಂತೀಯ ಪತ್ರಿಕೋದ್ಯಮದಲ್ಲಿದ್ದು ಅನಂತರ 1902ರಿಂದ 1919ರವರೆಗೆ ಡೇಲಿ ನ್ಯೂಸ್ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದ; ಅನಂತರ ಅದೇ ಪತ್ರಿಕೆಗೆ ಕೆಲವು ವರ್ಷ ರಾಜಕೀಯ ಸಲಹೆಗಾರನಾಗಿಯೂ ದುಡಿದ. ಈ ಕಾಲದಲ್ಲಿ ಈತ ತನ್ನ ಕಾವ್ಯನಾಮದಿಂದ ಉತ್ಕೃಷ್ಟವಾದ ಅನೇಕಾನೇಕ ಲಲಿತ ಪ್ರಬಂಧಗಳನ್ನು ಬರೆದ. ಈತನನ್ನು 20ನೆಯ ಶತಮಾನದ ಅಗ್ರಗಣ್ಯ ಪ್ರಬಂಧಕಾರರ ಪಂಕ್ತಿಗೆ ಸೇರಿಸಲಾಗಿದೆ.

ಈತನ ಪ್ರಸಿದ್ಧ ಪ್ರಬಂಧ ಸಂಕಲನಗಳು ಇವು[ಬದಲಾಯಿಸಿ]

ಪ್ರಾಫೆಟ್ಸ, ಪ್ರೀಸ್ಟ್ಸ ಅಂಡ್ ಕಿಂಗ್ಸ (1908), ಪಿಲ್ಲರ್ಸ್ ಆಫ್ ಸೊಸಯಟಿ (1913), ದಿ ವಾರ್ ಲಾಡ್ರ್ಸ (1915), ಸರ್ಟನ್ ಪೀಪಲ್ ಆಫ್ ಇಂಪಾರ್ಟೆನ್ಸ (1926), ಪೆಬಲ್ಸ ಆನ್ ದಿ ಷೋರ್ (1915), ಲೀವ್ಸ ಇನ್ ದಿ ವಿಂಡ್ (1918), ಮೆನಿ ಫರೋಸ್ (1924). ಇವಲ್ಲದೆ ಈತ ಲೈವ್ಸ ಆಫ್ ವಿಲಿಯಂ ಹಾರ್ಕೋರ್ಟ್ (1923), ಜಾರ್ಜ್ ಕ್ಯಾಡ್ಬರಿ (1923) ಎಂಬ ಜೀವನಚರಿತ್ರೆಗಳನ್ನೂ ಬರೆದಿದ್ದಾನೆ. ಬಿಗಿಯಾದ ಬಂಧ, ಲಘುವಾದ ನಿರೂಪಣಾ ವಿಧಾನ, ವರ್ಣನಾ ಸಾಮರ್ಥ್ಯ, ಕವಿಯ ಮನೋಧರ್ಮ- ಇವುಗಳಿಂದಾಗಿ ಈತನ ಬರೆಹಗಳು ಜನಪ್ರಿಯವಾಗಿವೆ.