ವಿಷಯಕ್ಕೆ ಹೋಗು

ಕೇನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕೇನ್ಸ್ ಇಂದ ಪುನರ್ನಿರ್ದೇಶಿತ)
ಚಿತ್ರ:CANE.gif
'ಜೆ.ಆರ್.ಡಿ, ಥೆಲ್ಮಟಾಟರ ಬಾಡಿಗೆ ಬಂಗಲೆ'

"ಕೇನ್" ಎಂಬ ಬಾಡಿಗೆ ಬಂಗಲೆಯಲ್ಲಿ 'ಜೆ.ಆರ್.ಡಿ. ಟಾಟಾ' ಹಾಗೂ 'ಥೆಲ್ಮಟಾಟ' ತಮ್ಮ ದೀರ್ಘಕಾಲದ ವಾಸ್ಯವ್ಯವನ್ನು ನಡೆಸಿದ್ದರು. ಈ ಚಾರಿತ್ರ್ಯಿಕ ಮಹತ್ವದ ಬಂಗಲೆ ಮುಂಬಯಿನ 'ಅಲ್ಟಾಮೌಂಟ್ ರೋಡ್ 'ನಲ್ಲಿದೆ. ಭಾರತದ ಬೃಹತ್ ಟಾಟ ಮಹಾಸಂಸ್ಥೆಯ, ಮಹಾನಿರ್ದೇಶಕ, ಡಾ.ಜೆ.ಆರ್.ಡಿ ಟಾಟ, ರವರು ಬಹಳ ತೃಪ್ತಿಯಿಂದ ವಾಸ್ತ್ಯವ್ಯಮಾಡಿದ, ದಕ್ಷಿಣ ಮುಂಬಯಿನ ಪುರಾತನ ಬಂಗಲೆ, ಕೇನ್. ಈ ಬಂಗಲೆಯ ಕಾಂಪೌಂಡ್ ನ ಬದಿಯಲ್ಲೆ, ನೌಕರರ ಮನೆಗಳು.ಮತ್ತು ಇತರ ಸದಸ್ಯರ ನಿವಾಸಗಳಿವೆ. ಬೆಟ್ಟದ ಪರಿಸರವಿರುರುವ, 'ಕೇನ್ ಬಂಗಲೆ' ಯ ಗೇಟ್ ನಿಂದ ಸ್ವಲ್ಪ ನಡೆದು ಮೇಲೇರಿ, ವೃತ್ತಾಕಾರವಾಗಿ ನಿರ್ಮಿಸಿರುವ ೫೩ ಮೆಟ್ಟಿಲನ್ನು ಹತ್ತಿ ಸಾಗಿದರೆ,'ಜೆ.ಆರ್.ಡಿ' ಮತ್ತು 'ಥೆಲ್ಮ' ರವರ ಕೊಠಡಿಗಳಿಗೆ ಹೋಗಬಹುದು.

"ಜೆ" ರವರ ಕೊಠಡಿ :

[ಬದಲಾಯಿಸಿ]

