ಎರ್ಲೆ ಸ್ಟಾನ್ಲಿ ಗಾರ್ಡ್ನರ್
ಎರ್ಲೆ ಸ್ಟಾನ್ಲಿ ಗಾರ್ಡ್ನರ್ (ಜುಲೈ 17, 1889 - ಮಾರ್ಚ್ 11, 1970) ಅಮೆರಿಕಾದ ವಕೀಲ ಮತ್ತು ಲೇಖಕರಾಗಿದ್ದರು. ಪೆರಿ ಮೇಸನ್ ಸರಣಿಯ ಪತ್ತೇದಾರಿ ಕಥೆಗಳಿಗೆ ಹೆಸರುವಾಸಿಯಾಗಿದ್ದರೂ ಸಹ, ಅವರು ಹಲವಾರು ಇತರ ಕಾದಂಬರಿಗಳು ಮತ್ತು ಸಣ್ಣ ತುಣುಕುಗಳನ್ನು, ಹಾಗೆಯೇ ಕಾಲ್ಪನಿಕವಲ್ಲದ ಪುಸ್ತಕಗಳ ಸರಣಿಯನ್ನು ಬರೆದಿದ್ದಾರೆ, ಬಾಜಾ ಕ್ಯಾಲಿಫೊರ್ನಿಯಾ ಮತ್ತು ಮೆಕ್ಸಿಕೋದ ಇತರ ಪ್ರದೇಶಗಳ ಮೂಲಕ ಅವರ ಪ್ರಯಾಣದ ಹೆಚ್ಚಿನ ವಿವರಣೆಗಳು.ಅವನ ಮರಣದ ಸಮಯದಲ್ಲಿ 20 ನೇ ಶತಮಾನದ ಅತ್ಯುತ್ತಮ ಮಾರಾಟವಾದ ಅಮೇರಿಕನ್ ಲೇಖಕ, ಗಾರ್ಡ್ನರ್ ಎ.ಎ. ಫೇರ್, ಕೈಲ್ ಕಾರ್ನಿಂಗ್, ಚಾರ್ಲ್ಸ್ ಎಮ್. ಗ್ರೀನ್, ಕಾರ್ಲೆಟನ್ ಕೆಂಡ್ರಾಕ್, ಚಾರ್ಲ್ಸ್ ಜೆ. ಕೆನ್ನಿ, ಲೆಸ್ ಟಿಲ್ಲೆರೆ ಮತ್ತು ರಾಬರ್ಟ್ ಪಾರ್ರ್[೧][೨]
ಬಾಲ್ಯ ಮತ್ತು ಜೀವನ
[ಬದಲಾಯಿಸಿ]ಮೆಸಾಚುಸೆಟ್ಸನ ಮಾಲ್ಡನ್ನಲ್ಲಿ 1889ರ ಜುಲೈ 17ರಂದು ಹುಟ್ಟಿದ. ವೆಂಟ್ಯುರ ಕೌಂಟಿಯಲ್ಲಿ ವಕೀಲ ವೃತ್ತಿ ಪ್ರಾರಂಭಿಸಿ (1911) ಸುಮಾರು 20 ವರ್ಷಗಳ ಕಾಲ ಸಮರ್ಥವಾಗಿ ದುಡಿದ. 1921ರಲ್ಲಿ ಪತ್ತೇದಾರಿ ಕತೆಗಳಿಗೇ ಮೀಸಲಾದ ಪತ್ರಿಕೆಗಳಿಗೆ ಕತೆಗಳನ್ನು ಬರೆಯಲು ಪ್ರಾರಂಭಿಸಿದ. ಈತನ ಮೊದಲ ಕಾದಂಬರಿ ದಿ ಕೇಸ್ ಆಫ್ ದಿ ವೆಲ್ವೆಟ್ ಕ್ಲಾತ್ 1932ರಲ್ಲಿ ಪ್ರಕಟವಾಯಿತು. ಅನಂತರ ವಕೀಲವೃತ್ತಿಗೆ ತಿಲಾಂಜಲಿಯಿತ್ತು ಪುರ್ಣಕಾಲಿಕ ಲೇಖಕನಾದ. ಲೇಖನವೃತ್ತಿಯಲ್ಲಿ ಮೊದಲ 25 ವರ್ಷಗಳಲ್ಲಿ ಈತ ಒಟ್ಟು 54 ಕೃತಿಗಳನ್ನು ಹೊರತಂದ. ಎಡ್ಗರ್ ವ್ಯಾಲೆಸ್ನಂತೆ ಈತನೂ ಡಿಕ್ಟಫೋನ್ ಬಳಸಿಕೊಂಡು ತನ್ನ ಕತೆಗಳನ್ನು ಹೇಳಿ ರೆಕಾರ್ಡ್ ಮಾಡುತ್ತಿದ್ದನಂತೆ. ಇವುಗಳ ಒಟ್ಟು 7 ಕೋಟಿ 50 ಲಕ್ಷ ಪ್ರತಿಗಳು ಕೇವಲ ಉತ್ತರ ಅಮೆರಿಕದಲ್ಲಿಯೇ ಮಾರಾಟವಾದುವಂತೆ.[೩]