೧೫ x ೨೦ ವಿಸ್ತೀರ್ಣದ ರೂಮ್ ನಲ್ಲಿ, ಗ್ರೆ ಬಣ್ಣದ ಸೋಫವನ್ನು ಹಾಸಿಗೆಯಾಗಿಪರಿವರ್ತಿಸಿದ್ದರು. ರೂಮ್ ದೊಡ್ಡದಾಗಿರದಿದ್ದರೂ ಸಹಿತ, ಚಿಕ್ಕದಾಗಿ, ಚೊಕ್ಕವಾಗಿದ್ದು, ಎಲ್ಲ ಸಲಕರಣೆಗಳನ್ನೂ ಹೊಂದಿತ್ತು. ಜೆ ರವರಿಗೆ ಪದಾರ್ಥಗಳು ಕೈಗೆ ಎಟುಕುವಂತೆ ಇರಬೇಕು. ಸ್ವಲ್ಪ ದೊಡ್ಡ ಬಾತ್ ರೂಂ , ಮತ್ತು ವ್ಯಾಯಾಮ ಮಾಡುವ ಸಾಧನಗಳು, ಸ್ನಾನದ ತೊಟ್ಟಿ, ವಿಶಾಲವಾಗಿತ್ತು. ಬೆಡ್ರೂಂ ಕೂಡ ದೊಡ್ಡದು. ಅದರಲ್ಲಿ ಅರ್ಧಬಾಗವನ್ನು ಜೆ ವರ್ಕ್ ಶಾಪ್ ಮಾಡಿಕೊಂಡಿದ್ದರು. ತಮ್ಮ ವರ್ಕ್ ಶಾಪ್ ನಲ್ಲಿ ಚಿಕ್ಕಪುಟ್ಟ ದುರಸ್ತಿಕೆಲಸಗಳನ್ನು ಅವರೇ ಮಾಡಿಕೊಳ್ಳುತ್ತಿದ್ದರು. ಸೋಫದ ಮುಂದೆ ಎರಡು ಸುತ್ತುವ ಚೇರ್ ಗಳು. ೨, ಟೆಲೆಫೋನ್ಗಳು, ಟೇಬಲ್ ಮೇಲೆ, ಒಂದು ಗ್ಲೋಬ್ ಗೋಳ. ಅಚ್ಚುಕಟ್ಟಾಗಿ ಮತ್ತು ಸುಂದರವಾಗಿ ೨ ಫ್ರೇಮ್ ಹಾಕಿರುವ ಥೆಲ್ಲಿಯವರ ಸುಂದರವಾದ ಭಾವಚಿತ್ರ. ಆಗತಾನೆ ಉದ್ಯಾನದಿಂದ ಕಿತ್ತು ತಂದ ತಾಜಾ-ಹೂಗಳು, ಹೊಸ ೨ ಗ್ಲಾಸ್ ಲೋಟದತುಂಬ ಪೆನ್ಸಿಲ್ ಮತ್ತು ಬಾಲ್ ಪೆನ್ ಗಳು, ಹೊಸ- ಬ್ಲಾಟಿಂಗ್ ಪ್ಯಾಡ್, ಗೋಡೆಗೆ ಹೊಂದಿಕೊಂಡಂತೆ ದೊಡ್ಡ ಅಲಮೀರದ ತುಂಬ ಫ್ರೆಂಚ್ ಹಾಗೂ ಇಂಗ್ಲೀಷ್ ಕಾದಂಬರಿಪುಸ್ತಕಗಳು, ೨೪ ಸಂಪುಟಗಳ ವಿಶ್ವಕೊಶಗಳು, " The spirit of st. luis,", " ಪುಸ್ತಕ, Charles Lindburg, Sir Frank Whittle's, Autobiography of o' henry ಮತ್ತು, Jamshetji TATa- By F. R. Harris ಪುಸ್ತಕಗಳು ಯಾವಾಗಲೂ ಕೈಗೆ ಸಿಕ್ಕುವಂತೆ, ಇಟ್ಟಿದ್ದರು. ಮತ್ತೆ ಹಲವಾರು ಅಮೆರಿಕನ್ ಥ್ರಿಲರ್ ಬುಕ್ ಗಳು.

ಥೆಲ್ಮ ಟಾಟಾರವರ ರೂಮ್ ದೊಡ್ಡದು, ಅಲ್ಲಿ ಟಿವಿ ಮತ್ತು ಡೈನಿಂಗ್ ಟೇಬಲ್ ನ್ನು ಹಾಕಿ ಸಜಾವಟ್ ಮಾಡಿದ್ದರು. ಥೆಲ್ಮಾರವರಿಗೆ ೧೯೮೦, ಹಾಗೂ ೧೯೮೨ ರ ಹೃದಯಾಘಾತದ ನಂತರ ಅವರು,ಸಾಮಾನ್ಯವಾಗಿ, ವ್ಹೀಲ್ ಛೇರ್, ಅಥವಾ ಹಾಸಿಗೆಯ ಮೇಲೆ ಯಾವಾಗಲೂ ಕುಳಿತಿರುತ್ತಿದ್ದರು. ೪೦ ವರ್ಷಗಳ ಹಿಂದೆ, ಥೆಲ್ಮಾಟಾಟಾರವರು ಮನೆಯ ಸ್ವಚ್ಛತೆ ಹಾಗೂ ವಸ್ತುಗಳ ಸಜಾವಟ್ ನಲ್ಲಿ ಎತ್ತಿದ ಕೈ. ಎಲ್ಲರ ಪ್ರಶಂಸೆಗೆ ಪಾತ್ರರಾಗಿರುತ್ತಿದ್ದರು. ಪಾದರಸದಂತೆ ಚುರುಕು, ಬಿರುಸಿನ ಓಡಾಟ. ಮನೆಯವರಿಗೆ, ಅತಿಥಿಗಳಿಗೆಲ್ಲಾ ಅಚ್ಚುಮೆಚ್ಚು. ವಿಧಿವಶಾತ್ ಕಾಯಿಲೆಯಿಂದಾಗಿ ಅವರ ಕನಸುಗಳು ನನಸಾಗಲಿಲ್ಲ. ಅದರಿಂದ ದಂಪತಿಗಳಿಬ್ಬರೂ ವಿಚಲಿತರಾಗಲಿಲ್ಲ. ಅದಕ್ಕೆ ಬದಲಾಗಿ, ದೀನ-ದಲಿತರ, ಆರ್ತರ ಸಹಾಯಮಾಡಿ, ಅವರ ಜೀವನದಲ್ಲಿ ಬೆಳಕುಮೂಡಿಸುವ ಪ್ರಯತ್ನವನ್ನು ಸದಾಕಾಲ ಮಾಡಿತೋರಿಸಿದರು. ಎಲ್ಲರಿಗೂ ಅನುಕರಣನೀಯವಾಗಿದ್ದಾರೆ. ಜೆ ರವರ ಬಾಳಿನ ಪ್ರತಿಯೊಂದು ಕಾರ್ಯಗಳೂ ಸಕಲರಿಗೂ ಅದರ್ಶಪ್ರಾಯವಾಗಿವೆ. ತಮ್ಮ ಸಂಪೂರ್ಣ ಜೀವನವನ್ನೇ ತಮ್ಮ ಸಂಸ್ಥೆ, ಮತ್ತು ಜೆ. ನ್ ಟಾಟಾರವರ ಕನಸನ್ನು ನನಸುಮಾಡುವ ದಿಶೆಯಲ್ಲಿ ಹಾಗೂ ರಾಷ್ಟ್ರದ ನಿರ್ಮಾಣದಲ್ಲಿ ಕಳೆದರು.

'ಜೆ',ಪತ್ನಿ ಥೆಲ್ಮರ ಹಾಸಿಗೆ ದಿಂಬಿನ ಬಳಿ ಕುಳಿತು ಕಥೆ-ಪುಸ್ತಕ ಓದುತ್ತಿದ್ದರು

[ಬದಲಾಯಿಸಿ]