ಕಾದಂಬರಿಗಳು
[ಬದಲಾಯಿಸಿ]ಈತನ ಬಹುಪಾಲು ಕಾದಂಬರಿಗಳು ಪೆರೀ ಮೇಸನ್ ಎಂಬ ತೀಕ್ಷ್ಣಮತಿ ವಕೀಲನ ಪತ್ತೇದಾರಿ ಅದ್ಭುತಗಳಿಂದ ಕೂಡಿವೆ. ಕಥೆಯನ್ನು ತುಂಬ ವೇಗವಾಗಿ ಆದರೆ ಪ್ರತಿ ಹೆಜ್ಜೆಯಲ್ಲೂ ಕಾನೂನುಬದ್ಧವಾಗಿ ಹೇಳುವುದು ಗಾಡ್ರ್ ನರನ ಕ್ರಮ. ಕಾದಂಬರಿಯ ಪ್ರಕರಣಗಳು ಹೆಚ್ಚು ಕುತೂಹಲ ಕೆರಳಿಸಿ ಕೋರ್ಟಿನಲ್ಲಿ ಮುಕ್ತಾಯವಾಗುತ್ತವೆ. ಎ.ಎ.ಫೇರ್ ಎಂದು ಹೆಸರಿಟ್ಟಕೊಂಡು ಈತ ಕೆಲವು ನಿಗೂಢ (ಮಿಸ್ಟರಿ) ಕಾದಂಬರಿಗಳನ್ನು ಬರೆದಿದ್ದಾನೆ.
ಗಾಡರ್ನರ್ ಅಪರಾಧಶಾಸ್ತ್ರದಲ್ಲಿ ಬಹಳಷ್ಟು ಆಸ್ಥೆ ವಹಿಸಿ ಸಂಶೋಧನ ಕೆಲಸ ಮಾಡಿದ್ದಾನೆ. ಮಿಥ್ಯಾಪವಾದಕ್ಕೆ ಗುರಿಯಾಗಿ ಕಾರಾಗೃಹ ಸೇರಿದವರ ರಕ್ಷಣೆಗೆ ಈತ 1948ರಲ್ಲೊಂದು ಸಂಸ್ಥೆಯನ್ನು ಪ್ರಾರಂಭಿಸಿದ. ದಿ ಹೌಲಿಂಗ್ ಡಾಗ್ (1934), ದಿ ಸ್ಟಟರಿಂಗ್ ಬಿಷಪ್ (1936), ದಿ ಲೇಮ್ ಕ್ಯಾನರಿ (1937), ದಿ ಡ್ರೌನಿಂಗ್ ಡಕ್ (1942), ದಿ ರನ್ಅವೇ ಕಾಪ್ರ್ಸ (1954) ಮುಂತಾದವು ಪೆರೀ ಮೇಸನ್ನನನ್ನೇ ನಾಯಕನನ್ನಾಗುಳ್ಳ ಈತನ ಕೆಲವು ಪ್ರಸಿದ್ಧ ಕಾದಂಬರಿಗಳು. ಇವಲ್ಲದೆ ಈತ ಜಿಲ್ಲಾ ಅಟೋರ್ನಿ ಡಗ್ಲಾಸ್ ಸೆಲ್ಬಿಯನ್ನು ನಾಯಕನನ್ನಾಗುಳ್ಳ ದಿ ಡಿ. ಎ. ಕಾಲ್ಸ ಇಟ್ ಮರ್ಡರ್ (1937) ದಿ ಡಿ.ಎ. ಕಾಲ್್ಸ ಎ ಟರ್ನ್ (1954) ಮೊದಲಾದ ಕಾದಂಬರಿ ಗಳನ್ನು ರಚಿಸಿದ್ದಾನೆ. ಅಮೆರಿಕದ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣ ಸಂಸ್ಥೆ ನಡೆಸಿದ ಒಂದು ಪ್ರಯೋಗದಿಂದ ಸಂಯುಕ್ತಸಂಸ್ಥಾನದಲ್ಲಿ ಗಾಡ್ರ್ನರ್ ತನ್ನ ಕಾಲದ ಅತಿದೊಡ್ಡ ಜನಪ್ರಿಯ ಪತ್ತೆದಾರಿ ಕತೆಗಾರನೆಂದು ತಿಳಿಯುತ್ತದೆ. ಇವನಿಗೆ ಎರಡನೆಯವನು ಷರ್ಲಾಕ್ ಹೋಮ್ಸಮ್ನನ್ನು ಸೃಷ್ಟಿಸಿದ ಕಾನನ್ ಡಾಯಲ್.