'ಜೆ.ಆರ್.ಡಿ.' ಒಬ್ಬ 'ಹೃದಯವಂತ', 'ಶ್ರೇಷ್ಠಮಾನವತಾವಾದಿ', ಮತ್ತು 'ಥೆಲ್ಮ' ರವರ ಅಚ್ಚುಮೆಚ್ಚಿನ, 'ಪ್ರೀತಿಯ ಪತಿ' ಜೆ, ರವರ ೭೬ ನೆಯ ಹುಟ್ಟುಹಬ್ಬದ ಎರಡು ದಿನಗಳ ಮೊದಲು, ಥೆಲ್ಲಿಯವರಿಗೆ ೨ ಅಟ್ಟ್ಯಾಕ್ ಆಯಿತು. ಆಕೆಯನ್ನು ಆಸ್ಪತ್ರೆಗೆ ಸೇರಿಸಿದಾಗ, ಜೆ ಅವರು ಥೆಲ್ಲಿಯವರ ತಲೆ ದಿಂಬಿನ ಹತ್ತಿರವೇ ಯಾವಾಗಲೂ ಕುಳಿತಿರುತ್ತಿದ್ದರು. ಆಗ ಅವರಿಗೆ ತಮ್ಮ ಪ್ರೀತಿಯ 'ಗೋಲ್ಫ್ ಅಟ'ದ ನೆನಪೂ ಬರುತ್ತಿರಲಿಲ್ಲ. ಆಸ್ಪತ್ರೆಯಿಂದ ಮನೆಗೆ ಥೆಲ್ಮಾರವರನ್ನು ಕರೆತಂದಮೇಲೂ, 'ಜೆ', ಮತ್ತೆ ಗೊಲ್ಫ್ ಆಟದ ಕಡೆ ತಿರುಗಿನೋಡಲಿಲ್ಲ. ಈಗ ಥೆಲ್ಲಿಯವರನ್ನು ದಿನ, ರಾತ್ರಿಯೂ ನರ್ಸ್ ಬಂದು ನೋಡಿಕೊಳ್ಳುತ್ತಿದ್ದಾಳೆ. ಜೆ ಆಕೆಗೆ ಒ ಹೆನ್ರಿಯವರ ಕಥೆಯನ್ನು ಓದಿ ಹೇಳುತ್ತಿದ್ದರು. ಊಟದ ನಂತರ, ಟೀವಿ ಅಥವ ಆಡಿಯೊ ನಲ್ಲಿ ಇಬ್ಬರೂ ಮೂವಿ ನೋಡುತ್ತಿದ್ದರು. ಥೆಲ್ಲಿಯವರನ್ನು ಜೆ ಎಷ್ಟು ಗಾಢವಾಗಿ ಪ್ರೀತಿಸುತ್ತಿದ್ದರೆಂದರೆ, ಒಮ್ಮೆ ಅವರು ದೆಹಲಿಗೆ ತಮ್ಮ "ಕಿ ನೋಟ್ ಪುಸ್ತಕ" ದ ಬಿಡುಗಡೆ ಸಮಾರಂಭಕ್ಕೆ ದೆಹಲಿಗೆ ಹೋಗಬೇಕಾಗಿ ಬಂತು. ೨೯, ಜುಲೈ, ೧೯೮೬ ನಲ್ಲಿ, ಜೆ ಯೂರೋಪ್ ಗೆ ಹೋಗಿದ್ದವರು, ದೆಹಲಿಗೆ ಬಂದು ಕಾರ್ಯಕ್ರಮ ಮುಗಿಸಿಕೊಂಡು, ಸಾಯಂಕಾಲ ೬ ಗಂಟೆಗೆ ಮುಗಿದಾಗ, ತಕ್ಷಣ ೭ ಗಂಟೆ ವಿಮಾನದಲ್ಲಿ ಬೊಂಬಾಯಿಗೆ ವಾಪಸ್ಸಾದರು. ಮಧ್ಯರಾತ್ರಿಒಳಗೆ ಅವರು ತಮ್ಮ ಪತ್ನಿಯನ್ನು ಭೇಟಿಯಾಗಬೇಕಾಗಿತ್ತು. ಆದಿನವೇ ಅವರ ಹುಟ್ಟುಹಬ್ಬ.

'ಜೆ' ರವರ ಪರಿವಾರದ ಸದಸ್ಯರು :

[ಬದಲಾಯಿಸಿ]

೧೯೬೩ ಅಕ್ಕ, 'ಸಿಲ್ಲ ' ಕ್ಯಾನ್ಸರ್ ನಿಂದ ಮರಣಹೊಂದಿದಳು. 'ದುರಾಬ್' ಸೋದರ, ೭೫ ನೆ ವಯಸ್ಸಿನಲ್ಲಿ ಮೃತರಾದರು, ಅವರಿಗೂ ಮಕ್ಕಳಿಲ್ಲ. ಜೆ ರವರ ಕೊನೆಯ ತಮ್ಮ, 'ಜಿಮ್ಮಿ' ಕೇವಲ ೨೦ ವರ್ಷ ಬದುಕಿದ್ದರು. ಅವನನ್ನು ಕಂಡರೆ 'ಜೆ' ಗೆ,ಪ್ರಾಣ. ೧೯೩೬ ರಲ್ಲಿ ಏರ್ ಕ್ರಾಷ್ ನಲ್ಲಿ ಜಿಮ್ಮಿ ಮರಣವನ್ನಪ್ಪಿದ. ಇನ್ನೊಬ್ಬ ತಂಗಿ,'ರೋಢಬೆ' ಇಂಟೀರಿಯರ್ ಡೆಕೊರೇಟರ್, 'ಕರ್ನಲ್ ಲೆಸ್ಲಿ ಸಾಹ್ನಿ', ಆಕೆಯ ಪತಿ. ಕಾಲೇಜ್ ಮೆಟ್ಟಿಲನ್ನೂ ತುಳಿಯದ ಜೆ, ತಮಗೆ ತಂದೆಯಿಂದ ಕೊಡಲ್ಪಟ್ಟ ಜವಾಬ್ದಾರಿಯನ್ನು ಅತಿ ಪ್ರಶಸ್ತವಾಗಿ ನೆರವೇರಿಸಿ, ಅವರ ಪರಿವಾರಕ್ಕೆ ಸಹಾಯ ಸಲ್ಲಿಸಿದ, ಜೆಮ್ ಶೆಡ್ ಜಿ ಯವರ ಋಣವನ್ನು ಸ್ಪಲ್ಪಮಟ್ಟಿಗೆ ತೀರಿಸಿದರು. ಆದರ್ಶ, ದೇಶಪ್ರೇಮ, ತ್ಯಾಗ, ಬಲಿದಾನ, ಕರ್ತವ್ಯಪ್ರಜ್ಞೆ, ಮಾನವೀಯತೆ, ಪಾರದರ್ಶಿ ವ್ಯಕ್ತಿತ್ವ, ಸರಳತೆ, ಕಾರ್ಯತತ್ಪರತೆ, ಆತ್ಮವಿಶ್ವಾಸ, ಪರಿಶ್ರಮ, ಮುಂತಾದ ಸದ್ಗುಣಗಳ ಗಣಿಯಾಗಿದ್ದರು. ಇಂದಿಗೂ ಅವರು ಅನುಕರಣೀಯರು. ತಮಗಾಗಿ ಅವರು ಏನನ್ನೂ ಬಯಸಲಿಲ್ಲ. ತಮ್ಮದೇ ಆದ ಸ್ವಂತ ಮನೆಯೂ ಇರಲಿಲ್ಲ. ಪಾರ್ಸಿ ಟ್ರಸ್ಟ್ ನ ಬಂಗಲೆಯಲ್ಲಿ, ೧,೨೩೦ ರೂಪಾಯಿ ಬಾಡಿಗೆಕೊಟ್ಟು, ವಾಸಿಸುತ್ತಿದ್ದರು. ತಮ್ಮ ಕರ್ಮಭೂಮಿಯಾದ ಭಾರತಕ್ಕೂ, ತಮ್ಮ ಮಾತೃಭೂಮಿ ಫ್ರಾನ್ಸ್ ಗೂ, ನ್ಯಾಯ ಒದಗಿಸಿ, ಪ್ಯಾರಿಸ್ ನ ಮಣ್ಣಿನಲ್ಲಿ ತಮ್ಮ ತಂದೆತಾಯಿಗಳ ಸಮಾಧಿಗಳ ಬದಿಯಲ್ಲಿ ನಿರಂತರ ನಿದ್ರೆಯನ್ನು ಪಡೆದರು. ಇದನ್ನು ಅವರು ಕಷ್ಟಪಟ್ಟು ಗಳಿಸಿದ್ದು.

ಜೆ.ಆರ್.ಡಿ.ಮೆಮೋರಿಯಲ್

[ಬದಲಾಯಿಸಿ]