ಗಾಡರ್ನರ್ ಕಾದಂಬರಿಗಳಲ್ಲಿ ಪೆರೀ ಮೇಸನನ ಕಕ್ಷಿಗಾರ (ಅಥವಾ ಕಕ್ಷಿಗಳು) ಒಂದು ವ್ಯೂಹದಲ್ಲೇ ಸಿಕ್ಕಿಕೊಳ್ಳುತ್ತಾನೆ. ಇನ್ನೇನು, ಅವನ ಅಪರಾಧ ಸಾಬೀತಾಯಿತು ಸೆರೆಮನೆಗೋ ಗಲ್ಲಿಗೋ ಹೋಗುವುದು ಅನಿವಾರ್ಯ ಎನ್ನುವ ಹಂತದಲ್ಲಿ ಪೆರೀ ಮೇಸನ್ಗೆ ಹೊಳೆದ ಉತ್ತರದಿಂದ ಕಕ್ಷಿಗಾರ ಪಾರಾಗುತ್ತಾನೆ, ಮೊಕದ್ದಮೆಯು ಕೋಲಾಹಲಕರವಾಗಿ ಮುಕ್ತಾಯವಾಗುತ್ತದೆ. ಹಲವೊಮ್ಮೆ ಮೇಸನನಿಗೆ ತೇಜೋವಧೆ ಮಾಡುತ್ತೇವೆ ಎಂದು ಬೀಗುತ್ತಿರುವ ಪೊಲೀಸರಿಗೆ ತೇಜೋವಧೆ ಯಾಗುತ್ತದೆ. ಹಿಂದಿನ ಕಾಲದ ಸಾಹಸ ಕಥೆಗಳ ಅದ್ಭುತ ಶಕ್ತಿಯ ನಾಯಕ ಈ ಕಾದಂಬರಿಗಳಲ್ಲಿ ಆಧುನಿಕ ವಕೀಲನಾಗಿ ಕಾಣಿಸಿಕೊಳ್ಳುತ್ತಾನೆ. (ಲಾರ್ಜಿಕ್ ದೇನ್ ಟೈಫ್) ಅಸಾಧಾರಣ ವ್ಯಕ್ತಿಗಳನ್ನು ಕಾಣುವ ಓದುಗನ ಬಯಕೆ ಇಲ್ಲಿ ತೃಪ್ತಿಹೊಂದುತ್ತದೆ. ಗಾಡರ್ನರ್ 1970ರ ಮಾರ್ಚ್ 11ರಂದು ನಿಧನನಾದ.[೪]
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Erle Stanley Gardner Study Archived 2018-01-20 ವೇಬ್ಯಾಕ್ ಮೆಷಿನ್ ನಲ್ಲಿ. at the Harry Ransom Center, University of Texas at Austin
- Erle Stanley Gardner at Thrilling Detective
- Essay on Erle Stanley Gardner Archived 2017-07-06 ವೇಬ್ಯಾಕ್ ಮೆಷಿನ್ ನಲ್ಲಿ.
- Erle Stanley Gardner pages with extensive bibliographic and other information, including pulp publications
- Works by or about ಎರ್ಲೆ ಸ್ಟಾನ್ಲಿ ಗಾರ್ಡ್ನರ್ in libraries (WorldCat catalog)
- Erle Stanley Gardner searching for lost mines in Popular Science magazine
- Episodes of A Life in Your Hands, a radio program created by Gardner, in the public domain
- Episodes of Christopher London, a radio program created by Gardner, in the public domain
- I Love Lucy, "The Black Eye", Lucy's book is The D.A. Takes a Chance Archived 2016-03-06 ವೇಬ್ಯಾಕ್ ಮೆಷಿನ್ ನಲ್ಲಿ.
- Howser, Huell (January 8, 2002). "Erle Stanley Gardner (4005)". California's Gold. Chapman University Huell Howser Archive.
- ಎರ್ಲೆ ಸ್ಟಾನ್ಲಿ ಗಾರ್ಡ್ನರ್ at Find a Grave
ಉಲ್ಲೇಖಗಳು
[ಬದಲಾಯಿಸಿ]- ↑ Krebs, Albin (March 12, 1970). "'The Fiction Factory': Erle Stanley Gardner, Author of the Perry Mason Mystery Novels, Is Dead at 80". ದ ನ್ಯೂ ಯಾರ್ಕ್ ಟೈಮ್ಸ್. Retrieved 2015-07-28.
As the best-selling American author of the century, Erle Stanley Gardner often insisted that he was 'not really a writer at all,' and to be sure, there were many critics who enthusiastically agreed with him. But millions of readers who have bought more than 170 million copies of his books in American editions alone, looked upon Mr. Gardner, creator of the redoubtable defense lawyer Perry Mason, as a master storyteller.
- ↑ Senate, Richard. "Erle Stanley Gardner". Benton, Orr, Duval, & Buckingham. Archived from the original on 2 ಜೂನ್ 2023. Retrieved 1 August 2013.
- ↑ Current Biography 1944, pp. 224–226
- ↑ Hughes, Dorothy B. (1978). Erle Stanley Gardner: The Case of the Real Perry Mason. New York: William Morrow and Company, Inc. ISBN 0-688-03282-6.