'ಕೇನ್ ಬಂಗಲೆ', ಈಗ "Awabai Petit Residuary Estate", ಟ್ರಸ್ಟ್ ನ ವಶದಲ್ಲಿದೆ. ಜೆ. ಆರ್. ಡಿ, ಹಾಗೂ ಥೆಲ್ಮದಂಪತಿಗಳು', ತೀರಿಹೋಗಿ, ಈಗಾಲೇ ೧೫ ವರ್ಷಗಳ ಮೇಲಾಗಿದೆ. 'ಕೇನ್ ಬಂಗಲೆ', ಯನ್ನು 'ಸರ್ ದಿನ್ ಶಾ ಪೆಟಿಟ್', ರವರು, ೧೮೯೦ ರಲ್ಲಿ, 'ರಾಬರ್ಟ್ಸನ್' ಎಂಬ ಸ್ಕಾಟ್ ಮನ್, ನಿಂದ ಖರೀದಿಸಿದ್ದರು. ೧೯ ನೆಯ ಶತಮಾನದ ಮದ್ಯಭಾಗದಲ್ಲಿ, ಇದರ ವಿಸ್ತೀರ್ಣ ೬೦,೦೦೦ ಚದರ ಅಡಿಯಿತ್ತು. ಸುಮಾರು ೧.೩ ಎಕರೆಜಮೀನಿನಲ್ಲಿ ಹಸಿರು ವನಸಿರಿಯ ಮಧ್ಯೆ ಎತ್ತರದ ಪ್ರದೇಶದಲ್ಲಿದ್ದ, ಬಂಗಲೆ, ಎಲ್ಲರ ಮನಸೆಳೆಯುತ್ತಿತ್ತು. ಈ ಜಮೀನು ಈಗ, ಪೆಟಿಟ್ ವಂಶಜರಾದ, ೩ ನೆಯ ಸರ್ ದಿನ್ ಪೆಟಿಟ್ ರವರ ಸುಪರ್ದಿನಲ್ಲಿದೆ. ಅದನ್ನು ಟ್ರಸ್ಟ್ ಮಾದಿದ್ದಾರೆ. ಪೆಟಿಟ್ ರವರು ಥೆಲ್ಮಾ ಟಾಟಾ ರವರ ಸೋದರ. 'Mount IDA Estate' ನ ಒಂದು ಭಾಗವಾಗಿದೆ. ಈ ಆಸ್ತಿಗೆ ಸೇರಿದ ಹಲವು ಬಾಗಗಳನ್ನು ಸುಮಾರು ಒಂದು ದಶಕದ ಹಿಂದೆ ಮಾರಾಟಮಾಡಲಾಗಿತ್ತು. ಒಟ್ಟು ೧೫ ಕೊಠಡಿಗಳಿರುವ ಬಂಗಲೆಯಲ್ಲಿ, ಸುಮಾರು ೧೦ ರೂಂಗಳು ಯಾವಾಗಲೂ ಖಾಲಿಯಿರುತ್ತಿದ್ದವು. ಒಂದು ರೋಂ ನಲ್ಲಿ ಜೆ. ಆರ್. ಡಿ ಯವರು ಉಪಯೋಗಿಸುತ್ತಿದ್ದ 'ಲೇತ್ ಯಂತ್ರ', ಇಂದಿಗೂ ವ್ಯವಸ್ಥಿತವಾಗಿ ಇರಿಸಲಾಗಿದೆ. ಅದಕ್ಕೆ ಜೋಡಿಸಿರುವ 'ವಿದ್ಯುತ್ ಕನೆಕ್ಷನ್' ಕೂಡ ಚೆನ್ನಾಗಿದ್ದು, ಈಗಲೂ ಲೇತ್ ನ್ನು ಬಳಸಬಹುದು. 'ಬಿ.ಎಮ್.ಸಿ' ಯ ಪ್ರಕಾರ ಇದು 'ಹೆರಿಟೇಜ್ ೩',ರ ವರ್ಗದಲ್ಲಿ ಬರುತ್ತದೆ. ಕಾನೂನಿನಪ್ರಕಾರ ಇದರ ದುರಸ್ತಿಮಾಡಲು ಸಹಾಯ ಒದಗಿಸಲಾಗುವುದು. ಪಾರ್ಸಿ ಟ್ರಸ್ಟ್, "Awabai Petit Residuary Estate " ನ ಅಧೀನದಲ್ಲಿದೆ. ಟಾಟಾ ಸಂಸ್ಥೆಯವರು, ೪೦ ಕೋಟಿ ಹಣಕ್ಕೆ ಇದನ್ನು ಖರೀದಿಸಲಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. Tribune, India, Spectrum, 'Memorial for a legend', July 29, 2001

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಕೇನ್&oldid=1232448" ಇಂದ ಪಡೆಯಲ್ಪಟ್ಟಿದೆ